ವಯೋವೃದ್ಧನ ಶವವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟ ಪಾಪಿ ಮಕ್ಕಳು - ಬಾದಾಮಿಯಲ್ಲೊಂದು ಅಮಾನವೀಯ ಘಟನೆ

ವಯೋವೃದ್ಧ ಅಸುನೀಗಿ 24ಗಂಟೆಯಾದ್ರೂ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮೃತದೇಹ ಶವಾಗಾರಕ್ಕೆ ಸಾಗಿಸದೇ ಪಕ್ಕದಲ್ಲಿದ್ದ ರೋಗಿಗಳ ಬೆಡ್ ಮೇಲೆ ಬಿಟ್ಟಿದ್ದು ಬೇಜವಾಬ್ದಾರಿಗೆ ಸಾಕ್ಷಿಯಾಗಿತ್ತು.ಸಿದ್ದರಾಮಯ್ಯ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ವಯೋವೃದ್ಧನ ಮೃತದೇಹ ಅನಾಥವಾಗಿ ಬಿದ್ದಿರೋದು ಎಲ್ಲರ ಮನಕಲಕುವಂತಿತ್ತು

G Hareeshkumar | news18-kannada
Updated:January 11, 2020, 5:26 PM IST
ವಯೋವೃದ್ಧನ ಶವವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟ ಪಾಪಿ ಮಕ್ಕಳು - ಬಾದಾಮಿಯಲ್ಲೊಂದು ಅಮಾನವೀಯ ಘಟನೆ
ಮೃತಪಟ್ಟ ವಯೋವೃದ್ಧನ ಶವ
  • Share this:
ಬಾಗಲಕೋಟೆ(ಜ.11) : ಅನಾರೋಗ್ಯದ ಹಿನ್ನೆಲೆ 75 ವರ್ಷದ ವಯೋವೃದ್ಧನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಮೃತಪಟ್ಟ ವಯೋವೃದ್ಧನ ಶವ ಅಂತ್ಯಕ್ರಿಯೆಗೆ ಒಯ್ಯದೇ ಆಸ್ಪತ್ರೆಯಲ್ಲೇ ಬಿಟ್ಟು ಹೋಗಿರೋ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿಯಲ್ಲಿ ನಡೆದಿದೆ.

ಶಂಕ್ರಪ್ಪ (75) ಎಂಬಾತ ವಯೋವೃದ್ಧನನ್ನು ಅನಾರೋಗ್ಯ ಹಿನ್ನೆಲೆ ಬಾದಾಮಿ ತಾಲೂಕಿನ ಬಿಎನ್ ಜಾಲಿಹಾಳ ಗ್ರಾಮದ ಭೀಮವ್ವ ಎಂಬುವರು ಬಾದಾಮಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿನ್ನೆ ರಾತ್ರಿ 8ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ‌. ಆಗ ಭೀಮವ್ವ ಮೃತ ವಯೋವೃದ್ಧನ ಮಕ್ಕಳಿಗೆ ಫೋನ್ ಮೂಲಕ ಸಾವಿನ ಸುದ್ದಿ ತಿಳಿಸಿದ್ದಾರೆ.

ಆದರೆ, ಮೃತ ಶಂಕ್ರಪ್ಪನ ಮಕ್ಕಳು, ನಮ್ಮನ್ನು ಬಿಟ್ಟು ಹೋಗಿ ಮೂವತ್ತು ವರ್ಷವಾಗಿದೆ.  ಅಲ್ಲೆ ಬಿಸಾಕಿ ಎಂದು ಭೀಮವ್ವಗೆ ಹೇಳಿದಾರಂತೆ. ಆಗ ಭೀಮವ್ವ ದಿಕ್ಕು ತೋಚದೇ ರಾತ್ರಿ 10 ಗಂಟೆಯವರೆಗೂ ಆಸ್ಪತ್ರೆಯಲ್ಲಿದ್ದು, ಶವ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ವಯೋವೃದ್ಧ ಅಸುನೀಗಿ 24ಗಂಟೆಯಾದ್ರೂ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮೃತದೇಹ ಶವಾಗಾರಕ್ಕೆ ಸಾಗಿಸದೇ ಪಕ್ಕದಲ್ಲಿದ್ದ ರೋಗಿಗಳ ಬೆಡ್ ಮೇಲೆ ಬಿಟ್ಟಿದ್ದು ಬೇಜವಾಬ್ದಾರಿಗೆ ಸಾಕ್ಷಿಯಾಗಿತ್ತು.ಸಿದ್ದರಾಮಯ್ಯ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ವಯೋವೃದ್ಧನ ಮೃತದೇಹ ಅನಾಥವಾಗಿ ಬಿದ್ದಿರೋದು ಎಲ್ಲರ ಮನಕಲಕುವಂತಿತ್ತು. ಇನ್ನು ಇವತ್ತು ಬೆಳಿಗ್ಗೆ 9ಗಂಟೆಗೆ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು
ಶವಾಗಾರಕ್ಕೆ ಸಾಗಿಸಿದ್ದಾರೆ. ಈ ವೇಳೆ ಅನಾಥ ಶವ ಕಂಡು ಪಕ್ಕದ ರೋಗಿಗಳು ಕೂಡಾ ಮಮ್ಮಲ ಮರುಗಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಮನೆ ಕೊಟ್ಟರೆ, ಬಿಜೆಪಿ ಅದನ್ನು ಕಿತ್ತುಕೊಳ್ಳೋ ಕೆಲಸ ಮಾಡ್ತಿದೆ ; ಈಶ್ವರ್ ಖಂಡ್ರೆ ಕಿಡಿ

ಇನ್ನು ಶಂಕ್ರಪ್ಪ ಮೂಲತಃ ಬನಹಟ್ಟಿಯವರಾಗಿದ್ದು ಇಬ್ಬರು ಪುತ್ರರಿದ್ದಾರೆ. ಬಿ ಎನ್ ಜಾಲಿಹಾಳ ಗ್ರಾಮದ ಬಳಿಯ ಹುಲಿಗೆಮ್ಮಕೊಳ್ಳಕ್ಕೆ ಐದಾರು ತಿಂಗಳಿಂದ ಹಿಂದೆ ಶಂಕ್ರಪ್ಪ ಬಂದು ವಾಸವಾಗಿದ್ದಾನೆ. ಇನ್ನುಹುಲಿಗೆಮ್ಮಕೊಳ್ಳದಲ್ಲಿ ಅರ್ಚಕರಾಗಿರೋ ಭೀಮವ್ವ, ಲಕ್ಕಪ್ಪ ಪೂಜಾರಿ ಕುಟುಂಬಸ್ಥರೊಂದಿಗೆ ಆಶ್ರಯಪಡೆದಿದ್ದಾನೆ. ತಂದೆಯ ಸಾವಿನ ಸುದ್ದಿ ತಿಳಿದು ಮೃತದೇಹ ಒಯ್ಯದ ಎಂಥ ಮಕ್ಕಳು, ಮಕ್ಕಳಿದ್ದು ಅನಾಥವಾಗಿರೋ ಮೃತದೇಹಕ್ಕೆ ಯಾರು ದಿಕ್ಕು ಎಂದು ರೋಗಿಗಳು ಮಾತನಾಡಿಕೊಳ್ಳುತ್ತಿದ್ದರು.ಸಂಬಂಧಿಕರು ಬಂದು ಮೃತದೇಹ ತೆಗೆದುಕೊಂಡು ಹೋಗದಿದ್ದರೆ ಕೊನೆಗೆ ಪೊಲೀಸರೇ ಅಂತ್ಯಕ್ರಿಯೆ ನಡೆಸಲು ನಿರ್ಧಾರಿಸಿದ್ದಾರೆ. ಮಕ್ಕಳಿದ್ದೂ ಅನಾಥವಾಗಿ ವಯೋವೃದ್ಧನ ಮೃತದೇಹ ಒಯ್ಯದಿರೋದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

 (ವರದಿ : ರಾಚಪ್ಪ ಬನ್ನಿದಿನ್ನಿ)

 
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ