Aero India 2023: ಬೆಂಗಳೂರಿನ ಬಾನಂಗಳ ಹೊಸ ಭಾರತಕ್ಕೆ ಸಾಕ್ಷಿ; ಪ್ರಧಾನಿ ಮೋದಿ

ನರೇಂದ್ರ ಮೋದಿ, ಪಿಎಂ

ನರೇಂದ್ರ ಮೋದಿ, ಪಿಎಂ

ಹಿಂದೊಂದು‌ ಕಾಲದಲ್ಲಿ ಏರೋಶೋವನ್ನು ಕೇವಲ‌ ಪ್ರದರ್ಶನವಾಗಿ ನೋಡಲಾಗ್ತಿತ್ತು. ಈಗ ಅದು ಬದಲಾಗಿದೆ. ಈಗ ಇದು ದೇಶದ ಶಕ್ತಿ ಪ್ರದರ್ಶನವಾಗಿದೆ.

  • News18 Kannada
  • 2-MIN READ
  • Last Updated :
  • Bangalore, India
  • Share this:

ಬೆಂಗಳೂರು: ಈ ವರ್ಷದ ಏರೋ ಇಂಡಿಯಾ ಏರ್ ಶೋಗೆ (Aero India Air Show) ಪ್ರಧಾನ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಿದರು. ಇದೆ ವೇಳೆ ಏರೋ ಇಂಡಿಯಾ ಪೋಸ್ಟರ್ (Aero India Poster) ಬಿಡುಗಡೆ  ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ಏರ್ ಶೋ ಎಲ್ಲರೂ ಹೆಮ್ಮೆಪಡುವಂತಾಗಿದೆ. ಈ ಬಾರಿಯ ಏರ್​ ಶೋ ಎಲ್ಲಾ ದಾಖಲೆಗಳನ್ನು ಮೆಟ್ಟಿ ನಿಂತಿದೆ. ಇಂದು ಬೆಂಗಳೂರಿನ (Bengaluru) ಆಗಸ ಹೊಸ ಭಾರತಕ್ಕೆ ಸಾಕ್ಷಿಯಾಗುತ್ತಿದೆ. ಏರೋ ಇಂಡಿಯಾ ಆಯೋಜನೆಯು ದೇಶದ ಅಭಿವೃದ್ಧಿಯನ್ನು ಸೂಚಿಸುತ್ತಿದೆ. ಇಂದಿನ ಏರೋ ಇಂಡಿಯಾ ಕಾರ್ಯಕ್ರಮವನ್ನು ಇಡೀ ವಿಶ್ವ ಗಮನಿಸುತ್ತಿದೆ. 100 ರಾಷ್ಟ್ರಗಳು, 700ಕ್ಕೂ ಅಧಿಕ ಜನರು ಶೋನಲ್ಲಿ ಭಾಗಿಯಾಗಿದ್ದಾರೆ ಎಂದರು.


ಈ ಐದು ದಿನದ ಏರ್ ಶೋನಲ್ಲಿ ದೇಶ, ವಿದೇಶಿ ನಿರ್ಮಿತ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ. ಏರ್ ಶೋನಿಂದ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕರ್ನಾಟಕದ ಯುವ ಜನತೆ ಹೊಸ ಹೊಸ ತಂತ್ರಜ್ಞಾನ ಸ್ವಾಗತಿಸುತ್ತಿದ್ದಾರೆ. ಕರ್ನಾಟಕ ತಂತ್ರಜ್ಞಾನದಲ್ಲಿ ಮುಂದಿದೆ ಎಂದು ಹೇಳಿದರು.


ಭಾರತದ ವಿಶ್ವಾಸವನ್ನ ಹೆಚ್ಚಿಸಿದೆ


ಏರ್ ಶೋ ಮೂಲಕ ಹೊಸ ಹೊಸ ಉದ್ಯೋಗ ಸೃಷ್ಟಿಯಾಗಲಿವೆ. ಇದೊಂದು ಕೇವಲ ಕಾರ್ಯಕ್ರಮ ಆಗಿ ಉಳಿದಿಲ್ಲ. ಇದು ವಿಶ್ವದಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಏರ್ ಶೋ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂತಹ ಒಂದು ಅದ್ಭುತ ಕ್ಷಣಕ್ಕೆ ಬೆಂಗಳೂರು ಸಾಕ್ಷಿಯಾಗಿದೆ.




ಬಲಗೊಂಡಿದೆ ಸೇನಾವಲಯ


21ನೇ ಶತಮಾನದ ಭಾರತ ತನ್ನ ಮುಂದಿರುವ ಯಾವುದೇ ಅವಕಾಶಗಳನ್ನು ಕಳೆದುಕೊಳ್ಳಲ್ಲ. ದೇಶದ ರಫ್ತು ಆರು ಪಟ್ಟ ಹೆಚ್ಚಳವಾಗಿದೆ. 2024-25ರೊಳಗೆ ರಫ್ತು ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸೇನಾವಲಯದಲ್ಲಿ ಭಾರತ ಮುಂದಿದೆ. ಕಳೆದ ಐದು ವರ್ಷಗಳಲ್ಲಿ ಸೇನಾ ವಲಯ ಮತ್ತಷ್ಟು ಬಲಗೊಂಡಿದೆ. ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ಖಾಸಗಿ ವಲಯಕ್ಕೆ ಕರೆ ನೀಡಿದರು.


ಇಂದಿನ ಭಾರತ ವೇಗ, ಬೇಗ, ಶೀಘ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತ ಎಷ್ಟರ ಮಟ್ಟಿಗೆ ಬಲಿಷ್ಠವಾಗಿದೆ ಎಂಬದನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ಹಿಂದೊಂದು‌ ಕಾಲದಲ್ಲಿ ಏರೋಶೋವನ್ನು ಕೇವಲ‌ ಪ್ರದರ್ಶನವಾಗಿ ನೋಡಲಾಗ್ತಿತ್ತು. ಈಗ ಅದು ಬದಲಾಗಿದೆ. ಈಗ ಇದು ದೇಶದ ಶಕ್ತಿ ಪ್ರದರ್ಶನವಾಗಿದೆ. ಡಿಫೆನ್ಸ್ ಹಾಗು ಕಾನ್ಫಿಡೆನ್ಸ್ ಕೇಂದ್ರೀಕೃತವಾಗಿದೆ. ಭಾರತದ ಪೊಟೆನ್ಶಿಯಲ್ ಡಿಫೆನ್ಸ್‌ ಪಾರ್ಟ್‌ನರ್ ಆಗಿದೆ. ನಮ್ಮ ದೇಶ ಕಾಸ್ಟ್ ಎಫೆಕ್ಟಿವ್ ಹಾಗು ಕ್ರೆಡಿಬಲ್‌ ಆಗಿದೆ ಎಂಬ ವಿಷಯವನ್ನು ತಿಳಿಸಿದರು.


ಏರೋ ಇಂಡಿಯಾದ ರೋಮಾಂಚನಕ್ಕೆ ಮನಸೋತಿದ್ದೇನೆ. ಬೆಂಗಳೂರಿನ ವಾತಾವರಣ ಎಲ್ಲರನ್ನೂ ಸೆಳೆಯುತ್ತಿದೆ. ನವ ಭಾರತದ  ಏರೋ ಇಂಡಿಯಾದ ಆಯೋಜನೆ ಹೊಸ ಸಾಮರ್ಥ್ಯದ ಉದಾಹರಣೆ. ಈ  ವಿಶ್ವಾಸ ಭಾರತವನ್ನ ಬೇರೆಡೆಗೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.


ಭಾರತದ ವಿಶ್ವಾಸದ ಹೊಸತನದ ಸೃಷ್ಟಿ


ಮಿತ್ರ ದೇಶದ ಜೊತೆ ಭಾರತದ ವಿಶ್ವಾಸದ ಹೊಸತನವನ್ನು ಸೃಷ್ಟಿಸಿದೆ. ಡಿಫೆನ್ಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸ್ತೇನೆ. ಕರ್ನಾಟಕದಲ್ಲಿ ರಕ್ಷಾ ಕ್ಷೇತ್ರದಲ್ಲಿ ಶಕ್ತಿ ತುಂಬುತ್ತಿದೆ. . ಹೊಸ ಇನೋವೇಷನ್ ಮಾಡಲು ಅವಕಾಶ ಸಿಕ್ಕಿದೆ. ಹೊಸ ಆಲೋಚನೆಗೆ ಉತ್ತೇಜನ ಸಿಕ್ಕಿದೆ.


ನಮ್ಮ ಟೆಕ್ನಾಲಜಿ ದೇಶದಲ್ಲಿ ಪ್ರಭಾವಶಾಲಿಯಾಗಿದ್ದು, ಪ್ರಾಮಾಣಿಕ ಹಾಗೂ ಸದೃಢವಾಗಿಸಿದೆ. ಭಾರತದ ಸಾಮರ್ಥ್ಯ ಪ್ರಮಾಣ ಹೆಚ್ಚಿಸಿದೆ.ಆಕಾಶದಲ್ಲಿ ಓಡೋ ತೇಜಸ್ ವೇಗ ಹೆಚ್ಚಿಸಿದೆ. ಗುಜರಾತ್, ತುಮಕೂರಿನಲ್ಲಿ ತಯಾರಾಗ್ತಿರೋ ವಿಮಾನ ಮತ್ತಷ್ಟು ಶಕ್ತಿ ಹೆಚ್ಚಿಸಿದೆ. ನಾವು ರಿಫಾರ್ಮ್ ಮೂಲಕ ಎಲ್ಲಾ ವಿಭಾದಲ್ಲೂ ಬದಲಾಗ್ತಿದ್ದೇವೆ.


ಇದನ್ನೂ ಓದಿ: Dharwad: ಧಾರವಾಡದಲ್ಲಿ ಎಲೆಕ್ಷನ್ ಟೂರ್ ಪಾಲಿಟಿಕ್ಸ್; 10 ಸಾವಿರ ಮಹಿಳೆಯರಿಗೆ ಪ್ರವಾಸ ಭಾಗ್ಯ


ರಫ್ತು ಹೆಚ್ಚಳ


ಡಿಫೆನ್ಸ್ ವಸ್ತುಗಳನ್ನು ರಫ್ತು ಮಾಡುತ್ತಿದ್ದೇವೆ . 1.5 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಭಾರತ ಒಂಭತ್ತು ವರ್ಷಗಳಿಂದ ಡಿಫೆನ್ಸ್‌ನಲ್ಲಿ ಬದಲಾವಣೆ ಕಂಡಿದೆ. 2 ಬಿಲಿಯನ್ ಇದ್ದ ಡಿಫೆನ್ಸ್ ರಫ್ತನ್ನ ಮುಂದೆ 5 ಬಿಲಿಯನ್ ‌ಗೆ ಹೆಚ್ಚಳ ಮಾಡಲಿದ್ದೇವೆ. ಫೈಟರ್ ಜೆಟ್ ತರ ಭಾರತ ಮುನ್ನುಗ್ಗುತ್ತಿದೆ. ಯಾವಾಗಲೂ ಎಲ್ಲಾ ರೀತಿಯಲ್ಲೂ ಮುನ್ನುಗ್ಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Published by:Mahmadrafik K
First published: