news18-kannada Updated:November 19, 2020, 2:46 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ನ.19): ಉದ್ಯಮಿ ವಿದ್ವತ್ ಹಲ್ಲೆ ಪ್ರಕರಣದ ಮೂರನೇ ಆರೋಪಿಯಾಗಿದ್ದ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ನಡೆದ ಎರಡು ವರ್ಷದ ಬಳಿಕ ಈತ ಸಿಸಿಬಿ ಪೊಲೀಸರ ಸೆರೆ ಸಿಕ್ಕಿದ್ದಾನೆ. ಮಾದಕ ವ್ಯಸನಿಯಾಗಿದ್ದ ಈತ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರ ಸೆರೆ ಸಿಕ್ಕಿದ್ದಾನೆ. ಈತನ ಬಂಧನದ ಬಳಿಕ ಈತನ ಚಾಲಾಕಿ ಕೆಲಸಗಳು ಹೊರ ಬಂದಿದೆ. ಎರಡು ವರ್ಷದ ಹಿಂದೆ ಯುಬಿ ಸಿಟಿಯಲ್ಲಿ ಉದ್ಯಮಿ ವಿದ್ವತ್ ಮೇಲೆ ನಡೆಸಿದ ಹಲ್ಲೆಯಲ್ಲಿ ಈತ ಮೂರನೇ ಆರೋಪಿಯಾಗಿದ್ದ ಅಷ್ಟೇ ಅಲ್ಲದೇ ಈತ ಅಂತರಾಷ್ಟ್ರೀಯ ಹ್ಯಾಕರ್ ಆಗಿದ್ದಾನೆ. ಕ್ಷಣಾರ್ಥದಲ್ಲಿ ಸರ್ಕಾರಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ವಿದೇಶಿ ಹೈಡ್ರೊ ಗಂಜಾ ಖರೀದಿಸಿ ನಂತರ ಅದನ್ನು ಪೊಸ್ಟ್ ಮುಖಾಂತರ ಈತ ತರಿಸಿಕೊಳ್ಳುತ್ತಿದ್ದ. ಪದೇ ಪದೇ ಈತನ ಹೆಸರನ್ನು ಬದಲಾಯಿಸಿಕೊಳ್ಳುತ್ತಿದ್ದರಿಂದ ಈತನನ್ನು ಹಿಡಿಯುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಕಡೆಗೂ ಈತನಿಗೆ ಹೊಂಚು ಹಾಕಿದ್ದ ಪೊಲೀಸರು ಈತನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಗಾಂಜಾ ಪ್ರಕರಣ ಹೊರತಾಗಿ ಹಲವು ಮಾಹಿತಿ ಬಹಿರಂಗವಾಗಿದೆ.
ಡ್ರಗ್ಸ್ ಗ್ಯಾಂಗ್ ಸುನೀಷ್ ಹೆಗ್ಡೆ ಸಹಚರನಾದ ಈತ ಮಾದಕ ವ್ಯಸನಿ ಜೊತೆಗೆ ಡಾರ್ಕ್ ವೆಬ್ಬಲ್ಲಿ ಬಿಟ್ ಕಾಯಿನ್ ಖರೀದಿಸಿ ನಂತರ ಅದರಿಂದ ವಿದೇಶಿ ಹೈಡ್ರೊ ಗಂಜಾ ತರಿಸಿಕೊಳ್ಳುತ್ತಿದ್ದ. ಮೂಲತಃ ಬೆಂಗಳೂರಿನ ಜಯನಗರದವನಾದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಪಿಯುಸಿ ವರೆಗೂ ಸಿಲಿಕಾನ್ ಸಿಟಿಯಲ್ಲಿಯೇ ವಿದ್ಯಾಬ್ಯಾಸ ನಡೆಸಿದ್ದ. ನಂತರದಲ್ಲಿ ಆತ ನೆದರ್ಲ್ಯಾಂಡ್ನ ಆ್ಯಮ್ಟ್ಸ್ರಾಡ್ಯಾಮ್ ನಲ್ಲಿ ಬಿಎಸ್ಸಿ ಮುಗಿಸಿ ಕಂಪ್ಯೂಟರ್ ಶಿಕ್ಷಣದಲ್ಲಿ ನುರಿತಿದ್ದ. ಎಷ್ಟರ ಮಟ್ಟಿಗೆ ಅಂದ್ರೆ, ಯಾವುದೇ ವೆಬ್ ಸೈಟ್ ತೋರಿಸಿ ಹ್ಯಾಕ್ ಮಾಡಲು ಸೂಚಿಸಿದರೆ ಅದನ್ನು, ಕೆಲವೇ ನಿಮಿಷಗಳಲ್ಲಿ ಹ್ಯಾಕ್ ಮಾಡಿ ತನ್ನ ಕೆಲಸ ಮುಗಿಸುತಿದ್ದ.
ಇದನ್ನು ಓದಿ: ಕೆಜಿಎಫ್ ಚಾಪ್ಟರ್ 2 ಅಡ್ಡಾಗೆ ಬಿ-ಟೌನ್ ಖಳನಾಯಕ ಸಂಜಯ್ ದತ್ ಎಂಟ್ರಿ..!
ದನ್ನು ತಿಳಿದ ಸುನೀಷ್ ಹಾಗೂ ಪ್ರಸಿದ್, ಈತನ ಬಳಸಿ ಕರ್ನಾಟಕ ಸರ್ಕಾರದ ಇ- ಪ್ರೊಕ್ಯೂರ್ ಮೆಂಟ್ ವೆಬ್ ಸೈಟ್ ಹ್ಯಾಕ್ ಮಾಡಿ 18 ಕೋಟಿ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಹಲವು ಖಾಸಗಿ ವೆಬ್ ಸೈಟ್ ಗಳಿಗೂ ಖನ್ನ ಹಾಕಿದ್ದು, ಸಾಕಷ್ಟು ಹಣ ವಂಚಿಸಿರುವ ಬಗ್ಗೆ ಸಿಸಿಬಿ ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅದಲ್ಲದೆ ಹ್ಯಾಕ್ ಮಾಡುವ ಸಲುವಾಗಿಯೇ ಈತನನ್ನು ಪಂಚ ತಾರಾ ಹೋಟೆಲ್ ಗಳಲ್ಲಿ ಕರೆದೊಯ್ಯುತ್ತಿದ್ದರು. ದೇವನಹಳ್ಳಿ, ಚಿಕ್ಕಮಗಳೂರು ,ಗೋವಾಗೆ ಕರೆದೊಯ್ದು ಅಂತರಾಷ್ಟ್ರೀಯ ಜಿಜಿ ಗೇಮಿಂಗ್ ಅನ್ನು ಹ್ಯಾಕ್ ಮಾಡಲು ಸಿದ್ದತೆ ನಡೆಸಿದ್ದು, ಯತ್ನ ವಿಫಲವಾಗಿದೆ.
ಡ್ರಗ್ಸ್ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಸೈಬರ್ ಖನ್ನಾ ಹಾಕುತ್ತಿದ್ದ ನಟೋರಿಯಸ್ ಹ್ಯಾಕರ್ ಬಲೆಗೆ ಬಿದಿದ್ದು, ಈತನಿಂದ ಇನ್ನು ಅದೇಷ್ಟು ಹ್ಯಾಕಿಂಗ್ ಕೃತ್ಯಗಳು ನಡೆದಿವೆ ಎನ್ನುವುದು ಸಿಸಿಬಿ ತನಿಖೆಯಲ್ಲಿ ಬಯಲಾಗಲಿದೆ.
Published by:
Seema R
First published:
November 19, 2020, 2:46 PM IST