• Home
  • »
  • News
  • »
  • state
  • »
  • BJP Government: ಆಡಳಿತ ಯಂತ್ರಕ್ಕೆ ಮೇಜರ್​ ಸರ್ಜರಿ; 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರದ ಆದೇಶ

BJP Government: ಆಡಳಿತ ಯಂತ್ರಕ್ಕೆ ಮೇಜರ್​ ಸರ್ಜರಿ; 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರದ ಆದೇಶ

IPS ಅಧಿಕಾರಿಗಳ ವರ್ಗಾವಣೆ

IPS ಅಧಿಕಾರಿಗಳ ವರ್ಗಾವಣೆ

ರವಿ ಡಿ ಚನ್ನಣ್ಣನವರ್ ಸೇರಿದಂತೆ 11 IPS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ದಿವ್ಯಾಜ್ಯೋತಿ ರಾಯ್ ಅವರನ್ನು ಮಾನವ ಹಕ್ಕುಗಳ ಆಯೋಗ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

  • News18 Kannada
  • Last Updated :
  • Karnataka, India
  • Share this:

ರಾಜ್ಯ ಸರಕಾರ (State Government) ಆಡಳಿತದಲ್ಲಿ ಮೇಜರ್​ ಸರ್ಜರಿ ಮಾಡಿದ್ದು 11 ಮಂದಿ ಐಪಿಎಸ್ ಅಧಿಕಾರಿಗಳ (IPS Officers) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಂಚಾರ ವಿಭಾಗದ ಮುಖ್ಯಸ್ಥರಾಗಿ ಅಬ್ದುಲ್ ಸಲೀಂ ವರ್ಗಾವಣೆ ಮಾಡಲಾಗಿದೆ. ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.  ದಿವ್ಯಾಜ್ಯೋತಿ ರಾಯ್ ಅವರನ್ನು ಮಾನವ ಹಕ್ಕುಗಳ ಆಯೋಗ ಇಲಾಖೆಗೆ ವರ್ಗಾವಣೆ (Transfer) ಮಾಡಲಾಗಿದೆ.


ರವಿಕಾಂತೇಗೌಡ - ಸಿಐಡಿ ಇಲಾಖೆಗೆ ವರ್ಗಾವಣೆ


ಲೋಕೇಶ್ ಕುಮಾರ್ - ಬಳ್ಳಾರಿ ಐಜಿ ಆಗಿ ವರ್ಗಾವಣೆ


ರಮಣ್ ಗುಪ್ತಾ- ಬೆಂಗಳೂರು ಇಂಟಲಿಜೆನ್ಸ್ ಇಲಾಖೆಗೆ ವರ್ಗಾವಣೆ


ಚಂದ್ರಗುಪ್ತ - ಮಂಗಳೂರು ಪಶ್ಚಿಮ ವಲಯ ಐಜಿಯಾಗಿ ವರ್ಗಾವಣೆ


ಶರಣಪ್ಪ - ಜಂಟಿ ಪೊಲೀಸ್ ಆಯುಕ್ತ ಸಿಸಿಬಿಗೆ ವರ್ಗಾವಣೆ


ಅನುಚೇತ್ - ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗಕ್ಕೆ ವರ್ಗಾವಣೆ


ರವಿ ಡಿ ಚೆನ್ನಣ್ಣ ನವರ್ - ಕಿಯೋನಿಕ್ಸ್ ನಿರ್ದೇಶಕನಾಗಿ ವರ್ಗಾವಣೆ


ರಮೇಶ್ - ಮೈಸೂರು ಸಿಟಿ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.
ಸ್ಪೆಷಲ್ ಟ್ರಾಫಿಕ್ ಕಮಿಷನರ್ ನೇಮಕ


ಎಂ ಎ ಸಲೀಂ ರನ್ನು ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸರ್ಕಾರ ಟ್ರಾಫಿಕ್ ಕಮಿಷನರ್ ಹುದ್ದೆಗೆ ಎಡಿಜಿಪಿ ದರ್ಜೆ ಅಧಿಕಾರಿ ನೇಮಿಸಿದೆ. ಬೆಂಗಳೂರು ಕಮಿಷನರ್ ಹುದ್ದೆ ಕೂಡ ಎಡಿಜಿಪಿ ದರ್ಜೆಯನ್ನು ಹೊಂದಿದೆ. ಈಗಿರೊ ಕಮಿಷನರ್ ಪ್ರತಾಪ್ ರೆಡ್ಡಿ ಎಡಿಜಿಪಿ ರ್ಯಾಂಕ್ ಅಧಿಕಾರಿಯಾಗಿದ್ದಾರೆ.


ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚು ಹಾಗೂ ಸಂಚಾರಿ ಇಲಾಖೆಯಲ್ಲಿ ಕೆಲ ಮಹತ್ವದ ಬದಲಾವಣೆ ಆಗಬೇಕಿರೋ ಹಿನ್ನಲೆ ಎಂ ಎ ಸಲೀಂ ನೇಮಕ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರ ಇಬ್ಬರು ಎಡಿಜಿಪಿ ಮಟ್ಟದ ಅಧಿಕಾರಿಗಳ ನೇಮಕ ಹಿನ್ನಲೆ ಸಮನ್ವಯದ ತಿಕ್ಕಾಟಕ್ಕೆ ಕಾರಣವಾಗುತ್ತಾ ಅನ್ನೋ ಪ್ರಶ್ನೆ ಕೂಡ ಮೂಡಿದೆ.


ಅಕ್ಟೋಬರ್​ನಲ್ಲಿ 21 ಅಧಿಕಾರಿಗಳ ವರ್ಗಾವಣೆ


ಕಳೆದ ತಿಂಗಳು 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಐವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಮುಖ್ಯವಾಗಿ ಮಂಡ್ಯ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಮೈಸೂರು ಜಿಲ್ಲಾಧಿಕಾರಿ ಬದಲಾವಣೆಯಾಗಿದೆ. ಅನಿಲ್ ಕುಮಾರ್ ಟಿ.ಕೆ, ಡಾ. ಪ್ರಸಾದ್ ಎನ್.ವಿ, ಜಯರಾಂ ಎನ್, ಡಾ‌. ಕುಮಾರ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.


ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್ ವರ್ಗಾವಣೆಯಾಗಿದ್ದು, ಡಾ. ರಾಜೇಂದ್ರ ಕೆ.ವಿ ಹೊಸ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಹಿಲನ್ ಕ್ರೀಡಾ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿ.ಪಂ. ಸಿಇಒ ಆಗಿರುವ ಡಾ‌. ಕುಮಾರ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.


ಇದನ್ನೂ ಓದಿ: Milk Price Hike: ರಾಜ್ಯದ ಜನರಿಗೆ ಮತ್ತೊಂದು ಬಿಗ್​ ಶಾಕ್; ಹಾಲು, ಮೊಸರಿನ ದರದಲ್ಲಿ ಭಾರೀ ಹೆಚ್ಚಳ​!


ಅಧಿಕಾರಿ- ಎಲ್ಲಿಗೆ ವರ್ಗಾವಣೆ


ಡಾ. ಬಗಾದಿ ಗೌತಮ್-ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ


ಶ್ರೀವಿದ್ಯಾ ಪಿ.ಐ - ಸಿಇಓ,ಇ-ಆಡಳಿತ ಕೇಂದ್ರ ಬೆಂಗಳೂರು


ರಮೇಶ್ ಡಿ.ಎಸ್- ಜಿಲ್ಲಾಧಿಕಾರಿ, ಚಾಮರಾಜನಗರ


ಡಾ. ಗೋಪಾಲಕೃಷ್ಣ ಹೆಚ್.ಎನ್- ಜಿಲ್ಲಾಧಿಕಾರಿ, ಮಂಡ್ಯ


ಜಾನಕಿ ಕೆ.ಎಂ- ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ


ಡಾ. ರಾಜೇಂದ್ರ ಕೆ.ವಿ- ದಕ್ಷಿಣ ಕನ್ನಡದಿಂದ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಟ್ರಾನ್ಸ್​ಫರ್ ಮಾಡಲಾಗಿದೆ.


ಅಶ್ವಥಿ ಎಸ್- ಆಯುಕ್ತೆ, ಪಶು ಸಂಗೋಪನಾ ಇಲಾಖೆ


ಮುಲ್ಲೈ ಮುಹಿಲನ್ - ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಇವರು ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆಯಾಗಿದ್ದಾರೆ.

Published by:ಪಾವನ ಎಚ್ ಎಸ್
First published: