ಬಿಎಸ್​ ಯಡಿಯೂರಪ್ಪ ಪ್ರಮಾಣವಚನಕ್ಕೆ ವಿಧಾನಸೌಧದ ಅಂಗಳದಲ್ಲಿ ವೇದಿಕೆ ಸಜ್ಜು

ಜ್ಯೋತಿಷಿಗಳ ನೀಡಿದ ಮುಹೂರ್ತದಲ್ಲೇ ಇಂದು ಸಿಎಂ ಆಗಲಿರುವ ಬಿಎಸ್​ ಯಡಿಯೂರಪ್ಪ ಇಂದು ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರ ಭೇಟಿಯಾಗಲಿದ್ದಾರೆ. ರಾಜ್ಯಪಾಲರ ಬಳಿ ಅವಕಾಶ ಕೋರಿದ ಬಳಿಕ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

Seema.R | news18
Updated:July 26, 2019, 12:48 PM IST
ಬಿಎಸ್​ ಯಡಿಯೂರಪ್ಪ ಪ್ರಮಾಣವಚನಕ್ಕೆ ವಿಧಾನಸೌಧದ ಅಂಗಳದಲ್ಲಿ ವೇದಿಕೆ ಸಜ್ಜು
ಬಿಎಸ್​ ಯಡಿಯೂರಪ್ಪ
  • News18
  • Last Updated: July 26, 2019, 12:48 PM IST
  • Share this:
ಬೆಂಗಳೂರು (ಜು.26): ಮೈತ್ರಿ ಸರ್ಕಾರ ವಿಶ್ವಾಸ ಮಂಡನೆ ನಿರ್ಣಯದಲ್ಲಿ ಸೋತ ಬೆನ್ನಲ್ಲೇ ಬಿಎಸ್​ ಯಡಿಯೂರಪ್ಪ 31ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಇಂದು ಸಂಜೆ 6 ರಿಂದ 6.15ರೊಳಗೆ ವಿಧಾನಸೌಧದ ಎದುರು  ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.

ಅತೃಪ್ತ ಶಾಸಕರ ಅರ್ಜಿ ಬಾಕಿ ಇರುವ ಹಿನ್ನೆಲೆ ಸಂವಿಧಾನಿಕ ಬಿಕ್ಕಟ್ಟು ಎದುರಾಗುವ ಹಿನ್ನೆಲೆ ತರಾತುರಿಯಲ್ಲಿ ಪ್ರಮಾಣವಚನ ಕಾರ್ಯಕ್ರಮ ಬೇಡ ಎಂಬ ಸೂಚನೆಯನ್ನು ಹೈಕಮಾಂಡ್​ ನೀಡಿತ್ತು.  ಮೈತ್ರಿ ಸರ್ಕಾರ ಬಿದ್ದರೂ ಸರ್ಕಾರ ರಚನೆ ಕುರಿತು ಹೈ ಕಮಾಂಡ್​ ಯಾವುದೇ ಸೂಚನೆ ನೀಡದ ಹಿನ್ನೆಲೆ ಅವರ ಭೇಟಿಗಾಗಿ ತೆರಳಿದ ಬಿಜೆಪಿ ನಿಯೋಗ ಮನವೊಲಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ದಿನವೀಡಿ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ ಶಾ,  ಸರ್ಕಾರ ರಚನೆಗೆ ಅಳಕು ಮನಸ್ಸಿನಿಂದಲೇ ಗ್ರೀನ್​ ಸಿಗ್ನಲ್​ ತೋರಿದ್ದಾರೆ.

ಜ್ಯೋತಿಷಿಗಳ ನೀಡಿದ ಮುಹೂರ್ತದಲ್ಲೇ ಇಂದು ಸಿಎಂ ಆಗಲಿರುವ ಬಿಎಸ್​ ಯಡಿಯೂರಪ್ಪ ಇಂದು ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರ ಭೇಟಿಯಾಗಲಿದ್ದಾರೆ. ರಾಜ್ಯಪಾಲರ ಬಳಿ ಅವಕಾಶ ಕೋರಿದ ಬಳಿಕ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಬಿಎಸ್​ ಯಡಿಯೂರಪ್ಪ, ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಕಾರ್ಯಕ್ರಮಕ್ಕೆ ಹಂಗಾಮಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ.

ಕಾರ್ಯಕ್ರಮದ ಸಿದ್ಧತೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದು, ಸಮಾರಂಭದ ಸಿದ್ಧತೆ ಕುರಿತು ಚರ್ಚೆ ನಡೆಸಿದರು. ಜೊತೆಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಬಹುಮತವಿಲ್ಲದ ಬಿಎಸ್​ವೈಗೆ ಸರ್ಕಾರ ರಚನೆಗೆ ಅವಕಾಶ ನೀಡಿರುವುದು ಅಸಂವಿಧಾನಿಕ; ಸಿದ್ದರಾಮಯ್ಯ

ಬಿಎಸ್​ವೈ ಪ್ರಮಾಣವಚನಕ್ಕೆ ಬಿಗಿ ಬಂದೋಬಸ್ತ್​ ಮಾಡಲಾಗಿದ್ದು, 3 ಸಾವಿರ ಪಾಸ್ ವಿತರಣೆ ಮಾಡಲಾಗಿದ್ದು, ಪಾಸ್​ ಇದ್ದವರಿಗೆ ಮಾತ್ರ ಪ್ರಮಾಣವಚನಕ್ಕೆ ಅವಕಾಶ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.3 ಹೆಚ್ಚುವರಿ ಪೊಲೀಸ್ ಆಯುಕ್ತರು, 6 ಡಿಸಿಪಿ, 15 ಎಸಿಪಿ, 25 ಇನ್ಸ್​ಪೆಕ್ಟರ್​, ಸಾವಿರ ಪೊಲೀಸರು ಹಾಗೂ ಹೆಚ್ಚುವರಿಯಾಗಿ ಕೆಎಸ್​ಆರ್​ಪಿ ತುಕಡಿಗಳು ನಿಯೋಜನೆ ಮಾಡಲಾಗಿದೆ. ಇನ್ನು ಕಾರ್ಯಕ್ರಮಕ್ಕೆ ಕೇಂದ್ರದಿಂದ ಗಣ್ಯರು‌ ಬರುವ ಮಾಹಿತಿ ಸದ್ಯಕ್ಕೆ ಇಲ್ಲ. ಬಂದರೆ ನಾವು ಭದ್ರತೆ ನೀಡಲು ಸಿದ್ದರಿದ್ದೇವೆ ಎಂದು ಅವರು ತಿಳಿಸಿದರು.

First published:July 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ