ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ರಾಜಕಾರಣಿ ಬಿ.ಎಸ್​​ ಯಡಿಯೂರಪ್ಪ: ಎಚ್​​. ವಿಶ್ವನಾಥ್​​​

ಜನವಿರೋಧಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದಿಂದ ಪ್ರಜಾಪ್ರಭುತ್ವ ಗಲುಗಿ ಹೋಗಿತ್ತು. ಇದರಿಂದ ಪ್ರಜಾಪ್ರಭುತ್ವವನ್ನು ಬಿಡುಗಡೆಗೊಳಿಸಲು ನಾವು ರಾಜೀನಾಮೆ ನೀಡಬೇಕಾಯ್ತು. ಇದರ ಹೊರತು ಅಧಿಕಾರದ ಆಸೆಗಾಗಿ ನಾವು ರಾಜೀನಾಮೆ ನೀಡಲಿಲ್ಲ ಎನ್ನುವ ಮೂಲಕ ತಮ್ಮ ನಡೆಯನ್ನು ಎಚ್​​. ವಿಶ್ವನಾಥ್ ಸಮರ್ಥಿಸಿಕೊಂಡರು.

news18-kannada
Updated:January 8, 2020, 3:57 PM IST
ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ರಾಜಕಾರಣಿ ಬಿ.ಎಸ್​​ ಯಡಿಯೂರಪ್ಪ: ಎಚ್​​. ವಿಶ್ವನಾಥ್​​​
ಹೆಚ್. ವಿಶ್ವನಾಥ್
  • Share this:
ಬೆಂಗಳೂರು(ಜ.08): ಕರ್ನಾಟಕದಲ್ಲೇ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ರಾಜಕಾರಣಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಎಂದು ಮಾಜಿ ಸಚಿವ ಎಚ್​​. ವಿಶ್ವನಾಥ್ ಕೊಂಡಾಡಿದ್ದಾರೆ. ಇಂದು ನಗರದ ಪ್ರೆಸ್​​ ಕ್ಲಬ್​​ನಲ್ಲಿ ಮಾತಾಡಿದ ಎಚ್​​. ವಿಶ್ವನಾಥ್​​​, ನಾನು ಯಡಿಯೂರಪ್ಪರನ್ನು ನಂಬಿ ಬಿಜೆಪಿಗೆ ಬಂದಿದ್ದೇನೆ. ನನಗೆ ಸಚಿವ ಸ್ಥಾನ ನೀಡುತ್ತಾರೆಂಬ ಭರವಸೆ ಇದೆ. ಕೊನೆಯದಾಗಿ ನನಗೆ ಮಂತ್ರಿ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದರು.

ಜನವಿರೋಧಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದಿಂದ ಪ್ರಜಾಪ್ರಭುತ್ವ ಗಲುಗಿ ಹೋಗಿತ್ತು. ಇದರಿಂದ ಪ್ರಜಾಪ್ರಭುತ್ವವನ್ನು ಬಿಡುಗಡೆಗೊಳಿಸಲು ನಾವು ರಾಜೀನಾಮೆ ನೀಡಬೇಕಾಯ್ತು. ಇದರ ಹೊರತು ಅಧಿಕಾರದ ಆಸೆಗಾಗಿ ನಾವು ರಾಜೀನಾಮೆ ನೀಡಲಿಲ್ಲ ಎನ್ನುವ ಮೂಲಕ ತಮ್ಮ ನಡೆಯನ್ನು ಎಚ್​​. ವಿಶ್ವನಾಥ್ ಸಮರ್ಥಿಸಿಕೊಂಡರು.

ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಮತ್ತು ಎಚ್​​.ಡಿ ರೇವಣ್ಣನವರ ಕುಟುಂಬ ರಾಜಕಾರಣದಿಂದ ಜೆಡಿಎಸ್​​ ಶಾಸಕರು ಬೇಸತ್ತು ಹೋಗಿದ್ದಾರೆ. ಜೆಡಿಎಸ್​​ ಪಕ್ಷಕ್ಕೆ ಮುಂದೆ ಭವಿಷ್ಯವಿಲ್ಲ. ಜೆಡಿಎಸ್​​ ಶಾಸಕರು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋಗಲಿದ್ದಾರೆ. ಯಾರು ಎಚ್​​.ಡಿ ಕುಮಾರಸ್ವಾಮಿ ಮಾತು ಕೇಳುವ ಪರಿಸ್ಥಿತಿಯಲ್ಲಿಲ್ಲ ಎಂದು ಕುಟುಕಿದರು.

ಇದನ್ನೂ ಓದಿ: ಇರಾಕ್​ನಲ್ಲಿ 25 ಸಾವಿರ ಭಾರತೀಯರು ಸದ್ಯಕ್ಕೆ ಸುರಕ್ಷಿತ; ಯುದ್ಧ ಶುರುವಾಗುವ ಆತಂಕದಲ್ಲಿ ಜನ

ಬಿಜೆಪಿಯ 30 ಮಂದಿ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಜೆಡಿಎಸ್​ ಶಾಸಕರೇ ಅವರನ್ನು ನಂಬುತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಏಂಕಾಗಿಯಾಗಿ ಜೆಡಿಎಸ್ ಪಕ್ಷ ಕಟ್ಟಿದ್ದಾರೆಯೇ ಹೊರತು​​ ಎಚ್​​.ಡಿ ಕುಮಾರಸ್ವಾಮಿಯಲ್ಲ ಎಂದು ಕಿಡಿಕಾರಿದರು.

ಕರ್ನಾಟಕ ಉಪಚುನಾವಣೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳಲ್ಲಿ ಹೊಸಕೋಟೆ ಮತ್ತು ಹುಣಸೂರು ಕೂಡ ಇವೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಸೋಲನುಭವಿಸುತ್ತಿದ್ಧಾರೆ. ಹುಣಸೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಹಣಾಹಣಿ ನಡೆದಿತ್ತು. ಆದರೆ, ಇಲ್ಲಿ ಕಾಂಗ್ರೆಸ್ ಪಕ್ಷದ ಹೆಚ್.ಪಿ. ಮಂಜುನಾಥ್ ಅವರು ಸ್ಪಷ್ಟ ಬಹುತದೊಂದಿಗೆ ಗೆದಿದ್ದರು. ಹೆಚ್. ವಿಶ್ವನಾಥ್ ಅವರು ಎರಡನೇ ಸ್ಥಾನಕ್ಕಾಗಿ ಇಲ್ಲಿ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಬಂದಿತ್ತು.
First published:January 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ