Love Breakup: ಪ್ರೀತ್ಸೇ ಅಂದವನು ಪ್ರಾಣ ತೆಗೆಯೋಕೆ ಬಂದ! ಪಾಗಲ್ ಪ್ರೇಮಿ ಗತಿ ಏನಾಯ್ತು ಗೊತ್ತಾ?

ಈ ನಡುವೆ ಯುವತಿಗೆ ಬೇರೊಬ್ಬನ ಜೊತೆ ಲವ್ ಶುರುವಾಗಿದೆ ಎಂದು ಅನುಮಾನಿಸಿ ಆಕೆಯ ಕಥೆ ಮುಗಿಸಬೇಕು ಎಂದು ನಿರ್ಧರಿಸಿದ್ದ. ಅದರಂತೆ  ಸಂಜೆ ಮಿಮ್ಸ್ ಬಳಿ ಬಂದ ಆತ ಯುವತಿ ಹೊರ ಬರುತ್ತಿದ್ದಂತೆ ಮನಸೋ ಇಚ್ಚೆ ಥಳಿಸಿದ್ದಾನೆ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಡ್ಯ: ಅವ್ರಿಬ್ರು ಪರಸ್ಪರ ಪ್ರೀತಿ (Love) ಮಾಡ್ತಿದ್ರು. ಆದ್ರೆ ಈ ವಿಚಾರ ಪೋಷಕರಿಗೆ (Parents) ತಿಳಿದು ಆತನನ್ನ ಬಿಟ್ಟು ಓದಿನ (Study) ಕಡೆ ಗಮನ ಕೊಡು ಎಂದು ಯುವತಿ ಮನೆಯವರು ತಿಳಿಸಿದ್ದರು. ಇದ್ರಿಂದ ಯುವತಿ (Girl) ಕೂಡ ದೊಡ್ಡವರ ಮಾತಿಗೆ ಬೆಲೆ ಕೊಟ್ಟು ಆತನ ಜೊತೆ ಲವ್ ಬ್ರೇಕ್ ಅಪ್ (Love Breakup) ಮಾಡಿಕೊಂಡಿದ್ದಳು. ಆದ್ರೆ ಆಕೆಯನ್ನ ಬಿಡಲು ಸಾಧ್ಯವಿಲ್ಲ‌ ಎಂದು ನಿರ್ಧರಿಸಿದ ಆತ ಮಾಡಿದ್ದು ಮಾತ್ರ ಮಾಡಬಾರದ ಕೆಲಸ! ಹಾಗಿದ್ರೆ ಆ ಪಾಗಲ್ ಪ್ರೇಮಿ (Lover) ಯಾರು? ಆತ ಮಾಡಿದ ಕೆಲಸ ಏನು? ಈ ಘಟನೆ ನಡೆದಿದ್ದಾದರೂ ಎಲ್ಲಿ? ಇದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ಓದಿ…

ಪ್ರಿಯತಮೆಗೆ ಮನಸೋ ಇಚ್ಚೆ ಥಳಿಸಿದ ಭಗ್ನ ಪ್ರೇಮಿ

ಹೌದು.., ಇಂಥದ್ದೊಂದು ಘಟನೆ ನಡೆದಿರೋದು ಸಕ್ಕರೆ ನಾಡು ಮಂಡ್ಯದಲ್ಲಿ. ಮಂಡ್ಯದ ಮಿಮ್ಸ್ ಆವರಣದಲ್ಲಿ ಸಂಪತ್ ಕುಮಾರ್ ಎಂಬ ಯುವಕನೊರ್ವ ಮಿಮ್ಸ್ ನ ಪ್ಯಾರ ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.

ಸಾರ್ವಜನಿಕರಿಂದ ಭಗ್ನಪ್ರೇಮಿಗೆ ಥಳಿತ

ಈ ವೇಳೆ ಅಲ್ಲೆ ಇದ್ದ ಸಾರ್ವಜನಿಕರು ಸಂಪತ್ ಕುಮಾರ್ ನಿಂದ ಯುವತಿಯನ್ನ ರಕ್ಷಿಸಿದ್ದಾರೆ. ಬಳಿಕ ಆತನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: https://kannada.news18.com/news/state/the-public-toilet-that-was-supposed-to-be-clean-was-dirty-akp-ach-780138.html

ಸಂಪತ್ ಕುಮಾರ್ ಮತ್ತು ವಿದ್ಯಾರ್ಥಿನಿ ನಡುವೆ ಎರಡು ವರ್ಷಗಳ ಲವ್

ಮಂಡ್ಯದ ವೈ. ಯರಳ್ಳಿ ಗ್ರಾಮದ ಸಂಪತ್ ಕುಮಾರ್ ಮತ್ತು ವಿದ್ಯಾರ್ಥಿನಿ ಇಬ್ಬರು ಒಂದೇ ಗ್ರಾಮದವರು. ಇವರಿಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡ್ತಿದ್ರು. ಆದ್ರೆ ಈ ವಿಚಾರ ಎರಡು ಕುಟುಂಗಳಿಗೆ ತಿಳಿದು ಇವರ ಪ್ರೀತಿಗೆ ಬ್ರೇಕ್ ಹಾಕಿದ್ದರು. ಅದರಂತೆ ದೊಡ್ಡವರ ಮಾತಿಗೆ ಬೆಲೆ ಕೊಟ್ಟ ಯುವತಿ ಆತನ ಸಹವಾಸ ಬಿಟ್ಟು, ಆತನಿಂದ ದೂರಾಗಿದ್ದಳು.

ಪ್ರೀತ್ಸು ಅಂತ ಪ್ರಾಣ ತಿಂತಿದ್ದ ಯುವಕ

ಆದ್ರೆ ಇಷ್ಟಕ್ಕೆ ಸುಮ್ಮನಾಗದ ಸಂಪತ್ ಆಕೆಯನ್ನ ಪ್ರೀತಿಸುವಂತೆ ಪೀಡಿಸಿದ್ದ. ಈ ನಡುವೆ ಯುವತಿಗೆ ಬೇರೊಬ್ಬನ ಜೊತೆ ಲವ್ ಶುರುವಾಗಿದೆ ಎಂದು ಅನುಮಾನಿಸಿ ಆಕೆಯ ಕಥೆ ಮುಗಿಸಬೇಕು ಎಂದು ನಿರ್ಧರಿಸಿದ್ದ. ಅದರಂತೆ  ಸಂಜೆ ಮಿಮ್ಸ್ ಬಳಿ ಬಂದ ಆತ ಯುವತಿ ಹೊರ ಬರುತ್ತಿದ್ದಂತೆ ಮನಸೋ ಇಚ್ಚೆ ಥಳಿಸಿದ್ದಾನೆ..

ಯುವತಿ ತಲೆ ಹೊಕ್ಕಿದ ಮೊಳೆಗಳು, ಗಂಭೀರ  ಗಾಯ

ಇನ್ನು ಘಟನೆ ಬಳಿಕ ಯುವತಿಯನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಹಲ್ಲೆ ಸಂದರ್ಭ ಯವತಿಯ ತಲೆ ಹೊಕ್ಕಿದ್ದ ಮೊಳೆಗಳನ್ನ ಹೊರ ತೆಗೆಯಲಾಗಿದ್ದು, ವೈದ್ಯರು ಚಿಕಿತ್ಸೆ ನೀಡ್ತಿದ್ದಾರೆ.

ಸಂಪತ್ ವಿರುದ್ಧ ಯುವತಿ ಮನೆಯವರ ಆಕ್ರೋಶ

ಇನ್ನು ಸಂಪತ್ ಕುಮಾರನ ಹುಚ್ಚಾಟಕ್ಕೆ ಯುವತಿ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವು ಬಾರಿ ಆತನಿಗೆ ವಾರ್ನಿಂಗ್ ಮಾಡಿದ್ರು ಕೂಡ ಆತ ಯುವತಿಗೆ ಕಿರುಕುಳ ನೀಡುತ್ತಿದ್ದಾನೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ramya: ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ; ದೂರು ದಾಖಲಿಸಿದ ಪದ್ಮಾವತಿ

ಪಾಗಲ್ ಪ್ರೇಮಿ ವಿರುದ್ಧ ಪೊಲೀಸರಿಗೆ ದೂರು

ಈ ಬಗ್ಗೆ ಆತನ ಕುಟುಂಬದವರ ಜೊತೆ ಕೂಡ ಮಾತನಾಡಲಾಗಿದೆ. ಅವರು ಕೂಡ ತಮ್ಮ ಹುಡುಗನಿಗೆ ಬುದ್ದಿ ಹೇಳುವುದಾಗಿ ತಿಳಿಸಿದ್ದರು. ಆದ್ರೂ ಕೂಡ ಆತ ತನ್ನ ವರ್ತನೆಯನ್ನ ಬದಲಿಸುತ್ತಿಲ್ಲ ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಸದ್ಯ ಆತನ ವಿರುದ್ದ ಮಂಡ್ಯ ಈಸ್ಟ್ ಪೊಲೀಸರಿಗೆ ದೂರು ನೀಡಿದ್ದಾರೆ.
Published by:Annappa Achari
First published: