Compensation: ಮಹಾಮಳೆಯಿಂದ ಬದುಕು ಕಳೆದುಕೊಂಡವರಿಗೆ ಸರ್ಕಾರದ ಆಸರೆ, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ

ಅತಿವೃಷ್ಠಿಯಿಂದ ಮನೆಗಳು ಹಾನಿಗೆ (House Damaged) ಒಳಗಾದ ಹಿನ್ನೆಲೆಯಲ್ಲಿ ಮನೆಗಳ ಪುನರ್ ನಿರ್ಮಾಣಕ್ಕೆ ಪರಿಹಾರ (Compensation) ಘೋಷಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಮನೆ ಪುನರ್ ನಿರ್ಮಾಣದ ಜೊತೆಗೆ ಪ್ರವಾಹದಿಂದ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಘೋಷಿಸಿದೆ.

ನೆರೆ ಹಾನಿ ಪ್ರದೇಶ ಪರಿಶೀಲಿಸಿದ ಸಿಎಂ

ನೆರೆ ಹಾನಿ ಪ್ರದೇಶ ಪರಿಶೀಲಿಸಿದ ಸಿಎಂ

  • Share this:
ಬೆಂಗಳೂರು: ರಾಜ್ಯದಲ್ಲಿ ಮಹಾಮಳೆ (Heavy Rain) ಅಬ್ಬರ ಮುಂದುವರೆದಿದೆ. ಕರಾವಳಿ (Coastal), ಮಲೆನಾಡು (Malenadu) ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕದ (North Karnataka) ಹಲವು ಜಿಲ್ಲೆಗಳಲ್ಲಿ ಪ್ರವಾಹ (Flood) ಪರಿಸ್ಥಿತಿ ತಲೆದೂರಿದೆ. ಈಗಾಗಲೇ ಹಲವರು ಪ್ರವಾಹದಿಂದಾಗಿ ಮನೆ (House) ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇಂತವರ ನೆರವಿಗೆ ಇದೀಗ ಕರ್ನಾಟಕ ರಾಜ್ಯ ಸರ್ಕಾರ (Karnataka State Government) ಧಾವಿಸಿದೆ. ಅತಿವೃಷ್ಠಿಯಿಂದ ಮನೆಗಳು ಹಾನಿಗೆ (House Damaged) ಒಳಗಾದ ಹಿನ್ನೆಲೆಯಲ್ಲಿ ಮನೆಗಳ ಪುನರ್ ನಿರ್ಮಾಣಕ್ಕೆ ಪರಿಹಾರ (Compensation) ಘೋಷಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಮನೆ ಪುನರ್ ನಿರ್ಮಾಣದ ಜೊತೆಗೆ ಪ್ರವಾಹದಿಂದ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಘೋಷಿಸಿದೆ.

ಯಾರಿಗೆ ಎಷ್ಟು ಪರಿಹಾರ?

ಮಹಾಮಳೆಯಿಂದಾಗಿ ಪ್ರಾಣ ಹಾನಿ ಆಗಿದ್ದರೆ 5 ಲಕ್ಷ ರೂಪಾಯಿ, ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳು ಮತ್ತು ಬಿಟ್ಟ ಬರೆ ಹಾನಿಯಾಗಿದ್ದರೆ 10,000 ರೂಪಾಯಿ, ಶೇಕಡಾ 75ಕ್ಕಿಂತ ಹೆಚ್ಚು ಸಂಪೂರ್ಣ ಮನೆ‌ ಹಾನಿಗೆ 5 ಲಕ್ಷ ರೂಪಾಯಿ, ಶೇಕಡಾ ‌25 ರಿಂದ 75 ರಷ್ಟು ಹಾನಿಯಿಂದಾಗಿ ಮನೆ ಕೆಡವಿ ಕಟ್ಟಲು 5 ಲಕ್ಷ ರೂಪಾಯಿ, ಶೇಕಡಾ 25 ರಿಂದ 75ರಷ್ಟು ತೀವ್ರ ಮನೆ ಹಾನಿ ದುರಸ್ತಿಗೆ  3 ಲಕ್ಷ ರೂಪಾಯಿ, ಶೇಕಡಾ 15 ರಿಂದ 25 ರಷ್ಟು ಭಾಗಶಃ ಮನೆ ಹಾನಿಗೆ 50,000 ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಪರಿಹಾರ ನೀಡಲು ಹಣದ ಕೊರತೆ ಇಲ್ಲ

'ಮಳೆಯಿಂದ ಪ್ರಾಣಹಾನಿ, ಭೂ ಕುಸಿತ , ಬೆಳೆಹಾನಿ ಉಂಟಾಗಿದ್ದು, ಸಮೀಕ್ಷೆ ಹಾಗೂ ಪರಿಹಾರ ಕಾರ್ಯ ಭರದಿಂದ ಸಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ  739 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಪರಿಹಾರ ಕ್ರಮಕ್ಕೆ ಹಣದ ಕೊರತೆಯಿಲ್ಲ. ನದಿ ಪಾತ್ರದಲ್ಲಿ ಸಂಭವಿಸುವ ಪ್ರವಾಹ ಹಾನಿ ತಡೆಗೆ ಶಾಶ್ವತ ಪರಿಹಾರಕ್ಕಾಗಿ‌ ಹಾಗೂ ಮನೆಗಳನ್ನು ಸ್ಥಳಾಂತರಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದೆ' ಎಂದರು.

ಇದನ್ನೂ ಓದಿ: Flood: ಮಹಾಮಳೆಗೆ ಕೃಷ್ಣೆ, ಭೀಮೆಯರ ಅಬ್ಬರ; ದೇವರಿಗೂ ಜಲದಿಗ್ಬಂಧನ!

 ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರ ಮನವೊಲಿಕೆ

'ಈ ಬಾರಿಯ ಮಳೆಗಾಲದಲ್ಲಿ ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭೂ ಕುಸಿತವುಂಟಾಗಿದೆ. ಕೊಡಗಿನಲ್ಲಿ ಲಘು ಭೂಕಂಪ,‌ ಕರಾವಳಿಯಲ್ಲಿ ಕಡಲ ಕೊರೆತ ಹಾಗೂ ಉತ್ತರ ಕರ್ನಾಟಕದ ನದಿ ಪಾತ್ರಗಳಲ್ಲಿ ಪ್ರವಾಹ ಹಾನಿಯಾಗಿದೆ‌. ಭೂ ಕುಸಿತ ಸಂಭವಿಸುತ್ತಿರುವ ಸೂಕ್ಷ್ಮ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಲ್ಲಿ ನೆಲೆಸುವಂತೆ ಮಾಡಲು ಮನವೊಲಿಸಲಾಗುವುದು' ಎಂದು ತಿಳಿಸಿದರು. ಇನ್ನು 'ಉಡುಪಿ, ಮಂಗಳೂರು, ಕೊಡಗು ಹಾಗೂ ಉತ್ತರ ಕನ್ನಡ ಸೇರಿದಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇಡೀ ಸರ್ಕಾರ ಮಳೆಹಾನಿ, ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ.‌ ವಿಪತ್ತು ಸಂಭವಿಸುತ್ತಿದ್ದರೂ ಸರ್ಕಾರ ಸಕ್ರಿಯವಾಗಿಲ್ಲವೆಂಬುದು ಸುಳ್ಳು' ಎಂದು

ಇದನ್ನೂ ಓದಿ: Flood: ಬದುಕನ್ನೇ ಮುಳುಗಿಸುವ ಪ್ರವಾಹದಿಂದ ಪಾರಾಗಿ ಬದುಕುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ನೆರೆ ಸಂತ್ರಸ್ತರಿಗೆ ಸರ್ಕಾರದ ಸಹಾಯಹಸ್ತ

ಇನ್ನು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ಆರ್. ಅಶೋಕ್,  ಇಂದಿನಿಂದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಸಿಎಂ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಭೇಟಿ ನೀಡುತ್ತಿದ್ದೇವೆ. ಮಳೆ ಹಾನಿ, ಭೂಕಂಪ, ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ನೆರೆ ಸಂತ್ರಸ್ತರನ್ನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಅಂತ ಭರವಸೆ ನೀಡಿದ್ದಾರೆ.
Published by:Annappa Achari
First published: