• Home
  • »
  • News
  • »
  • state
  • »
  • Umesh Reddy: ವಿಕೃತಕಾಮಿ ಉಮೇಶ್‌ ರೆಡ್ಡಿ ಗಲ್ಲುಶಿಕ್ಷೆಗೆ ತಡೆ! ಸುಪ್ರೀಂ ಕೋರ್ಟ್ ಮಹತ್ವದ ಆದೇಶ

Umesh Reddy: ವಿಕೃತಕಾಮಿ ಉಮೇಶ್‌ ರೆಡ್ಡಿ ಗಲ್ಲುಶಿಕ್ಷೆಗೆ ತಡೆ! ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ವಿಕೃತಕಾಮಿ ಉಮೇಶ್ ರೆಡ್ಡಿ

ವಿಕೃತಕಾಮಿ ಉಮೇಶ್ ರೆಡ್ಡಿ

ಉಮೇಶ್ ರೆಡ್ಡಿ ತಾಯಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದು ಅದು 2013ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ಇದಾದ ಮೇಲೆ ಮತ್ತೊಮ್ಮೆ ಮುಖ್ಯ ಪೀಠದ ಮುಂದೆ ಉಮೇಶ್ ರೆಡ್ಡಿ ಅರ್ಜಿ ಸಲ್ಲಿಸಿದ್ದ. ಇದೀಗ ವಿಕೃತಕಾಮಿಗೆ ರಿಲೀಫ್ ಸಿಕ್ಕಿದೆ.

  • News18 Kannada
  • Last Updated :
  • New Delhi, India
  • Share this:

ನವದೆಹಲಿ: ಕರ್ನಾಟಕ ಹೈಕೋರ್ಟ್ (Karnataka High Court) ವಿಧಿಸಿದ್ದ ವಿಕೃತ ಕಾಮಿ ಉಮೇಶ್ ರೆಡ್ಡಿ (Umesh Reddy) ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ರದ್ದುಗೊಳಿಸಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಉಮೇಶ್ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸುಪ್ರೀಂ ಕೋರ್ಟ್ ಸಿಜೆಐ (CJI) ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. 1998ರ ಫೆಬ್ರವರಿ 28ರಂದು ಜಯಶ್ರೀ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2007ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ (Bengaluru Sessions Court) ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು. ಹೀಗಾಗಿ ಉಮೇಶ್ ರೆಡ್ಡಿ ತಾಯಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ (President for pardon) ಸಲ್ಲಿಸಿದ್ದು ಅದು 2013ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ಇದಾದ ಮೇಲೆ ಮತ್ತೊಮ್ಮೆ ಮುಖ್ಯ ಪೀಠದ ಮುಂದೆ ಉಮೇಶ್ ರೆಡ್ಡಿ ಅರ್ಜಿ ಸಲ್ಲಿಸಿದ್ದ.


ಯಾರು ಈ ಉಮೇಶ್ ರೆಡ್ಡಿ?


1969ರಲ್ಲಿ ಚಿತ್ರದುರ್ಗದಲ್ಲಿ ಬಿಎ ಉಮೇಶ್‌ ಹೆಸರಿನಲ್ಲಿ ಜನಿಸಿದ ಉಮೇಶ್‌ ರೆಡ್ಡಿ, ಸಿಆರ್‌ಪಿಎಫ್‌ಗೆ ಆಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆಗೆ ಸೇರಿಕೊಂಡ. ಸೈನಿಕನಾಗಿ ವೃತ್ತಿ ಜೀವನ ಆರಂಭಿಸಿದ ಉಮೇಶ್ ರೆಡ್ಡಿ, ಬಳಿಕ ಪೊಲೀಸ್‌ ಆಗಿದ್ದ. ನಡುವೆ ಹತ್ತಾರು ಕೆಲಸಗಳನ್ನು ಮಾಡಿಕೊಂಡಿದ್ದ ಈತ ಮಾಡಿರುವುದು ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರ. 9 ಪ್ರಕರಣಗಳಲ್ಲಿ ಈತ ಶಿಕ್ಷೆಗೆ ಗುರಿಯಾಗಿದ್ದಾನೆ. ಈತನ ಕೃತ್ಯಗಳು ಕರ್ನಾಟವಲ್ಲದೆ, ಮಹಾರಾಷ್ಟ್ರ, ಗುಜರಾತ್‌ನಲ್ಲೂ ಬೆಳಕಿಗೆ ಬಂದಿವೆ. ಇನ್ನೂ ಕೆಲವು ಪ್ರಕರಣಗಳು ಹೊರ ಜಗತ್ತಿಗೆ ಪರಿಚಯವೇ ಆಗಿಲ್ಲ ಎನ್ನುವುದು ಪೊಲೀಸರ ಮಾತು.


ಕಮಾಂಡರ್ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ


ಕಮಾಂಡರ್‌ ಒಬ್ಬರ ಮನೆಯಲ್ಲಿ ಡ್ಯೂಟಿಯಲ್ಲಿದ್ದಾಗ ಆತನ ಮಗಳ ಮೇಲೆಯೆ ಅತ್ಯಾಚಾರಕ್ಕೆ ಯತ್ನಿಸಿ, ಸೇನೆಯಿಂದ ಹೊರಬಿದ್ದವ ಮತ್ತೆ ಚಿತ್ರದುರ್ಗಕ್ಕೆ ಬಂದಿದ್ದ. ಇದು ಈ ಜಗತ್ತಿಗೆ ಗೊತ್ತಿರುವ ಈತನ ಮೊದಲ ಪ್ರಕರಣ. ಹೀಗೆ ಬಂದವ ಮತ್ತೆ ಪೊಲೀಸ್‌ ದಿರಿಸು ತೊಟ್ಟ. ಜಿಲ್ಲಾ ಸಶಸ್ತ್ರಮೀಸಲು ಪಡೆ ಸೇರಿದ. ಇಲ್ಲಿನವರಿಗೆ ಈತನ ಸಿಆರ್‌ಪಿಎಫ್‌ ಕತೆ ಗೊತ್ತಿರಲಿಲ್ಲ. ಇಲ್ಲೂ ಅಪಘಾತ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡರೂ, ಸಣ್ಣ ಪುಟ್ಟ ಅಪರಾಧ ಎಂದು ಆತನನ್ನು ಬಿಟ್ಟು ಕಳಿಸಲಾಯಿತು.


ಇದನ್ನೂ ಓದಿ: Murugha Mutt: ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧ 2ನೇ ಫೊಕ್ಸೋ ಪ್ರಕರಣ, 3 ದಿನ ಪೊಲೀಸ್ ಕಸ್ಟಡಿಗೆ!


ಮಟ ಮಟ ಮಧ್ಯಾಹ್ನವೇ ಅತ್ಯಾಚಾರ


ಉಮೇಶ್‌ ರೆಡ್ಡಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಒಂಟಿ ಮಹಿಳೆಯರಿದ್ದ ಮನೆಗೆ ನುಗ್ಗುತ್ತಿದ್ದ. ರೂಮಿನಲ್ಲಿ ಮಹಿಳೆಯನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಅತ್ಯಾಚಾರ ಮಾಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಬಹಳಷ್ಟು ಮಂದಿ ಮರ್ಯಾದೆಗೆ ಅಂಜಿ ದೂರು ನೀಡುತ್ತಿರಲಿಲ್ಲ ಎನ್ನಲಾಗಿದೆ.


ವಿಕೃತ ಕಾಮಿಗೆ ಕಠಿಣ ಶಿಕ್ಷೆಯಾಗಬೇಕು


ದುಷ್ಕರ್ಮಿ ಉಮೇಶ್ ರೆಡ್ಡಿಯಂತಹ ಕ್ರೂರಿಗಳಿಗೆ ಶೀಘ್ರ ಶಿಕ್ಷೆಯಾಗಬೇಕು ಅಂತ ವಿಕೃತ ಕಾಮಿ ಉಮೇಶ್ ರೆಡ್ಡಿಯಿಂದ ಅತ್ಯಾಚಾರವೆಸಗಿ ಕೊಲೆಯಾದ ಸಂತ್ರಸ್ತರೊಬ್ಬರ ಪುತ್ರ ಒತ್ತಾಯಿಸಿದ್ದಾನೆ. ಈಗಿನ ವ್ಯವಸ್ಥೆ ಸರಿಯಿಲ್ಲ. ಆದ್ದರಿಂದ, ಅಂತಹ ಕ್ರೌರ್ಯಗಳು ಹುಟ್ಟುತ್ತವೆ. ಇಂತಹವರನ್ನು ನಿರ್ಮೂಲನೆ ಮಾಡಲು ಶೀಘ್ರ ಮರಣದಂಡನೆ ವಿಧಿಸಬೇಕು ಅಂತ ಒತ್ತಾಯಿಸಿದ್ದಾನೆ.


ಇದನ್ನೂ ಓದಿ: Heart Attack in Children: ಮಕ್ಕಳನ್ನೂ ಬಿಡುತ್ತಿಲ್ಲ ಹೃದಯಾಘಾತ, ರಾಜ್ಯೋತ್ಸವಕ್ಕೆ ಹಾಡಲು ಹೋದ ಬಾಲಕ ತಂದೆ ಎದುರೇ ಸಾವು!


ಇಂತಹ ಕ್ರೂರಿಗಳಿಗೆ ಶಿಕ್ಷೆ ನೀಡಲು ವಿಳಂಬ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಈಗಿನ ವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಮೇಶ್ ರೆಡ್ಡಿ ತುಂಬಾ ಕ್ರೂರಿ. ಇವರಿಗೆ ಮಾನವೀಯತೆಯ ಬೆಲೆ ಗೊತ್ತಿಲ್ಲ. ಇಂತಹ ಕ್ರೌರ್ಯಗಳನ್ನು ಕಿತ್ತು ಹಾಕಬೇಕು. ಆಗ ಮಾತ್ರ ಅಂತಹವರು ಹುಟ್ಟುವುದಿಲ್ಲ ಅಂತ ಆತ ಅಭಿಪ್ರಾಯಪಟ್ಟಿದ್ದಾರೆ.

Published by:Annappa Achari
First published: