ಕೊಳವೆಬಾವಿಯಲ್ಲಿ ಸಿಲುಕಿದ ಮಗು ಹೊರತೆಗೆಯಲಿದೆ ರೊಬೊಟಿಕ್ ಯಂತ್ರ

news18
Updated:February 21, 2018, 1:10 PM IST
ಕೊಳವೆಬಾವಿಯಲ್ಲಿ ಸಿಲುಕಿದ ಮಗು ಹೊರತೆಗೆಯಲಿದೆ ರೊಬೊಟಿಕ್ ಯಂತ್ರ
ರೇಖಾಚಿತ್ರ - ಶಾಂತಕುಮಾರ್, ನ್ಯೂಸ್ 18
news18
Updated: February 21, 2018, 1:10 PM IST
ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಫೆ.21): ರಾಜ್ಯದಲ್ಲಿ ಎಲ್ಲಿ ಬೇಕೆಂದರಲ್ಲಿ ತೆರೆದ ಕೊಳವೆ ಬಾವಿ ಕಾಣಸಿಗುತ್ತವೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ವಿಫಲವಾದ ಕೊಳವೆಬಾಯಿ ಮುಚ್ಚದೇ ಹಾಗೆಯೇ ಯಮಸ್ವರೂಪಿಯಾಗಿ ಬಾಯ್ದೆದಿರುತ್ತಿವೆ. ಇದರಲ್ಲಿ ನಮ್ಮ ಮಕ್ಕಳು ಬಿದ್ದು ಸಾಕಷ್ಟು ಅನಾಹುತಗಳಾದ ಘಟನೆ ನಮ್ಮ ಕಣ್ಣಮುಂದಿವೆ. ಇದೆಲ್ಲದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಳ್ಳಾರಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಸ್ವ ಇಚ್ಚೆಯಿಂದ ಹೊಸದೊಂದು ಆವಿಷ್ಕಾರವೊಂದನ್ನು ಮಾಡಿದ್ದಾರೆ.

ಮನುಷ್ಯನ ಅಂಗಾಂಗಳು ಹೇಗೆ ಕೆಲಸ ಮಾಡುತ್ತವೆಯೋ ಅದೇ ರೀತಿ ರೊಬೋಟಿಕ್ ಆರ್ಮ್ ಯಂತ್ರ ಕೆಲಸ ಮಾಡುತ್ತದೆ. ರಿಮೋಟ್ ಮೂಲಕ ಆಪರೇಟ್ ಮಾಡುವ ವ್ಯವಸ್ಥೆಯಿದೆ. ಸೆನ್ಸಾರ್ ಮತ್ತು ಕ್ಯಾಮರ ಮೂಲಕ ಕೊಳವೆಬಾವಿಯಲ್ಲಿ ನಡೆಯುವ ಎಲ್ಲ ಚಲನವಲನವನ್ನು ಗಮನಿಸಬಹುದು. ಕ್ಯಾಮರದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಕೊಂಡಿಯ ಮೂಲಕ ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಬಹುದು.

ಇನ್ನು ಈ ರೊಬೋಟಿಕ್ ಆರ್ಮ್ ಯಂತ್ರ ಬಹುಪಯೋಗಿಯಾಗಿದೆ. ಈ ಯಂತ್ರ ಬಳಕೆ ಸಂದರ್ಭದಲ್ಲಿ ಮಗು ಕೊಳವೆಬಾಯಿಯಲ್ಲಿ ಸಿಲುಕಿದಾಗ ಮೊಬೈಲ್ ಬಳಕೆ ಮಾಡಿಕೊಂಡು ಪ್ರಜ್ಞೆಯಲ್ಲಿರುವ ಮಗುವಿನೊಂದಿಗೆ ಸಂವಹನ ಮಾಡಬಹುದು. ಭಯದಲ್ಲಿರುವ ಮಗುವಿಗೆ ಧೈರ್ಯ ನೀಡಿ, ಯಂತ್ರದ ಮೂಲಕ ಮಗುವಿಗೆ ಆಮ್ಲಜನಕವನ್ನು ಪೂರೈಸುವ ಸಾಧನವನ್ನು ಅಳವಡಿಸಲಾಗಿದೆ.

ಯಂತ್ರವನ್ನು ನಿರ್ಮಾಣ ಮಾಡಲು ಕ್ಯಾಮರ, ಸೆನ್ಸಾರ್, ಚಿಕ್ಕದಾದ ಟಿವಿ ಹೊರತುಪಡಿಸಿ ಕೇವಲ ಮೂರುವರೆ ಸಾವಿರ ಖರ್ಚಾಗಿದೆ. ಸದ್ಯ ಡೆಮೋ ಕಾರಣಕ್ಕೆ 10 ಗ್ರಾಂ ಮಗುವಿನ ಬೊಂಬೆಯನ್ನು ಯಶಸ್ವಿಯಾಗಿ 15 ನಿಮಿಷದಲ್ಲಿ ಕೊಳವೆಬಾಯಿಯಲ್ಲಿದ್ದ ಮಗುವನ್ನು ಮೇಲೆತ್ತುತ್ತದೆ. ಬಿಐಟಿಎಂ ಇಂಜಿನಿಯರಿಂಗ್ ವಿವಿಧ ವಿಭಾಗದಲ್ಲಿರುವ ಶ್ರೇಯಸ್, ನಾಗವೇಣಿ, ಶೀತಲ್ ಸ್ವ ಇಚ್ಚೆಯಿಂದ ಪಣಿರಾಮ್ ಪ್ರಸಾದ್, ವಿದ್ಯಾವತಿ ಮಾರ್ಗದರ್ಶನದ ಮೇರೆಗೆ ನೂತನ ಯಂತ್ರವನ್ನು ಕಂಡುಹಿಡಿದಿದ್ದಾರೆ.

ಅಂದಹಾಗೆ ಈ ರೊಬೋಟಿಕ್ ಆರ್ಮ್ ಮೆಷಿನ್ ನನ್ನು ತಮ್ಮ ಪಠ್ಯಕ್ರಮದ ಅನುಸಾರ ಅಂಕಗಳಿಗಾಗಿ ಕಂಡುಹಿಡಿದಿಲ್ಲ. ಬದಲಾಗಿ ಕೊಳವೆ ಬಾವಿಯಲ್ಲಿ ಸಿಲುಕಿ ಸಾಯುತ್ತಿರುವ ಮಕ್ಕಳ ಪರಿಸ್ಥಿತಿ ನೋಡಿ ತಮ್ಮ ಬಿಡುವಿನ ವೇಳೆಯಲ್ಲಿ ಈ ಯಂತ್ರವನ್ನು ಇಂಜಿನಿಯರಿಂಗ್ ಮೂರು ವಿಭಾಗದ ವಿದ್ಯಾರ್ಥಿಗಳು ಕಂಡುಹಿಡಿದ್ದಾರೆ.

ಇವರ ಈ ಕಾರ್ಯಕ್ಕೆ ಬಿಐಟಿಎಂ ಕಾಲೇಜು ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದ್ದು, ಡೆಮೋ ಮಾದರಿಯಲ್ಲಿರುವ ಯಂತ್ರವನ್ನು ವಾಸ್ತವಾಗಿ ಬಳಕೆ ಮಾಡುವಂಥ ಸಾಧನವನ್ನಾಗಿ ತಯಾರಿಸಲು ಸೂಚಿಸಿದೆ. ಹಲವು ಉಪಯುಕ್ತ ಮಾರ್ಪಾಟುಗಳು ಮಾಡಿಕೊಂಡು ಇನ್ನಷ್ಟು ಉತ್ತಮ ಸಾಧನವನ್ನು ತಯಾರಿಸಲು ಶ್ರೇಯಸ್ ತಂಡ ಮುಂದಾಗಿದೆ.
First published:February 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...