HOME » NEWS » State » THE STUDY OF INDIAN CULTURE IS ALSO A FOREIGNERS IN GOKARNA HK

ಗೋಕರ್ಣಕ್ಕೆ ಬರೋದು ಬರೀ ಮೋಜು ಮಸ್ತಿಗಲ್ಲ; ಭಾರತೀಯ ಸಂಸ್ಕೃತಿ ಅಧ್ಯಯನವೂ ಮಾಡ್ತಾರೆ ವಿದೇಶಿಗರು

ಕೇವಲ ದೇವಸ್ಥಾನ ನೋಡಲು ವಿದೇಶಿಗರು ಆಗಮಿಸಲ್ಲ. ನೋಡಿದ ಪ್ರತಿಯೊಂದು ಧಾರ್ಮಿಕ ತಾಣದ ಬಗ್ಗೆ ಇತಿಹಾಸ, ಮತ್ತೆ ಅದರ ಮಹತ್ವ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ವರ್ಷಾನುಗಟ್ಟಲೆ ಗೋಕರ್ಣದಲ್ಲೇ ವಾಸ್ತವ್ಯ ಹೂಡಿ ಭಾರತೀಯ ಸಂಸ್ಕೃತಿ ಬಗ್ಗೆ ತಿಳಿದು ಅದನ್ನ ಮೈಗೂಡಿಸಿಕೊಂಡಿದ್ದಾರೆ.

G Hareeshkumar | news18-kannada
Updated:February 4, 2020, 7:24 AM IST
ಗೋಕರ್ಣಕ್ಕೆ ಬರೋದು ಬರೀ ಮೋಜು ಮಸ್ತಿಗಲ್ಲ; ಭಾರತೀಯ ಸಂಸ್ಕೃತಿ ಅಧ್ಯಯನವೂ ಮಾಡ್ತಾರೆ ವಿದೇಶಿಗರು
ವಿದೇಶಿಗರು
  • Share this:
ಕಾರವಾರ(ಫೆ.04): ದಕ್ಷಿಣ ಕಾಶಿ ಎಂದು ಪ್ರಸಿದ್ದಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಗೋಕರ್ಣಕ್ಕೆ ವಿದೇಶಿಗರು ಬರೋದು ಮೋಜು ಮಸ್ತಿ ಮಾಡೋಕೆ ಎಂಬ ಭಾವನೆ ಕೆಲವರಲ್ಲಿದೆ. ಆದರೆ, ವಿದೇಶಿಗರು ಇಲ್ಲಿಗೆ ಬಂದು ಮೋಜು ಮಸ್ತಿಯ ಜೊತೆ ಜೊತೆಗೆ ಗೋಕರ್ಣದ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಅಧ್ಯಯನವನ್ನು ಕೂಡಾ ಮಾಡುತ್ತಾರೆ ಎನ್ನುವ ಮಾತು‌ ಕೂಡ ಅಷ್ಟೇ ಸತ್ಯ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಕಳೆದ ನೂರಾರು ವರ್ಷದಿಂದಲೂ ವಿದೇಶಿಗರು ಆಗಮಿಸುತ್ತ ಅಕ್ಟೋಬರ್​ನಿಂದ ಮೇ ತಿಂಗಳವರೆಗೆ ವಿದೇಶಿಗರು ಗೋಕರ್ಣದ ಕಡಲತೀರ ಹಾಗು ಪ್ರಕೃತಿಯ ಸೌಂದರ್ಯ ಸವಿಯಲು ಇಲ್ಲಿ ಬೀಡು ಬಿಡ್ತಾರೆ. ಕೇವಲ ಇಲ್ಲಿನ ಕಡಲತೀರದ ಸೌಂದರ್ಯ ಸವಿದು ಮೋಜು ಮಸ್ತಿ ಮಾಡಿ ತಮ್ಮ ತಮ್ಮ ದೇಶಕ್ಕೆ ಗಂಟು ಮೂಟೆ ಕಟ್ಟುವುದರ ಜೊತೆಯಲ್ಲೇ ವಿದೇಶಿಗರು ಗೋಕರ್ಣದ ಮಹಾಬಲೇಶ್ವರ ದೇವಾಲಯ ಹಾಗು ಆತ್ಮ ಲಿಂಗದ ಇತಿಹಾಸವನ್ನು ತಿಳಿಯಲು ಆಸಕ್ತಿ ತೋರುತ್ತಾರೆ. ಭಾರತೀಯ ಸಂಸ್ಕೃತಿಯನ್ನು ತಿಳಿಯಲು ಇಲ್ಲಿನ ಪ್ರಧಾನ ಅರ್ಚಕರ ಸಹಾಯ ಕೂಡ ಪಡೆದುಕೊಳ್ಳುತ್ತಿದ್ದು ಇದು ವಿದೇಶಿಗರಿಗೆ ಗೋಕರ್ಣದ ಮೇಲಿನ ಧಾರ್ಮಿಕ ಭಾವನೆ ತೋರಿಸುತ್ತಿದೆ.

ಗೋಕರ್ಣದ ಮಾಹಿತಿಗಾಗಿ ವಿದೇಶಿಗರಲ್ಲಿ ತುಡಿತ

ಇನ್ನು, ಗೋಕರ್ಣಕ್ಕೆ ವಿಶ್ವದ ವಿವಿದ ಮೂಲೆ ಮೂಲೆಗಳಿಂದ ವಿದೇಶಿಗರು ಬಂದು ಇಲ್ಲಿನ ಕಡಲತೀರದಲ್ಲಿ ತಿಂಗಳುಗಟ್ಟಲೆ ವಾಸ್ತವ್ಯ ಹೂಡಿ ಇಲ್ಲಿ ಸಂಭ್ರಮಿಸುವುದರ ಜೊತೆಗೆ ದಿನಕ್ಕೆ ಒಂದು ಬಾರಿ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇವಾಗ ಕಳೆದ ಎರಡು ತಿಂಗಳಿಂದಲೇ ಗೋಕರ್ಣಕ್ಕೆ ವಿದೇಶಿಗರ ಆಗಮನ ಪ್ರಾರಂಭವಾಗಿದ್ದು ಇವರು ದೇವಾಲಯದ ಇತಿಹಾಸ ಹಾಗು ಇಲ್ಲಿನ ಭಾರತೀಯ ಧಾರ್ಮಿಕ ಸಂಸ್ಕೃತಿಯ ಆಚಾರ, ವಿಚಾರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

foregner
ದೇವಸ್ಥಾನವನ್ನು ವೀಕ್ಷಿಸುತ್ತಿರುವ ವಿದೇಶಿಗರು


ಕೇವಲ ದೇವಸ್ಥಾನ ನೋಡಲು ವಿದೇಶಿಗರು ಆಗಮಿಸಲ್ಲ. ನೋಡಿದ ಪ್ರತಿಯೊಂದು ಧಾರ್ಮಿಕ ತಾಣದ ಬಗ್ಗೆ ಇತಿಹಾಸ, ಮತ್ತೆ ಅದರ ಮಹತ್ವ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ವರ್ಷಾನುಗಟ್ಟಲೆ ಗೋಕರ್ಣದಲ್ಲೇ ವಾಸ್ತವ್ಯ ಹೂಡಿ ಭಾರತೀಯ ಸಂಸ್ಕೃತಿ ಬಗ್ಗೆ ತಿಳಿದು ಅದನ್ನ ಮೈಗೂಡಿಸಿಕೊಂಡಿದ್ದಾರೆ. ಇದರ ಜೊತೆಗೆ, ವಿದೇಶಿಗರು ಹೋಮ‌ಹವನದಲ್ಲಿ ಭಾಗಿಯಾಗಿ ಮತ್ತು ಭಾರತೀಯ ಹಿಂದೂ ಧಾರ್ಮಿಕ ಸಂಸ್ಕೃತಿಯ ಬಗ್ಗೆ ತಿಳಿದು ದೇವರ ಆರಾಧನೆ ಮಾಡಿದ ಎಷ್ಟೋ ಉದಾಹರಣೆಗಳು ಇವೆ.

ಇದನ್ನೂ ಓದಿ : ನಡೆಯದ ಮರದ ಮೇಲಿನ ನಡಿಗೆ - ಕುವೇಶಿಯ ಕೆನೋಪಿ ವಾಕ್ ಗೆ ಗ್ರಹಣಒಟ್ಟಾರೆ ಗೋಕರ್ಣಕ್ಕೆ ಆಗಮಿಸಿ ಮೋಜು ಮಸ್ತಿ ಮಾಡುವುದರ ಜೊತೆಗೆ ಭಾರತೀಯ ಸಂಸ್ಕೃತಿಯನ್ನ ತಿಳಿದುಕೊಳ್ಳಲು ಒಲವು ತೋರಿಸುತ್ತಿರುವುದು ವಿಶೇಷ. ವಿದೇಶಿಗರ ಮೂಲಕ ಗೋಕರ್ಣದ ಇತಿಹಾಸ ವಿಶ್ವದಾದ್ಯಂತ ಇನ್ನಷ್ಟು ಹರಡಲಿ.

 (ವರದಿ : ದರ್ಶನ್​​​ ನಾಯ್ಕ)
First published: February 4, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories