• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Supplementary Exam: ಫೇಲ್ ಆಗಿದ್ದಕ್ಕೆ ಭಯ ಬೇಡ, ನಿಮಗಿದೆ ಇನ್ನೊಂದು ಚಾನ್ಸ್; ಮೇ 27ರಿಂದ SSLC ಪೂರಕ ಪರೀಕ್ಷೆ

Supplementary Exam: ಫೇಲ್ ಆಗಿದ್ದಕ್ಕೆ ಭಯ ಬೇಡ, ನಿಮಗಿದೆ ಇನ್ನೊಂದು ಚಾನ್ಸ್; ಮೇ 27ರಿಂದ SSLC ಪೂರಕ ಪರೀಕ್ಷೆ

ಸಚಿವ ನಾಗೇಶ್​

ಸಚಿವ ನಾಗೇಶ್​

ಫೇಲ್ ಆದ ವಿದ್ಯಾರ್ಥಿಗಳಿಗೆ ಮೇ 27ರಿಂದ ಜೂನ್ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ.  ಬಳಿಕ ಪೂರಕ ಪರೀಕ್ಷೆಯ ಫಲಿತಾಂಶ  ಜೂನ್ 3ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

  • Share this:

ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷೆ (SSLC Exam)  ಫಲಿತಾಂಶ ಪ್ರಕಟವಾಗಿದ್ದು, ಈ ವರ್ಷ ಶೇ 85.63ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ 8.53 ಲಕ್ಷ ವಿದ್ಯಾರ್ಥಿಗಳ ಪೈಕಿ 7.38 ಲಕ್ಷ ವಿದ್ಯಾರ್ಥಿಗಳು (Student) ಪಾಸಾಗಿದ್ದಾರೆ. ಈ ಪೈಕಿ 145 ವಿದ್ಯಾರ್ಥಿಗಳು ಔಟ್​ ಆಫ್  ಅಂಕಗಳನ್ನು (Out Off Marks) ಪಡೆದಿದ್ದಾರೆ. ಫೇಲ್ ಆದ ವಿದ್ಯಾರ್ಥಿಗಳಿಗೆ ಮೇ 27ರಿಂದ ಜೂನ್ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ.  ಬಳಿಕ ಪೂರಕ ಪರೀಕ್ಷೆಯ ಫಲಿತಾಂಶ  ಜೂನ್ 3ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C Nagesh) ಹೇಳಿದರು.


ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಬಿ.ಸಿ ನಾಗೇಶ್​


2021-22ನೇ ಸಾಲಿನ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಹಿನ್ನೆಲೆ ಇಂದು ಮಧ್ಯಾಹ್ನ 12.30ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸಿ​ ಫಲಿತಾಂಶದ ವಿವರಗಳನ್ನು ನೀಡಿದರು. ಈ ಬಾರಿ ರಾಜ್ಯದಲ್ಲಿ 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 8,07,206 ವಿದ್ಯಾರ್ಥಿಗಳು ಹಾಜರಾಗಿದ್ದರು. 20,406 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ರಿಪೀಟರ್ಸ್​ ಸೇರಿದಂತೆ 8,53,436 ಒಟ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 625ಕ್ಕೆ 625 ಅಂಕಗಳನ್ನು ಒಟ್ಟು 145 ಮಕ್ಕಳು ಪಡೆದಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶದ ವಿವರ ನೀಡಿದರು.


ಈ ಬಾರಿಯೂ ಬಾಲಕಿಯರೇ ಮೇಲುಗೈ


ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.  ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ.


ಇದನ್ನೂ ಓದಿ: SSLC ಬಳಿಕ ಮುಂದ್ಯಾವ ಕೋರ್ಸ್? ಇಲ್ಲಿವೆ ಓದಿ ವಿದ್ಯಾರ್ಥಿಗಳಿಗೆ ಸಲಹೆ


ನೂರಕ್ಕೆ ನೂರು ಫಲಿತಾಂಶ


1462 ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆ ತೆಗೆದುಕೊಂಡ ಎಲ್ಲ ಮಕ್ಕಳೂ ಪಾಸಾಗಿದ್ದಾರೆ. 467 ಅನುದಾನಿತ ಶಾಲೆಗಳು ಮತ್ತು 1991 ಅನುದಾನ ರಹಿತ ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದಿದೆ. ಎರಡು ಸರ್ಕಾರಿ ಶಾಲೆಗಳು, ಮೂರು ಅನುದಾನಿತ ಮತ್ತು 15 ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.


ಫೋನ್​ ಮಾಡಿ ಶುಭಕೋರಿದ ಸಚಿವರು


ಎಸ್ ಎಸ್ ಎಲ್ ಸಿ ಟಾಪರ್ ಜೊತೆ ಶಿಕ್ಷಣ ಸಚಿವ ನಾಗೇಶ್ ಫೋನ್​ ಮಾಡಿ ಶುಭಾಶಯ ತಿಳಿಸಿದ್ದಾರೆ. 14 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿ ಅಮಿತ್ ಹಾಗೂ ವಿದ್ಯಾರ್ಥಿನಿ ಭೂಮಿಕಾಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಫೋನ್ ಮಾಡಿ ಶುಭಾಶಯ ತಿಳಿಸಿದ್ದಾರೆ. ವಿದ್ಯಾರ್ಥಿ ಪೋಷಕರ ಜೊತೆ ಕೂಡ ಸಚಿವರು ಮಾತಾಡಿದ್ದಾರೆ.


ಇದನ್ನೂ ಓದಿ: SSLC Result 2022: ಎಸ್ಎಸ್‌ಎಲ್‌ಸಿಯಲ್ಲಿ 85.63ರಷ್ಟು ಫಲಿತಾಂಶ, 145 ವಿದ್ಯಾರ್ಥಿಗಳಿಗೆ ಔಟ್ ಆಫ್‌ ಔಟ್ ಮಾರ್ಕ್ಸ್‌!


ಈ ಬಾರಿ SSLC ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ


ಇನ್ನು ಈ ಬಗ್ಗೆ ನ್ಯೂಸ್​ 18 ಜೊತೆ ಮಾತಾಡಿದ ಸಚಿವ ಬಿ.ಸಿ ನಾಗೇಶ್​, ಕಳೆದ 10 ವರ್ಷದಲ್ಲಿ ಈ ಬಾರಿ SSLC ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ಬಂದಿದೆ. ಟಾಪರ್ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ಶುಭಾಶಯ ತಿಳಿಸಿದ್ದೇನೆ. ಗ್ರಾಮಾಂತರ ಭಾಗದ ಮಕ್ಕಳೇ ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಮಕ್ಕಳ ಪೋಷಕರ ಜೊತೆ ಮಾತಾಡಿ ಶುಭಾಶಯ ತಿಳಿಸಿದ್ದೇನೆ.


ಜೂ. 3ನೇ ವಾರದಲ್ಲಿ ಪಿಯುಸಿ ಫಲಿತಾಂಶ


ಇನ್ನೂ ಇದೇ ವೇಳೆ ಪಿಯುಸಿ ಫಲಿತಾಂಶದ ಬಗ್ಗೆ ಮಾತಾಡಿದ ಸಚಿವ ಬಿ.ಸಿ ನಾಗೇಶ್​, ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದೆ. ಪಿಯು ಮೌಲ್ಯಮಾಪನ ಆದಷ್ಟು ಬೇಗ ಮಾಡಲು ಸೂಚಿಸಲಾಗಿದೆ. ಜೂ. 3ನೇ ವಾರದಲ್ಲಿ ಪಿಯುಸಿ ಫಲಿತಾಂಶ ನೀಡಲಾಗುತ್ತೆ  ಎಂದು ಹೇಳಿದ್ದಾರೆ.


ಪಠ್ಯಪುಸ್ತಕ ಮುದ್ರಣ ಮುಂಚಿತವಾಗಿಯೇ ರಾಜಕಾರಣ ಮಾಡಲಾಗುತ್ತಿದೆ. ನಾರಾಯಣಗುರು, ಭಗತ್ ಸಿಂಗ್, ಟಿಪ್ಪು ಹೀಗೆ ಹಲವು ನಾಯಕರ ಪಠ್ಯದ ಬಗ್ಗೆ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ ಎಂದು ವಿರೋಧ ಪಕ್ಷಗಳ ಬಗ್ಗೆಯೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಕಿಡಿಕಾರಿದ್ರು.

First published: