ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಕೊರೋನಾ ನಿಧಿಗೆ ಕೊಟ್ಟ ಶಾಲಾ ಬಾಲಕ; ರಾಯಚೂರಿನಲ್ಲೊಬ್ಬ ಸಮಾಜಮುಖಿ ಪೋರ

ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟಿರುವ ದೇಶದ ಅನೇಕ ವರ್ಗದ ಜನ ಕೊರೋನಾ ತಡೆಗೆ ಕೋಟ್ಯಾಂತರ ರೂ. ದೇಣಿಗೆ ನೀಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಆದರೆ, ಈ ನಡುವೆ ರಾಯಚೂರಿನ ಓರ್ವ ಪುಟ್ಟ ಶಾಲಾ ಬಾಲಕ ತಾನು ಕೂಡಿಟ್ಟಿರುವ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ದೇಣಿಗೆ ಚೆಕ್ ನೀಡುತ್ತಿರುವ ಬಾಲಕ.

ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ದೇಣಿಗೆ ಚೆಕ್ ನೀಡುತ್ತಿರುವ ಬಾಲಕ.

  • Share this:
ರಾಯಚೂರು (ಮಾರ್ಚ್‌ 30); ಮಾರಣಾಂತಿಕ ಕೊರೋನಾ ವೈರಸ್‌ಗೆ ಇಡೀ ವಿಶ್ವ ನಲುಗಿದೆ. ಸುಮಾರು 32 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ದೇಶದ ಆರ್ಥಿಕತೆಯೂ ನಲುಗಿದ್ದು ಕೊರೋನಾ ವೈರಸ್‌ ತಡೆಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಕರೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟಿರುವ ದೇಶದ ಅನೇಕ ವರ್ಗದ ಜನ ಕೊರೋನಾ ತಡೆಗೆ ಕೋಟ್ಯಾಂತರ ರೂ. ದೇಣಿಗೆ ನೀಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಆದರೆ, ಈ ನಡುವೆ ರಾಯಚೂರಿನ ಓರ್ವ ಪುಟ್ಟ ಶಾಲಾ ಬಾಲಕ ತಾನು ಕೂಡಿಟ್ಟಿರುವ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಈತನ ಹೆಸರು ಸದೃಶ ಶಶಿಧರ ಹಿರೇಮಠ. ರಾಯಚೂರಿನ ಮಸ್ಕಿ ಪಟ್ಟಣದ ಮಹಾಂತಮ್ಮ ಲಿಂಗನಗೌಡ ಬಯ್ಯಾಪುರ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಈತ ತಾನು ಪ್ರತಿನಿತ್ಯ ಹುಂಡಿಯಲ್ಲಿ ಕೂಡಿಟ್ಟಿದ್ದ ಒಂದೊಂದೇ ರೂಪಾಯಿಯನ್ನು ಜೋಡಿಸಿ ಸುಮಾರು 3565 ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾನೆ. ಅಲ್ಲದೆ, ಈ ಹಣ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯಕವಾಗಲಿ ಎಂದೂ ತಿಳಿಸಿದ್ದಾನೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ

ಪುಟ್ಟ ಬಾಲಕನ ಈ ಸಮಾಜಮುಖಿ ಕಾರ್ಯ ಇದೀಗ ರಾಜ್ಯವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಬಾಲಕ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ : ಲಾಕ್‌ಡೌನ್‌ನಿಂದಾಗಿ ರೈತ ಹಾಗೂ ಬಳಕೆದಾರ ಇಬ್ಬರೂ ಕಂಗಾಲಾಗಿದ್ದಾರೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಲಿ; ಸಿದ್ದರಾಮಯ್ಯ
First published: