• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • PDO Latter: ಶಾಸಕಿ ಕುಸುಮಾವತಿ ಶಿವಳ್ಳಿ ತವರಲ್ಲಿ ಕುಡುಕರ ಕಾಟ! ಪಂಚಾಯ್ತಿ ಸಿಬ್ಬಂದಿಗೆ ಪೀಕಲಾಟ!

PDO Latter: ಶಾಸಕಿ ಕುಸುಮಾವತಿ ಶಿವಳ್ಳಿ ತವರಲ್ಲಿ ಕುಡುಕರ ಕಾಟ! ಪಂಚಾಯ್ತಿ ಸಿಬ್ಬಂದಿಗೆ ಪೀಕಲಾಟ!

ಗ್ರಾಮ ಪಂಚಾಯ್ತಿ ಕಚೇರಿ

ಗ್ರಾಮ ಪಂಚಾಯ್ತಿ ಕಚೇರಿ

ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಸ್ವಗ್ರಾಮದ ಯರಗುಪ್ಪಿಯಲ್ಲಿ ಕುಡುಕರ ಕಾಟ ವಿಪರೀತವಾಗಿದೆ. ಅದು ಎಷ್ಟರಮಟ್ಟಿಗೆ ಅಂದ್ರೆ, ಗ್ರಾಮ ಪಂಚಾಯ್ತಿ ಸಿಬ್ಬಂದಿ ಕೆಲಸ ಮಾಡಲಾರದಷ್ಟು. ಕೊನೆಗೆ ಪಂಚಾಯ್ತಿಗೆ ಪೊಲೀಸರನ್ನು ನಿಯೋಜಿಸುವಂತೆ ಪಿಡಿಒ ಪತ್ರ ಬರೆದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Karnataka, India
 • Share this:

ಹುಬ್ಬಳ್ಳಿ (ಅ. 15): ಇತ್ತೀಚಿನ ದಿನಗಳಲ್ಲಿ ಕುಡುಕರ (Drunkard) ಕಾಟ ಹೆಚ್ಚಾಗಿದೆ. ಕೆಲ ಕುಡುಕರು ಕುಡಿದು ತಮ್ಮ ಪಾಡಿಗೆ ತಾವು ಸುಮ್ಮನಿರುತ್ತಾರೆ. ಆದ್ರೆ ಮತ್ತೆ ಕೆಲ ಕುಡುಕರಿರುತ್ತಾರೆ. ಅವರಿಗೆ ಕ್ಯಾತೆ ತೆಗೆದ್ರೇನೇ ಸಮಾಧಾನ. ಹೀಗೆ ಏನಾದ್ರೂ ತೊಂದರೆ ಆದ್ರೆ ಜನಪ್ರತಿನಿಧಿಗಳಿಗೆ ದೂರು ಕೊಡೋದು ಸಹಜ. ಆದ್ರೆ ಧಾರವಾಡ (Dharwad) ಜಿಲ್ಲೆಯಲ್ಲಿ ಮಾತ್ರ ಸ್ವತಃ ಶಾಸಕರ ತವರೂರಲ್ಲಿಯೇ (MLA Hometown) ಈ ಪರಿಸ್ಥಿತಿ ನಿರ್ಮಾಣವಾಗಿದೆ


ಕುಡುಕರದ್ದೇ ದರ್ಬಾರ್​!


ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರ ಸ್ವಗ್ರಾಮ. ಮಾಜಿ ಸಚಿವ ದಿ.ಸಿ.ಎಸ್ ಶಿವಳ್ಳಿ ಅವರ ಊರೊಂದೇ ಅಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ವಿವಿಧ ಪಕ್ಷದ ಘಟನಾನುಘಟಿ ನಾಯಕರು ಈ ಊರಿನವರೇ ಆಗಿದ್ದಾರೆ. ಇಷ್ಟು ದಿನ ರಾಜಕಾರಣಿಗಳ ರಾಜಕೀಯಕ್ಕೆ ಸದ್ದು ಮಾಡ್ತಿದ್ದ ಈ ಊರು ಇದೀಗ ಕುಡುಕರ ಕಾಟದಿಂದಾಗಿ ಸುದ್ದಿಗೆ ಗ್ರಾಸವಾಗಿದೆ.


ಪಂಚಾಯತ್ ಕಚೇರಿಗೆ ಕುಡುಕರನ್ನು ನೇಮಿಸಿ


ಸ್ವತಃ ಶಾಸಕರ ತವರಲ್ಲಿಯೇ ಪಂಚಾಯ್ತಿ ಸಿಬ್ಬಂದಿಗೆ ಕುಡುಕರ ಕಾಟ ಹೆಚ್ಚಾಗಿ, ಕೊನೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಗೋಗರೆಯೋ ಪರಿಸ್ಥಿತಿ ಬಂದಿರೋದು ದುರ್ದವೈವೇ ಸರಿ. ಹೀಗೆ ತಮ್ಮ ಪಂಚಾಯ್ತಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಅಂತ ಮನವಿ ಮಾಡಿರೋದು ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಕುಸುಮಾವತಿ ಶಿವಳ್ಳಿ ಸ್ವಗ್ರಾಮ ಯರಗುಪ್ಪಿಯಲ್ಲಿ ನಡೆದಿದೆ.


ಇದನ್ನೂ ಓದಿ: Bengaluru: ರಸ್ತೆಗಳಲ್ಲಿ ಕಸ ಎಸೆಯೋರನ್ನ ಹಿಡಿದು ಕೊಟ್ರೆ BBMPಯಿಂದ ಸಿಗುತ್ತೆ ಉಡುಗೊರೆ​!


ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ


ಯರಗುಪ್ಪಿ ಹಾಲಿ ಶಾಸಕ ಕುಸಮಾವತಿ ಶಿವಳ್ಳಿ ಅವರ ಊರು. ಅವರ ಪತಿ ಸಿ.ಎಸ್.ಶಿವಳ್ಳಿ ಸೇರಿ ಹಲವಾರು ಘಟಾನು ಘಟಿ ರಾಜಕಾರಣಿಗಳು ಇದೇ ಊರಿನವರು. ಘಟಾನುಘಟಿ ನಾಯಕರು ಇರೋ ಜೊತೆಗೆ ಇಲ್ಲಿ ಕುಡುಕರ ಸಂಖ್ಯೆಯೂ ತೀವ್ರ ಹೆಚ್ಚಾಗಿದೆ. ಅದು ಎಷ್ಟರ ಮಟ್ಟಿಗೆ ಆಗಿದೆ ಅಂದರೆ ಕುಡುಕರು ಕುಡಿಯೋದು, ಪಂಚಾಯ್ತಿ ಬಳಿ ಹೋಗಿ ಜಗಳವಾಡೋದು, ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸೋದು.


ಶಾಸಕರ ತವರಿನಲ್ಲೂ ಅಧಿಕಾರಿಗಳಿಗಿಲ್ಲ ರಕ್ಷಣೆ


ಅರೆ! ಶಾಸಕರ ತವರಿನಲ್ಲಿಯೂ ಅಧಿಕಾರಿಗಳಿಗೆ ರಕ್ಷಣೆ ಇಲ್ಲವೇ ಅಂತ ನೀವು ಪ್ರಶ್ನಿಸಬಹುದು. ಈ ಕುಡುಕರು ಶಾಸಕರು ಬಿಡಿ ಯಾರ ಮಾತನ್ನೂ ಕೇಳದ ಸ್ಥಿತಿಗೆ ಹೋಗಿದ್ದಾರಂತೆ. ಹೀಗಾಗಿ ಕೊನೆಗೆ ಯರಗುಪ್ಪಿ ಪಂಚಾಯ್ತಿ ಪಿಡಿಒ ಕುಂದಗೋಳ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದರ ಪ್ರಕಾರ, ಕುಡಿದು ಬಂದು ಕೆಲವರು ಅನುಚಿತ ವರ್ತನೆ ಮಾಡುತ್ತಿದ್ದಾರೆ.


ಕುಡಿದ ಮತ್ತಿನಲ್ಲಿ ಅಧಿಕಾರಿಗಳಿಗೆ ನಿಂದನೆ ಮಾಡುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಕಛೇರಿಯಲ್ಲಿ ಕುಳಿತು ಕೆಲಸ ಮಾಡೊದು ಕಷ್ಟವಾಗಿದೆ. ಹೀಗಾಗಿ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಬೇಕು. ಅದೂ ಸಹ ಕಛೇರಿ ಅವಧಿಯಾಗಿರೋ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಪೊಲೀಸರ ನಿಯೋಜನೆ ಮಾಡುವಂತೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: Bharat Jodo Yatra: ಗಣಿನಾಡಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ರಣಕಹಳೆ; ರೆಡ್ಡಿ ಬ್ರದರ್ಸ್​ ವಿರುದ್ಧ ಸಿಡಿದ ಸಿದ್ದು!


ಕಛೇರಿ ವೇಳೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರೂ, ಉಳಿದ ಟೈಮಲ್ಲಿ, ಸಿಬ್ಬಂದಿ ಹೋಗುವಾಗ, ಬರುವಾಗ ಕುಡುಕರ ಕಾಟ ಕೊಟ್ರೆ ಹೇಗೆ ಅಂತಾನೂ ಭೀತಿ ಸೃಷ್ಟಿಯಾಗಿದೆ. ಕುಡುಕರ ಕಾಟ ತಪ್ಪಿಸೋಕೆ ಶಾಸಕರು, ಅಧಿಕಾರಿಗಳು ಏನು ಕ್ರಮ ಕೈಗೊಳ್ತಾರೋ ಕಾದು ನೋಡಬೇಕಿದೆ.


ಹಲಾಲ್ ಬಹಿಷ್ಕಾರಕ್ಕೆ ಮುತಾಲಿಕ್ ಆಗ್ರಹ


ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ಹಲಾಲ್ ದೇಶದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಹಲಾಲ್ ಮುಕ್ತ ದೀಪಾವಳಿವನ್ನು ಈ‌ ಬಾರಿ‌ ಹಿಂದೂ ಸಮಾಜ ಮಾಡಬೇಕು. ಕಬ್ಬು, ಹೂ, ಹಣ್ಣು, ಪೂಜೆ ಸಾಮಗ್ರಿಗಳನ್ನು ಎಲ್ಲಾ ಹಿಂದೂ ವ್ಯಾಪಾರಿಗಳಿಂದ ಖರೀದಿ ಮಾಡಬೇಕು. ಮುಸ್ಲಿಂ ವ್ಯಾಪಾರಿಗಳಿಂದ ಹಲಾಲ್ ಸರ್ಟಿಫಿಕೇಟ್ ಸಾಮಗ್ರಿಗಳನ್ನು ಖರೀದಿಸಿದ್ರೆ ಅಶಾಸ್ತ್ರವಾಗುತ್ತದೆ.


ಇದು ನಮ್ಮ ಧರ್ಮಕ್ಕೆ ಅಪಮಾನ ಮಾಡಿದಂತೆ. ದೇಶದ ವಿಧ್ವಂಸಕ ಕೃತ್ಯಗಳಿಗೆ ಈ ಹಲಾಲ್ ಹಣವನ್ನು ಬಳಸಲಾಗುತ್ತಿದೆ. ಹಲಾಲ್ ಹಣ ಉಗ್ರಗಾಮಿಗಳ ಕೈ ಸೇರುತ್ತದೆ. ನಮ್ಮ ಹಣ ತೊಗೊಂಡು ನಮಗೆ ಚೂರಿ ಹಾಕೋ ಕೆಲ್ಸ ನಡೆಯುತ್ತೆ. ಹೀಗಾಗಿ ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಮುತಾಲಿಕ್ ಮನವಿ ಮಾಡಿದರು.

Published by:ಪಾವನ ಎಚ್ ಎಸ್
First published: