ಮುಂದಿನ ದಿನಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಸಿಗಲಿದೆ ; ಸಿಎಂ ಯಡಿಯೂರಪ್ಪ

ಸರ್ಕಾರಕ್ಕೆ ಯಾವುದೇ ಕಷ್ಟನೂ ಇಲ್ಲ ಸಮಸ್ಯೆಯೂ ಇಲ್ಲ ಎಲ್ಲರ ಸಹಕಾರ ಇದೆ.,  ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಬೇಕು ಅದೆಲ್ಲಾ ಮಾಡುತ್ತೇವೆ. ನೆರೆ ಪರಿಹಾರದಲ್ಲಿ ಸಿಲುಕಿ ಕೊಂಡವರಿಗೆ ಪರಿಹಾರ ಕೊಟ್ಟಿದ್ದೇವೆ, ಮುಂದೆನೂ ಕೊಡುತ್ತೇವೆ

G Hareeshkumar | news18-kannada
Updated:October 17, 2019, 4:25 PM IST
ಮುಂದಿನ ದಿನಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಸಿಗಲಿದೆ ; ಸಿಎಂ ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು(ಅ.17): ರಾಜ್ಯದಲ್ಲಿ ನೆರೆ-ಬರಕ್ಕೆ ಈಗಾಗಲೇ ಕೇಂದ್ರ ಸರ್ಕಾರದಿಂದ ದೊಡ್ಡಮಟ್ಟದ ಪರಿಹಾರ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪರಿಹಾರ ದೊರಕಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಸರ್ಕಾರಕ್ಕೆ ಯಾವುದೇ ಕಷ್ಟನೂ ಇಲ್ಲ ಸಮಸ್ಯೆಯೂ ಇಲ್ಲ ಎಲ್ಲರ ಸಹಕಾರ ಇದೆ.,  ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಬೇಕು ಅದೆಲ್ಲಾ ಮಾಡುತ್ತೇವೆ. ನೆರೆ ಪರಿಹಾರದಲ್ಲಿ ಸಿಲುಕಿ ಕೊಂಡವರಿಗೆ ಪರಿಹಾರ ನೀಡಿದ್ದು, ಮುಂದೆನೂ ಕೊಡುತ್ತೇವೆ. ರಾಜ್ಯಕ್ಕೆ ಒಳ್ಳೆಯದಾಗಿ ಸುಭಿಕ್ಷವಾಗಲಿ ಅಂತಾ ಬೇಡಿಕೊಂಡಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿ ಗಾಗಿ ಡಿಸಿಎಂ ಗೋವಿಂದ್ ಕಾರಜೋಳ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಜೊತೆ ಮಾತನಾಡಿ 10 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಮಹಾರಾಷ್ಟ್ರ ಚುನಾವಣೆ ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಇಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಮೋದಿ ಪ್ರಭಾವ ಮತ್ತು ಫಡ್ನವಿಸ್ ಒಳ್ಳೆಯ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ನಮ್ಮ ಮುಂದೆ ಯಾವ ಹೊಸ ತಾಲ್ಲೂಕು ಅಥವಾ ಜಿಲ್ಲೆ ಮಾಡುವ ಯೋಚನೆ ಇಲ್ಲ ಎಂದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆಯಾಗಲ್ಲ : ಶಾಸಕ ರಾಜುಗೌಡ

ಯಡಿಯೂರಪ್ಪ ನೇತೃತ್ವದಲ್ಲೇ ಉಪ ಚುನಾವಣೆ ನಡೆಯಲಿದೆ. 17 ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಬಿಜೆಪಿಗಿದೆ, ಅನರ್ಹ ಶಾಸಕರ 15 ಕ್ಷೇತ್ರದ ಉಪಚುನಾವಣೆ ಯಲ್ಲಿ ಗೆದ್ದೇ ಗೆಲ್ಲುತ್ತೇವೆ ವಿಶ್ವಾಸವಿದೆ. 17 ಕ್ಷೇತ್ರದಲ್ಲೂ ಅನರ್ಹ ಶಾಸಕರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ಅನರ್ಹರ ಶಾಸಕರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಕಾರ್ಯಕರ್ತರು ಮಂದಾಗಲಿದ್ದಾರೆ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಅಕ್ಕಪಕ್ಕ ನಿಂತು ತಾವೇ ಪವರ್​ಫುಲ್ ಎಂದು ಬೀಗುವ ಆ ಇಬ್ಬರು ಮುಖಂಡರು; ಕಾಂಗ್ರೆಸ್​ನೊಳಗೆ ಭುಗಿಲೇಳುತ್ತಾ ಹೊಸ ಬಂಡಾಯ?

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್​​​​​​ ಅವರು 34 ಜಿಲ್ಲೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಯಲ್ಲಿ 34 ಸಂಘಟನಾತ್ಮಕ ಜಿಲ್ಲೆಗಳಿವೆ, ಶೈಕ್ಷಣಿಕ ಜಿಲ್ಲೆಗಳಿವೆ ಸಂಘಟನಾತ್ಮಕವಾಗಿ ನಮ್ಮಲ್ಲಿ 36 ಜಿಲ್ಲೆಗಳನ್ನ ಮಾಡಿಕೊಳ್ಳಲಾಗಿದೆ ದೊಡ್ಡ ಜಿಲ್ಲೆಗಳನ್ನು ಸಂಘಟನೆ ದೃಷ್ಟಿಯಿಂದ ವಿಭಾಗಿಸಲಾಗಿದೆ  ಎಂದು ತಿಳಿಸಿದರು.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading