Steel Bridge: ಸ್ವಾತಂತ್ರ್ಯೋತ್ಸವದಂದು ಉದ್ಘಾಟನೆಯಾಗೋದಿಲ್ಲ ಸ್ಟೀಲ್ ಬ್ರಿಡ್ಜ್! ಹಾಗಾದ್ರೆ ಮುಹೂರ್ತ ಯಾವಾಗ?

ರಾಜ್ಯದ ಮೊದಲ ಉಕ್ಕಿನ ಸೇತುವೆ ಅಗಸ್ಟ್ 15ಕ್ಕೆ ಲೋಕಾರ್ಪಣೆಯಾಗಲಿದೆ, ಜನರಿಗೆ ಸಂಚಾರ ಮಾಡುವ ಭಾಗ್ಯ ಸಿಗಲಿದೆ ಎಂದಿತ್ತು ಬಿಬಿಎಂಪಿ. ಆದರೀಗ ಸ್ಟೀಲ್ ಬ್ರಿಡ್ಜ್ ಮೇಲೆ ಓಡಾಡೋಕೆ ಇನ್ನೂ ಹಲವು ದಿನಗಳು ಕಾಯಬೇಕು ಅಂತಿದೆ ಇದೇ ಬಿಬಿಎಂಪಿ!

ಸ್ಟೀಲ್ ಬ್ರಿಡ್ಜ್ ಕಾಮಗಾರಿ

ಸ್ಟೀಲ್ ಬ್ರಿಡ್ಜ್ ಕಾಮಗಾರಿ

  • Share this:
ಬೆಂಗಳೂರು: ಅಂತೂ ಇಂತೂ ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಶಿವಾನಂದ ಸರ್ಕಲ್ (Shivananda Circle) ಸ್ಟೀಲ್ ಬ್ರೀಡ್ಜ್‌ ಉದ್ಘಾಟನೆಗೆ (Steel Bridge Inauguration) ಮೂಹೂರ್ತ ಕೂಡಿ ಬಂತು ಎಂದುಕೊಳ್ಳಲಾಗಿತ್ತು. ಕಳೆದ 5 ವರ್ಷಗಳಿಂದ (5 Years) ನೆನೆಗುದಿಗೆ ಬಿದ್ದಿದ್ದ ಮೇಲ್ಸೇತುವೆಗೆ (Flyover) ಅಗಸ್ಟ್ 15ಕ್ಕೆ ಲೋಕಾರ್ಪಣೆಯಾಗಲಿದೆ, ಜನರಿಗೆ ಸಂಚಾರ ಮಾಡುವ ಭಾಗ್ಯ ಸಿಗಲಿದೆ ಎಂದಿತ್ತು ಬಿಬಿಎಂಪಿ (BBMP). ಆದರೀಗ ಸ್ಟೀಲ್ ಬ್ರಿಡ್ಜ್ ಮೇಲೆ ಓಡಾಡೋಕೆ ಇನ್ನೂ ಹಲವು ದಿನಗಳು ಕಾಯಬೇಕು ಅಂತಿದೆ ಇದೇ ಬಿಬಿಎಂಪಿ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಂದು (Independence Day) ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ಆಗಬೇಕಿತ್ತು. ಆದರೆ ಸ್ಟೀಲ್ ಬ್ರಿಡ್ಜ್ ಲೋಕಾರ್ಪಣೆ ಮುಹೂರ್ತ ಮುಂದಕ್ಕೆ ಹೋಗಿದೆ.

ಸದ್ಯಕ್ಕಿಲ್ಲ ಬೆಂಗಳೂರಿಗರಿಗೆ ಉಕ್ಕಿನ ಸೇತುವೆ ಮೇಲೆ ಓಡಾಡುವ ಭಾಗ್ಯ

ಮರಗಳ ತೆರವು, ಭೂಸ್ವಾಧಿನದ ಕಾರಣ ಶಿವಾನಂದ ಸ್ಟೀಲ್ ಬ್ರಿಡ್ಜ್ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅದಾಗಿ ಇತ್ತೀಚೆಗೆ ನ್ಯಾಯಾಲಯ ಕೂಡ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹೇಳಿತ್ತು. ಈ‌ ಹಿನ್ನೆಲೆ ಬಿಬಿಎಂಪಿ ಕೂಡ ಐದು ವರ್ಷಗಳ ಬಳಿಕ ಮತ್ತೆ ಕಾಮಗಾರಿ ಕೈಗೆತ್ತಿಕೊಂಡಿತ್ತು. ಆದರೀಗ ಮಳೆಯ ಅಬ್ಬರಕ್ಕೆ ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ಮತ್ತಷ್ಟು ವಿಳಂಬ ಆಗಿದೆ.

ಆ. 15ರಂದು ಉದ್ಘಾಟನೆಯಾಗಲ್ಲ ಸ್ಟೀಲ್ ಬ್ರಿಡ್ಜ್

ಈ ಹಿಂದೆ ಪಾಲಿಕೆ ಆಗಸ್ಟ್ 15ಕ್ಕೆ ಸ್ಟೀಲ್ ಬ್ರಿಡ್ಜ್ ಓಡಾಟಕ್ಕೆ ಓಪನ್ ಎಂದಿತ್ತು. ಆದರೆ 25 ದಿನಗಳ ಕಾಲ ಬಿಟ್ಟೂ ಬಿಡದೆ ಕಾಡಿದ ಮಳೆಯಿಂದಾಗಿ ಸ್ಟೀಲ್ ಬ್ರಿಡ್ಜ್ ಕಾಮಗಾರಿ ವಿಳಂಬ ಆಗಿದೆ. ಹೀಗಾಗಿ ಆಗಸ್ಟ್ 15ಕ್ಕೆ ರಾಜ್ಯದ ಮೊದಲ ಉಕ್ಕಿನ ಸೇತುವೆ ಲೋಕಾರ್ಪಣೆ ಆಗಲ್ಲ ಅನ್ನೋದು ಸ್ಪಷ್ಟವಾಗಿದೆ.

ಇದನ್ನೂ ಓದಿ: Power Cut: ಶ್ರಾವಣ ಶನಿವಾರವೂ ಪವರ್ ಶಾಕ್! ಇಂದು ಮತ್ತು ನಾಳೆ ಹಲವೆಡೆ ವಿದ್ಯುತ್ ಕಡಿತ

ರಾಜಧಾನಿಯಲ್ಲಿ ಸತತ ಮಳೆಯಿಂದಾಗಿ ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ಅಡ್ಡಿ

ಕಳೆದ 5 ವರ್ಷಗಳಿಂದ ನಗರದ ಶಿವಾನಂದ ಸರ್ಕಲ್ ಬಳಿ ಇರುವ ಸ್ಟೀಲ್ ಬ್ರಿಡ್ಜ್  ಹಲವು ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಮೂರು ಸಿಎಂಗಳು ಬಂದು ಹೋದರೂ, ಬ್ರಿಡ್ಜ್ ಮಾತ್ರ ಓಪನ್ ಅಗಿರಲ್ಲಿಲ್ಲ. ಕೆಲ ಕಾನೂನಾತ್ಮಕ ತೊಡಕಿನಿಂದ ಕಾಮಗಾರಿ ಕಳೆದ 5 ವರ್ಷಗಳಿಂದ ಅರ್ಧಕ್ಕೆ ನಿಂತ್ತಿತ್ತು. ಆದರೆ ನ್ಯಾಯಲಯದ ಆದೇಶದಂತೆ ಬ್ರಿಡ್ಜ್‌ಗೆ ವಿವಾದದಿಂದ ಮುಕ್ತಿ ನೀಡೋದಕ್ಕೆ ಬಿಬಿಎಂಪಿ ಮುಂದಾಗಿತ್ತು. ಆದರೆ ವರುಣ ಅದಕ್ಕೂ ಅಡ್ಡಗಾಲು ಹಾಕಿದ್ದಾನೆ.

ಬಿಬಿಎಂಪಿ ಇಂಜಿನಿಯರ್ ಹೇಳೋದೇನು?

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಯೋಜನಾ ವಿಭಾಗದ ಚೀಫ್ ಇಂಜಿನಿಯರ್ ಲೋಕೇಶ್, ಕಳೆದ 25 ದಿನಗಳಿಂದ ನಗರದಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈಗ ಎರಡು ದಿನಗಳಿಂದ ಮಳೆ ಕುಗ್ಗಿದೆ. ಹೀಗಾಗಿ ಮತ್ತೆ ಕೆಲಸ ಆರಂಭಿಸಿದ್ದೇವೆ. ಶೀಘ್ರವೇ ಕಾಮಗಾರಿ ಮುಗಿದು ಜನರ ಓಡಾಟಕ್ಕೆ ಸೇತುವೆ ಓಪನ್ ಆಗಲಿದೆ ಎಂದರು.

ಇದನ್ನೂ ಓದಿ: Accident: ತಂದೆಯ ಎದುರೇ ಪ್ರಾಣಬಿಟ್ಟ ಪುಟ್ಟ ಮಗ! ನೋಡ ನೋಡುತ್ತಿದ್ದಂತೆ ನಡೆಯಿತು ಆ್ಯಕ್ಸಿಡೆಂಟ್

ಉದ್ಘಾಟನೆಗೆ ಮುಹೂರ್ತ ಯಾವಾಗ?

ಮೇಲ್ಸೇತುವೆಯ ನಿರ್ಮಾಣ ಕಾರ್ಯ 90% ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂಪರ್ಕಿಸುವ ಡೌನ್‌ ರ್ಯಾಂಲ್ ಬಳಿ ಕಾಲುವೆ ಅಭಿವೃದ್ಧಿ ಮತ್ತು ಇಳಿಜಾರು ರಸ್ತೆ ನಿರ್ಮಿಸಿ ಡಾಂಬರೀಕರಣ ಮಾಡುವುದು ಮಾತ್ರ ಬಾಕಿಯಿದೆ. ಕಾಮಗಾರಿ ಪೂರ್ಣಗೊಳಿಸಲು ಅಂದಾಜು ಇನ್ನೂ 15ಕ್ಕೂ ಅಧಿಕ ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ, ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಅಗಸ್ಟ್ 15 ರಂದು ವಾಹನಗಳ ಸಂಚಾರಕ್ಕೆ ಮುಕ್ತವಾಗುತ್ತೆ ಎಂದುಕೊಳ್ಳಲಾಗಿತ್ತು. ಆದರೆ ಮಳೆರಾಯನ ಕಾಟಕ್ಕೂ ಅದಕ್ಕೂ ಅಡ್ಡಗಾಲು ಬಿದ್ದಿದ್ದೆ.
Published by:Annappa Achari
First published: