ಮೂರು ಹಸುಗಳ ಬಾಲ ಕತ್ತರಿಸಿ, ತಾಯಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ; ಕಣ್ಣೀರು ಹಾಕುತ್ತಿರುವ ಗೋಪಾಲಕಿ

ಮೂಕ ಪ್ರಾಣಿಗಳ ಮೇಲೆ ಈ ರೀತಿ ಹೇಯ ಕೃತ್ಯ ಎಸಗಿರುವುದಕಕೆ ಗೋಪಾಲಕಿ ಅನಸಮ್ಮ ಕಣ್ಣೀರು ಹಾಕುತ್ತಿದ್ದಾರೆ. ಈ ಹಿನ ಕೃತ್ಯವನ್ನು ಮಾಡಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೆಚ್ಚಲು ಕೊಯ್ದಿರುವ ತಾಯಿ ಹಸು

ಕೆಚ್ಚಲು ಕೊಯ್ದಿರುವ ತಾಯಿ ಹಸು

  • Share this:
ಗದಗ (ಮಾ. 15): ಕಳೆದ ಮೂರು ದಿನಗಳ ಹಿಂದೆ ಕರುವಿಗೆ ಜನ್ಮ ನೀಡಿದ ಹಸುವಿಗೆ ಹಾಲುಣಿಸದಂತಹ ಸ್ಥಿತಿಯಲ್ಲಿದೆ ತಾಯಿ ಹಸು. ಇದಕ್ಕೆ ಕಾರಣ ದುಷ್ಕರ್ಮಿಗಳು ಹಸುವಿನ ಕೆಚ್ಚಲನ್ನು ಕೋಯ್ದು ಪೈಶಾಚಿಕತನವನ್ನು ಮರೆದಿರುವುದು.  ಹೀಗಾಗಿ ಪುಟಾಣಿ ಕರು ಹಾಲಿಲ್ಲದೇ ಹಸಿವಿನಿಂದ ಬಸವಳಿದು ಹೋಗುತ್ತಿದೆ.  ಗೋವುಗಳನ್ನು ಹಿಂದೂ ಸಂಪ್ರದಾಯದಲ್ಲಿ ದೇವರ ರೂಪದಲ್ಲಿ ಕಾಣುತ್ತಾರೆ. ಆದ್ರೆ,  ಅಂತಹ ಗೋವುಗಳ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದ ರಾಧಾಕೃಷ್ಣ ನಗರದ ಬಳಿ ನಡೆದಿದೆ. ಕಳೆದ ಮೂವತ್ತು ವರ್ಷಗಳಿಂದ  ಅನಸಮ್ಮ ಹಿರೇಮಠ ಹಸುಗಳನ್ನು ಸಾಕುತ್ತಾ ಜೀವನ ನಡೆಸುತ್ತಿದ್ದಾರೆ. ಕಳೆದ ಭಾನುವಾರ  ಕೆಲ ದುಷ್ಕರ್ಮಿಗಳು ಇವರು ಮುದ್ದಾಗಿ ಸಾಕಿರುವ  ಮೂರು ಗೋವುಗಳ ಬಾಲವನ್ನು ಕಟ್ ಮಾಡಿದ್ದಾರೆ.  ಅಷ್ಟೇ ಅಲ್ಲದೇ,  ಕಳೆದ ಮೂರು ದಿನಗಳ ಹಿಂದೆ ಕರುವಿಗೆ ಜನ್ಮ ನೀಡಿದ ತಾಯಿ ಹಸುವಿನ ಬಾಲವನ್ನು ಸಂಪೂರ್ಣವಾಗಿ ಕತ್ತರಿಸಿ ಹಾಕಿದ್ದು, ಅದರ ಕೆಚ್ಚಲಿಗೆ ಮಾರಕಾಸ್ತ್ತದಿಂದ ಹಲ್ಲೆ‌ ಮಾಡಿದ್ದಾರೆ. ಹೀಗಾಗಿ ಮೂರು ದಿನಗಳ ಹಿಂದೆ ಹುಟ್ಟಿದ ಹಸುವಿನ ಮರಿಗೆ ಹಾಲು ಸಹ ಕುಡಿಯಲು ಆಗದಂತ ಸ್ಥಿತಿಯಿದೆ.

ಹಾಲಿಲ್ಲದೇ ಕಂಗಾಲಾಗಿರುವ ಕರುವಿಗೆ ಅನಸಮ್ಮ  ನಿಪ್ಪಲ್ ಮೂಲಕ ಹಾಲನ್ನು ನೀಡುತ್ತಿದ್ದಾರೆ. ಮೂಕ ಪ್ರಾಣಿಗಳ ಮೇಲೆ ಈ ರೀತಿ ಹೇಯ ಕೃತ್ಯ ಎಸಗಿರುವುದಕಕೆ ಗೋಪಾಲಕಿ ಅನಸಮ್ಮಾ ಕಣ್ಣೀರು ಹಾಕುತ್ತಿದ್ದಾರೆ. ಈ ಹಿನ ಕೃತ್ಯವನ್ನು ಮಾಡಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ನೀವ್ಯಾಕೆ ಶಕುನಿ ಮಾತು ಕೇಳುತ್ತೀರಾ: ಎಚ್​ಡಿಕೆಗೆ ಜಿ.ಟಿ. ದೇವೇಗೌಡ ಟಾಂಗ್ 

ಇನ್ನೂ ತಾಯಿ ಹಸು ಹಾಗೂ ಕರುವನ್ನು ನೋಡಿದರೆ ಎಂಥವರಿಗೆ ಕರುಣೆ ಉಕ್ಕಿ ಬರುತ್ತದೆ. ಆದರೆ, ದುರುಳರು ರಾತ್ರೋರಾತ್ರಿ ಬಂದು, ಗೋವುಗಳ ಮೇಲೆ ದಾಳಿ ಮಾಡಿದ್ದಾರೆ. ಬಿಳಿ ಬಣ್ಣದ ಹಸು ಹಾಗೂ ಹಸುವಿನ ಕರು ಇರುವದರಿಂದ ಮಾಟ ಮಂತ್ರ ಮಾಡುವವರು ಈ ಕೃತ್ಯವನ್ನು ಎಸೆಗಿದ್ದಾರೆ ಎನ್ನುವ ಅನುಮಾನ ಕೂಡಾ ವ್ಯಕ್ತವಾಗಿದೆ. ಅಥವಾ ಅನಸಮ್ಮಾ ಅವರ ವಿರೋಧಿಗಳ ಕೆಲಸವೇ ಎಂದು ಗೊತ್ತಾಗುತ್ತಿಲ್ಲ.  ಆದರೆ, ಮುಗ್ದ ಗೋವುಗಳ ‌ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ‌ ಮಾಡಿರುವುದನ್ನು ಕಂಡು ಈ ಭಾಗದ ಜನರು ಭಯದಲ್ಲಿ ಜೀವನ ಕಳೆಯುವಂತಾಗಿದೆ. ಹಾಗಾಗಿ ಕೂಡಲೇ ದುಷ್ಕರ್ಮಿಗಳನ್ನು ಪತ್ತೆ ಮಾಡಬೇಕು ಅಂತಾ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಗೋಹತ್ಯೆ ನಿಷೇಧದ ಬಳಿಕ ಮೊದಲ ಬಾರಿಗೆ ಇಂತಹ ಪೈಶಾಚಿಕ ಕೃತ್ಯ ನಡೆದಿದೆ.  ಮೂಕ ಪ್ರಾಣಿಗಳ ಮೇಲೆ ಅಮಾನವೀಯವಾಗಿ ನಡೆದುಕೊಂಡ ಕ್ರೂರಿಗಳನ್ನು ಆದಷ್ಟು ಬೇಗ ಬಂಧಿಸಬೇಕಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

(ವರದಿ: ಸಂತೋಷ ಕೊಣ್ಣೂರ)
Published by:Seema R
First published: