HOME » NEWS » State » THE OXEN WEIGHED 65 QUINTAL IN GULBARGA ON MAKARA SANKRANTI SESR SAKLB

65 ಕ್ವಿಂಟಲ್ ಭಾರವನ್ನು 15 ಕಿಲೋ ಮೀಟರ್ ಎಳೆದ ಜೋಡೆತ್ತುಗಳು; ಸಂಕ್ರಾಂತಿಯಂದು ಗಮನ ಸೆಳೆದ ಸಾಹಸ

ಹದಿನೈದು ಕಿಲೋ ಮೀಟರ್ ದೂರ ಯಶಸ್ವಿಯಾಗಿ ಎಳೆದ ಎತ್ತುಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿವೆ. ಎತ್ತುಗಳ ಸಾಹಸ ನೋಡಲು ಯಾತನೂರು ಗ್ರಾಮ ಸೇರಿ ಜಿಲ್ಲೆಯ ಮತ್ತು ನೆರೆಯ ವಿಜಯಪುರ ಜಿಲ್ಲೆಯ ಹಲವು ಹಳ್ಳಿಗಳ ಜನ ಬಂದಿದ್ದರು.

news18-kannada
Updated:January 14, 2021, 7:02 PM IST
65 ಕ್ವಿಂಟಲ್ ಭಾರವನ್ನು 15 ಕಿಲೋ ಮೀಟರ್ ಎಳೆದ ಜೋಡೆತ್ತುಗಳು; ಸಂಕ್ರಾಂತಿಯಂದು ಗಮನ ಸೆಳೆದ  ಸಾಹಸ
ಹದಿನೈದು ಕಿಲೋ ಮೀಟರ್ ದೂರ ಯಶಸ್ವಿಯಾಗಿ ಎಳೆದ ಎತ್ತುಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿವೆ. ಎತ್ತುಗಳ ಸಾಹಸ ನೋಡಲು ಯಾತನೂರು ಗ್ರಾಮ ಸೇರಿ ಜಿಲ್ಲೆಯ ಮತ್ತು ನೆರೆಯ ವಿಜಯಪುರ ಜಿಲ್ಲೆಯ ಹಲವು ಹಳ್ಳಿಗಳ ಜನ ಬಂದಿದ್ದರು.
  • Share this:
ಕಲಬುರ್ಗಿ(ಜ. 14): ಎತ್ತುಗಳು ರೈತರ ಅವಿಭಾಜ್ಯ ಅಂಗ. ಹೊಲದಲ್ಲಿ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲೆಂದು ಎತ್ತುಗಳನ್ನು ಸಾಕಲಾಗುತ್ತದೆ. ಕಡಿಮೆ ಪ್ರಮಾಣದ ಭಾರವನ್ನು ಮನೆಯಿಂದ ಹೊಲಕ್ಕೆ, ಹೊಲದಿಂದ ಮನೆಗೆ ಚಕ್ಕಡಿಯಲ್ಲಿ ತರಲು ಮತ್ತಿತರ ಚಟುವಟಿಕೆಗಳಿಗೆ ಎತ್ತುಗಳು ಸಹಕಾರಿ. ದೊಡ್ಡ ಪ್ರಮಾಣದ ಭಾರ ಸಾಗಾಟಕ್ಕೆ ವಾಹನ ಬಳಕೆ ಮಾಡಿದರೆ, ಸಣ್ಣ-ಪುಟ್ಟ ಭಾರಕ್ಕಾಗಿ ಎತ್ತುಗಳ ನೆರವು ಸಹಜ.ಎತ್ತುಗಳನ್ನು ಹೇಗೆ ನಿರ್ವಹಣೆ ಮಾಡುತ್ತಾರೋ ಹಾಗೇ ಅವುಗಳಿಂದ ಕೆಲಸವನ್ನೂ ತೆಗೆದುಕೊಳ್ಳಬಹುದು. ದೊಡ್ಡ  ಎತ್ತುಗಳನ್ನು ದಷ್ಟಪುಷ್ಟವಾಗಿ ಬೆಳೆಸಿ ಅವುಗಳ ಸೊಬಗನ್ನು ನೋಡಿ ಸಂಭ್ರಮಿಸುವವರೂ ಕೆಲವರಿದ್ದಾರೆ. ಹೀಗೆ ದಷ್ಟಪುಷ್ಟವಾದ ಎತ್ತುಗಳ ಮೂಲಕ ಸಾಹಸಗಳನ್ನು ಮಾಡುವ ರೈತರೂ ಕೆಲವರಿದ್ದಾರೆ. ಅಂತಹ ಸಾಹಸ ಕಾರ್ಯವೊಂದು ಸಂಕ್ರಾಂತಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆದಿದ್ದು, ಎಲ್ಲರ ಗಮನ ಸೆಳೆದಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹಲವೆಡೆ ಸಾಹಸ ಕಾರ್ಯಕ್ರಮಗಳೂ ನಡೆಯುತ್ತಿವೆ. ಕೇವಲ ಎರಡು ಎತ್ತುಗಳು 65 ಕ್ವಿಂಟಲ್ ಭಾರವನ್ನು 15 ಕಿಲೋ ಮೀಟರ್ ದೂರ ಎಳೆದ ಘಟನೆ  ಜಿಲ್ಲೆ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದಲ್ಲಿ ನಡೆದಿದೆ. ಈ ಸಾಹಸ ಮಾಡಿರೋದು ದತ್ತಪ್ಪ ನಡುವಿನಮನಿ ಎನ್ನುವವರ ಸೇರಿದ ಜೋಡಿ ಎತ್ತುಗಳು. ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆದ ಸಾಹಸ ಪ್ರದರ್ಶನ ಮಾಡಲಾಗಿದೆ.

ಆರು ಚಕ್ಕಡಿಗಳಲ್ಲಿ 65 ಕ್ವಿಂಟಲ್ ತೊಗರಿ ಚೀಲಗಳನ್ನು ಹೇರಲಾಗಿತ್ತು. ಐದು ಕಿಲೋ ಮೀಟರ್ ಗುರಿಯೊಂದಿಗೆ ರೇಸ್ ಆರಂಭಿಸಲಾಯಿತಾದರೂ, ಎತ್ತುಗಳ ಉತ್ಸಾಹ ನೋಡಿ 15 ಕಿಲೋ ಮೀಟರ್ ವರೆಗೂ ವಿಸ್ತರಿಸಲಾಗಿದೆ. ಹದಿನೈದು ಕಿಲೋ ಮೀಟರ್ ದೂರ ಯಶಸ್ವಿಯಾಗಿ ಎಳೆದ ಎತ್ತುಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿವೆ. ಎತ್ತುಗಳ ಸಾಹಸ ನೋಡಲು ಯಾತನೂರು ಗ್ರಾಮ ಸೇರಿ ಜಿಲ್ಲೆಯ ಮತ್ತು ನೆರೆಯ ವಿಜಯಪುರ ಜಿಲ್ಲೆಯ ಹಲವು ಹಳ್ಳಿಗಳ ಜನ ಬಂದಿದ್ದರು. ಆಳತ್ತರದ ಜೋಡಿ ಎತ್ತುಗಳ ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಸಾಮಾನ್ಯವಾಗಿ ಜಾತ್ರೆಯ ಸಂದರ್ಭಗಳಲ್ಲಿ ಈ ರೀತಿಯ ಸಾಹಸ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಸಂಕ್ರಾಂತಿಯ ಸಂದರ್ಭದಲ್ಲಿ ಯಾತನೂರು ಗ್ರಾಮದಲ್ಲಿ ಜೋಡೆತ್ತುಗಳ ಮೂಲಕ ಸಾಹಸ ಮಾಡಿ, ಗಮನ ಸೆಳೆಯಲಾಗಿದೆ.

ಜಿಲ್ಲೆಯಾದ್ಯಂತ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಸೂರ್ಯ ಪಥ ಬದಲಿಸೋ ದಿನವನ್ನು ಜನತೆ ಹಬ್ಬದ ರೂಪದಲ್ಲಿ ಸಡಗರದಿಂದ ಆಚರಿಸುತ್ತಿದ್ದಾರೆ. ಮನೆಗಳ ಮುಂದೆ ರಂಗೋಲಿ ಹಾಕಿ ಗೃಹಿಣಿಯರಿಂದ ವಿಶೇಷ ಅಲಂಕಾರ ಮಾಡಿ, ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿದ್ದಾರೆ. ಕಲಬುರ್ಗಿಯ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನಕ್ಕೆ ಬೇಟಿ ನೀಡ್ತಿರೋ ಭಕ್ತರು. ಸಾಲುಗಟ್ಟಿ ನಿಂತು ದರ್ಶನ ಪಡೀತಿದ್ದಾರೆ. ಶರಣಬಸವೇಶ್ವರರ ದರ್ಶನ ಪಡೆದು ಜನತೆ ವಿಶೇಷ ಪೂಜೆ ಸಲ್ಲಿಸ್ತಿದಾರೆ. ಮತ್ತೊಂದೆಡೆ ಸೂಪರ್ ಮಾರುಕಟ್ಟೆಯಲ್ಲಿಯೂ ಜನರ ಖರೀದಿ ಜೋರಾಗಿತು. ಕುಸುರೆಳ್ಳು, ಕಬ್ಬು ಇತ್ಯಾದಿಗಳ ಖರೀದಿಯಲ್ಲಿ ತೊಡಗಿಕೊಂಡಿರುವ ಜನ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

(ವರದಿ: ಶಿವರಾಮ ಅಸುಂಡಿ)
Published by: Seema R
First published: January 14, 2021, 6:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories