ಬಂಡೀಪುರ ಅರಣ್ಯಕ್ಕೆ ಹೊರಗಿನವರು ಬೆಂಕಿ ಹಚ್ಚಿರುವ ಸಾಧ್ಯತೆಯಿದೆ; ಸಚಿವ ಸತೀಶ್ ಜಾರಕಿಹೊಳಿ

ಬಂಡೀಪುರದಲ್ಲಿ ಒಟ್ಟು 13 ಅರಣ್ಯ ವಲಯಗಳಿವೆ ಇದರಲ್ಲಿ ಎರಡರಲ್ಲಿ ಮಾತ್ರ ಬೆಂಕಿ ಆವರಿಸಿಕೊಂಡಿದೆ. ಉಳಿದ 11 ವಲಯಗಳಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದೆ. ಅಲ್ಲಿಗೆ ಪ್ರಾಣಿ ಪಕ್ಷಿಗಳು ಶಿಫ್ಟ್ ಆಗಿವೆ

G Hareeshkumar | news18
Updated:February 25, 2019, 7:48 PM IST
ಬಂಡೀಪುರ ಅರಣ್ಯಕ್ಕೆ ಹೊರಗಿನವರು ಬೆಂಕಿ ಹಚ್ಚಿರುವ ಸಾಧ್ಯತೆಯಿದೆ; ಸಚಿವ ಸತೀಶ್ ಜಾರಕಿಹೊಳಿ
ಅರಣ್ಯ ಸಚಿವ ಸತೀಶ್ ಜಾರಕಿಹೊಳಿ
  • News18
  • Last Updated: February 25, 2019, 7:48 PM IST
  • Share this:
ಬೆಂಗಳೂರು (ಫೆ.25) : ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಂಕಿ ಹತ್ತಿಕೊಂಡಿಲ್ಲ. ಹೊರಗಡೆಯವರು ಬೆಂಕಿ ಹಚ್ಚಿರುವ ಸಾಧ್ಯತೆಯಿದೆ. ಇದರ ಬಗ್ಗೆ ನಮ್ಮ‌ಇಲಾಖೆ ಅಧಿಕಾರಿಗಳ ಪತ್ತೆ ಹಚ್ಚುತ್ತಿದ್ದಾರೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಂಕಿ ಹತೋಟಿಗೆ ತರುವ ಪ್ರಯತ್ನ ನಡೆದಿದೆ, ಒಂದು ಹೆಲಿಕಾಪ್ಟರ್ ಮೂಲಕ ನೀರು ಸ್ಪ್ರೇ ಮಾಡಲಾಗುತ್ತಿದೆ. ಮೂರು ಭಾರಿ ಏರ್ ಲಿಫ್ಟ್ ಮೂಲಕ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆದಿದೆ. ಇನ್ನೂ ಎರಡು ಹೆಲಿಕಾಪ್ಟರ್ ಕೊಟ್ಟರೆ ಉತ್ತಮ.  ನಾಳೆ ಸಂಪೂರ್ಣ ಬೆಂಕಿ ಹತೋಟಿಗೆ ತರುತ್ತೇವೆ ಎಂದರು.

ಪ್ರಾಣಿಪಕ್ಷಿಗಳು ನಾಶವಾಗಿದೆ ಅನ್ನೊದು ನಕಲಿ

ಬಂಡೀಪುರದಲ್ಲಿ  ಒಟ್ಟು  13 ಅರಣ್ಯ ವಲಯಗಳಿವೆ ಇದರಲ್ಲಿ ಎರಡರಲ್ಲಿ ಮಾತ್ರ ಬೆಂಕಿ ಆವರಿಸಿಕೊಂಡಿದೆ. ಉಳಿದ 11 ವಲಯಗಳಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದೆ. ಅಲ್ಲಿಗೆ ಪ್ರಾಣಿ ಪಕ್ಷಿಗಳು ಶಿಫ್ಟ್ ಆಗಿವೆ. ಎಷ್ಟು ಸುಟ್ಟು ಹೋಗಿದೆ ಎನ್ನುವುದು ಇನ್ನೂ ಅಂದಾಜು ಸಿಕ್ಕಿಲ್ಲ. ಅದರ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇದನ್ನೂ ಓದಿ :  ಇವತ್ತೂ ಹಲವೆಡೆ ಅಗ್ನಿನರ್ತನ; ಚಾಮುಂಡಿ ಬೆಟ್ಟ, ಬೆಂಗಳೂರು ವಿವಿ, ಕಸವನಹಳ್ಳಿ, ನೆಲಮಂಗಲದಲ್ಲೂ ಬೆಂಕಿ ಆರ್ಭಟ

ಬೆಂಕಿ ನಂದಿಸಲು ಎಚ್ ಡಿ ಕೋಟೆಯ ಬೀರವಾಳಿಯ ನುಗು ಜಲಾಶಯದಿಂದ ನೀರು ಬಳಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ವಾಯುಪಡೆಯ ಅಧಿಕಾರಿಗಳ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಜತೆ ವಾಯುಪಡೆ ಕೈ ಜೋಡಿಸಲಿದೆ. ಈ ನಿಟ್ಟಿನಲ್ಲಿ ಹೆಲಿಕಾಪ್ಟರ್ ಬಳಸುವಂತೆ ಬಂಡೀಪುರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
First published:February 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ