ಬೆಂಗಳೂರು (ಆಗಸ್ಟ್ 22); ಕಾಣೆಯಾಗಿದ್ದ ತಂಗಿ ರಕ್ಷಾಬಂಧನ ದಿನವೇ ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲೇ ಕೇಕ್ ಕತ್ತರಿಸಿ ಅಣ್ಣನಿಗೆ ರಾಖಿ ಕಟ್ಟುವ ಮೂಲಕ ಸಂಭ್ರಮಿಸಿದ ಅಪರೂಪದ ಘಟನೆ ಭಾನುವಾರ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲೇ ರಾಖಿ ಕಟ್ಟುವ ಮೂಲಕ ಅಣ್ಣ ತಂಗಿಯನ್ನ ಮನೆಗೆ ಬರಮಾಡಿಕೊಂಡಿದ್ದಾನೆ. ನಾಪತ್ತೆಯಾಗಿದ್ದ ತಂಗಿಯನ್ನ ಪತ್ತೆ ಮಾಡುವ ರಕ್ಷಾಬಂಧನದ ದಿನವೇ ಪೊಲೀಸರೂ ಸಹ ಮಾನವೀಯತೆ ಮೇರೆದು ಇತರರಿಗೆ ಮಾದರಿಯಾಗಿದ್ದಾರೆ.
ಇದೇ ತಿಂಗಳ 6 ರಂದು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಟರ್ ಆಸ್ಪತ್ರೆಯಿಂದ ರಿಮಿ ರೆಡ್ಡಿ ಕಾಣೆಯಾಗಿದ್ದರು. ತಾಯಿಯ ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಹೋಗಿದ್ದ ರಿಮಿ ಅಡ್ಡಿ ತಾಯಿಗೆ ಚಿಕಿತ್ಸೆ ಆಗುತ್ತಿರುವಾಗಲೇ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಹೀಗಾಗಿ ಕೂಡಲೇ ಆಕೆಯ ಅಣ್ಣ ವಿವೇಕ್ ಅಡ್ಡಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಬಳಿಕ ಆಸ್ಪತ್ರೆ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರು, ಪರಿಶೀಲನೆ ವೇಳೆ ನಾಪತ್ತೆಯಾಗಿದ್ದ ರಿಮಿ ಅಡ್ಡಿ ಬೈಕ್ ನಲ್ಲಿ ಹೋಗೋದನ್ನು ಪತ್ತೆ ಹಚ್ಚಿದ್ದರು.
ಈ ವೇಳೆ ನಾಪತ್ತೆಯಾಗಿದ್ದ ಹುಡುಗಿ ವೀರಣ್ಣನಪಾಳ್ಯದಲ್ಲಿ ಬೈಕ್ ನಲ್ಲಿ ಇಳಿದಿರುವ ದೃಶ್ಯ ಸಿಸಿಟಿವಿಯಲ್ಲಿ ಲಭ್ಯವಾಗಿದೆ. ಆಶ್ರಮ, ಡಿಜೆಹಳ್ಳಿ, ಗೋವಿಂದಪುರ, ಕೆಜಿ ಹಳ್ಳಿ ಸುತ್ತಮುತ್ತ ಸುಮಾರು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದ ಪೊಲೀಸರು ಕೊನೆಗೂ ಕಾಣೆಯಾಗಿದ್ದ ಹುಡುಗಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ರಕ್ಷಾ ಬಂಧನ ಹಬ್ಬಕ್ಕೆ ಶುಭಾಶಯ: ಅಣ್ಣ- ತಂಗಿಯ ಸುಂದರ ಫೋಟೋ ಹಂಚಿಕೊಂಡ ರಾಹುಲ್ ಗಾಂಧಿ
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸುತ್ತಮುತ್ತ ಪರಿಶೀಲನೆ ನಡೆಸಿದ್ದ ಪೊಲೀಸರು ನಾಪತ್ತೆಯಾಗಿದ್ದ ರಿಮಿ ಅಡ್ಡಿಯನ್ನು ಇಂದು ಮಾಗಡಿ ಬಳಿ ಪತ್ತೆ ಮಾಡಿದ್ದಾರೆ. ನಂತರ ಠಾಣೆಗೆ ಕರೆಸಿ ಕೇಕ್ ಕತ್ತರಿಸಿ ಅಣ್ಣನ ಕೈಗೆ ರಾಖಿ ಕಟ್ಟಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ