ಬೆಂಗಳೂರು: ಮದ್ಯಪಾನ ಮಾಡಲು ಹಣ (Money) ಕೊಡಲು ಒಪ್ಪದ ತಂದೆಯನ್ನ (Father) ಮಗನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluu) ಮಾರೇನಹಳ್ಳಿ ಪಿಎಸ್ ಲೇಔಟ್ನಲ್ಲಿ ನಡೆದಿದೆ. ಬಸವರಾಜು (60) ಕೊಲೆಯಾದ ತಂದೆಯಾದ್ರೆ ನೀಲಾಧರ್ ತಂದೆಯನ್ನ ಕೊಂದ ಆರೋಪಿ. ಘಟನೆ ನಡೆದ 15 ದಿನಗಳ ನಂತರ ಬೆಳಕಿಗೆ ಬಂದಿದೆ. ಕೊಲೆಯಾದ ಬಸವರಾಜು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವ ಕೊಳೆತು ವಾಸನೆ ಬಂದಾಗ ಪ್ರಕರಣ ಬೆಳಕಿಗೆ ಬಂದಾಗ ಪೊಲೀಸರು (Police Investigation) ಆರಂಭದಲ್ಲಿ ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದಾಗ ಮಗನೇ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.
ಮರಣೋತ್ತರ ಶವ ಪರೀಕ್ಷೆಯಲ್ಲಿ ಕೊಲೆ ಎಂದು ಸಾಬೀತಾಗಿದೆ. ಮೃತ ಬಸವರಾಜು ನಗರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದರು. ನೀಲಾಧರ್ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.
ಮದ್ಯವ್ಯಸನಿಯಾಗಿದ್ದ ನೀಲಾಧರ್ ಕುಡಿಯಲು ತಂದೆ ಬಳಿ ಹಣ ಕೇಳಿದ್ದನು. ಹಣ ಕೊಡಲು ಒಪ್ಪದಿದ್ದಾಗ ಶೆಡ್ನಲ್ಲಿದ್ದ ಇಟ್ಟಿಗೆ ತೆಗೆದುಕೊಂಡು ತಲೆಗೆ ಹೊಡೆದಿದ್ದಾನೆ. ಸ್ಥಳದಲ್ಲಿಯೇ ಬಸವರಾಜು ಸಾವನ್ನಪ್ಪಿದ್ದಾರೆ.
ಆರೋಪಿಯ ಬಂಧನ
ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧನ ಜೀವ ಪಡೆದ ನಾಯಿ ಗಲಾಟೆ
ರಾಜಧಾನಿಯಲ್ಲಿ ನಾಯಿ ವಿಚಾರಕ್ಕೆ ಮತ್ತೊಂದು ಕೊಲೆ ನಡೆದಿದೆ. ನಾಯಿ ಗಲೀಜು ಮಾಡಿದ್ದನ್ನ ಪ್ರಶ್ನೆ ಮಾಡಿದ್ದ ವೃದ್ಧನ ಕೊಲೆಯಾಗಿದೆ. ಮುನಿರಾಜು (68) ಕೊಲೆಯಾದ ವೃದ್ಧ. ಈ ಗಲಾಟೆಯಲ್ಲಿ ಮುರಳಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಮೋದ್, ರವಿಕುಮಾರ್ ಮತ್ತು ಪಲ್ಲವಿ ಬಂಧಿತ ಆರೋಪಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ