ಸರ್ಕಾರ ಎಲ್ಲಿಯವರೆಗೆ ಹಠಮಾರಿ ಧೋರಣೆ ತೋರುತ್ತದೆಯೊ ಅಲ್ಲಿಯವರೆಗೆ ಪ್ರತಿಭಟನೆ ಮುಂದುವರೆಯುತ್ತದೆ; ಕೋಡಿಹಳ್ಳಿ ಚಂದ್ರಶೇಖರ್

ಸರ್ಕಾರ ಎಲ್ಲಿಯವರೆಗೆ ಹಠಮಾರಿ ಧೋರಣೆ ತೋರುತ್ತದೆ. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ. ಅನಿರ್ದಿಷ್ಟಾವಧಿ ಧರಣಿ‌ ಮುಂದುವರಿಯುತ್ತದೆ. ಗುರಿ‌ ಮುಟ್ಟುವವರೆಗೆ ನಾವು ಹೋರಾಟ ಮಾಡುತ್ತೇವೆ. ನಾನು ಹೇಳಿದೆ ಅನ್ನೋ ಕಾರಣಕ್ಕೆ ಪ್ರತಿಭಟನೆ‌ ನಡೆಯುತ್ತಿಲ್ಲ. ಅವರ ಕೋಪ, ಅಸಹನೆ, ನೋವಿನ ಕಟ್ಡೆ‌ ಹೊಡೆದಿದೆ ಎಂದು ಹೇಳಿದರು.

ಕೋಡಿಹಳ್ಳಿ ಚಂದ್ರಶೇಖರ್​

ಕೋಡಿಹಳ್ಳಿ ಚಂದ್ರಶೇಖರ್​

 • Share this:
  ಬೆಂಗಳೂರು: ನಾಳೆ‌‌ ನಾಲ್ಕನೇ ದಿನದ ಮುಷ್ಕರ ಮುಂದುವರೆಯಲಿದೆ. ಸರ್ಕಾರ 6ನೇ ವೇತನ ಜಾರಿ ಆಗಲ್ಲ ಎಂದಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಅವರು ವೈಜ್ಞಾನಿಕ ಕಾರಣ ಕೊಡಬೇಕು. ನಾಳೆ ಬೆಳಗಾವಿಯಲ್ಲಿ ಸಾರಿಗೆ ನೌಕರರ ಸಭೆ ನಡೆಯಲಿದೆ. ನಂತರ ಕಲಬುರಗಿಯಲ್ಲಿ ಸಭೆ ನಡೆಯಲಿದೆ. ಏ. 12 ರಂದು ವಿಶೇಷವಾದ ಕಾರ್ಯಕ್ರಮವನ್ನು ಮಾಡುವುದಕ್ಕೆ ಸಾರಿಗೆ ನೌಕರರ ಕುಟುಂಬಕ್ಕೆ ಮನವಿ ಮಾಡಲಾಗಿದೆ. ನ್ಯಾಯಯುತ ವೇತನ ಜಾರಿ ಮಾಡಬೇಕು, ಶೋಷಣೆ ತಪ್ಪಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಯುಗಾದಿ ಹಬ್ಬಕ್ಕೆ ಬೋನಸ್ ಅಂತೂ ಇಲ್ಲ. ಮಾರ್ಚ್ ನ ಸಂಬಳ ಕೊಡದೇ ಹೋದ್ರೆ ಯುಗಾದಿ ಮಾಡೋದು ಹೇಗೆ? 12 ನೇ ತಾರಿಕಿನಂದು ಬೆಳಗ್ಗೆ 11 ಕ್ಕೆ ಸಾರಿಗೆ ನೌಕರರ ಕುಟುಂಬದಿಂದ ಡಿಸಿ, ತಹಸೀಲ್ದಾರ್ ಗೆ ಮನವಿ ಮಾಡಲಾಗುವುದು. ಆಯಾ ತಾಲ್ಲೂಕು, ಜಿಲ್ಲೆಗಳ, ಕೇಂದ್ರ ಕಚೇರಿಯ ಮುಂದೆ ತಟ್ಟೆ , ಲೋಟ ಬಡಿದು ವಿಭಿನ್ನ ರೀತಿಯ ಪ್ರತಿಭಟನೆ ಮಾಡುವ ಮೂಲಕ ಯುಗಾದಿ ಹಬ್ಬ ಸಾರಿಗೆ ನೌಕರರಿಗೆ ಕೇವಲ ಕಹಿ ತಂದಿದೆ ಎಂದು ಹೇಳಲಾಗುತ್ತದೆ. ರಾಜ್ಯಾದ್ಯಂತ ಈ ಪ್ರತಿಭಟನೆ ಮಾಡಲಾಗುವುದು ಎಂದರು.

  ಇದನ್ನು ಓದಿ: ಎಂಟು ಬೇಡಿಕೆ ಈಡೇರಿಸಿದ್ದೇವೆ; ಹಠ ಬಿಟ್ಟು ಕೆಲಸಕ್ಕೆ ಬನ್ನಿ: ಸಾರಿಗೆ ನೌಕರರಿಗೆ ಸಿಎಂ ಕರೆ

  ಸರ್ಕಾರ ಹಠಮಾರಿ ಧೋರಣೆ ಬಿಡಬೇಕು. ಸಂಬಳ ಹೆಚ್ಚು ಮಾಡಿಸಿಕೊಳ್ಳುವುದು ನಮ್ಮ ಅಜೆಂಡಾ ಅಲ್ಲಾ. ಆರನೇ ವೇತನ ಆಯೋಗವೂ ನಮ್ಮದಾಗಿರಲಿಲ್ಲ. ಆದರೆ ಸರ್ಕಾರವೇ ಕೊಡುತ್ತೇವೆ ಅಂತ ಹೇಳಿ ಈಗ ಮಾತು ತಪ್ಪಿದೆ. ನಾವೇನು ಸರ್ಕಾರದ ದಲ್ಲಾಳಿಗಳ?  ಸರ್ಕಾರದಲ್ಲಿ ದಲ್ಲಾಳಿಗಳಿದ್ದಾರೆ. ಹಾಗಾಗಿ ಪರ್ಸಂಟೇಜ್ ಮಾತನಾಡುತ್ತಾರೆ. ಆದರೆ ನಮಗೆ ಪರ್ಸಂಟೇಜ್ ಲೆಕ್ಕದಲ್ಲಿ ಸಂಬಳ ಬೇಡ. ಆರನೇ ವೇತನ ಜಾರಿಯಾಗಲೇಬೇಕು. ಸರ್ಕಾರ ಎಲ್ಲಿಯವರೆಗೆ ಹಠಮಾರಿ ಧೋರಣೆ ತೋರುತ್ತದೆ. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ. ಅನಿರ್ದಿಷ್ಟಾವಧಿ ಧರಣಿ‌ ಮುಂದುವರಿಯುತ್ತದೆ. ಗುರಿ‌ ಮುಟ್ಟುವವರೆಗೆ ನಾವು ಹೋರಾಟ ಮಾಡುತ್ತೇವೆ. ನಾನು ಹೇಳಿದೆ ಅನ್ನೋ ಕಾರಣಕ್ಕೆ ಪ್ರತಿಭಟನೆ‌ ನಡೆಯುತ್ತಿಲ್ಲ. ಅವರ ಕೋಪ, ಅಸಹನೆ, ನೋವಿನ ಕಟ್ಡೆ‌ ಹೊಡೆದಿದೆ ಎಂದು ಹೇಳಿದರು.

  ಇನ್ನು ಸಾರಿಗೆ ನೌಕರರ ಮುಷ್ಕರದ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಸರ್ಕಾರದ ಆದಾಯದಲ್ಲಿ ಶೇ. 88ರಷ್ಟು ಭಾಗ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತಿತರೆಗೆ ವೆಚ್ಚವಾಗುತ್ತಿದೆ. ಉಳಿದ 15 ಭಾಗ ಮಾತ್ರ ಅಭಿವೃದ್ಧಿ ಕಾರ್ಯಕ್ಕೆ ಸಿಗುತ್ತಿದೆ. ಇವತ್ತಿನ ಈ ಪರಿಸ್ಥಿತಿಯಲ್ಲಿ ಆರನೇ ವೇತನ ಜಾರಿ ಸಾಧ್ಯವೇ ಇಲ್ಲ. ಸಾರಿಗೆ ನೌಕರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಯಾವುದೇ ಕಾರಣಕ್ಕೂ ಹಠಕ್ಕೆ ಬೀಳಬಾರದು. ಈಗಾಗಲೇ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಎಂಟನ್ನು ಈಡೇರಿಸಿದ್ಧೇವೆ. ಅವುಗಳಲ್ಲಿ ಲೋಪದೋಷ ಇದ್ದರೆ ಸರಿಪಡಿಸುತ್ತೇವೆ. ಯಾರದ್ದೋ ಮಾತಿಗೆ ಬಲಿಯಾಗಿ ಈ ರೀತಿ ಹಠ ಮಾಡುವುದು ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಸಾರಿಗೆ ನೌಕರರಿಗೆ ಸಿಎಂ ಮನವಿ ಮಾಡಿದ್ದಾರೆ.
  Published by:HR Ramesh
  First published: