ಅಂಗಡಿ ಬಾಗಿಲು ಎಳೆಯಲು ತಡವಾಗಿದ್ದಕ್ಕೆ ಪೊಲೀಸ್‌ ಲಾಠಿ ಏಟು; ಯುವಕ ಅನುಮಾನಾಸ್ಪದ ಸಾವು

ಮೃತ ಯುವಕ ಇದೇ ತಿಂಗಳ 9 ನೇ ತಾರೀಖು ಪ್ರೇಮ ವಿವಾಹವಾಗಿದ್ದ. ಆದರೆ, ಮದುವೆಯಾಗಿ ಎರಡೇ ವಾರಕ್ಕೆ ಆತ ಮಸಣ ಸೇರುವಂತಾದದ್ದು ಮಾತ್ರ ದುರ್ವಿದಿ.

news18-kannada
Updated:May 23, 2020, 11:38 PM IST
ಅಂಗಡಿ ಬಾಗಿಲು ಎಳೆಯಲು ತಡವಾಗಿದ್ದಕ್ಕೆ ಪೊಲೀಸ್‌ ಲಾಠಿ ಏಟು; ಯುವಕ ಅನುಮಾನಾಸ್ಪದ ಸಾವು
ಸಾಂದರ್ಭಿಕ ಚಿತ್ರ
  • Share this:
ಚಿಕ್ಕೋಡಿ (ಮೇ 23); ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಜಗದೀಶ್ ಸುರೇಶ ತೆಗ್ಗಿನವರ (27) ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ 07ಗಂಟೆಯಿಂದ ಸೋಮವಾರ ಬೆಳಗ್ಗೆ 07 ಗಂಟೆಯವರೆಗೆ ಕೊರೋನಾ ಕಾರಣಕ್ಕಾಗಿ ರಾಜ್ಯಾದ್ಯಂತ ಕಫ್ಯೂ ವಿಧಿಸಲಾಗಿದೆ. ಹೀಗಾಗಿ ಎಲ್ಲರೂ ಸಂಜೆ 07 ಗಂಟೆಯೊಳಗೆ ಅಂಗಡಿ ಬಾಗಿಲು ಹಾಕುವುದು ಕಡ್ಡಾಯವಾಗಿತ್ತು. ಆದರೆ, ಮೃತ ಯುವಕ ಜಗದೀಶ್ ಸುರೇಶ ತೆಗ್ಗಿನವರ ಮಾತ್ರ ಇನ್ನೂ ಅಂಗಡಿ ಬಾಗಿಲು ಹಾಕಿರಲಿಲ್ಲ.

ಹೀಗಾಗಿ ಸ್ಥಳಕ್ಕೆ ಆಗಮಿಸಿದ್ದ ಕಾಗವಾಡ ಪೊಲೀಸರು ಆತನ ಮೇಲೆ ಲಾಠಿ ಬೀಸಿದ್ದರು ಎನ್ನಲಾಗಿದೆ. ಪೊಲೀಸರಿಂದ ಏಟು ತಿಂದ ಯುವಕನನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯುವ ವೇಳೆ ದಾರಿ ನಡುವೆಯೇ ಆತ ಮೃತಪಟ್ಟಿದ್ದಾನೆ.

ಮೃತ ಯುವಕ ಇದೇ ತಿಂಗಳ 9 ನೇ ತಾರೀಖು ಪ್ರೇಮ ವಿವಾಹವಾಗಿದ್ದ. ಆದರೆ, ಮದುವೆಯಾಗಿ ಎರಡೇ ವಾರಕ್ಕೆ ಆತ ಮಸಣ ಸೇರುವಂತಾದದ್ದು ಮಾತ್ರ ದುರ್ವಿದಿ.

ಕಾಗವಾಡ ಪೋಲಿಸ್‌ ಕಾನ್ಸ್‌ಟೆಬಲ್ ಬಸವರಾಜ ಲಟ್ಟಿ ಎಂಬವರ ಮೇಲೆ ಇದೀಗ ಯುವಕನನ್ನು ಹಲ್ಲೆ ಮಾಡಿರುವ ಆರೋಪ ಮಾಡಲಾಗಿದ್ದು. ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Corona Virus: ಮಹಾರಾಷ್ಟ್ರದಲ್ಲಿ ಅಂಕೆಗೆ ಸಿಗದ ಕೊರೋನಾ ಅಟ್ಟಹಾಸ; ಏರುತ್ತಲೇ ಇದೆ ಸಾವಿನ ಸಂಖ್ಯೆ
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading