ಬಾಗಲಕೋಟೆ (ಜೂ 6): ಮೃತ ಗಂಡ ಹಾವಿನ (Snake) ರೂಪದಲ್ಲಿ ಬಂದಿದ್ದಾನೆಂದು ಮನೆಯಲ್ಲಿ 4 ದಿನಗಳಿಂದ ಹಾವಿನ ಜೊತೆ ಅಜ್ಜಿ ಇದ್ದಾರೆ. ಬಾಗಲಕೋಟೆ (Bagalakote) ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸಾರವ್ವ ಮೌನೇಶ್ ಕಂಬಾರ ಎನ್ನುವ ಮಹಿಳೆಯ ವಿಚಿತ್ರ (Strange) ನಂಬಿಕೆಗೆ ಊರ ಜನರೇ ಬೆಚ್ಚಿಬಿದ್ದಿದೆ. 4 ದಿನಗಳ ಹಿಂದೆ ಮನೆಗೆ ನಾಗರಹಾವು (Cobra) ಬಂದಿದ್ದು, ಹಾವು ಹೊರಗೆ ಹಾಕಲು ಪ್ರಯತ್ನ ಮಾಡಿದ್ರೂ ಅದು ಹೋಗಲಿಲ್ಲವಂತೆ. ಇದರಿಂದ ಅಜ್ಜಿಯೇನು ಆತಂಕಗೊಂಡಿಲ್ಲ. ತನ್ನ ಪತಿಯೇ ಹಾವಿನ ರೂಪದಲ್ಲಿ ಬಂದಿರಬಹುದೆಂಬ ನಂಬಿಕೆಯಲ್ಲಿ ಸಾರವ್ವ ಇದ್ದಾರೆ. ಅಜ್ಜಿಯ ಪತಿ ಮೋನೇಶ್ ಎನ್ನುವವರು ಹಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ರು. ಅವರೇ ಇದೀಗ ಹಾವಿನ ರೂಪದಲ್ಲಿ ತನ್ನ ಹತ್ತಿರ ಬಂದಿದ್ದಾರೆ. ಅದಕ್ಕೆ ಯಾರೂ ದಕ್ಕೆ ಮಾಡಬಾರದು, ಹಿಡಿಯಬಾರದು ಎಂದು ಅಜ್ಜಿಯ ಕೇಳಿ ಕೊಂಡಿದ್ದಾರೆ.
ನಾಲ್ಕು ದಿನ ಮನೆಯಲ್ಲಿ ಚಾಪೆಯ ಮೇಲೆ ಇರಿಸಿದ್ದರು. ಅಜ್ಜಿ ಮನೆಯಲ್ಲಿ ಹಾವು ಇದೆ ಎಂದು ತಿಳಿದು ಅನೇಕರು ವೀಕ್ಷಿಸಲು ಬರ್ತಿದ್ದಾರೆ. ನಾಲ್ಕು ದಿನಗಳಿಂದ ಅಜ್ಜಿ ಮನೆಯಲ್ಲಿ ಹಾವಿಗೆ ಆಹಾರ ಇಲ್ಲದೇ ಬಳಲಿತ್ತು. ನಾಲ್ಕು ದಿನಗಳ ಬಳಿಕ ಮನೆಯಿಂದ ಹಾವು ಕಣ್ಮರೆ ಆಗಿದೆ ಎನ್ನುವ ಮಾಹಿತಿ. ತನ್ನ ಗಂಡನ ರೂಪದಲ್ಲಿ ಇದ್ದಾನೆ ಎಂದು ನಂಬಿಕೊಂಡ ಅಜ್ಜಿ.
ಹಾವು ಕಡಿತಕ್ಕೂ ಆಯುರ್ವೇದ ಚಿಕಿತ್ಸೆ
ನಾಗದೋಷಗಳ ಪರಿಹಾರಕ್ಕೆ ಹೆಸರುವಾಸಿ ಶ್ರೀ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಸುಬ್ರಹ್ಮಣ್ಯದಲ್ಲಿಗ ಹಾವು ಕಡಿತಕ್ಕೂ ಆಯುರ್ವೇದ ಚಿಕಿತ್ಸೆ ಲಭ್ಯವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ನೂರು ಕೋಟಿ ರೂಪಾಯಿಯ ಯೋಜನೆಯನ್ನು ತಯಾರು ಮಾಡಿದ್ದು, ಹಾವು ಕಡಿತಕ್ಕೆ ಒಳಗಾದವರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ತೆರೆಯಲು ಸರ್ಕಾರ ಮುಂದಾಗಿದೆ.
ರಾಜ್ಯದ ಶ್ರೀಮಂತ ದೇಗಲುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗಾಗಲೇ ಮುಜರಾಯಿ ಇಲಾಖೆಯಿಂದ 300 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಿದ್ದು,ಕ್ಷೇತ್ರದ ಇಂಜಾಡಿ ಎಂಬ ಪ್ರದೇಶದಲ್ಲಿ ಸುಮಾರು 50 ಎಕರೆ ಜಾಗದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಸರ ಸ್ನೇಹಿ ಕುಟೀರವನ್ನು ಸ್ಥಾಪನೆ ಮಾಡಲಾಗುತ್ತಿದೆ.
ಇದನ್ನೂ ಓದಿ: Chitradurga: ಕಾಂಗ್ರೆಸ್ ನವರೇನು ಸ್ವಾತಂತ್ರ್ಯ ಹೋರಾಟಗಾರರೇ? ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರಶ್ನೆ
ಗಿಡಮೂಲಿಕೆಗಳನ್ನು ಉಪಯೋಗಿಸಿ ಚಿಕಿತ್ಸೆ
ಈ ಪರಿಸರ ಸ್ನೇಹಿ ಕುಟೀರಗಳಲ್ಲಿ, ಪರಿಸರದ ಮಧ್ಯದ ವಾತಾವರಣದಲ್ಲಿ ಯೋಗ ಥೆರಪಿ, ಧ್ಯಾನ, ಆಯುರ್ವೇದ ಚಿಕಿತ್ಸೆಯ ಸೌಲಭ್ಯಗಳಿವೆ. ಈ ಪರಿಸರ ಸ್ನೇಹಿ ಕುಟೀರದ ಮತ್ತೊಂದು ವಿಭಾಗದಲ್ಲಿ ಹಾವು ಕಡಿತಕ್ಕೊಳಗಾದವರಿಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಂಪೂರ್ಣ ಆಯುರ್ವೇದ ವೈದ್ಯರು ಈ ಚಿಕಿತ್ಸೆಯನ್ನು ನೀಡಲಿದ್ದು, ಗಿಡಮೂಲಿಕೆಗಳನ್ನು ಉಪಯೋಗಿಸಿ ಆಯುರ್ವೇದ ವೈದ್ಯರು ದಾದಿಯರು ಈ ಚಿಕಿತ್ಸೆ ನೀಡಲಿದ್ದಾರೆ.
ಕರಾವಳಿಯಲ್ಲಿ ಹಾವು ಕಡಿತ ಪ್ರಕರಣ ಸಾಮಾನ್ಯ
ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ಪ್ರಸಿದ್ದಿಯನ್ನು ಹೊಂದಿದ್ದು ಜನ ನಾಗದೇವರನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಸಂಖ್ಯಾತ ನಾಗಬನಗಳು ಕೂಡಾ ಇದೆ. ಹೀಗಾಗಿ ನಾಗರಹಾವುಗಳ ಆವಾಸ ಸ್ಥಾನವೂ ಈ ನಾಗಬನಗಳು ಆಗಿವೆ. ಕರಾವಳಿಯಲ್ಲಿ ಹಾವು ಕಡಿತ ಪ್ರಕರಣಗಳೂ ಸಾಮಾನ್ಯವಾಗಿ ಕಂಡುಬರುತ್ತದೆ. ಹಾವಿನ ಕಡಿತಕ್ಕೆ ತ್ವರಿತ ಚಿಕಿತ್ಸೆ ಅಗತ್ಯವಾಗಿರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಡ್ಡಪರಿಣಾಮವಾಗುತ್ತದೆ.
ಇದನ್ನೂ ಓದಿ: Covid19: 2-3 ವಾರಗಳಲ್ಲಿ ರಾಜ್ಯಕ್ಕೆ ಕೋವಿಡ್ 4ನೇ ಅಲೆ ಎಂಟ್ರಿ!? ಕೊರೊನಾ ರೂಲ್ಸ್ ಮರೆಯದಿರಿ
ಆಧುನಿಕ ವೈದ್ಯ ವಿಜ್ಞಾನ ಎಷ್ಟೇ ಮುಂದುವರಿದರೂ ವಿಷಕಾರಿ ಹಾವು ಕಡಿದ ಸಂದರ್ಭದಲ್ಲಿ ಆ ಭಾಗ ಕೊಳೆತು ಹೋಗುವ ಸಂದರ್ಭಗಳೂ ಅತೀ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಆಧುನಿಕ ಚಿಕಿತ್ಸೆಗಳು ಗಾಯವನ್ನು ಶಮನ ಮಾಡಲಾಗದ ಸಂದರ್ಭದಲ್ಲಿ ಗಿಡಮೂಲಿಕೆಗೆಳ ಚಿಕಿತ್ಸೆ ಬಗೆಹರಿಸಿದ ಹಲವು ದೃಷ್ಠಾಂತಗಳು ಕಾಣಸಿಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ