ಮೈಸೂರು: ಕಳೆದ 21ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು (International Yoga Day) ಆಚರಿಸಲಾಯ್ತು. ಪ್ರಧಾನಿ ನರೇಂದ್ರ ಮೋದಿಯವರೇ (PM Narendra Modi) ಖುದ್ದಾಗಿ ಮೈಸೂರಿಗೆ (Mysuru) ಬಂದು, ಅರಮನೆ ಆವರಣದಲ್ಲಿ ಯೋಗ (Yoga) ತಾಲೀಮು ಪ್ರದರ್ಶಿಸಿದ್ದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಪ್ರಧಾನಿ ಮೋದಿ ಬಂದು ಹೋದ ಬಳಿಕ ಅರಮನೆ ನಗರಿ, ಸಾಂಸ್ಕೃತಿಕ ನಗರಿ ಮೈಸೂರು ಮತ್ತೊಮ್ಮೆ ಪ್ರವಾಸಿಗರ (Tourist) ಕಣ್ಣಿಗೆ ಬಿದ್ದಿದೆ. ಮೋದಿ ಸವಿದ ಮೈಸೂರು ಪಾಕ್ (Mysore Pak), ಮೈಸೂರು ಮಸಾಲೆ ದೋಸೆ (Mysore Masala Dose) ಜೊತೆಗೆ ಮೈಸೂರು ಅರಮನೆ (Mysore Palace) ಮೇಲೂ ಪ್ರವಾಸಿಗರು ಹೆಚ್ಚಾಗಿ ಆಸಕ್ತಿ ತೋರುತ್ತಿದ್ದಾರಂತೆ. ಮೋದಿ ಬಂದು ಹೋದ ಬಳಿಕ ಮೈಸೂರು ಅರಮನೆಯ ವೆಬ್ಸೈಟ್ಗೆ (Website) ಭೇಟಿ ನೀಡಿ, ಪ್ಯಾಲೆೇಸ್ ಬಗ್ಗೆ ಮಾಹಿತಿ (Information) ಸಂಗ್ರಹಿಸುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ಯಂತೆ.
ಮೈಸೂರಿನ ಮೇಲೆ ಪ್ರವಾಸಿಗರಿಗೆ ಹೆಚ್ಚಿದ ಆಸಕ್ತಿ
ಮೈಸೂರು ಅರಮನೆ ಜಗದ್ವಿಖ್ಯಾತವಾಗಿರೋದು ಗೊತ್ತೇ ಇದೆ. ಇಲ್ಲಿನ ಪ್ಯಾಲೇಸ್ ನೋಡೋದಕ್ಕೆ ಬರೀ ಕರ್ನಾಟಕ ಅಥವಾ ಭಾರತದ ಬೇರೆ ಬೇರೆ ರಾಜ್ಯಗಳಿಂದ ಅಷ್ಟೇ ಅಲ್ಲ, ಜಗತ್ತಿನ ಬೇರೆ ಬೇರೆ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಮೈಸೂರಿನ ಅರಮನೆ ಅಂದವನ್ನು ಕಣ್ಣಾರೆ ತುಂಬಿಕೊಂಡು ಸಂತಸ ಪಡುತ್ತಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಬಳಿಕ ಮೈಸೂರು ಅರಮನೆ ಮತ್ತೊಮ್ಮೆ ಪ್ರವಾಸಿಗರ ಕುತೂಹಲ ಕೆರಳಿಸಿದೆ.
ಪ್ರವಾಸಿಗರ ಗಮನ ಸೆಳೆದ ಮೈಸೂರು ಅರಮನೆ
ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಮೈಸೂರು ಅರಮನೆ ಆವರಣದಲ್ಲಿ ಯೋಗಾ ತಾಲೀಮು ಪ್ರದರ್ಶಿಸಿದ್ದರು. ಸುಮಾರು 45 ನಿಮಿಷಗಳ ಈ ಯೋಗ ಪ್ರದರ್ಶನ ಭಾರತ ಸೇರಿದಂತೆ 75ಕ್ಕೂ ಹೆಚ್ಚು ದೇಶಗಳಲ್ಲಿ ನೇರ ಪ್ರಸಾರವಾಗಿತ್ತು. ಈ ಕಾರ್ಯಕ್ರಮ ನೋಡಿದ ಪ್ರವಾಸಿಗರು ಮೈಸೂರು ಅರಮನೆಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
ಇದನ್ನೂ ಓದಿ: Explained: ಕನ್ನಡಿಗರು ಬೆಳಗೆದ್ದು ನೆನೆಯಲೇ ಬೇಕಾದ ನಾಲ್ವಡಿ ಕೃಷ್ಣರಾಜ ಒಡೆಯರ್, 'ರಾಜರ್ಷಿ' ಹೆಜ್ಜೆ ಗುರುತು ಇಲ್ಲಿದೆ
ಯೋಗ ದಿನದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಯೋಗ ದಿನದ ಬಳಿಕ ಗಣನೀಯವಾಗಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ ಎನ್ನಲಾಗಿದೆ. ಯೋಗ ದಿನದ ಮರುದಿನ ಅಂದರೆ ಜೂ. 22ರಂದು 5,500, ಮಂದಿ, 23ರಂದು 5,600 ಮಂದಿ ಅರಮನೆಗೆ ಭೇಟಿ ನೀಡಿದ್ದಾರೆ ಅಂತ ಅರಮನೆ ಮಂಡಳಿ ತಿಳಿಸಿದೆ.
ಮೈಸೂರು ಅರಮನೆ ವೆಬೆಸೈಟ್ ವಿಸಿಟರ್ಸ್ ಸಂಖ್ಯೆ ಹೆಚ್ಚಳ
ಇದೀಗ ಮೈಸೂರು ಅರಮನೆಯ https://mysorepalce.karnataka.gov.in/ ವೆಬ್ಸೈಟ್ಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಜಾಸ್ತಿಯಾಗಿದ್ಯಂತೆ. ವೆಬ್ಸೈಟ್ ವೀಕ್ಷಿಸಿರುವವರ ಪೈಕಿ ಶೇ. 90ರಷ್ಟು ಮಂದಿ ಅರಮನೆಗೆ ಗರಿಷ್ಠ '5 ಸ್ಟಾರ್' ನೀಡಿ ಮೆಚ್ಚುಗೆ ವ್ಯಕ್ತಪಪಡಿಸಿದ್ದಾರೆ. ಇನ್ನು ಕೆಲವರು ಅರಮನೆಯ ವಿನ್ಯಾಸ, ಕಂಬಗಳ ಕೆತ್ತನೆ, ವಿಶಿಷ್ಟ ಪೇಂಟಿಂಗ್ ಹಾಗೂ ಸೌಂದರ್ಯದ ಬಗ್ಗೆಯೂ ಮೆಚ್ಚುಗೆಯ ಸಾಲುಗಳನ್ನು ಬರೆದಿದ್ದಾರೆ. ಈ ಪ್ರವಾಸಿಗರಲ್ಲಿ ವಿದೇಶಿಗರೇ ಹೆಚ್ಚಿರುವುದು ಮತ್ತೊಂದು ವಿಶೇಷ.
ಇದನ್ನೂ ಓದಿ: Yoga Day Special: ಯೋಗ ಎಂದರೇನು? ಯೋಗಾಸನದಿಂದ ಮನಸ್ಸು-ದೇಹಕ್ಕಾಗುವ ಲಾಭಗಳೇನು?
ಮೈಸೂರಿನ ಸಂಸ್ಕೃತಿಗೆ ವಿದೇಶಿಗರು ಫಿದಾ
ಅರಮನೆ ವೆಬ್ಸೈಟ್ನಲ್ಲಿ ಅರಮನೆ ಪ್ರವೇಶದಿಂದ ಹಿಡಿದು ನಿರ್ಗಮನದವರೆಗೂ ಇರುವ ಮಾಹಿತಿ ಹಾಗೂ 360 ಡಿಗ್ರಿಯಲ್ಲಿರುವ ಛಾಯಾಚಿತ್ರವನ್ನು ದೇಶ, ವಿದೇಶದ ಪ್ರವಾಸಿಗರು ವೀಕ್ಷಿಸಿದ್ದಾರಂತೆ. ಮೈಸೂರಿನ ದಸರಾ ಗೊಂಬೆ ತೊಟ್ಟಿ, ಖಾಸಗಿ, ಸಾರ್ವಜನಿಕ ದರ್ಬಾರ್, ಹಳೆ ಅರಮನೆ ಮಾದರಿ, ಚಾಮುಂಡೇಶ್ವರಿ ದೇವಿ ವಿಗ್ರಹ, ಚಿನ್ನದ ಅಂಬಾರಿ, ದಸರಾ ಜಂಬೂ ಸವಾರಿ, ಕಲ್ಯಾಣ ಮಂಟಪ, ದುರ್ಗಾ ಪೂಜೆ, ಮಹಾರಾಜರ ಪೇಂಟಿಂಗ್ ಸೇರಿದಂತೆ ಸಾಕಷ್ಟು ಚಿತ್ರಗಳನ್ನು 'ವರ್ಚುಯಲ್ ಟೂರ್' ನಲ್ಲೇ ನೋಡಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ