Dirty Toilet: ಸ್ವಚ್ಛವಾಗಿರಬೇಕಿದ್ದ ಶೌಚಾಲಯದಲ್ಲೇ ಕೊಳಕು; ಇದು Toilet ಏಕ್ ಡರ್ಟಿ ಕಥಾ!

ಈ ಹಿಂದೆ ಶೌಚಾಲಯವಿಲ್ಲದ ಕಾರಣ ಪ್ರಯಾಣಿಕರು ರಸ್ತೆಬದಿಯನ್ನೋ ಅಥವಾ ಹೋಟೆಲುಗಳನ್ನು ಅವಲಂಬಿಸುತ್ತಿದ್ದರು. ಇದರಿಂದಾಗಿ ಗುಂಡ್ಯಾ ಜಂಕ್ಷನ್ ದುರ್ವಾಸನೆಯ ಕೇಂದ್ರವಾಗಿಯೂ ಬದಲಾಗಿತ್ತು. ಆದರೆ ಇದೀಗ ಶೌಚಾಲಯ ಇದ್ದೂ, ಇಲ್ಲದಂತಾಗಿದೆ!

ಬಾಗಿಲು ಹಾಕಿರುವ ಶೌಚಾಲಯ

ಬಾಗಿಲು ಹಾಕಿರುವ ಶೌಚಾಲಯ

  • Share this:
ದಕ್ಷಿಣ ಕನ್ನಡ: ದೇಶವನ್ನು (Country) ಸ್ವಚ್ಛವಾಗಿಡಿ (Clean) ಅಂತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ‘ಸ್ವಚ್ಛ ಭಾರತ’ (Swachch Bharat) ಪರಿಕಲ್ಪನೆ (concept) ಹುಟ್ಟುಹಾಕಿದರು. ಆದರೆ ಇಲ್ಲಿ ಸ್ವಚ್ಛ ಭಾರತ ಯೋಜನೆಗೆ ಕಪ್ಪು ಚುಕ್ಕೆ ಇಡುವಂತ ವರದಿಯಾಗಿದೆ. ಪರಿಸರದಲ್ಲಿ ಶುಚಿತ್ವ (Cleanness) ಕಾಪಾಡುವ ಹಿನ್ನಲೆಯಲ್ಲಿ ಸ್ಥಾಪನೆಗೊಂಡ ಶೌಚಾಲಯವೇ (Toiet) ಇದೀಗ ಪರಿಸರದಲ್ಲಿ ದುರ್ನಾತ ಬೀರುತ್ತಿದೆ. ಹೌದು  ಉದ್ಘಾಟನೆಗೊಂಡ ಕೆಲವೇ ತಿಂಗಳುಗಳಲ್ಲಿ ಅಸಮರ್ಪಕ ನಿರ್ವಹಣೆಯಿಂದ ಇದೀಗ ಈ  ಶೌಚಾಲಯಕ್ಕೆ ಬೀಗ (Lock) ಹಾಕಲಾಗಿದೆ. ಮಂಗಳೂರು-ಬೆಂಗಳೂರು (Mangaluru -Bengaluru) ರಾಷ್ಟ್ರೀಯ ಹೆದ್ದಾರಿ 75ರ (NH 75) ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಗುಂಡ್ಯದಲ್ಲಿರುವ ಸಾರ್ವಜನಿಕ ಶೌಚಾಲಯ ಪ್ರವಾಸಿಗರ ಹಿಡಿಶಾಪಕ್ಕೆ ತುತ್ತಾಗಿದೆ.

ಕೆಲ ತಿಂಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಟಾಯ್ಲೆಟ್

ಬೆಂಗಳೂರು, ಮಂಗಳೂರು ಧರ್ಮಸ್ಥಳ ,ಸುಬ್ರಮಣ್ಯ ಮುಂತಾದ ಕಡೆಗಳಿಂದ ಹೋಗುವ ಪ್ರಯಾಣಿಕರಿಗೆ ಸಮರ್ಪಕವಾದ ಶೌಚಾಲಯದ ವ್ಯವಸ್ಥೆ ಇರಲಿಲ್ಲ ಎಂಬ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ 75 ರ ಗುಂಡ್ಯಾ ಜಂಕ್ಷನ್ ಬಳಿ ಸುಸಜ್ಜಿತ 7 ಶೌಚಾಲಯ ಹಾಗೂ 4 ಸ್ನಾನಗೃಹಗಳನ್ನು ಒಳಗೊಂಡ  ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಈ ಶೌಚಾಲಯವನ್ನು  ಸಾರ್ವಜನಿಕರ  ಬಳಕೆಗೆ ತೆರೆಯಲಾಗಿತ್ತು‌.

ನಿರ್ವಹಣೆಯಿಲ್ಲದೇ ಶೌಚಾಲಯಕ್ಕೆ ಬೀಗ

ಈ ಶೌಚಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಹಾಸನದ ಜನಸೇವಾ ಫೌಂಡೇಶನ್‌ನಿಗೆ ಒಪ್ಪಿಸಲಾಗಿತ್ತು. ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಿದ್ದ ಈ ಶೌಚಾಲಯವೀಗ ಶುಚಿತ್ವವಿಲ್ಲದ  ಕಾರಣಕ್ಕಾಗಿ ಬಾಗಿಲು ಹಾಕಿಕೊಂಡಿದೆ. ನಿರ್ಮಾಣಗೊಂಡ ಕೆಲವೇ ತಿಂಗಳುಗಳಲ್ಲಿ ಸಾರ್ವಜನಿಕ ಬಳಕೆಗೆ ನಿರ್ಬಂಧಿಸಲ್ಪಟ್ಟಿದೆ.

ಇದನ್ನೂ ಓದಿ:

ಶೌಚಾಲಯಕ್ಕೆ ಬರುತ್ತವೆ ಕಲುಷಿತ ನೀರು

ದಟ್ಟ ಕಾಡುಗಳ ಮಧ್ಯೆ ಇರುವಂತಹ ಗುಂಡ್ಯ ಜಂಕ್ಷನ್ ನಲ್ಲಿರುವಂತಹ ಈ ಶೌಚಾಲಯಕ್ಕೆ ನೀರಿನ ಸಮಸ್ಯೆಯಿಲ್ಲದಿದ್ದರೂ, ಶೌಚಕ್ಕೆ ಬಳಕೆಯಾದ ನೀರು ಅದೇ ಪ್ರಮಾಣದಲ್ಲಿ ಮತ್ತೆ ಶೌಚಗುಂಡಿಯಿಂದ ಹೊರಬರುತ್ತಿದೆ.  ಅತ್ಯಾಧುನಿಕ ಶೌಚಾಲಯ ಕಟ್ಟಿದರೂ, ಶೌಚಾಲಯಕ್ಕೆ ಬೇಕಾದಷ್ಟು ಗಾತ್ರದ ಶೌಚದ ಗುಂಡಿಯನ್ನು ನಿರ್ಮಿಸದ ಕಾರಣ, ಇದೀಗ ಕಲುಷಿತ ನೀರು ಮತ್ತೆ ಶೌಚಾಲಯದ ಒಳಗೆ ಸೇರುತ್ತಿದೆ.

ತಪ್ಪಿಲ್ಲ ಪ್ರವಾಸಿಗರ ಪರದಾಟ

ಈ ಹಿಂದೆ ಶೌಚಾಲಯವಿಲ್ಲದ ಕಾರಣ ಪ್ರಯಾಣಿಕರು ರಸ್ತೆಬದಿಯನ್ನೋ ಅಥವಾ ಹೋಟೆಲುಗಳನ್ನು ಅವಲಂಬಿಸುತ್ತಿದ್ದರು. ಇದರಿಂದಾಗಿ ಗುಂಡ್ಯಾ ಜಂಕ್ಷನ್ ದುರ್ವಾಸನೆಯ ಕೇಂದ್ರವಾಗಿಯೂ ಬದಲಾಗಿತ್ತು. ಆದರೆ ಇದೀಗ ಶೌಚಾಲಯ ಇದ್ದೂ, ಇಲ್ಲದಂತಾದ ಸ್ಥಿತಿಯಿರುವ ಕಾರಣ ಯಾತ್ರಿಕರು ಮತ್ತೆ ಹಿಂದಿನ ಹಳೆಯ ಅಭ್ಯಾಸವನ್ನು ಮುಂದುವರಿಸಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ.

ಸಾರ್ವಜನಿಕರ ಆಕ್ರೋಶ

ನೆಲ್ಯಾಡಿಯಿಂದ ಮಾರನಹಳ್ಳಿ ತನಕದ ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ  ಪ್ರಯಾಣಿಕರಿಗೆ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಆದರೆ ನಿರ್ಮಾಣಗೊಂಡ ಶೌಚಾಲಯವು ಕೂಡ ನಿರ್ವಹಣೆಯ ಸಮಸ್ಯೆಯೊಂದಿಗೆ ಸಾರ್ವಜನಿಕ ಉಪಯೋಗಕ್ಕೆ ಇದ್ದೂ ಇಲ್ಲದಂತಾಗಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪಂಚಾಯತಿ ಕೂಡಲೇ ಸಮರ್ಪಕವಾಗಿ ಇದನ್ನು ಸಾರ್ವಜನಿಕ ವ್ಯವಸ್ಥೆಗೆ ಮುಕ್ತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಲಾರಂಭಿಸಿದ್ದಾರೆ.

ಸ್ವಚ್ಛ ಭಾರತ ಕಲ್ಪನೆಗೆ ಧಕ್ಕೆ

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್, ಶ್ರೇಷ್ಠ ಭಾರತ್ ಕಲ್ಪನೆಗೆ ಸಾಕಾರ ನೀಡುವ ನಿಟ್ಟಿನಲ್ಲಿ ಶಿರಾಡಿ ಪಂಚಾಯತ್ ಶೌಚಾಲಯವನ್ನೇನೋ ನಿರ್ಮಾಣ ಮಾಡಿದೆ. ಆದರೆ ಅದರ ನಿರ್ವಹಣೆಯನ್ನೇ ಸರಿಯಾಗಿ ಮಾಡದ ಕಾರಣ, ಶೌಚಾಲಯವೇ‌ ಪರಿಸರಕ್ಕೆ ಮಾರಕವಾಗಿ ಪರಿಣಮಿಸುವಂತಾಗಿದೆ.

ಇದನ್ನೂ ಓದಿ:

ಶೌಚಾಲಯದ ಗುಂಡಿಯ‌ ಸಮಸ್ಯೆಯ‌ ಬಗ್ಗೆ ಪ್ರತಿಕ್ರಿಯಿಸಿರುವ ಶಿರಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ  ವಿನಿತಾ, ಶೌಚಾಲದ ಫಿಟ್‌ನಲ್ಲಿ ಸಮಸ್ಯೆ ಕಂಡು ಬಂದ ಕಾರಣ ಬಾಗಿಲು ಹಾಕಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪಿಡಿಓ ಬಳಿ ಕೇಳಿ ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
Published by:Annappa Achari
First published: