• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Wheeling ಪುಂಡರಿಗೆ ಚಳಿ ಬಿಡಿಸಿದ ಪೊಲೀಸರು; ಸೈಲೆನ್ಸರ್, ಹಾಲ್ಫ್ ಹೆಲ್ಮೆಟ್‌ ಎಲ್ಲಾ ಪೀಸ್ ಪೀಸ್

Wheeling ಪುಂಡರಿಗೆ ಚಳಿ ಬಿಡಿಸಿದ ಪೊಲೀಸರು; ಸೈಲೆನ್ಸರ್, ಹಾಲ್ಫ್ ಹೆಲ್ಮೆಟ್‌ ಎಲ್ಲಾ ಪೀಸ್ ಪೀಸ್

ವ್ಹೀಲಿಂಗ್ ಪುಂಡರ ಬೈಕ್ ಸೆಲೈನ್ಸರ್, ಹೆಲ್ಮೆಟ್ ಪುಡಿ ಪುಡಿ

ವ್ಹೀಲಿಂಗ್ ಪುಂಡರ ಬೈಕ್ ಸೆಲೈನ್ಸರ್, ಹೆಲ್ಮೆಟ್ ಪುಡಿ ಪುಡಿ

ವ್ಹೀಲಿಂಗ್ ಮಾಡಿ ಪುಂಡಾಟಿಕೆ ತೋರಿದವರಿಗೆ ಕಾಫಿನಾಡಿನ ಪೊಲೀಸರು ಚಳಿ ಬಿಡಿಸಿದ್ದಾರೆ. ಶೋಕಿ ಸೈಲೆನ್ಸರ್ ಹಾಗೂ ಹಾಲ್ಫ್ ಹೆಲ್ಮೇಟ್ ಗಳ ಮೇಲೆ ಪೊಲೀಸರು ಬುಲ್ಡೋಜರ್ ಹತ್ತಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

  • Share this:

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು (Chikkamagaluru) ನಗರದಲ್ಲಿ ಹಲವು ಯುವಕರು (Youths) ಬೈಕಿನ (Bike) ಸೈಲೆನ್ಸರ್ ಗಳನ್ನ (Silencer) ಮೋಡಿಫೈ ಮಾಡಿಸಿಕೊಂಡು ನಗರದಲ್ಲಿ ಕರ್ಕಶ ಶಬ್ಧದೊಂದಿಗೆ (harsh sound) ಓಡಾಡುತ್ತಿದ್ದರು. ಇದರಿಂದ ಸ್ಥಳಿಯರಿಗೂ ಕೂಡ ತೊಂದರೆಯಾಗುತ್ತಿದ್ದು. ಮತ್ತೆ ಕೆಲವು ಯುವಕರು ಬೈಕ್ ಗಳಲ್ಲಿ ನಗರದೊಳಗೆ ವೀಲ್ಹಿಂಗ್ (Wheeling) ಮಾಡುತ್ತಿದ್ದರು. ನಿನ್ನೆ ಕೂಡ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Herald) ರಸ್ತೆ (Road) ಮಧ್ಯೆಯೇ ಐದಾರು ಯುವಕರು ವೀಲ್ಹಿಂಗ್ ಮಾಡುತ್ತಿದ್ದರು. ನಡು ರಸ್ತೆ ರೇಸಿಗೆ (Race) ಬಿದ್ದ ಯುವಕರು ವೀಲ್ಹಿಂಗ್ ಮಾಡಿಕೊಂಡು ಇತರ ಪ್ರಯಾಣಿಕರ ಮೈಮೇಲೆ ಹೋಗುತ್ತಿದ್ದರು. ಇದರಿಂದ ಸ್ಥಳಿಯರು ಹಾಗೂ ವಾಹನ ಸವಾರರು ಕೂಡ ಗಾಬರಿಯಾಗಿದ್ದರು. ಯುವಕರ ಈ ಹುಚ್ಚಾಟದ ವಿಡಿಯೋವನ್ನ (Video) ಸೆರೆ ಹಿಡಿದು ಪೊಲೀಸ್ (Police) ವರಿಷ್ಠಾಧಿಕಾರಿಗೆ ಕಳುಹಿಸಿದ್ದರು. ಇದೀಗ ವ್ಹೀಲಿಂಗ್ ಮಾಡುತ್ತಿದ್ದ ಪುಂಡರಿಗೆ ಪೊಲೀಸರು ಸರಿಯಾಗಿಯೇ ಶಾಕ್ (Shock) ನೀಡಿದ್ದಾರೆ.


ವ್ಹೀಲಿಂಗ್ ಮಾಡುತ್ತಿದ್ದ ಬೈಕ್‌ಗಳ ಮೇಲೆ ಹರಿದ ಬುಲ್ಡೋಜರ್


ಎಸ್ಪಿ ಸೂಚನೆ ಮೇರೆಗೆ ನಿನ್ನೆ ಐದು ಬೈಕ್ ಗಳನ್ನ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನಕೆರೆ ಬಳಿ 5 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ಬೈಕ್ ಗಳಿಗೆ ಇನ್ಸೂರೆನ್ಸ್ ಡಾಕ್ಯುಮೆಂಟ್ ಯಾವುದು ಇರಲಿಲ್ಲ. ಯುವಕರ ಬಳಿ ಡಿಎಲ್ ಕೂಡ ಇರಲಿಲ್ಲ. ಹಾಗಾಗಿ ಒಂದು  ದಾಖಲೆಗಳಿಲ್ಲ, ಮತ್ತೊಂದು ಸೈಲೆನ್ಸರ್ ಗಳನ್ನು ಮಾಡಿಫೈಡ್ ಮಾಡಿಕೊಂಡಿದ್ದ ಬೈಕ್ ಗಳು ಹಾಗೂ ಹಾಲ್ಫ್ ಹೆಲ್ಮೇಟ್ ಗಳ ಮೇಲೆ ಬುಲ್ಡೋಜರ್ ಹತ್ತಿಸಿ ಬೈಕ್ ಸವಾರರಿಗೆ ಎಚ್ವರಿಕೆ ನೀಡಿದ್ದಾರೆ...


ಬೈಕ್ ವ್ಹೀಲಿಂಗ್, ಸಾರ್ವಜನಿಕರಿಂದ ಆಕ್ರೋಶ


ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಯುವಕರು ಎಗ್ಗಿಲದೆ ರೇಸ್‍ನಲ್ಲಿ ವ್ಹೀಲಿಂಗ್ ಮಾಡುತ್ತಾರೆ. ಬೈಕ್‍ಗಳನ್ನ ವೇಗ ಹಾಗೂ ಅಬ್ಬರ ಕಂಡ ಇತರೆ ವಾಹನಗಳ ಸವಾರರು ಆತಂಕದಿಂದ ತಮ್ಮ ವಾಹನಗಳನ್ನ ರಸ್ತೆ ಬದಿಗೆ ನಿಲ್ಲಿಸಿಕೊಂಡು ಅವರು ಹೋದ ಮೇಲೆ ಹೋಗುತ್ತಾರೆ. ಇದರಿಂದ ರೋಸಿ ಹೋಗಿರುವ ಜನರು ಪೊಲೀಸರಿಗೆ ವೀಲಿಂಗ್ ಕಡಿವಾಣ ಹಾಕುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು.


ಇದನ್ನೂ ಓದಿ: Belagavi: ನಮ್ಮೂರಿನ ಸ್ಮಶಾನಕ್ಕಿಲ್ಲ ದಾರಿ; ಡಿಸಿ ಕಚೇರಿಯಲ್ಲೇ ಮೃತದೇಹ ಅಂತ್ಯಕ್ರಿಯೆಗೆ ಯತ್ನ


ರಸ್ತೆ ಮಧ್ಯೆ 10 ಯುವಕರಿಂದ ವ್ಹೀಲಿಂಗ್


ಇದರ ನಡುವೆ ನಿನ್ನೆ ನಡು ಮಧ್ಯಾಹ್ನ ರಸ್ತೆ ಮಧ್ಯೆಯೇ ಹತ್ತು ಯುವಕರ ತಂಡ ಬೈಕ್ ವ್ಹೀಲಿಂಗ್ ಮಾಡಿದ್ದರು. ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿ, ಎಐಟಿ ವೃತ್ತ ಹಾಗೂ ಜಿಪಂ ರಸ್ತೆಯಲ್ಲಿ ಯುವಕರು ರೇಸ್‍ನಲ್ಲಿ ವ್ಹೀಲಿಂಗ್ ಮಾಡಿದ್ದರು. ಇದನ್ನ ಕಂಡು ಸಾರ್ವಜನಿಕರು ಇವರಿಗೆ ಯಾರ ಭಯವೂ ಇಲ್ಲ. ಹೇಳೋರು-ಕೇಳೋರು ಯಾರಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.


ವ್ಹೀಲಿಂಗ್‌ನಿಂದ ಜನರಿಗೆ ಆತಂಕ


ಯುವಕರ ಇಂತಹಾ ಮೋಜು-ಮಸ್ತಿನ ಹುಚ್ಚಾಟದಿಂದ ಯಾರಿಗಾದರೂ ಡಿಕ್ಕಿ ಹೊಡೆದರೆ ಏನಾಗಬಹುದು ಎಂದು ಗಾಬರಿಯಾಗಿದ್ದರು. ಬೇರೆಯವರಿಗೆ ತೊಂದರೆಯಾಗುವುದರ ಜೊತೆ ವೀಲಿಂಗ್ ಮಾಡುವಾಗ ಬೈಕಿನಲ್ಲಿ ಬಿದ್ದರೆ ಅವರಿಗೂ ಕೈಕಾಲು ಮುರಿದು ಹೋದರೆ ಹೇಗೆ ಎಂದು ಜನರೇ ಆತಂಕಕ್ಕೀಡಾಗಿದ್ದರು.


ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ


ಆದರೆ, ಕೂಡಲೇ ಪೊಲೀಸರು ಅವರನ್ನ ಬಂಧಿಸಿ ಗಾಡಿಗಳನ್ನ ಸೀಜ್ ಮಾಡಿದ್ದರಿಂದ ಸ್ಥಳಿಯರು ಪೊಲೀಸ್ ಇಲಾಖೆಗೂ ಭೇಷ್ ಎಂದಿದ್ದಾರೆ.


ಇದನ್ನೂ ಓದಿ: Anekal: ಅಕ್ರಮ ಬಂಧನದಲ್ಲಿದ್ದ 50 ಗೋವುಗಳ ರಕ್ಷಣೆ


ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಿದ ಕೋರ್ಟ್


ಅತ್ತ ತುಮಕೂರು ನಗರದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಬ್ಬರಿಗೆ ನ್ಯಾಯಾಲಯ 15 ಸಾವಿರ ದಂಡ ವಿಧಿಸಿದೆ. ಉಜ್ಜನಕುಂಟೆ ಬಳಿ ಮಹಮ್ಮದ್​​ ಅಬುತಹಿರ್ ಹಾಗೂ ಮೆಹಬೂಬ್ ಪಾಷಾ ಎಂಬಿಬ್ಬರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಇದನ್ನು ಸಾರ್ವಜನಿಕರು ಮೊಬೈಲ್​​ನಲ್ಲಿ ವಿಡಿಯೋ ಮಾಡಿ ತಾವರೆಕೆರೆ ಪೊಲೀಸರಿಗೆ ಕಳುಹಿಸಿದ್ದರು. ಈ ವಿಡಿಯೋ ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ವ್ಹೀಲಿಂಗ್ ಮಾಡುತ್ತಿದ್ದನ್ನು ಯುವಕರು ಒಪ್ಪಿಕೊಂಡಿದ್ದಾರೆ. ಇದೀಗ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯ ದುಬಾರಿ ದಂಡ ವಿಧಿಸಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು