BBMP: ಆದಾಯ ಹೆಚ್ಚಿಸಲು ಕರೆತಂದ ಮಾರ್ಷಲ್​ಗಳೇ ಈಗ ಬಿಬಿಎಂಪಿಗೆ ಹೊರೆ!

ಪ್ರತಿ ಮಾರ್ಷಲ್ಸ್ ಗೆ 25 ಸಾವಿರ ಸಂಬಳವನ್ನ ಫಿಕ್ಸ್ ಮಾಡಲಾಗಿದೆ. ಸದ್ಯ ಮಾರ್ಷಲ್ಸ್ ಪ್ರತಿ ತಿಂಗಳು  7 ಲಕ್ಷದಷ್ಟು ಶುಲ್ಕ ಮಾತ್ರ  ಸಂಗ್ರಹವಾಗುತ್ತಿದ್ದು, ಆದಾಯಕ್ಕಿಂತ ನಿರ್ವಹಣೆ ವೆಚ್ಚವೇ ಹೆಚ್ಚಾಗಿದೆ. 

ಮಾರ್ಸಲ್​

ಮಾರ್ಸಲ್​

  • Share this:
ಬೆಂಗಳೂರು (ಜು.30): ಕೊರೊನಾ (Corona) ಅವಧಿಯಲ್ಲಿ ಮಾಸ್ಕ್ (Mask) ದಂಡ ಹಾಕಿಸುವುದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ  ಮಾರ್ಷಲ್ಸ್ ಅಧಿಕಾರ ಅವಧಿ ಈಗಾಗಲೇ ಮುಗಿದಿದೆ. ಆದರೂ ಇನ್ನು ಬಿಬಿಎಂಪಿಯಲ್ಲಿಯೇ (BBMP) ಕೆಲಸ ಮಾಡ್ತಿರುವ ಕುರಿತಾಗಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಆದಾಯ ನಿರೀಕ್ಷೆಯಲ್ಲಿದ್ದ ಬಿಬಿಎಂಪಿಗೆ ಇವರಿಂದ ಭಾರೀ ನಿರಾಸೆಯಾಗಿದೆ. ಸದ್ಯ 437 ಮಾರ್ಷಲ್ಸ್ ಕೆಲಸ ಮಾಡುತ್ತಿದ್ದು, ಇವರ ನಿರ್ವಹಣೆಗೆ ಮಾಡುವುದಕ್ಕೆ ಬಿಬಿಎಂಪಿ ಪ್ರತಿತಿಂಗಳು ಒಂದು ಕೋಟಿಯಷ್ಟು ಹಣವನ್ನ ಖರ್ಚು ಮಾಡುತ್ತಿದೆ. ಸದ್ಯ ಪ್ಲಾಸ್ಟಿಕ್ ಬ್ಯಾನ್ ಹಾಗೂ ಮಾಸ್ಕ್ ಹಾಕುವುದು, ರಸ್ತೆಯಲ್ಲಿ ಕಸಹಾಕುವವರ ಮೇಲೆ ನಿಗಾ ಇಡುತ್ತಿದ್ದಾರೆ.

ಅವಧಿ ಮುಗಿದ್ರು ಕೆಲಸ ಮಾಡ್ತಿದ್ದಾರೆ ಮಾರ್ಷಲ್ಸ್ ಗಳು.!!

ಕೋರೋನಾ ಮಹಾಮಾರಿಯಿಂದಾಗಿ ಜನರು  ಹೆದರಿ ಎಲ್ಲರೂ ಮನೆಯಲ್ಲಿದ್ದಾಗಾ ಕೊರೋನಾ ವಾರಿಯರ್ಸ್ ಜೊತೆಗೆ ಕೆಲಸ ಮಾಡಿದವರು ಮಾರ್ಷಲ್ಸ್. ಇವರನ್ನು 2018ರಲ್ಲಿ ಬಿಬಿಎಂಪಿ ನೇಮಿಸಿಕೊಂಡಿತ್ತು. ಆ ವೇಳೆ ಜನರು ರಸ್ತೆಗಳಲ್ಲಿ  ಕಸ ಹಾಕುವ ಬ್ಲಾಕ್ ಸ್ಪಾಟ್ ಗಳನ್ನ ಗುರುತಿಸಿ ಜನರಿಗೆ ಫೈನ್ ಹಾಕುವ ಕೆಲಸವನ್ನ ಈ ಮಾರ್ಷಲ್ಸ್ ಮಾಡ್ತಿದ್ರು.

ತದನಂತರ ಕೊರೋನಾ ಬಂದಾಗ ಮೇಲೆಂತೂ ಮಾಸ್ಕ್ ಗೆ ಫೈನ್ ಹಾಕುವುದು, ಕೋವಿಡ್ ಸೆಂಟರ್ ಗಳನ್ನ ನೋಡಿಕೊಳ್ಳುವುದು, ಮಾರ್ಕೆಟ್ ಗಳಲ್ಲಿ  ಜನಸಂದಣಿ ಒಂದೆಡೆ ಸೇರದಂತೆ ನೋಡಿಕೊಳ್ಳುವುದರ ಜೊತೆಗೆ ಇಂದಿರಾ ಕ್ಯಾಂಟೀನ್ ಗಳನ್ನ ಸಹ ನೋಡಿಕೊಳ್ಳುವ ಜವಾಬ್ದಾರಿಯನ್ನ ಸಹ ನಿಭಾಯಿಸುತ್ತಿದ್ರು. ಆದ್ರೆ ಇವರ ಅಧಿಕಾರವಧಿ ಮುಗಿದು ಹಲವು ತಿಂಗಳುಗಳೇ ಕಳೆದ್ರು ಬಿಬಿಎಂಪಿ ಮಾತ್ರ ಇನ್ನು ಮುಂದುವರಿಸಿಕೊಂಡು ಹೋಗ್ತಿದೆ.

ಮಾರ್ಷಲ್ಸ್ ಗಳನ್ನ ನಿರ್ವಹಣೆಗೆ ಪ್ರತಿ ತಿಂಗಳು ಬಿಬಿಎಂಪಿಗೆ ಒಂದು ಕೋಟಿ ವೆಚ್ಚ.!!

ಹೌದು, ಬಿಬಿಎಂಪಿ ಮಾರ್ಷಲ್ಸ್ ಗಳನ್ನ ಒಂದು ವರ್ಷಕ್ಕೆ ಸೀಮಿತವಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಇದೀಗ ಅವರ ಅಧಿಕಾರದ ಅವಧಿ ಮುಗಿದಿದ್ರು, ಮಾರ್ಷಲ್ಸ್ ಕೆಲಸ ಮುಂದುವರಿಕೆಯಾಗಿದೆ. ಸದ್ಯ 437 ಮಾರ್ಷಲ್ಸ್ ಕೆಲಸ ಮಾಡುತ್ತಿದ್ದು, ಇವರ ನಿರ್ವಹಣೆಗೆ ಮಾಡುವುದಕ್ಕೆ ಬಿಬಿಎಂಪಿ ಪ್ರತಿತಿಂಗಳು ಒಂದು ಕೋಟಿಯಷ್ಟು ಹಣವನ್ನ ಖರ್ಚು ಮಾಡುತ್ತಿದೆ. ಸದ್ಯ ಪ್ಲಾಸ್ಟಿಕ್ ಬ್ಯಾನ್ ಹಾಗೂ ಮಾಸ್ಕ್ ಹಾಕುವುದು, ರಸ್ತೆಯಲ್ಲಿ ಕಸಹಾಕುವವರ ಮೇಲೆ ನಿಗಾ ಇಡುತ್ತಿದ್ದಾರೆ.

ಪ್ರತಿ ಮಾರ್ಷಲ್ಸ್ ಗೆ 25 ಸಾವಿರ ಸಂಬಳವನ್ನ ಫಿಕ್ಸ್ ಮಾಡಲಾಗಿದೆ. ಸದ್ಯ ಮಾರ್ಷಲ್ಸ್ ಪ್ರತಿ ತಿಂಗಳು  7 ಲಕ್ಷದಷ್ಟು ಶುಲ್ಕ ಮಾತ್ರ  ಸಂಗ್ರಹವಾಗುತ್ತಿದ್ದು, ಆದಾಯಕ್ಕಿಂತ ನಿರ್ವಹಣೆ ವೆಚ್ಚವೇ ಹೆಚ್ಚಾಗಿದೆ.  ಹೀಗಿದ್ರು ಬಿಬಿಎಂಪಿ ಒಂದು ಕೋಟಿಯಷ್ಟು ದುಂದುವೆಚ್ಚ ಮಾಡಿಕೊಂಡು ಸಂಸ್ಥೆಯಲ್ಲಿಯೇ ಉಳಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಬಿಬಿಎಂಪಿ ಪಾಲಿಗೆ ಬಿಳಿಯಾನೆಗಳಾಗ್ತಿದ್ದಾರೆ ಫೀಲ್ಡ್ ಮಾರ್ಷಲ್ಸ್.!!

ಈ ಕುರಿತಾಗಿ ಬಿಬಿಎಂಪಿ ಜಂಟಿ ಆಯುಕ್ತ ಪರಶುರಾಮ್ ಅವರನ್ನ ಪ್ರಶ್ನಿಸಿದ್ದಕ್ಕೆ ನಾವು ಮಾರ್ಷಲ್ಸ್ ಗಳನ್ನ ಶುಲ್ಕಕ್ಕೆ ಮಾತ್ರ ನೇಮಿಸಿಕೊಂಡಿಲ್ಲ. ಅವರುಗಳನ್ನ ನೇಮಿಸಿಕೊಂಡ ಮೇಲೆ ಕಸ ಹಾಕುವ ಬ್ಲಾಕ್ ಸ್ಮಾಟ್ ಕಡಿಮೆಯಾಗಿವೆ. ಈ ಹಿಂದೆ 150 ರಷ್ಟು ಕಸ ಹಾಕುವ ಬ್ಲಾಕ್ ಸ್ಪಾಟ್ ಗಳಿದ್ವು.‌ ಇದೀಗಾ 70ಕ್ಕೆ ಇಳಿದಿದೆ. ಶುಭ್ರ ಬೆಂಗಳೂರು ನಿರ್ಮಾಣ ಮಾಡುವುದುಕ್ಕೆ ಮಾರ್ಷಲ್ಸ್ ಪಾತ್ರ ತುಂಬಾ ಇದೆ‌. ಸಧ್ಯ ಅವರನ್ನು ನೇಮಿಸಿಕೊಂಡಿರುವ ಅವಧಿ ಮುಗಿದಿದೆ.

ಆದರೆ ಸರ್ಕಾರದಿಂದ  ಅವರನ್ನು  ಮುಂದುವರಿಸುವ ಬಗ್ಗೆ ಆದೇಶ  ಪಡೆದುಕೊಂಡಿದ್ದು, ಬಿಬಿಎಂಪಿ ಲೆವೆಲ್ ನಲ್ಲಿ ಆರ್ಡಾರ್ ಮಾಡಿಕೊಂಡು ಮಾರ್ಷಲ್ಸ್ ಗಳ ಕೆಲಸವನ್ನ ಮುಂದುವರಿಸಿದ್ದೇವೆ ಎಂದರು. ಒಟ್ಟಾರೆ ಮಾರ್ಷಲ್ಸ್ ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಶುರುಮಾಡಿ ಐದು ವರ್ಷಗಳು ಕೆಳೆಯುತ್ತಾ ಬಂದಿದೆ. ಆದರೆ ಕಸ ಮುಕ್ತ ನಗರವನ್ನಾಗಿ ಮಾಡುವಲ್ಲಿ ಮಾರ್ಷಲ್ಸ್ ವಿಫಲರಾಗುತ್ತಲೇ ಇದ್ದು, ಇತ್ತ ಬಿಬಿಎಂಪಿ ಖಜಾನೆಯೂ ಬರಿದಾಗ್ತಿದೆ.
Published by:Pavana HS
First published: