news18-kannada Updated:February 4, 2021, 7:08 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು ಫೆಬ್ರವರಿ: ಕನ್ನಡ ಚಿತ್ರರಂಗದ ಒತ್ತಡಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ ಶೇ. 100ರಷ್ಟು ಥಿಯೇಟರ್ ಭರ್ತಿಗೆ ಅನುಮತಿ ನೀಡಿದೆ. ಅಲ್ಲದೆ, ಕೇಂದ್ರ ಸರಕಾರದ ಮಾರ್ಗಸೂಚಿಯ ಜತೆಗೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ. ಇದರ ಜೊತೆಗೆ ಸಿನಿಮಾ ವೀಕ್ಷಿಸುವ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವನ್ನಾಗಿ ಮಾಡಲಾಗಿದೆ. ಸಿನಿಮಾ ಪ್ರೇಕ್ಷಕರು ಆನ್ಲೈನ್ನಲ್ಲಿ ಬುಕ್ಕಿಂಗ್ ಹಾಗೂ ಟಿಕೆಟ್ ಖರೀದಿ ಸಮಯದಲ್ಲಿ ಕಡ್ಡಾಯವಾಗಿ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು. ಆಡಿಟೋರಿಯಂನಲ್ಲಿ ಎಸಿ ಮತ್ತು ಕೂಲರ್ ಗಳು 24-30 ಡಿಗ್ರಿ ಸೆಲ್ಸಿಯಸ್ ಇರಬೇಕು. ಪ್ರತಿ ಪ್ರದರ್ಶನದಲ್ಲೂ ಎರಡು ಬಾರಿ ಇಂಟರ್ವಲ್ ನೀಡಬೇಕು ಎಂದು ತಾಕೀತು ಮಾಡಲಾಗಿದೆ.
ಕಳೆದ ವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಫೆಬ್ರವರಿ 01 ರಂದು ಎಲ್ಲಾ ಚಿತ್ರರಂಗಗಳಲ್ಲೂ ಶೇ.100 ರಷ್ಟು ಪ್ರೇಕ್ಷಕರನ್ನು ಭರ್ತಿ ಮಾಡಲು ಅನುಮತಿ ನೀಡಿತ್ತು. ಆದರೆ, ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಾತ್ರ ಶೇ.100 ರಷ್ಟು ಥಿಯೇಟರ್ ಭರ್ತಿಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ಯಾಂಡಲ್ವುಡ್ ಮಂದಿ ಗರಂ ಆಗಿದ್ದರು. ಈ ಕುರಿತು ಹಿರಿಯ ನಟ ಶಿವರಾಜ್ ಕುಮಾರ್, ತಾರಾ ಅನುರಾಧ ಸೇರಿದಂತೆ ಫಿಲ್ಮ್ ಛೇಂಬರ್ನ ಕೆಲಸ ಸದಸ್ಯರು ಆರೋಗ್ಯ ಸಚಿವ ಕೆ ಸುಧಾಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಇದನ್ನೂ ಓದಿ: Farmers Protest: ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್; ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿಯಲ್ಲಿ ದಾಖಲಾಯ್ತು ಪ್ರಕರಣ
ಈ ವೇಳೆ ಚಲನಚಿತ್ರರಂಗ ಕಳೆದ 10 ತಿಂಗಳಲ್ಲಿ ಎಲ್ಲ ರಂಗಗಳಂತೆ ನಷ್ಟ ಅನುಭವಿಸಿದೆ. ಶೇ.50ರಷ್ಟು ಅವಕಾಶ ನೀಡಿದರೆ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾಗುತ್ತದೆ . ಈ ಹಿನ್ನಲೆ ರಾಜ್ಯದಲ್ಲಿಯೂ ಶೇಕಡಾ 100ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಅಹವಾಲು ಮುಂದಿಟ್ಟರು. ಫಿಲ್ಮ್ ಚೇಂಬರ್ ವಾದಕ್ಕೆ ಮಣಿದ ಸರ್ಕಾರ ನಾಲ್ಕು ವಾರಗಳ ಶೇ 100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದೆ. ಬಳಿಕ ಕೊರೋನಾ ಸೋಂಕಿನ ಪ್ರಕರಣದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಲಾಗಿತ್ತು.
ಈ ಕುರಿತು ಮಾತನಾಡಿದ ಸಚಿವ ಸುಧಾಕರ್, ಟಾಕೀಸ್ಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ನಾಳೆಯಿಂದಲೇ ಹೊಸ ಮಾರ್ಗಸೂಚಿ ಜಾರಿ ಮಾಡಲಾಗುವುದು. ಸಿಎಂ ಸೂಚನೆ ಮೇರೆ ಚಿತ್ರರಂಗದೊಂದಿಗೆ ಸಭೆ ನಡೆಸಿದ್ದೇವೆ. ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳವಾದರೆ ನಿರ್ಧಾರ ವಾಪಸ್ ಪಡೆಯುವುದಾಗಿ ತಿಳಿಸಿದ್ದರು. ಅದರಂತೆ ಕೊನೆಗೂ ರಾಜ್ಯ ಸರ್ಕಾರ ಇಂದು ಥಿಯೇಟರ್ಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಡಗಡೆ ಮಾಡಿದ್ದು, ಶೇ.100 ರಷ್ಟು ಭರ್ತಿಗೆ ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರ ಸಾಮಾನ್ಯವಾಗಿ ಸ್ಯಾಂಡಲ್ವುಡ್ ಮಂದಿಗೆ ಹಾಗೂ ಸಿನಿ ಪ್ರೇಕ್ಷಕರು ಸಂತಸ ಮೂಡಿಸಿದೆ.
Published by:
MAshok Kumar
First published:
February 4, 2021, 7:01 PM IST