ರಾಯಚೂರಿನಲ್ಲಿ ಕಳ್ಳರಿಗೆ ವರದಾನವಾದ ಸಿಸಿ ಕ್ಯಾಮರಾಗಳ ಕಣ್ಣಾಮುಚ್ಚಾಲೆ

ರಾಯಚೂರಿನ ಕೆಲವೊಂದು ಸೂಕ್ಷ್ಮವಾದ ಪ್ರದೇಶದಲ್ಲಿ ಸಿಸಿಟಿವಿಗಳು ಅಳವಡಿಸಿ ನಗರದಲ್ಲಿ ವಿದ್ವಂಸಕ ಕೃತ್ಯಗಳನ್ನು ತಡೆಯಬಹುದು ಎನ್ನುವ ಪೊಲೀಸ್ ಉದ್ದೇಶ ವಿಫಲವಾಗಿದೆ.

ಹಾಳಾಗಿರುವ ಸಿಸಿಟಿವಿ

ಹಾಳಾಗಿರುವ ಸಿಸಿಟಿವಿ

  • Share this:
ರಾಯಚೂರು (ಫೆ.07) : ಈಗ ರಾಜ್ಯ ಸೇರಿದಂತೆ ವಿವಿಧ ರೀತಿಯ ವಿದ್ವಂಸಕ ಕೃತ್ಯಗಳು ನಡೆಯುತ್ತಿವೆ. ರಾಯಚೂರು  ನಗರದಲ್ಲಿಯೂ ಕಳ್ಳತನ, ಸಮಾಜ ವಿರೋಧಿ ಘಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಕಣ್ಗಾವಲು ಇಡಬೇಕಾಗಿದ್ದ ಸಿಸಿಟಿವಿಗಳು ಬಂದ್ ಆಗಿ 2 ವರ್ಷವಾಗಿವೆ. ಆದರೂ, ಅವುಗಳನ್ನು ರಿಪೇರಿ ಮಾಡಬೇಕಾದ ಸಂಸ್ಥೆಯವರು ಇತ್ತ ನೋಡುತ್ತಿಲ್ಲ, ಇದರಿಂದಾಗಿ ಪೊಲೀಸರಿಗೆ ಸಿಸಿಟಿವಿಗಳಿದ್ದರೂ ಇಲ್ಲದಂತಾಗಿವೆ.

ರಾಜ್ಯದ ಗಡಿಯಲ್ಲಿರುವ ರಾಯಚೂರು ನಗರದಲ್ಲಿ ಹಲವಾರು ಬಾರಿ ಸರ್ ಕಳ್ಳತನ, ಮನೆ ಕಳ್ಳತನ ಆಗಾಗ ಗುಂಪುಗಳ ಮಧ್ಯೆ ಘರ್ಷಣೆಗಳು ನಡೆಯುತ್ತವೆ. ಬಾಲಕಿಯರ ಮೇಲೆ ಕೆಲವು ಹುಡುಗರು ಚೂಡಾಯಿಸುತ್ತಿದ್ದಾರೆ. ಈ ಎಲ್ಲಾಗಳನ್ನು ನಿಯಂತ್ರಣಕ್ಕೆ ಸಹಕಾರಿಯಾಗಬೇಕಾದ ಪೊಲೀಸರಿಗೆ ಸಿಸಿಟಿವಿ ಕಣ್ಗಾವಲುಗಳು ಅವಶ್ಯವಾಗಿವೆ. ಆದರೆ, ರಾಯಚೂರು ನಗರದಲ್ಲಿ ಈ ಹಿಂದೆ ಚೇತನ್ ರಾಥೋಡರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಪೊಲೀಸ್ ಕಂಟ್ರೋಲ್ ರೂಮ್​​ಗೆ ಸಂಪರ್ಕ ಹೊಂದಿರುವ 19 ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು, ಸಿಸಿಟಿವಿಗಳನ್ನು ಬೆಂಗಳೂರು ಮೂಲದ ಬ್ಲ್ಯೂ ಸ್ಟಾರ್ ಎಂಬ ಕಂಪನಿಗೆ ನಿರ್ವಹಣೆ ಮಾಡಲು ಗುತ್ತಿಗೆ ನೀಡಲಾಗಿದೆ.

ಆದರೆ, ಈ ಕಂಪನಿಯು ಸಿಸಿಟಿವಿಯನ್ನು ಅಳವಡಿಸಿದ ನಂತರ ಇತ್ತ ನೋಡಿಯೇ ಇಲ್ಲ. ಇದರಿಂದಾಗಿ 19 ಸಿಸಿಟಿವಿಗಳಲ್ಲಿ 1 ಸಿಸಿಟಿವಿ ಮಾತ್ರ ಕೆಲಸ ಮಾಡುತ್ತಿದೆ. ರಾಯಚೂರಿನ ಕೆಲವೊಂದು ಸೂಕ್ಷ್ಮವಾದ ಪ್ರದೇಶದಲ್ಲಿ ಸಿಸಿಟಿವಿಗಳು ಅಳವಡಿಸಿ ನಗರದಲ್ಲಿ ವಿದ್ವಂಸಕ ಕೃತ್ಯಗಳನ್ನು ತಡೆಯಬಹುದು ಎನ್ನುವ ಪೊಲೀಸ್ ಉದ್ದೇಶ ವಿಫಲವಾಗಿದೆ. ನಿರ್ವಹಣೆ ಮಾಡಲು ನಿರ್ಲಕ್ಷ್ಯ ವಹಿಸಿದ ಕಂಪನಿಯ ಮೇಲೆ ಕ್ರಮ ಕೈಗೊಂಡು ಇದ್ದು ಇಲ್ಲದಂತೆ ಇರುವ ಸಿಸಿಟಿವಿಗಳನ್ನು ರಿಪೇರಿ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಹಾವೇರಿಗೆ ಕೊನೆಗೂ ದಕ್ಕಿದ ಸಮ್ಮೇಳನ ಆತಿಥ್ಯ - ಕಾರ್ಯಕಾರಣಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಿಸಿಟಿವಿಗಳು ಸ್ಥಗಿತಗೊಂಡಿವೆ. ಅವುಗಳನ್ನು ನಿರ್ವಹಣೆ ಮಾಡುವ ಕಂಪನಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೂ ಅವರು ಇತ್ತ ಬಾರದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದಲೇ ನಿರ್ವಹಿಸಲು ಕ್ರಮ ಕೈಗೊಳ್ಳಲು ಮುಂದಾಗಿದೆ, ಈ ಮಧ್ಯೆ ಅವುಗಳ ರಿಪೇರಿಗಾಗಿ ಜಿಲ್ಲಾಧಿಕಾರಿಗಳಿಂದ ಅನುದಾನವನ್ನು ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ದೇಶದ ಹಲವಾರು ರೀತಿಯ ಹೋರಾಟಗಳು, ಹಲವಾರು ರೀತಿಯ ದುಷ್ಕೃತ್ಯಗಳು ನಡೆಯುತ್ತಿವೆ, ಈ ಸಂದರ್ಭದಲ್ಲಿ ಸಿಸಿಟಿವಿಗಳಿದ್ದರೆ ಯಾವುದೇ ಘಟನೆಯಾದರೂ ಅಪರಾಧಿಗಳನ್ನು ಹಿಡಿಯಬಹುದು ಅಲ್ಲದೆ ಕಾನೂನು ಸುವ್ಯವಸ್ಥೆಗೆ ಸಹಕಾರಿಯಾಗುತ್ತಿದೆ.

 
First published: