Kodagu Flood: ಜಲಪ್ರಳಯವಾದ ಊರಿನಲ್ಲಿ ಬದುಕು ಕಟ್ಟಿಕೊಳ್ಳುವುದೇ ದುಸ್ಥರ! ಆತಂಕದಲ್ಲಿದ್ದಾರೆ ಕೊಡಗಿನ ಜನ

2018 ರಲ್ಲಿ ಜಲಸ್ಫೋಟವಾದಾಗ ಮೊಣ್ಣಂಗೇರಿ ಮತ್ತು ರಾಮಕೊಲ್ಲಿ ಭಾಗಕ್ಕೆ ಸಂಪರ್ಕಿಸುವ ಸೇತುವೆ ಕೊಚ್ಚಿಹೋಗಿತ್ತು. ಬಳಿಕ ಊರಿನ ಜನರೆಲ್ಲಾ ಶ್ರಮದಾನ ಮಾಡಿ, ಕಾಡು ಕಲ್ಲುಗಳನ್ನು ಬಳಸಿ ಸೇತುವೆ ನಿರ್ಮಿಸಿದ್ದೆವು. ಈಗ ಅದೂ ಕೊಚ್ಚಿಹೋಗಿದೆ.

ಮಳೆಗೆ ನಲುಗಿದ ಗ್ರಾಮ

ಮಳೆಗೆ ನಲುಗಿದ ಗ್ರಾಮ

  • Share this:
ಮಡಿಕೇರಿ, ಕೊಡಗು: ಮಳೆ (Rain) ಕಡಿಮೆ ಆಗಿದೆ, ನೀವಿನ್ನು ಕಾಳಜಿ ಕೇಂದ್ರದಿಂದ ನಿಮ್ಮ ಊರುಗಳಿಗೆ (Village) ಹೋಗಬಹುದು ಎಂದು ಜಿಲ್ಲಾಡಳಿತ ಸಂತ್ರಸ್ಥರನ್ನು (victims) ಹೊರಗೆ ಕಳುಹಿಸಿತ್ತು. ಬಳಿಕ ನಾವೇನು ಕಳುಹಿಸಿಲ್ಲ ಜನರೇ ನಮ್ಮ ದನ ಕರುಗಳು, ಸಾಕು ಪ್ರಾಣಿಗಳು (Pet Animals) ಮನೆಯಲ್ಲಿವೆ, ಮಳೆಯೂ ಕಡಿಮೆ ಆಗಿದೆ ಅಂತ ಅವರೇ ಹೋಗಿದ್ದಾರೆ ಅಂತ ಜಿಲ್ಲಾಡಳಿತ ಸ್ಪಷ್ಟನೆಯನ್ನೂ ಕೊಟ್ಟಿತ್ತು. ಆದರೆ ಜನರು (People) ಮಾತ್ರ ಎಂತಹ ಅಪಾಯದ ಪರಿಸ್ಥಿತಿಯ ಊರಿನಲ್ಲಿ ಇದ್ದಾರೆ ಎನ್ನೋದನ್ನು ನೀವು ನೋಡಲೇ ಬೇಕು. ಮೇಲ್ಭಾಗದಿಂದ ಭೀಕರವಾಗಿ ಕುಸಿದು ಬಂದಿರುವ ಬೆಟ್ಟ (Hills). ಜಲಸ್ಫೋಟವಾದ ರಭಸಕ್ಕೆ ರಸ್ತೆ (Road), ಸೇತುವೆಗಳೇ (Bridge) ಮಾಯ. ಯಾವ ರಸ್ತೆಯಲ್ಲಿ ಹೋದರೂ ರಸ್ತೆಯ ಮೇಲೆ ಬಿದ್ದಿರುವ ಕುಸಿದ ಗುಡ್ಡದ ಮಣ್ಣಿನ ರಾಶಿ, ಸಂಪರ್ಕ ಕಡಿತ. ಇಂತಹ ಅಪಾಯ ಸ್ಥಿತಿ ಮಡಿಕೇರಿ (Madikeri) ತಾಲ್ಲೂಕಿನ ಎರಡನೇ ಮೊಣ್ಣಂಗೇರಿ ಮತ್ತು ರಾಮಕೊಲ್ಲಿ ಎಂಬ ಗ್ರಾಮಗಳಲ್ಲಿ ಇವೆ.

ಮನೆಗಳಿಗೆ ಹೋಗಿ ಅಂದರಂತೆ ಅಧಿಕಾರಿಗಳು!

ಈ ಸ್ಥಿತಿಯನ್ನು ಅಧಿಕಾರಿಗಳು ನೋಡಿದ್ದಾರೋ, ಇಲ್ಲವೋ ತಿಳಿದಿಲ್ಲ, ಅಥವಾ ನೋಡಿಯೂ ನೋಡದ ಹಾಗೆ ನಟಿಸುತಿದ್ದಾರೋ ಏನೋ ಗೊತ್ತಿಲ್ಲ. ಇಂತಹ ಪರಿಸ್ಥಿಯಿದ್ದರೂ ಮಳೆ ಕಡಿಮೆ ಆಗಿದೆ, ನೀವಿನ್ನು ನಿಮ್ಮ ಮನೆಗಳಿಗೆ ಹೋಗಬಹುದು ಎಂದು ಅಧಿಕಾರಿಗಳು ಕಳುಹಿಸಿದ್ರು. ಅಧಿಕಾರಿಗಳು ಹೇಳಿದ ಮೇಲೆ ನಾವಿನ್ನೇನು ಮಾಡಲು ಸಾಧ್ಯ. ನಾವು ನಮ್ಮ ಊರುಗಳಿಗೆ ಬಂದೆವು. ಇಲ್ಲಿ ನೋಡಿದರೆ ಪರಿಸ್ಥಿತಿ ಇಷ್ಟೊಂದು ಭೀಕರವಾಗಿದೆ ಅಂತಾರೆ ಜನ.

ಮಳೆಗೆ ಕುಸಿದ ಗುಡ್ಡ


ಅವ್ಯವಸ್ಥೆಯ ಗ್ರಾಮದಲ್ಲಿ ಬದುಕುವುದು ಹೇಗೆ?

ಗ್ರಾಮಕ್ಕೆ ಬಂದು ನೋಡಿದ್ರೆ ತಿರುಗಾಡಲು ರಸ್ತೆಗಳಿಲ್ಲ, ಮತ್ತೆ ಇನ್ನೆಲ್ಲೋ ಗುಡ್ಡಗಳು ಕುಸಿಯುವ ಆತಂಕವೂ ಇದೆ ಎನ್ನೋದು ಎರಡನೇ ಮೊಣ್ಣಂಗೇರಿಯ ಜನರ ಅಳಲು. 2018 ರಲ್ಲಿಯೂ ಭೂಕುಸಿತವಾಗಿ ರಸ್ತೆಗಳೆಲ್ಲಾ ಕೊಚ್ಚಿಹೋಗಿದ್ದವು. ಆಗಲೂ ನಾವೇ ಊರಿನ ಜನರೆಲ್ಲಾ ಶ್ರಮದಾನ ಮಾಡಿ ರಸ್ತೆ ಮತ್ತು ಸೇತುವೆ ನಿರ್ಮಿಸಿಕೊಂಡಿದ್ದೆವು. ಈಗ ಅದು ಕೂಡ ಕೊಚ್ಚಿಹೋಗಿವೆ. ಕನಿಷ್ಠ ಮೂಲಸೌಕರ್ಯ ಒದಗಿಸಿಕೊಡಬೇಕು ಎನ್ನುವುದು ಜನರ ಆಗ್ರಹ.

ಇದನ್ನೂ ಓದಿ: Karnataka Dams Water Level: ಮಳೆಯ ಅಬ್ಬರಕ್ಕೆ ಡ್ಯಾಂಗಳು ಭರ್ತಿ, ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

ತಿರುಗಾಡಲು ರಸ್ತೆಗಳಿಲ್ಲ, ಊರಿನ ಹಲವೆಡೆ ಮತ್ತೆ ಇನ್ನೆಲ್ಲೋ ಗುಡ್ಡಗಳು ಕುಸಿಯುವ ಆತಂಕವೂ ಇದೆ. ಈಗಾಗಲೇ ಕೆಲವು ಭಾಗಗಳಲ್ಲಿ ಬೆಟ್ಟ ಕುಸಿದು ಬರುತ್ತಿದೆ. ನಮ್ಮ ಮನೆಗಳಲ್ಲಿ ನಡೆದಾಡಲು ಸಾಧ್ಯವಾಗದ ವೃದ್ಧರಿದ್ದಾರೆ. ಮತ್ತೆ ಏನಾದರೂ ಸಮಸ್ಯೆ ಎದುರಾದರೆ ಏನು ಮಾಡಬೇಕು ಎನ್ನುವ ತೀವ್ರ ಭಯವಿದೆ. ನಮಗೆ ಶಾಶ್ವತ ಪರಿಹಾರಬೇಕು ಅಂತ ಗ್ರಾಮಸ್ಥರಾದ ಪರಮೇಶ್ ಅವರು ಆಗ್ರಹಿಸಿದ್ದಾರೆ.

ನದಿಗಳಲ್ಲಿ ತಗ್ಗದ ಅಬ್ಬರ


ಕನಿಷ್ಠ ಮೂಲಸೌಕರ್ಯ ಒದಗಿಸಿ ಕೊಡಲು ಮನವಿ

2018 ರಲ್ಲಿ ಜಲಸ್ಪೋಟವಾದಾಗ ಮೊಣ್ಣಂಗೇರಿ ಮತ್ತು ರಾಮಕೊಲ್ಲಿ ಭಾಗಕ್ಕೆ ಸಂಪರ್ಕಿಸುವ ಸೇತುವೆ ಕೊಚ್ಚಿಹೋಗಿತ್ತು. ಬಳಿಕ ಊರಿನ ಜನರೆಲ್ಲಾ ಶ್ರಮದಾನ ಮಾಡಿ, ಕಾಡು ಕಲ್ಲುಗಳನ್ನು ಬಳಸಿ ಸೇತುವೆ ನಿರ್ಮಿಸಿದ್ದೆವು. ಈಗ ಅದೂ ಕೊಚ್ಚಿಹೋಗಿದೆ. ನಡೆದಾಡಲು ರಸ್ತೆಗಳೇ ಇಲ್ಲ. ಕನಿಷ್ಠ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಸ್ಥಳೀಯರಾದ ಪುರಂದರ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Karnataka Weather Report: ಹೆಚ್ಚಾಗಲಿದೆ ಮಳೆಯ ಆರ್ಭಟ, ಕರಾವಳಿ ಭಾಗಗಳಲ್ಲಿ ಎಲ್ಲೋ ಅಲರ್ಟ್​ ಘೋಷಣೆ

ಸಮಸ್ಯೆ ಬಗೆಹರಿಸುವಂತೆ ಜನರ ಮನವಿ

ಒಟ್ಟಿನಲ್ಲಿ ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಎರಡನೇ ಮೊಣ್ಣಂಗೇರಿಯಲ್ಲಿ ಜಲಸ್ಪೋಟವಾಗಿದ್ದು, ಜನರು ಯಾತನಾಮಯ ಬದುಕು ದೂಡಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಗ್ರಾಮದ ಮೂಲಸೌಕರ್ಯಗಳ ಕಡೆಗೆ ಗಮನಹರಿಸಿ ಅವರ ನೋವಿಗೆ ಧ್ವನಿಯಾಗಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವುದು ಜನರ ಒತ್ತಾಯ.
Published by:Annappa Achari
First published: