ಬೆಂಗಳೂರು; ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಗರದಲ್ಲಿ ಎರಡು ತಿಂಗಳಿನಿಂದ ಬೀಡುಬಿಟ್ಟು, ಭಯೋತ್ಪಾದಕರ ಜೊತೆ ಸಂಪರ್ಕದಲ್ಲಿದ್ದ ವೈದ್ಯನನ್ನು ಬಂಧಿಸಿದೆ. ಇನ್ನು ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಇಸ್ಲಾಮಿಕ್ ಸ್ಟೇಟ್ಸ್ ಜೊತೆ ನಂಟು ಹೊಂದಿರುವ ಆರೋಪ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲತಃ ಬೆಂಗಳೂರು ನಗರದವನಾದ ಅಬ್ದುಲ್ ರೆಹಮಾನ್, ಬಸವನಗುಡಿಯಲ್ಲಿ ಫ್ಲಾಟ್ನಲ್ಲಿ ವಾಸವಾಗಿದ್ದ. ಎರಡು ತಿಂಗಳ ಸತತವಾಗಿ ಶಂಕಿತನ ಮೇಲೆ ಕಣ್ಣಿಟ್ಟಿದ್ದ ಎನ್ಐಎ ಮಂಗಳವಾರ ಆತನನ್ನು ಬಂಧಿಸಿದೆ. ಅಬ್ದುಲ್ ರೆಹಮಾನ್ ನಗರದಲ್ಲಿ ಬಹುತೇಕ ಸ್ನೇಹಿತರ ಜೊತೆ ನಂಟು ಹೊಂದಿದ್ದ. ಹಾಗೆಯೇ ಈತನ ಕುಟುಂಬಸ್ಥರು ನಗರದಲ್ಲೇ ವಾಸವಿದ್ದಾರೆ ಎಂಬ ಮಾಹಿತಿಯನ್ನು ಎನ್ಐಎ ಕಲೆಹಾಕಿದೆ. ಇದರ ಜೊತೆಗೆ ಶಂಕಿತನ ಸ್ನೇಹಿತರಲ್ಲಿ ಕೆಲವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ.
ಇದನ್ನು ಓದಿ: Bengaluru Crime: ಸಿಲಿಕಾನ್ ಸಿಟಿಯಲ್ಲಿ ಐಸಿಸ್ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರನ ಬಂಧನ
ಇನ್ನು ನಗರದಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಸುಮಾರು 40 ಜನ ಆರೋಪಿಗಳು ಭಯೋತ್ಪಾದಕ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಮಾಹಿತಿ ಇರುವುದರಿಂದ ಮುಂದಿನ ದಿನಗಳಲ್ಲಿ ಸಿಸಿಬಿ ಪೊಲೀಸರಿಂದಲೂ ಎನ್ಐಎ ಮಾಹಿತಿ ಪಡೆದುಕೊಳ್ಳುವ ಸಾದ್ಯತೆ ಇದೆ. ಎರಡು ತಿಂಗಳಿಂದ ಅಬ್ದುಲ್ ರೆಹಮಾನ್ ಮೇಲೆ ಕಣ್ಣಿಟ್ಟಿದ್ದ ಎನ್ಐಎ ಅಧಿಕಾರಿಗಳು ಪ್ರತಿನಿತ್ಯವೂ ಆತನನ್ನು ಹಿಂಬಾಲಿಸುತ್ತಿದ್ದರು. ಆತನ ದಿನಚರಿಯನ್ನು ಸಂಪೂರ್ಣವಾಗಿ ಕಲೆ ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ