Money Theft: ಚೀಟಿ ಕಟ್ಟಲು ಸ್ನೇಹಿತನ 24 ಲಕ್ಷ ಕದ್ದ ಖದೀಮ, ಮಾಟ-ಮಂತ್ರದ ಕಥೆ ಕಟ್ಟಿ ದೂರು ಕೊಟ್ಟವ ಅರೆಸ್ಟ್!

ಆತ ತನ್ನ ಮನೆಯಲ್ಲಿದ್ದ ಸ್ನೇಹಿತನ ಹಣ ಕಳುವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ಸಹ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ದೂರುದಾರನೇ ಹಣ ಕದ್ದು ಮಾಟ-ಮಂತ್ರದ ಕಥೆ ಕಟ್ಟಿರುವ ವಿಚಾರ ಬಹಿರಂಗವಾಗಿದೆ.

ಆರೋಪಿ ಶಂಕರಪ್ಪ

ಆರೋಪಿ ಶಂಕರಪ್ಪ

  • Share this:
ಆತ ತನ್ನ ಮನೆಯಲ್ಲಿದ್ದ ಸ್ನೇಹಿತನ (Friend) ಹಣ ಕಳುವಾಗಿದೆ (Money Theft) ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು (Police) ಸಹ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ದೂರುದಾರನೇ ಹಣ ಕದ್ದು ಮಾಟ-ಮಂತ್ರದ ಕಥೆ ಕಟ್ಟಿರುವ ವಿಚಾರ ಬಹಿರಂಗವಾಗಿದೆ. ಈಗ ದೂರುದಾರನೇ ಜೈಲು ಕಂಬಿ (Arrest) ಎಣಿಸುವಂತಾಗಿದೆ. ಹೌದು ಬೆಂಗಳೂರು (Bengaluru) ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಶಂಕರಪ್ಪ ತನ್ನ ಮನೆಯಲ್ಲಿ ಇಟ್ಟಿದ್ದ ಸ್ನೇಹಿತನ 24 ಲಕ್ಷ ಹಣ ಕಳುವಾಗಿದೆ ಎಂದು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ (Police station) ದೂರು ನೀಡಿದ್ದಾನೆ‌. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಶಾಕ್ ಆಗಿದ್ದಾರೆ. ಯಾಕೆಂದರೆ ಶಂಕ್ರಪ್ಪ ಮತ್ತು ಹೆಂಡತಿ ಮಕ್ಕಳನ್ನು ವಿಚಾರಣೆ ನಡೆಸಿದಾಗ ಮಾಟ ಮಂತ್ರದ ವಿಚಾರ ಗೊತ್ತಾಗಿದೆ.

ಬೆಂಗಳೂರಿನಲ್ಲಿ ದೂರುದಾರನೇ ಜೈಲು ಕಂಬಿ ಎಣಿಸುವಂತಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ಈ ಘಟನೆ ನಡೆದಿದೆ. ಶಂಕರಪ್ಪ ಎಂಬಾತ ತನ್ನ ಸ್ನೇಹಿತನ 24 ಲಕ್ಷ ಹಣ ಕಳುವಾಗಿದೆ ಎಂದು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ‌. ಪೊಲೀಸರು ವಿಚಾರಣೆ ನಡೆಸಿದಾಗ ಮಾಟ ಮಂತ್ರದ ವಿಚಾರ ಗೊತ್ತಾಗಿದೆ.

The person arrested was the person who complained that his friend s money theft but he created story to escape
ಆರೋಪಿ ಶಂಕರಪ್ಪ


ಸ್ನೇಹಿತನ 24 ಲಕ್ಷ ಹಣ ದೋಚಿದ್ದಾರೆ ಅಂತಾ ದೂರು

ಯಾರೋ ಮನೆಯ ಬಳಿ ಮಾಟ ಮಂತ್ರ ಮಾಡಿ ಮನೆಯಲ್ಲಿದ್ದ ಸ್ನೇಹಿತನ 24 ಲಕ್ಷ ಹಣ ದೋಚಿದ್ದಾರೆ ಅಂತಾ ಶಂಕರಪ್ಪ ದೂರು ನೀಡಿದ್ದ. ಈ ವಿಚಾರ ಯಾರಿಗಾದರೂ ತಿಳಿಸಿದರೆ ಒಂದು ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಸಾವು ನೋವುಗಳು ಸಂಭವಿಸುತ್ತವೆ ಎಂದು ಚೀಟಿಯಲ್ಲಿ ಬರೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ರು.

ಇದನ್ನೂ ನೋಡಿ: ಮಳೆಯಿಂದ ಕುಸಿದ ಸೇತುವೆ, ಪರಮೇಶ್ವರ್ ಜಸ್ಟ್​ ಮಿಸ್!

ವಿಚಾರಣೆ ವೇಳೆ ಹಣದ ರಹಸ್ಯ ಬಯಲು!

ಪೊಲೀಸರು ತನಿಖೆ ವೇಳೆ ಶಂಕ್ರಪ್ಪನ ಮೇಲೆಯೇ ಅನುಮಾನ ಪಟ್ಟಿದ್ದಾರೆ. ಶಂಕರಪ್ಪನ ಮನೆ ಬಾಗಿಲು ಬೀಗ ಒಡೆದಿಲ್ಲ. ಮನೆ ಮಂದಿ ಬಿಟ್ಟು ಹೊರಗಿನವರು ಬಂದ ಕುರುಹು ಇಲ್ಲ ಅನ್ನೋದು ಗೊತ್ತಾಗಿದೆ. ಕೊನೆಗೆ ಮೊಬೈಲ್ ಸಿಡಿಆರ್ ಮತ್ತು ಲೋಕೆಷನ್ ಅಧಾರದ ಮೇಲೆ ತನಿಖೆಗಿಳಿದಾಗ ಆರೋಪಿ ಶಂಕರಪ್ಪನ ನಿಜ ಬಣ್ಣ ಬಯಲಾಗಿದೆ.

ಚೀಟಿ ವ್ಯವಹಾರ ಮಾಡುತ್ತಿದ್ದ ಶಂಕರಪ್ಪ

ಅಂದಹಾಗೆ ಕ್ಯಾಬ್ ಚಾಲಕನಾಗಿದ್ದ ಆರೋಪಿ ಶಂಕರಪ್ಪ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದ. ಜೊತೆಗೆ ಸಾಕಷ್ಟು ಸಾಲಗಳನ್ನು ಮಾಡಿದ್ದರಿಂದ ಸಾಲಗಾರರ ಕಾಟ ಹೆಚ್ಚಾಗಿತ್ತು. ಆಗ ತನ್ನ ಸ್ನೇಹಿತ ಗುರುಪ್ರಸಾದ್ ಈತನ ಮನೆಯಲ್ಲಿಟ್ಟಿದ್ದ 24 ಲಕ್ಷ ಹಣವನ್ನು ತೆಗೆದುಕೊಂಡು ಚೀಟಿಯವರಿಗೆ ಮತ್ತು ಸಾಲಗಾರರಿಗೆ ನೀಡಿ ಕ್ಲೀಯರ್ ಮಾಡುತ್ತಾನೆ.

ಹಣ ಕದ್ದು ಮಾಟ-ಮಂತ್ರದ ನಾಟಕವಾಡಿದ್ದ!

ಬಳಿಕ ಸ್ನೇಹಿತನಿಗೆ ಹಣ ಕಳುವಾಗಿರುವ ಬಗ್ಗೆ ನಂಬಿಸಲು ತಡರಾತ್ರಿ ತಾನೇ ಮನೆ ಬಳಿ ಬಂದು ತೆಂಗಿನಕಾಯಿ ಹೊಡೆದು ಅದಕ್ಕೆ ಅರಿಶಿನ ಕುಂಕುಮ ಹಚ್ಚಿ, ಬಾಳೆಹಣ್ಣು ಚಿಪ್ಪು ಜೊತೆ ಖಾಲಿಯಾದ ಹಣದ ಚೀಲ ಮತ್ತು ಚೀಟಿಯನ್ನು ಇಟ್ಟು ಕಾರು ಬಾಡಿಗೆಗೆ ಹೊರಟು ಹೋಗುತ್ತಾನೆ.

ಅಂದು ಬೆಳಗ್ಗೆ ಮಾಟ ಮಂತ್ರ ಕಂಡು ಮನೆಯವರು ತಿಳಿಸಿದಾಗ, ತನಗೆ ತಿಳಿಯದಂತೆ ನಾಟಕವಾಡುತ್ತಾನೆ. ಆದ್ರೆ ಪೊಲೀಸರ ತನಿಖೆ ವೇಳೆ ಹಣಕ್ಕಾಗಿ ಶಂಕರಪ್ಪ ಮಾಟ ಮಂತ್ರದ ನಾಟಕವಾಡಿರುವುದು ಪತ್ತೆಯಾಗಿದೆ. ಕೊನೆಗೆ ಹಣವನ್ನು ಜಪ್ತಿ ಮಾಡಿರುವ ಬನ್ನೇರುಘಟ್ಟ ಪೊಲೀಸರು ಆರೋಪಿ ಶಂಕರಪ್ಪನನ್ನು ಜೈಲಿಗಟ್ಟಿದ್ದಾರೆ.

ಇದನ್ನೂ ನೋಡಿ: ಹೆಲ್ಮೆಟ್​​ ಮೇಲಿದ್ದ ಬಿಳಿ ಗೆರೆಯಲ್ಲಿತ್ತು ಕಳ್ಳನ ರಹಸ್ಯ! 51 ಪ್ರಕರಣಕ್ಕೆ ಬೇಕಾಗಿದ್ದವ ಅರೆಸ್ಟ್

ಸ್ನೇಹಿತನಿಗೆ ಮೋಸ ಮಾಡಿದವ ಅರೆಸ್ಟ್​

ಎಲ್ಲಾ ಸಂಬಂಧಗಳಿಗಿಂತ ಮಿಗಿಲಾದದ್ದು ಸ್ನೇಹ. ಆದ್ರೆ ಇಲ್ಲಿ ಸ್ನೇಹಿತನ ಹಣವನ್ನು ತಾನೇ ಕದ್ದು, ವಾಮಾಚಾರದ ನಾಟಕವಾಡಿ, ತಾನೇ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಹಣವನ್ನು ಜಪ್ತಿ ಮಾಡಿ ಮಾಲೀಕರಿಗೆ ಹಿಂತಿರುಗಿಸಿದ್ದು, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
Published by:Thara Kemmara
First published: