ಚಿಕ್ಕಮಗಳೂರು (ಜೂ 24) : ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಅಬ್ಬರಕ್ಕೆ ಕಾಫಿನಾಡು ಅಕ್ಷರಶಃ ಕಂಗಾಲಾಗಿದೆ. ಬೆಟ್ಟಗುಡ್ಡಗಳ ಕುಸಿತಕ್ಕೆ ಎಗ್ಗಿಲ್ಲದೆ ಮರಗಳನ್ನ ಕಡಿದು ಜೆಸಿಬಿ-ಇಟಾಚಿಗಳಲ್ಲಿ ಕೆಲಸ ಮಾಡಿದ್ದೇ ಕಾರಣ ಭೂ ವಿಜ್ಞಾನಿಗಳು ಅಭಿಪ್ರಾಯ ಕೂಡ ಪಟ್ಟಿದ್ರು, ಹಾಗಾಗಿ ಮಳೆಗಾಲ ಮುಗಿಯೋವರೆಗೂ ಟಿಂಬರ್ ಸಾಗಾಟಕ್ಕೆ (Timber Shipping) ಬ್ರೇಕ್ ಹಾಕಬೇಕೆಂದು ಜಿಲ್ಲಾಡಳಿತಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ. ಮಲೆನಾಡಿನಾದ್ಯಂತ ಮರಗಳನ್ನ 8-10-12 ಚಕ್ರದ ಲಾರಿಗಳಲ್ಲಿ ಸಾಗಿಸಿದ್ರೆ ಮಳೆಗಾಲದಲ್ಲಿ (Rainy Season) ರಸ್ತೆ ಹಾಳಾಗುತ್ತವೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದ್ದು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ (Forest Department) ಮಲೆನಾಡು ಭಾಗದ ಯಾವುದೇ ಭಾಗದಲ್ಲಾಗಲಿ. ಯಾವುದೇ ಜಾಗದಲ್ಲಾಗಲಿ ಮಳೆಗಾಲದಲ್ಲಿ ಮರಗಳನ್ನ ಕಡಿದು ಸಾಗಾಟ ಮಾಡಲು ಸಂಪೂರ್ಣ ಬ್ರೇಕ್ ಹಾಕುವಂತೆ ಪರಿಸರವಾದಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರೀ ವಾಹನಗಳಿಂದ ಸೇತುವೆ ಬಿರುಕು ಸಾಧ್ಯತೆ
ಇನ್ನು ಮಳೆಗಾಲದಲ್ಲಿ ಭಾರೀ ಗಾತ್ರದ ಮರಗಳನ್ನ ಕಡಿಯುವುದರಿಂದ ಭೂಮಿಯ ತೇವಾಂಶ ಹೆಚ್ಚಾಗಿ ಬೆಟ್ಟ-ಗುಡ್ಡ-ರಸ್ತೆಗಳು ಬಿರುಕು ಬಿಡುವ ಸಾಧ್ಯತೆಯೂ ಇದೆ. ಬೆಟ್ಟ-ಗುಡ್ಡ-ಭೂಕುಸಿತಕ್ಕೆ ಕಾರಣವಾಗಬಹುದು. ಜೊತೆಗೆ, ಅತ್ಯಂತ ತೂಕದ ಕಾಡುಜಾತಿಯ ಮರಗಳನ್ನ ದೊಡ್ಡ-ದೊಡ್ಡ ಲಾರಿಗಳಲ್ಲಿ ಸಾಗಿಸುವುದು ಅಪಾಯವನ್ನ ಆಹ್ವಾನಿಸುವಂತೆ. ಇದರಿಂದ ರಸ್ತೆಗಳು ಡ್ಯಾಮೇಜ್ ಆಗಬಹುದು. ಗ್ರಾಮೀಣ ಭಾಗದ ಸಣ್ಣ-ಸಣ್ಣ ಸೇತುವೆಗಳು ಕೂಡ ಬಿರುಕು ಬಿಡಬಹುದು ಎಂಬುದು ಮಲೆನಾಡಿಗರ ಅಭಿಪ್ರಾಯವಾಗಿದ್ದು ಇದಕ್ಕೆ ಬ್ರೇಕ್ ಹಾಕಬೇಕು ಅಂತಾ ಒತ್ತಾಯ ಮಾಡಿದ್ದಾರೆ.
ಸರ್ಕಾರಕ್ಕೆ ಮಲೆನಾಡಿಗರ ಮನವಿ
ಇಷ್ಟು ದಿನ ಅನುಭವಿಸಿದ್ದೇ ಸಾಕು. ಮತ್ತೆ ಬೆಟ್ಟ-ಗುಡ್ಡ-ರಸ್ತೆ ಕುಸಿಯುವ ಪರಿಸ್ಥಿತಿ ಬರಬಹುದು. ಅದು ಬರುವುದು ಬೇಡ. ಹಾಗಾಗಿ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮಲೆನಾಡು ಭಾಗದ ಯಾವುದೇ ಭಾಗದಲ್ಲಾಗಲಿ, ಯಾವುದೇ ಜಾಗದಲ್ಲಾಗಲಿ ಮಳೆಗಾಲದಲ್ಲಿ ಮರಗಳನ್ನ ಕಡಿದು ಸಾಗಾಟ ಮಾಡಲು ಸಂಪೂರ್ಣ ಬ್ರೇಕ್ ಹಾಕುವಂತೆ ಮಲೆನಾಡಿಗರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 5 Rupees Doctor: ಆಸ್ಪತ್ರೆಯಿಂದ 5 ರೂಪಾಯಿ ಡಾಕ್ಟರ್ ಶಂಕರೇಗೌಡ ಡಿಸ್ಚಾರ್ಜ್; ಕೆಲ ದಿನಗಳಲ್ಲಿ ಮತ್ತೆ ಸೇವೆಗೆ ಹಾಜರ್
ವಾಹನ ಓಡಾಟ ಬಂದ್ ಮಾಡ್ತಿಲ್ಲ
ಅರಣ್ಯ ಇಲಾಖೆ ವತಿಯಿಂದ ಅನುಮತಿ ಪಡೆದು ಸಾಗಿಸೋ ಮರಗಳನ್ನು ನಿಲ್ಲಿಸುವಂತೆ ಸೂಚಿಸುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದರು ಟಿಂಬರ್ ಸಾಗಾಟ ನಿಂತಿಲ್ಲ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅನುಮತಿ ಇಲ್ಲದೇ ಸಾಗಿಸೋ ಮರಗಳನ್ನ ಕಡಿಯೋದನ್ನ ನಿಲ್ಲಿಸೋಕೆ ಜಿಲಾಧಿಕಾರಿಗಳೇ ಸದ್ಯಕ್ಕೆ ಮೊಟಕುಗೊಳಿಸುವುದುಕ್ಕೆ ಆದೇಶ ಮಾಡಬೇಕಿದೆ.
ಕಾಫಿನಾಡಲ್ಲಿ ಜೋರಾಗಿದೆ ಮಳೆ
ಒಟ್ಟಾರೆ, ಕಾಫಿನಾಡಲ್ಲಿ ಮುಂಗಾರು ಚುರುಕುಗೊಂಡಿದೆ. ಮಲೆನಾಡು ಭಾಗದಲ್ಲಿ ಅಲ್ಲಲ್ಲೇ ಮಳೆ ಅಬ್ಬರವೂ ಜೋರಿದೆ. ಈ ಮಧ್ಯೆ ಕಳೆದ ಮೂರ್ನಾಲ್ಕು ವರ್ಷದ ಅನಾಹುತಗಳನ್ನ ನೋಡಿದರೆ ಮರಗಳನ್ನ ಕಡಿದು ಸಾಗಿಸೋದು ಸೂಕ್ತವಲ್ಲ ಅನ್ನೋದು ಸ್ಥಳಿಯರ ವಾದ. ಭೂಮಿಯ ಮಣ್ಣು ಸಡಿಲಗೊಳ್ಳುತ್ತೆ. ಮಣ್ಣನ್ನ ಹಿಡಿದಿರೋ ಮರಗಳೇ ಇಲ್ಲದಂತಾದರೆ ಬಹುಶಃ ಅಪಾಯ ಕಟ್ಟಿಟ್ಟ ಬುತ್ತಿ ಅನ್ನಿಸುತ್ತೆ. ಶತಮಾನಗಳಿಂದ ಕಾಡಿನಲ್ಲೇ ಬದುಕಿರೋರ ಊಹೆ ಸುಳ್ಳಾಗಲ್ಲ.
ಇದನ್ನೂ ಓದಿ: Pregnant: ಒಂದೇ ಆಸ್ಪತ್ರೆಯ 14 ನರ್ಸ್‌ಗಳು ಒಂದೇ ಸಮಯಕ್ಕೆ ಪ್ರಗ್ನೆಂಟ್! ವೈರಲ್ ಆಯ್ತು ಬೇಬಿ ಬಂಪ್ ಫೋಟೋಸ್
ಹಳೆಯ ಅನಾಹುತಗಳಿಗೆ ಇನ್ನೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಸರ್ಕಾರ ಟಿಂಬರ್ ಸಾಗಾಟಕ್ಕೆ ಸಂಪೂರ್ಣ ಬ್ರೇಕ್ ಹಾಕುವುದು ಪ್ರಕೃತಿಯನ್ನ ಉಳಿಸೋ ನಿಟ್ಟಿನಲ್ಲಿ ಸೂಕ್ತ ಅನ್ನಿಸುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ