• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BMW Car ಕಾವೇರಿ ನದಿಯಲ್ಲಿ ಮುಳುಗಿಸಿ ಮಾಲೀಕ ಪರಾರಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ

BMW Car ಕಾವೇರಿ ನದಿಯಲ್ಲಿ ಮುಳುಗಿಸಿ ಮಾಲೀಕ ಪರಾರಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ

ನದಿಯಲ್ಲಿ ಮುಳುಗಿದ BMW ಕಾರು

ನದಿಯಲ್ಲಿ ಮುಳುಗಿದ BMW ಕಾರು

ವ್ಯಕ್ತಿಯೊಬ್ಬ ತನ್ನ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರ್‌ ಅನ್ನು ಕಾವೇರಿ ನದಿಗೆ ಕೊಂಡೊಯ್ದು, ಮುಳುಗಿಸಿ ಬಿಟ್ಟಿದ್ದಾನೆ. ಹಾಗಾದ್ರೆ ಆ ವ್ಯಕ್ತಿ ಯಾರು? ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರ್‌ ಅನ್ನೇ ಕಾವೇರಿ ನದಿಯಲ್ಲಿ ಮುಳುಗಿಸುವುದಕ್ಕೆ ಕಾರಣವೇನು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಮುಂದೆ ಓದಿ ...
  • Share this:

ಮಂಡ್ಯ: ಬಹುತೇಕ ಎಲ್ಲರಿಗೂ ತಾವು ಕಷ್ಟಪಟ್ಟು ಅಥವಾ ಇಷ್ಟಪಟ್ಟು ಖರೀದಿಸಿದ ಕಾರು (Car), ಬೈಕ್ (Bike) ಇತ್ಯಾದಿ ವಾಹಗಳು (Vehicles) ಅಂದರೆ ಪ್ರಾಣಕ್ಕಿಂತ ಹೆಚ್ಚು. ಕೆಲವರಿಗಂತೂ ತಮ್ಮ ವಾಹನದ ಮೇಲೆ ತಮಗಿಂತ ಹೆಚ್ಚು ಕಾಳಜಿ (Care) ತೋರಿಸುತ್ತಾರೆ. ತಮಗೆ ಏನಾದರೂ ತೊಂದರೆ ಆದರೆ ಸಹಿಸಿಕೊಳ್ಳುತ್ತಾರೆ, ಆದರೆ ತಮ್ಮ ವಾಹನಕ್ಕೆ ಏನಾದರೂ ಆದರೆ ಬಿಲ್ ಕುಲ್ ಸಹಿಸಿಕೊಳ್ಳುವುದಿಲ್ಲ. ಅದರಲ್ಲೂ ದುಬಾರಿ ಬೆಲೆಯ (Costly) ಕಾರ್, ಬೈಕ್ ಇದ್ದರಂತೂ ಅದರ ಬಗ್ಗೆ ಜಾಸ್ತಿನೇ ಕೇರ್ ತೆಗೆದುಕೊಳ್ತಾರೆ. ಆದರೆ ಇಲ್ಲಿ ಆಗಿದ್ದೇ ಬೇರೆ. ಬೆಂಗಳೂರು
(Bengaluru) ಮೂಲದ ವ್ಯಕ್ತಿಯೊಬ್ಬ ತನ್ನ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರ್‌ (BMW Car) ಅನ್ನು ಕಾವೇರಿ ನದಿಗೆ (Cauvery River) ಕೊಂಡೊಯ್ದು, ಮುಳುಗಿಸಿ ಬಿಟ್ಟಿದ್ದಾನೆ. ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಸುಪ್ರಸಿದ್ಧ ನಿಮಿಷಾಂಬ ದೇಗುಲದ (Nimishamba Temple) ಬಳಿ ಈ ಘಟನೆ ನಡೆದಿದೆ. ಹಾಗಾದ್ರೆ ಆ ವ್ಯಕ್ತಿ ಯಾರು? ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರ್‌ ಅನ್ನೇ ಕಾವೇರಿ ನದಿಯಲ್ಲಿ ಮುಳುಗಿಸುವುದಕ್ಕೆ ಕಾರಣವೇನು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…


ಕಾವೇರಿ ನದಿಯಲ್ಲಿ ಅರ್ಧ ಮುಳುಗಿತ್ತು ಬಿಎಂಡಬ್ಲ್ಯೂ ಕಾರ್!


ನಿನ್ನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ನಿಮಿಷಾಂಬ ದೇಗುಲದ ಬಳಿ ಘಟನೆಯೊಂದು ನಡೆದಿತ್ತು ದೇಗುಲದ ಬಳಿಯೇ ಹರಿಯುವ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರ್ ಒಂದು ಅರ್ಧ ಮುಳುಗಿ, ಅರ್ಧ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದೇಗುಲಕ್ಕೆ ಬಂದ ಜನರು, ಅಕ್ಕ ಪಕ್ಕದ ನಿವಾಸಿಗಳು ಆ ಕಾರನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಅಕ್ಕ ಪಕ್ಕದಲ್ಲಿ ಯಾರೂ ಇರಲಿಲ್ಲ, ಕಾರಿನ ಒಳಗೂ ಯಾರೂ ಕಾಣಿಸಲಿಲ್ಲ. ಹೀಗಾಗಿ ಇದು ಅಪಘಾತವೋ, ಏನು ಅಂತಾನೇ ಜನಕ್ಕೆ ಅರ್ಥವಾಗಲಿಲ್ಲ.


ಕಾರನ್ನು ನದಿಯಲ್ಲಿ ಮುಳುಗಿಸಿ ಹೋಗಿದ್ದ ಮಾಲೀಕ


ಕಾವೇರಿ ನದಿಯಲ್ಲಿ ಕಾರು ಇರುವುದನ್ನು ಕಂಡು ಆಶ್ಚರ್ಯಗೊಂಡ ಸ್ಥಳೀಯರು ಶ್ರೀರಂಗಪಟ್ಟಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ನದಿಯಲ್ಲಿ ಇದ್ದ ಕಾರನ್ನು ಹೊರಕ್ಕೆ ತೆಗೆದಿದ್ದಾರೆ. ಕಾರು ಹೊರಗೆ ತೆಗೆದ ನಂತರ ಅದು ಬಿಎಂಡಬ್ಲ್ಯೂ ಕಾರು ಎನ್ನುವುದು ಗೊತ್ತಾಗಿದೆ. ಇಷ್ಟೊಂದು ದುಬಾರಿ ಬೆಲೆಯ ಕಾರನ್ನು ಯಾರು ನೀರಿನಲ್ಲಿ ಮುಳುಗಿಸಿ ಹೋಗಿದ್ದಾರೆ ಎಂದು ಪೊಲೀಸರೂ ಕೂಡ ಆಶ್ಚರ್ಯಗೊಂಡಿದ್ದಾರೆ.


ಇದನ್ನೂ ಓದಿ: NWKRTC: ಇಲ್ಲಿ ಡಕೋಟಾ, ಅಲ್ಲಿ ಗುಡ್ ಕಂಡೀಷನ್: ಜನರ ಜೀವದ ಜೊತೆ ಚೆಲ್ಲಾಟ ಆಡಲು ಹೊರಟಿತೇ ಸಾರಿಗೆ ಇಲಾಖೆ?


ಬೆಂಗಳೂರು ಮೂಲದ ವ್ಯಕ್ತಿಗೆ ಸೇರಿದ ಕಾರು


ಕೂಡಲೇ ಕಾರ್ಯಪ್ರವೃತ್ತರಾದ ಶ್ರೀರಂಗಪಟ್ಟಣ ಠಾಣೆ ಪೊಲೀಸರು, ಕಾರನ್ನು  ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಕಾರಿನ ಬಾಗಿಲು ತೆಗೆದು ಈ ಕಾರು ಯಾರದ್ದು ಎಂದು ತಿಳಿಯಲು ಡಾಕ್ಯುಮೆಂಟ್ ಹುಡುಕಾಡಿದ್ದಾರೆ. ನಂತರ ಕಾರಿನ ಡಾಕ್ಯುಮೆಂಟ್‍ವೊಂದು ಸಿಕ್ಕಿದೆ. ಅದರಲ್ಲಿ ಈ ಕಾರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ರೂಪೇಶ್ ಎಂಬುವರಿಗೆ ಸೇರಿದ್ದೆಂದು ತಿಳಿದುಬಂದಿದೆ.


ತಾನೇ ಬಿಎಂಡಬ್ಲ್ಯೂ ಕಾರ್‌ ನದಿಯಲ್ಲಿ ಮುಳುಗಿಸಿದ್ದಾಗಿ ಹೇಳಿದ ಮಾಲೀಕ


ಬೆಂಗಳೂರಿನ ರೂಪೇಶ್‌ಗೆ ಸುದ್ದಿ ಮುಟ್ಟಿಸಿ, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ತಾನೇ ಅದನ್ನು ಕಾವೇರಿ ನದಿಗೆ ತಂದು, ಮುಳುಗಿಸಿದ್ದೇನೆ ಅಂತ ಹೇಳಿದ್ದಾನೆ. ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದು, ಕಾರನ್ನು ನದಿ ನೀರಿನಲ್ಲಿ ಮುಳುಗಿಸಿ, ವಾಪಸ್ ಹೋಗಿದ್ದಾಗಿ ತಿಳಿಸಿದ್ದಾನೆ.


ಇದನ್ನೂ ಓದಿ: BMRCL: ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ; ರಾತ್ರಿ 9.30ರಿಂದ ಸಂಚಾರ ಸ್ಥಗಿತmandya


ತಾಯಿ ಸಾವಿನ ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ


ರೂಪೇಶ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ರೂಪೇಶ್ ತಾಯಿ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು, ಅಂದಿನಿಂದ ಇಂದಿನವರೆಗೆ ಆತನ ವರ್ತನೆ ಸರಿ ಇಲ್ಲ, ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ ಎಂದು ರೂಪೇಶ್ ಸಂಬಂಧಿಕರು ಹಾಗೂ ಸ್ನೇಹಿತರು ಹೇಳಿದ್ದಾರೆ. ಅಲ್ಲದೇ ಆತ ಪೊಲೀಸ್ ಠಾಣೆಗೆ ಬಂದಾಗಿನಿಂದಲೂ ಸರಿಯಾಗಿ ವರ್ತನೆ ಮಾಡುತ್ತಿರಲಿಲ್ಲ. ಆತನಿಗೆ ಮಾನಸಿಕ ಖಿನ್ನತೆ ಇರುವ ಕಾರಣ ಹೀಗೆ ಮಾಡಿರಬಹುದು ಎಂದು ಹೇಳುತ್ತಿದ್ದಾರೆ. ಸಂಬಂಧಿಕರ ಹೇಳಿಕೆ ಮೇರೆಗೆ ಪೊಲೀಸರು ಕೇಸ್ ಖುಲಾಸೆ ಮಾಡಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು