Chikkamagaluru: ನೀರಿನಲ್ಲಿ ಕೊಚ್ಚಿ ಹೋಗಿದ್ದವ ದಿಢೀರ್ ಪ್ರತ್ಯಕ್ಷ, ರಸ್ತೆಯಲ್ಲಿ ಹೆಂಡತಿ ಜೊತೆ ಬಿಂದಾಸ್​ ಓಡಾಟ

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ನಂಬಲಾಗಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾನೆ. ನಗರಸಭೆ ಅಧ್ಯಕ್ಷ ವೇಣುಗೋಪಾಲ್ ವಿಚಾರಿಸಿದಾಗ ಅರ್ಧಂಬರ್ಧ ಮಾತಾಡಿ ಎಸ್ಕೇಪ್ ಆಗಿದ್ದಾರೆ.

ಅಧ್ಯಕ್ಷ ಕೈಗೆ ಸಿಕ್ಕಿಬಿದ್ದ ದಂಪತಿ

ಅಧ್ಯಕ್ಷ ಕೈಗೆ ಸಿಕ್ಕಿಬಿದ್ದ ದಂಪತಿ

  • Share this:
ಚಿಕ್ಕಮಗಳೂರು (ಜು 26) : ಇತ್ತೀಚೆಗೆ ಸುರಿದ ಭಾರೀ ಮಳೆಗೆ (Heavy Rain) ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ನಂಬಲಾಗಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾನೆ. ಚಿಂದಿಯ ಆಯಲು ಹೋಗಿ ರಾಜಕಾಲುವೆಯಲ್ಲಿ (Rajkaluve) ಕೊಚ್ಚಿ ಹೋಗಿದ್ದ ವ್ಯಕ್ತಿ ಚಿಕ್ಕಮಗಳೂರು (Chikkamagaluru) ನಗರದಲ್ಲಿ ದಿಢೀರ್ ಪ್ರತ್ಯಕ್ಷನಾಗಿದ್ದಾನೆ. ಕೊಚ್ಚಿ ಹೋಗಿದ್ದ ವ್ಯಕ್ತಿ ನಗರದ ಐಜಿ ರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡುತ್ತಿರುವುದನ್ನ ಕಂಡು ಅಧಿಕಾರಿಗಳು ದಂಗಾಗಿದ್ದಾರೆ. 15 ದಿನಕ್ಕೂ ಹೆಚ್ಚು ಕಾಲ ಎಡಬಿಡದೆ ಸುರಿದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ನಗರದಲ್ಲಿ ಚಿಂದಿ ಆಯ್ದು ಜೀವನ ನಡೆಸುತ್ತಿದ್ದ ಸುರೇಶ್ ಎಂಬ ವ್ಯಕ್ತಿ ಚಿಕ್ಕಮಗಳೂರು ಸಮೀಪದ ಉಂಡೇದಾಸರಹಳ್ಳಿ ರಾಜಕಾಲುವೆಯಲ್ಲಿ ಜುಲೈ 12ರಂದು ಪ್ಲಾಸ್ಟಿಕ್ ಬಾಟಲಿ ಆಯುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿರಬಹುದು ಎಂದು ನಂಬಲಾಗಿತ್ತು.

ಸತ್ತಿದ್ದಾನೆ ಎಂದು ನಡೆದಿತ್ತು ಶೋಧಕಾರ್ಯ

ಚಿಂದಿ ಆಯುತ್ತಿದ್ದ ವ್ಯಕ್ತಿ ಸುರೇಶ್ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿಯುತ್ತಿದ್ದಂತೆ ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಗ್ನಿಶಾಮಕ ದಳ, ಎಸ್‍ಡಿಆರ್‍ಎಫ್ ಸಿಬ್ಬಂದಿಗಳು ಶೋಧಕಾರ್ಯ ನಡೆಸಿದ್ದರು. ಎಷ್ಟೇ ಶೋಧಕಾರ್ಯ ನಡೆಸಿದರು. ಸುರೇಶ್ ಸುಳಿವು ಸಿಕ್ಕಿರಲಿ ಲ್ಲ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: Pramoda Devi Wadiyar: ಬೇಬಿ ಬೆಟ್ಟ ವಿವಾದ, ಸರ್ಕಾರದ ವಿರುದ್ಧ 'ರಾಜಮಾತೆ' ಗರಂ; ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ?

ಸತ್ತು ಹೋಗಿದ್ದಾನೆಂದು ಭಾವಿಸಿದ್ದ ವ್ಯಕ್ತಿಯನ್ನ ರಸ್ತೆಯಲ್ಲಿ ಕಂಡು ಅಧಿಕಾರಿಗಳೇ ಮೂಕವಿಸ್ಮಿತರಾಗಿದ್ದಾರೆ. ಘಟನೆ ನಡೆದು 14 ದಿನಗಳ ಬಳಿಕ ಸುರೇಶ್ ನಗರದ ಎಂ.ಜಿ.ರಸ್ತೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದು ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂಬ ವ್ಯಕ್ತಿ ನಗರ ದಲ್ಲಿ ಅಲೆದಾಡುವುದನ್ನು ಕಂಡು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸುರೇಶ್​ನನ್ನು ತರಾಟೆಗೆ ತೆಗೆದುಕೊಂಡ ನಗರಸಭೆ ಅಧ್ಯಕ್ಷ

ಹಳ್ಳದಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ ನಗರದಲ್ಲಿ ಓಡಾಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸ್ಥಳಕ್ಕೆ ತೆರಳಿ ಸುರೇಶ್ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ. ನಾಪತ್ತೆಯಾಗಿದ್ದ ವ್ಯಕ್ತಿ ಸುರೇಶ್ ಬಗ್ಗೆ ನಗರಸಭೆಯಿಂದ ಪೊಲೀಸ್ ಇಲಾಖೆಗೆ ಮತ್ತು ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದು, ತನಿಖೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಆತನೇ ಅಥವಾ ಬೇರೆಯೋ ಎಂಬುದು ತಿಳಿದು ಬರಬೇಕಿದೆ.

ಇದನ್ನೂ ಓದಿ: Congress Leaders: ಇದು ಬಿಜೆಪಿ ಭ್ರಷ್ಟೋತ್ಸವ, ಈ ಸರ್ಕಾರ ಅಭಿವೃದ್ಧಿ ಶೂನ್ಯ ಸರ್ಕಾರ

ಪರಿಹಾರದ ಹಣ ಕೊಡಲು ಮುಂದಾಗಿದ್ದ ಜಿಲ್ಲಾಡಳಿತ

ಅವನ ಜೊತೆಯಲ್ಲಿದ್ದ ಪತ್ನಿ ಸೂರಿ...ಸೂರಿ.... (ಸುರೇಶ್) ಗೋಳಾಡುತ್ತಿದ್ದಳು. ಕಣ್ಣೀರಿಡುತ್ತಿದ್ದಳು. ಕೂಡಲೇ ನೀರಿನ ವೇಗ ಅಬ್ಬರಿಸಿ ಬೊಬ್ಬರಿಯುತ್ತಿದ್ದರು ಕೂಡ ನಗರಸಭೆ, ಅಗ್ನಿಶಾಮಕ ಸಿಬ್ಬಂದಿಗಳು ಇಡೀ ಹಳ್ಳ ಹುಡುಕಿದ್ದರು. ಹುಡುಕುತ್ತಿದ್ದರು. ಆದರೆ, ನಾಪತ್ತೆಯಾದವನ ಶೋಧ ಮಾತ್ರ ಆಗಿರಲಿಲ್ಲ. ಆದರೂ ಕಾರ್ಯಚರಣೆ ನಿಲ್ಲಿಸಿರಲಿಲ್ಲ. ಆದರೆ, ಇಂದು ಬೆಳಗ್ಗೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಸಿಟಿ ರೌಂಡ್ಸ್​ ನಲ್ಲಿ ಇದ್ದ ವೇಳೆ ಹಳ್ಳದಲ್ಲಿ ಹುಡುಕಾಡುತ್ತಿದ್ದ ಸುರೇಶ ತನ್ನ ಪತ್ನಿ ಜೊತೆ ಆರಾಮಾಗಿ ಓಡಾಡ್ಕಂಡಿದ್ದ. ನೋಡಿದ ಕೂಡಲೇ ಗಾಡಿ ನಿಲ್ಲಸಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ವಿಚಾರಿಸಿದಾಗ ಅರ್ಧಂಬರ್ಧ ಮಾತನಾಡಿ ಎಸ್ಕೇಪ್ ಆಗಿದ್ದಾರೆ.

5 ಲಕ್ಷ ಪರಿಹಾರಕ್ಕೆ ನಾಟಕವಾಡಿದ್ರಾ?

ಅವರಿಗೆ ಪರಿಹಾರದ ಹಣ ಐದು ಲಕ್ಷ ಕೊಡಲು ಜಿಲ್ಲಾಡಳಿತ ಕೂಡ ಸಿದ್ಧವಾಗಿತ್ತು. ಆದರೆ, ಸತ್ತಿದ್ದಾನೆಂದು ಭಾವಿಸಿದ್ದವನು ಬದುಕಿರೋದನ್ನ ಕಂಡ ವೇಣುಗೋಪಾಲ್ ಕೂಡಲೇ ಪೊಲೀಸರು, ತಹಶೀಲ್ದಾರ್, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಲ್ಲರಿಗೂ ವಿಷಯ ಮುಟ್ಟಿಸಿದ್ದಾರೆ.
Published by:Pavana HS
First published: