• Home
 • »
 • News
 • »
 • state
 • »
 • Crime News: ಆಸ್ತಿ ವಿಚಾರಕ್ಕೆ ಗಲಾಟೆ; ತಾಯಿ, ತಮ್ಮನ ಹೆಂಡತಿ ಹಾಗೂ 4 ವರ್ಷದ ಮಗುವನ್ನೂ ಇರಿದ ಪಾಪಿ ಮಗ!

Crime News: ಆಸ್ತಿ ವಿಚಾರಕ್ಕೆ ಗಲಾಟೆ; ತಾಯಿ, ತಮ್ಮನ ಹೆಂಡತಿ ಹಾಗೂ 4 ವರ್ಷದ ಮಗುವನ್ನೂ ಇರಿದ ಪಾಪಿ ಮಗ!

ಆರೋಪಿ ಗೋಪಿಕೃಷ್ಣ.

ಆರೋಪಿ ಗೋಪಿಕೃಷ್ಣ.

16 ನೇ ತಾರೀಖು ಬೆಳಗ್ಗೆ ತಮ್ಮ ಸೋಮೇಶ್ ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಗೋಪಿಕೃಷ್ಣ ಬೆಳಗ್ಗೆ 10.30 ರ ಸುಮಾರಿಗೆ ತನ್ನ ಹೆಂಡತಿ ಶಿಲ್ಪಾ ಜೊತೆಗೂಡಿ ಚಾಕು ತಂದು ತನ್ನ ತಾಯಿಯ ಎದುರು ಗಲಾಟೆ ಮಾಡಿದ್ದಾನೆ. ಇದೇ ವೇಳೆ ಅಡ್ಢ ಬಂದ ತಮ್ಮನ ‌ಪತ್ನಿಯ ಕುತ್ತಿಗೆಗೆ ಚಾಕು ಹಾಕಿದ್ದಾನೆ.

ಮುಂದೆ ಓದಿ ...
 • Share this:

  ಬೆಂಗಳೂರು (ಜನವರಿ 19); ಆಸ್ತಿ ವಿಚಾರಕ್ಕಾಗಿ ಪಾಪಿ ಮಗ ತನ್ನ ತಾಯಿ, ತಮ್ಮನ ಹೆಂಡತಿ ಹಾಗೂ ನಾಲ್ಕು ವರ್ಷದ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಇದೇ ತಿಂಗಳ 16 ರಂದು ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಗೋಪಿ ಕೃಷ್ಣ (38) ಎಂದು ಗುರುತಿಸಿದ್ದು, ಪೊಲೀಸರು ಆತನನ್ನು ಬಂಧಿಸಿ ಎಫ್​ಐಆರ್​ ದಾಖಲಿಸಿದ್ದಾರೆ. ಮನೆ ಆಸ್ತಿ ವಿಚಾರವಾಗಿ ಅಣ್ಣ ಮತ್ತು ತಮ್ಮಂದಿರ ನಡುವೆ ಆಗಾಗ ಗಲಾಟೆ ನಡೆಯುತ್ತತ್ತು. ಸಾಲ ಮಾಡಿಕೊಂಡಿದ್ದ ಗೋಪಿಕೃಷ್ಣ ಮನೆ ಮಾರಾಟಕ್ಕೆ ಮುಂದಾಗಿದ್ದು, ತಮ್ಮ ಅದಕ್ಕೆ ಅಡ್ಡಿಪಡಿಸಿದ್ದ ಗಲಾಟೆಗೆ ಇದೇ ಕಾರಣ ಎನ್ನಲಾಗುತ್ತಿದೆ. 


  ಬಿಟಿಎಂ ಲೇಔಟ್ ನ 1 ಕ್ರಾಸ್ ನಲ್ಲಿರೋ ಮನೆಯ ಮೇಲ್ಭಾಗದಲ್ಲಿ ಅಣ್ಣಾ ಗೋಪಿಕೃಷ್ಣ ವಾಸವಾಗಿದ್ದರೆ, ಕೆಳಮಹಡಿಯಲ್ಲಿ ತಮ್ಮ ಸೋಮೇಶ್, ತಾಯಿ ಗುಣಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದಾನೆ.


  ಇದನ್ನೂ ಓದಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬೆಟ್ಟಿಂಗ್ ದಂಧೆ; ಉತ್ತರಪ್ರದೇಶ ಬಿಜೆಪಿ ನಾಯಕನ ಬಂಧನ!


  16 ನೇ ತಾರೀಖು ಬೆಳಗ್ಗೆ ತಮ್ಮ ಸೋಮೇಶ್ ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಗೋಪಿಕೃಷ್ಣ ಬೆಳಗ್ಗೆ 10.30 ರ ಸುಮಾರಿಗೆ ತನ್ನ ಹೆಂಡತಿ ಶಿಲ್ಪಾ ಜೊತೆಗೂಡಿ ಚಾಕು ತಂದು ತನ್ನ ತಾಯಿಯ ಎದುರು ಗಲಾಟೆ ಮಾಡಿದ್ದಾನೆ. ಇದೇ ವೇಳೆ ಅಡ್ಢ ಬಂದ ತಮ್ಮನ ‌ಪತ್ನಿಯ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಬೈದಿದ್ದ ತಾಯಿಯ ಕತ್ತಿಗೂ ಚಾಕುವಿನಿಂದ ಇರಿದಿದ್ದಾನೆ. ಜೋರಾಗಿ ಅಳುತ್ತಿದ್ದ ನಾಲ್ಕು ವರ್ಷದ ಪುಟ್ಟ ಮಗುವನ್ನೂ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.


  ಮನೆಯಲ್ಲಿದ್ದ ಎಲ್ಲರನ್ನೂ ಚಾಕುವಿನಿಂದ ಇರಿದಿದ್ದ ಗೋಪಿಕೃಷ್ಣ ಘಟನೆಯ ನಂತರ ಮನೆಯ ಎದುರು ಜನ ಸೇರುವುದನ್ನು ನೋಡಿ ಗೆದರಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಹೀಗಾಗಿ ತಮ್ಮ ಸೋಮೇಶ್ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಅಲ್ಲದೆ, ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  Published by:MAshok Kumar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು