ಹುಡುಗಿ ಚುಡಾಯಿಸಿದ್ದಕ್ಕೆ ಯುವಕನ ಕೊಲೆ; 24 ಗಂಟೆಯೊಳಗೆ ನಾಲ್ವರು ಆರೋಪಿಗಳು ಬಂಧನ

ಕೊಲೆಗೆ ಸಂಚು ರೂಪಿಸಿದ್ದ ಬಲಕುಂದಿ ಗ್ರಾಮದ ಜಗದೀಶ ಹಿರೇಮಠ, ಪ್ರವೀಣ್ ಹಿರೇಮಠ, ದೊಡ್ಡಪ್ಪ ಅಂಗಡಿ ಹಾಗೂ ರೆಹಮಾನ್ ಮುಲ್ಲಾ ಪೊಲೀಸರ ಬಲೆಗೆ ಬಿದ್ದು, ಜಗದೀಶ್ ಮತ್ತು ಪ್ರವೀಣ್ ಹಿರೇಮಠ ಇವರ ಸಹೋದರಿಯನ್ನು ಚುಡಾಯಿಸಿದ್ದಕ್ಕೆ ಮುತ್ತು ಅಲಿಯಾಸ್ ಮಡಿವಾಳಪ್ಪನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

HR Ramesh | news18-kannada
Updated:May 15, 2020, 6:52 PM IST
ಹುಡುಗಿ ಚುಡಾಯಿಸಿದ್ದಕ್ಕೆ ಯುವಕನ ಕೊಲೆ; 24 ಗಂಟೆಯೊಳಗೆ ನಾಲ್ವರು ಆರೋಪಿಗಳು ಬಂಧನ
ಪ್ರಾತಿನಿಧಿಕ ಚಿತ್ರ
  • Share this:
ಕೊಪ್ಪಳ: ಯಾವುದಾದರೂ ದುರ್ಘಟನೆಗೆ ಕಾರಣವಾಗೋದು ಹೊನ್ನು, ಹೆಣ್ಣು ಮತ್ತು ಮಣ್ಣು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಲ್ಲಿನ ಘಟನೆಯೂ ಹೆಣ್ಣಿನ ವಿಚಾರಕ್ಕೆ ನಡೆದಿರುವಂತಹದ್ದು. ಹುಡುಗಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಿಯ ಮುತ್ತು ಅಲಿಯಾಸ್ ಮಡಿವಾಳಪ್ಪ ಮಡಿವಾಳರ (19) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಂಥ ಹಲವು ಪ್ರಕರಣ ನಡೆದಿದ್ದರೂ ಆರೋಪಿಗಳ ಬಂಧನ ಕಾರ್ಯ ಇಷ್ಟು ತೀವ್ರತೆ ಪಡೆದಿರಲಿಲ್ಲ. ಹೂಲಗೇರಿಯಲ್ಲಿ ನಡೆದ ಯುವಕನ ಕೊಲೆ ಬೇಧಿಸುವಲ್ಲಿ ಪೊಲೀಸರ ಕಾರ್ಯತಂತ್ರವನ್ನು ಮೆಚ್ಚಲೇಬೇಕು.

ಆಗಿದ್ದಿಷ್ಟು?

ಮೇ 13ರಂದು ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಬಲಕುಂದಿ ಗ್ರಾಮದ ಫಕೀರಮ್ಮ‌ ಮಡಿವಾಳರ ಹನುಮಸಾಗರ ಪೊಲೀಸ್ ಠಾಣೆಗೆ ಬಂದು, ಠಾಣಾ ವ್ಯಾಪ್ತಿಗೆ ಬರುವ ಹೂಲಗೇರಿ ಕೆರೆಯಲ್ಲಿ ಕೆಲ ದುಷ್ಕರ್ಮಿಗಳು ತಮ್ಮ ಮೊಮ್ಮಗ ಮುತ್ತು ಅಲಿಯಾಸ್ ಮಡಿವಾಳಪ್ಪ ಮಡಿವಾಳರ (19) ನನ್ನು ಕೊಲೆ ಮಾಡಿ, ಅರ್ಧಂಬರ್ಧ ಮಣ್ಣು ಹಾಕಿ ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ. ಪುಟ್ಟ ಹಳ್ಳಿ ಹೂಲಗೇರಿಯಲ್ಲಿ ಈ ಪ್ರಕರಣ ಭೀತಿ ಹುಟ್ಟಿಸಿತ್ತು. ಕೊಪ್ಪಳ ಜಿಲ್ಲಾ ಎಸ್ಪಿ ಜಿ.ಸಂಗೀತಾ, ಗಂಗಾವತಿ ಡಿಎಸ್‌ಪಿ ಬಿ.ಪಿ.ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ಚಂದ್ರಶೇಖರ್. ಜಿ., ಹನುಮಸಾಗರ ಠಾಣೆಯ ಪಿಎಸ್ಐ ಅಮರೇಶ ಹುಬ್ಬಳ್ಳಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ದುರಗಪ್ಪ ಹಿರೇಮನಿ, ಡಿ.ಕೆ.ನಾಯಕ, ಪರಶುರಾಮ, ಬಾಳನಗೌಡ, ರವಿ ನಡುವಿನಮನಿ, ಜಯರಾಮ, ಪ್ರಶಾಂತ ಕುಂಬಾರ, ಖಾದರ ಇವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿದೆ.

ಪೊಲೀಸ್ ತಂಡದ ಕಾರ್ಯಾಚರಣೆಯಲ್ಲಿ ಕೊನೆಗೂ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಕೊಲೆಗೆ ಸಂಚು ರೂಪಿಸಿದ್ದ ಬಲಕುಂದಿ ಗ್ರಾಮದ ಜಗದೀಶ ಹಿರೇಮಠ, ಪ್ರವೀಣ್ ಹಿರೇಮಠ, ದೊಡ್ಡಪ್ಪ ಅಂಗಡಿ ಹಾಗೂ ರೆಹಮಾನ್ ಮುಲ್ಲಾ ಪೊಲೀಸರ ಬಲೆಗೆ ಬಿದ್ದು, ಜಗದೀಶ್ ಮತ್ತು ಪ್ರವೀಣ್ ಹಿರೇಮಠ ಇವರ ಸಹೋದರಿಯನ್ನು ಚುಡಾಯಿಸಿದ್ದಕ್ಕೆ ಮುತ್ತು ಅಲಿಯಾಸ್ ಮಡಿವಾಳಪ್ಪನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನು ಓದಿ: ಲಾಕ್​ಡೌನ್​ನಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಬರೋಬ್ಬರಿ 300 ಕೋಟಿ ರೂ ನಷ್ಟ?

ಆರೋಪಿಗಳಿಂದ ಕೊಲೆ ಮಾಡಲು ಬಳಸಿದ ಆಯುಧಗಳು, ಮೋಟಾರ್ ಸೈಕಲ್ ಹಾಗೂ ನಾಲ್ವರು ಆರೋಪಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.ವರದಿ: ಬಸವರಾಜ ಕಾರುಗಲ್
First published: May 15, 2020, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading