Mother Statue: ಇಲ್ಲಿ ತಾಯಿಯೇ ದೇವರು, ಪ್ರತಿನಿತ್ಯ ಈ ಮನೆಯಲ್ಲಿ ನಡೆಯುತ್ತೆ ಮಾತೃ ಪೂಜೆ!

ದೈವ ಸ್ವರೂಪಿ ತಾಯಿಗೆ ಇಲ್ಲೊಂದು ಕುಟುಂಬ ಮೂರ್ತಿ ನಿರ್ಮಿಸಿ ನಿತ್ಯ ಪೂಜಿಸ್ತಿದೆ. ನಿನ್ನ ಆಶೀರ್ವಾದ ಸದಾ ಇರಲಿ ಅಂತಾ ಪ್ರಾರ್ಥಿಸುತ್ತಿದೆ.

ತಾಯಿ ವಿಗ್ರಹಕ್ಕೆ ನಿತ್ಯ ಪೂಜೆ

ತಾಯಿ ವಿಗ್ರಹಕ್ಕೆ ನಿತ್ಯ ಪೂಜೆ

  • Share this:
ಗದಗ: ತಾಯಿ (Mother) ಅಂದ್ರೆ ಅದೊಂದು ಬೆಚ್ಚನೆಯ ಅನುಭವ. ಕರುಣೆಯ ಸಾಗರ. ಅಪರಿಮಿತ (Unlimited) ಪ್ರೀತಿಯ (Love) ಮೂಲ ತಾಯಿ.. ಅದೆಂಥದ್ದೇ ನೋವಿದ್ರೂ ಅಮ್ಮನ ಮಡಿಲಿನಲ್ಲಿ ನೆಮ್ಮದಿ, ಶಾಂತಿ (Peace) ಸಿಗುತ್ತೆ.. ತಾಯಿಗೆ ಪ್ರತ್ಯಕ್ಷ ದೈವ (God) ಅಂತಾನೂ ಕರೀತಾರೆ. ಇಂಥ ದೈವ ಸ್ವರೂಪಿ ತಾಯಿಗೆ ಇಲ್ಲೊಂದು ಕುಟುಂಬ ಮೂರ್ತಿ (Statue) ನಿರ್ಮಿಸಿ ನಿತ್ಯ ಪೂಜಿಸ್ತಿದೆ. ನಿನ್ನ ಆಶೀರ್ವಾದ ಸದಾ ಇರಲಿ ಅಂತಾ ಪ್ರಾರ್ಥಿಸುತ್ತಿದೆ. ಜನನಿಯ ನೆರಳು ಸ್ವರ್ಗಕ್ಕಿಂತಲೂ ಮಿಗಿಲು ಅಂತಾ ನಂಬಿರೋ ಈ ಕುಟುಂಬ ತಾಯಿ ದೈವವನ್ನ ನಿತ್ಯ ಪೂಜೆ ಮಾಡುತ್ತೆ.. ಈ ಕುಟುಂಬ ಇರೋದು ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ..

ತಾಯಿಯ ಪಂಚಲೋಹದ ಮೂರ್ತಿ ಸ್ಥಾಪಿಸಿ ಪೂಜೆ

ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದ ಬೆನಕನವಾರಿ ಕುಟುಂಬ ತಾಯಿಯನ್ನು ಕಳೆದುಕೊಂಡ ಬಳಿಕ ತದ್ರೂಪಿ ಪಂಚ ಲೋಹದ ಪ್ರತಿಮೆ ಸ್ಥಾಪಿಸುವ ಮೂಲಕ ತಾಯಿ ಮೇಲಿನ ಮಮಕಾರ ತೋರಿದ್ದಾರೆ. ಇವರ ತಾಯಿ ಶಿವಗಂಗಮ್ಮ ಬೆನಕವಾರಿ ಎಂಬುವರು ವಯೋ ಸಹಜ ಕಾಯಿಲೆಯಿಂದ ಕಳೆದ ವರ್ಷ ನಿಧನರಾದರು. ನಿಧನದ ನಂತ್ರ  ಶಿವಗಂಗಮ್ಮ ಅವರ ನಾಲ್ವರು ಪುತ್ರರು, ಏಳು ಮಂದಿ ಪುತ್ರಿಯರಿಗೆ ಅನಾಥ ಭಾವ ಮೂಡಿತ್ತು. ಬದುಕು ಕಟ್ಟಿಕೊಟ್ಟ ತಾಯಿ ಇನ್ನಿಲ್ಲ ಅನ್ನೋ ನೋವು ಕುಟುಂಬಕ್ಕೆ ಅರಗಿಸಿಕೊಳ್ಳಲು ಆಗ್ತಿರಲಿಲ್ಲ.

ತಾಯಿಯ ಪ್ರತಿಮೆ ಸ್ಥಾಪಿಸಿದ ಮಗ

ಬಾಗಲಕೊಟೆಯಲ್ಲಿ ಪ್ರಾಧ್ಯಾಪಕ ರಾಗಿರು ದೇವಣ್ಣ ಬೆನಕನವಾರಿ ಹಾಗೂ ಸಹೋದರಿ ಭಾಗ್ಯ ಲಕ್ಷ್ಮಿ ಗುರಿಕಾರ ಅರೊಂದಿಗೆ ಚರ್ಚಿಸಿ ಮೂರ್ತಿ ತಯಾರಿಸುವ ಪ್ಲಾನ್ ಮಾಡಿದ್ರು. ಮಾತೃ ಪ್ರತಿಯ ಮರಳಿ ಪಡೆಯುವ ನಿಟ್ಟಿನಲ್ಲಿ ಮಗ ತಾಯಿಯ ಪ್ರತಿಮೆ ಮಾಡಿಸಿದ್ದಾನೆ.

ಇದನ್ನೂ ಓದಿ: Mother Temple Vijayapura: ತಾಯಿಯೇ ದೇವರು ಎಂದು ದೇವಸ್ಥಾನ ನಿರ್ಮಿಸಿದ ಮಕ್ಕಳು! ವಿಜಯಪುರದಲ್ಲಿದೆ ಅಮ್ಮನ ಮಂದಿರ!

3 ಲಕ್ಷ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ

ಮೊದಲ ವರ್ಷದ ಪುಣ್ಯಾರಾಧನೆ ದಿನದಂದು 3 ಲಕ್ಷ ವೆಚ್ಚದಲ್ಲಿ ಫೈಬರ್ 97 ಸಾವಿರ ರೂಪಾಯಿ ವೆಚ್ಚದಲ್ಲಿ ಪಂಚಲೋಹದ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಾರೆ. ಅಲ್ದೆ, ಬೆಂಗಳೂರಿನ ಮುರಳೀಧರ ಆಚಾರ್ಯ ಎಂಬುವವರಿಂದ ಪ್ರಾಣ ಪ್ರತಿಷ್ಠಾಪನೆ ಮಾಡ್ಸಿ, ಮೂರ್ತಿಯಲ್ಲಿ ತಾಯಿ ದೈವ ಕಾಣ್ತಿದಾರೆ..

ತಾಯಿ ಮೂರ್ತಿ ಮಾಡಿಸಿದಾಗ ನಕ್ಕ ಜನರು

ತಾಯಿಯ ಮೂರ್ತಿ ಮನೆಗೆ ತರುತ್ತೇವೆ ಎಂದಾಗ ಕೆಲವರು ನನಗೆ ಬುದ್ಧಿ ಇಲ್ಲ ಹಾಗೂ ದುಡ್ಡಿನ ಬೆಲೆ ಗೊತ್ತಿಲ್ಲ ಎಂದಿದ್ದರು. ಆದರೆ ನನಗೆ ತಾಯಿ ಬೆಲೆ ಏನೆಂದು ಗೊತ್ತಿತ್ತು. ಹೀಗಾಗಿ ತಾಯಿಯ ಪ್ರತಿಮೆಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದರಿಂದ ಮನೆಯಲ್ಲಿ ತಾಯಿ ಇದ್ದಾಳೆ ಎನ್ನುವ ಭಾವನೆ ಮೂಡಿಸುತ್ತಿದೆ.

ಈಗ ಪ್ರತಿಮೆ ನೋಡಿಕೊಂಡು ಹೋಗುತ್ತಿರುವ ಜನ

ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ದೇವಣ್ಣ ಅವರು ತಾಯಿ ಪ್ರತಿಮೆ ಮಾಡಿರುವ ಗೋತ್ತಾದ ಮೇಲೆ ಜನ್ರು ಮನೆ ಬಂದು ನೋಡಿಕೊಂಡು ಹೋಗಿದ್ದಾರೆ. ಅಷ್ಟೊಂದು ಸುಂದರವಾಗಿ ತಾಯಿ ಪ್ರತಿಮೆಯನ್ನು ದೇವಣ್ಣ ಅವರು ರಡಿ ಮಾಡಿಸಿಕೊಂಡು ಬಂದಿದ್ದಾರೆ. ತಾಯಿಯ ಮೇಲಿನ ಅತೀಯಾದ ಪ್ರೀತಿಯಿಂದ ಮತ್ತೆ ಪ್ರತಿಮೆ ರೂಪದಲ್ಲಿ ಮಗ ತಂದಿದ್ದಾನೆ.

ಇದನ್ನೂ ಓದಿ: Viral Video: ಅಮ್ಮ ಅಂದ್ರೆ ಹಂಗೇನೆ! ಎಲ್ಲಾದಕ್ಕೂ ಸೊಲ್ಯೂಷನ್! ತಾಯಿ-ಮಗುವಿನ ಹ್ಯಾಪಿ ರೈಡ್

ವಯಸ್ಸಾಯ್ತು ಅಂತಾ ತಂದೆ ತಾಯಿಯನ್ನ ದೂರ ಇರಿಸೋರೇ ಗೆಚ್ಚು ಅಂಥದ್ರಲ್ಲಿ ತೀರಿಹೋದ ತಾಯಿಯ ಮೂರ್ತಿ ಮಾಡಿ ಇರಿಸಿ ಪೂಜೆ ಸಲ್ಲಿಸುತ್ತಿರೋದು ನಿಜಕ್ಕೂ ಅಪರೂಪ. ಸ್ವರ್ಗದಲ್ಲಿರೋ ತಾಯಿ ಶಿವಗಂಗಮ್ಮ ಅವರ ಆತ್ಮವೂ ಮಕ್ಕಳ ಪ್ರೀತಿಗೆ ಕರಗಿರಬಹುದು. ಅಲ್ಲಿಂದಲೇ ಈ ತುಂಬು ಸಂಸಾರಕ್ಕೆ ಆಶೀರ್ವದಿಸುತ್ತಿರಬಹುದು.
Published by:Annappa Achari
First published: