ಇಂದು ಸಿಎಂ ದಂಪತಿ ಅಮರಾವತಿಗೆ ಭೇಟಿ ನೀಡುತ್ತಿರುವುದು ಯಾಕೆ ಗೊತ್ತಾ?: ಬಯಲಾಯ್ತು ರಹಸ್ಯ!


Updated:August 31, 2018, 10:50 AM IST
ಇಂದು ಸಿಎಂ ದಂಪತಿ ಅಮರಾವತಿಗೆ ಭೇಟಿ ನೀಡುತ್ತಿರುವುದು ಯಾಕೆ ಗೊತ್ತಾ?: ಬಯಲಾಯ್ತು ರಹಸ್ಯ!

Updated: August 31, 2018, 10:50 AM IST
ನ್ಯೂಸ್​ 18 ಕನ್ನಡ

ಬೆಂಗಳೂರು(ಆ.31): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದಂಪತಿ ಸಮೇತರಾಗಿ ಅಮರಾವತಿಗೆ ತೆರಳಿ ಅಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆಂಬ ವಿಚಾರ ಸದ್ದು ಮಾಡಿತ್ತು. ಸಿಎಂ ಹರಕೆ ತೀರಿಸಲು ಹೋಗುತ್ತಿದ್ದು, ಇದು ಅವರ ಟೆಂಪಲ್​ ರನ್​ ಮುಂದುವರೆದ ಭಾಗ ಎಂದೇ ಹೇಳಲಾಗುತ್ತಿತ್ತು. ಆದರೀಗ ಈ ದೇವಸ್ಥಾನ ಭೇಟಿಯ ಹಿನ್ನೆಲೆ ಬೇರೆಯೇ ಇದೆ ಅವರು ತಮ್ಮ ಬಹುದಿನಗಳ ಕನಸು ನನಸಾಗಿಸಲು ಹೋಗುತ್ತಿದ್ದಾರೆಂಬ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಎಚ್​ಡಿಕೆ ಅಮರಾವತಿಗೆ ಯಾಕೆ ಭೇಟಿ ನೀಡುತ್ತಿದ್ದಾರೆ? ಹಿನ್ನೆಲೆ ಏನು ಅಂತೀರಾ? ಇಲ್ಲಿದೆ ವಿವರ

ಸಿಎಂ ಕುಮಾರಸ್ವಾಮಿ ಅಮರಾವತಿಯ ದೇವಸ್ಥಾನಕ್ಕೆ ಯಾವುದೇ ಹರಕೆ ತೀರಿಸಲು ಅಥವಾ ತೃತೀಯ ರಂಗದ ಚರ್ಚೆ ನಡೆಸುವ ಸಲುವಾಗಿ ತೆರಳುತ್ತಿಲ್ಲ. ಬದಲಾಗಿ ತಮ್ಮ ಬಹುದಿನಗಳ ಕನಸು ಈಡೇರಿಸಲು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯೊಂದಿಗೆ ಈ ಪ್ರಯಾಣ ಕೈಗೊಂಡಿದ್ದಾರಂತೆ. ಹೌದು ವಾಸ್ತವವಾಗಿ ಸಿಎಂ ದಂಪತಿ ತಮ್ಮ ಮಗ ನಿಖಿಲ್​ಗೆ ಹುಡುಗಿ ನೋಡಲು ಹೋಗುತ್ತಿದ್ದಾರೆ.ಆಂಧ್ರದಲ್ಲಿರುವ ಕರ್ನಾಟಕ ಮೂಲದವರ ಜೊತೆ ಎಚ್​ಡಿಕೆ ಸಂಬಂಧ ಬೆಳೆಸಲು ಅಮರಾವತಿಗೆ ತೆರಳುತ್ತಿದ್ದು, ಇಂದು ಅನೌಪಚಾರಿಕ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಕೆಲ ದಿನಗಳ ಬಳಿಕ ಮುಹೂರ್ತ ನೋಡಿ ಎರಡೂ ಕುಟುಂಬದವರು ಸೇರಿ ಮತ್ತೊಮ್ಮೆ ಮಾತುಕತೆ ನಡೆಸಲು ನಿರ್ಧರಿಸಿದ್ದು, ಮುಂದಿನ ತಿಂಗಳು ದೇವೇಗೌಡರ ಕುಟುಂಬ ಸದಸ್ಯರೆಲ್ಲ ತೆರಳಿ ಮಾತುಕತೆ ನಡೆಸಲಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

ಈ ಹಿಂದೆ ನಿಖಿಲ್ ಕುಮಾರಸ್ವಾಮಿಗೆ ನಿಶ್ಚಿತಾರ್ಥವಾಗಿತ್ತು. ಚಿತ್ರರಂಗದ ಪ್ರಖ್ಯಾತ ಕುಟುಂಬದೊಂದಿಗೆ ಸಂಬಂಧ ಬೆಳೆಸಲಾಗಿತ್ತು ಆದರೆ ಕಾರಣಾಂತರಗಳಿಂದ ಆ ಮಾತುಕತೆ ಅಲ್ಲಿಗೇ ಸ್ಥಗಿತವಾಗಿತ್ತು.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ