Marriage High Drama: ಇನ್ನೇನು ತಾಳಿ ಕಟ್ಬೇಕು, ಅಷ್ಟರಲ್ಲಿ ಮದುವೆನೇ ಕ್ಯಾನ್ಸಲ್ ಆಯ್ತು!

ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕಿತ್ತು. ಅಷ್ಟರಲ್ಲಿ ವಧು ಏಕಾಏಕಿ ಮಂಟಪದಲ್ಲೇ ಕುಸಿದು ಬಿದ್ದಿದ್ದಾಳೆ. ಈ ವೇಳೆ ಕಂಗಾಲಾದ ಕುಟುಂಬಸ್ಥರು ಆಕೆಯನ್ನು ಮೇಲಕ್ಕೆತ್ತಿ ಸಂತೈಸಿದ್ದಾರೆ. ಆಗ ವಧು ಬೇರೆಯದ್ದೇ ಕಥೆ ಹೇಳುವುದಕ್ಕೆ ಶುರು ಮಾಡಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು: ಮದುವೆ (Marriage) ಸ್ವರ್ಗದಲ್ಲಿ (Heaven) ನಿಶ್ಚಯವಾಗುತ್ತೆ ಅಂತಾರೆ. ಆದ್ರೆ ಭೂಮಿಯಲ್ಲಿ ನಿಶ್ಚಯವಾದ ಅದೆಷ್ಟೋ ಮದುವೆಗಳು ಮುರಿದು ಬೀಳುತ್ತವೆ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ಅದೆಷ್ಟೋ ಮದುವೆಗಳು ಮುರಿದು ಬಿದ್ದ ಉದಾಹರಣೆಗಳಿವೆ. ಈಗ ಮೈಸೂರಿನಲ್ಲಿ (Mysuru) ನಡೆದಿದ್ದೂ ಅಂಥದ್ದೇ ಪ್ರಕರಣ. ಮದುವೆ ಮನೆಯಲ್ಲಿ ತಾಳಿ ಕಟ್ಟುವ ವೇಳೆ ದೊಡ್ಡ ಹೈಡ್ರಾಮಾವೇ (High Drama) ನಡೆದಿದೆ. ಮಂಗಳಸೂತ್ರ ಕಟ್ಟಿಸಿಕೊಳ್ಳಬೇಕಿದ್ದ ವಧು (Bride) ಇದ್ದಕ್ಕಿದ್ದಂತೆ ತಲೆ ತಿರುಗಿ ಬಿದ್ದಿದ್ದಾಳೆ. ತಾಳಿ ಕಟ್ಟಬೇಕಿದ್ದ ವರ (Groom) ಗಾಬರಿ ಗೊಂಡಿದ್ದಾನೆ.  ಇದು ನಾಟಕವೋ (Drama), ನಿಜವೋ (Real) ತಿಳಿಯದೇ ಎರಡೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಆತಂಕ ಶುರುವಾಗಿದೆ. ಕೊನೆಗೆ ಏನಾಯ್ತು ಅಂತ ನೀವೇ ಓದಿ…

ಮೈಸೂರಿನಲ್ಲಿ ಮದುವೆ ಮನೆಯಲ್ಲಿ ನಡೀತು ಹೈಡ್ರಾಮಾ

ಮೈಸೂರು ನಗರದ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಇಂದು ಒಂದು ಮದುವೆ ನಿಶ್ಚಯವಾಗಿತ್ತು.  ಹುಡುಗಿಯೊಬ್ಬಳು ಎಚ್‌ಡಿ ಕೋಟೆ ತಾಲೂಕಿನ ಗ್ರಾಮವೊಂದರ ಯುವಕನ ಕೈ ಹಿಡಿಯಬೇಕಿತ್ತು. ಮದುವೆಗೆ ಕಲ್ಯಾಣ ಮಂಟಪ ಸಜ್ಜಾಗಿದ್ದು, ವಧು, ವರನ ಸಮೇತ ಎರಡೂ ಕಡೆ ಕುಟುಂಬಸ್ಥರು, ನೆಂಟರು, ಅತಿಥಿಗಳು, ಸ್ನೇಹಿತರೆಲ್ಲ ಬಂದು ಸೇರಿದ್ದರು. ಆದರೆ ಮದುಮಗನು ಮದುಮಗಳಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹೈಡ್ರಾಮನೇ ನಡೆದಿದೆ.

ತಾಳಿ ಕಟ್ಟುವ ವೇಳೆ ಕುಸಿದು ಬಿದ್ದ ವಧು!

ಹೌದು, ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕಿತ್ತು. ಅಷ್ಟರಲ್ಲಿ ವಧು ಏಕಾಏಕಿ ಮಂಟಪದಲ್ಲೇ ಕುಸಿದು ಬಿದ್ದಿದ್ದಾಳೆ. ಈ ವೇಳೆ ಕಂಗಾಲಾದ ಕುಟುಂಬಸ್ಥರು ಆಕೆಯನ್ನು ಮೇಲಕ್ಕೆತ್ತಿ ಸಂತೈಸಿದ್ದಾರೆ. ಆಗ ವಧು ಬೇರೆಯದ್ದೇ ಕಥೆ ಹೇಳುವುದಕ್ಕೆ ಶುರು ಮಾಡಿದ್ದಾಳೆ.

ಇದನ್ನೂ ಓದಿ: Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!

ಪಕ್ಕದ ಮನೆ ಹುಡುಗನನ್ನೇ ಪ್ರೀತಿಸ್ತಿದ್ದ ವಧು

ಅಸಲಿಗೆ ಹುಡುಗಿ ತಲೆ ತಿರುಗಿ ಬಿದ್ದಿಲ್ಲ, ಬದಲಾಗಿ ಬಿದ್ದಂತೆ ನಾಟಕ ಮಾಡಿದ್ದಾಳೆ. ಕಾರಣ ಆಕೆಯ ಪ್ರೀತಿ. ಹೌದು, ಆಕೆ ಈಗಾಗಲೇ ಪಕ್ಕದ ಮನೆಯ ಯುವಕನ್ನು ಪ್ರೀತಿಸುತ್ತಿದ್ದಳಂತೆ. ನೀನು ಬೇರೆ ಮದುವೆ ಆಗಬೇಡ ಅಂತ ಆತ ಮೆಸೇಜ್ ಮಾಡುತ್ತಿದ್ದನಂತೆ. ಇಷ್ಟು ದಿನ ಆತನ ಮೆಸೇಜ್ ನೋಡಿದರೂ ಹುಡುಗಿ ಸುಮ್ಮನಿದ್ದಾಳೆ. ಆದರೆ ಕೊನೆ ಕ್ಷಣದಲ್ಲಿ ಅದೇನಾಯ್ತೋ ಗೊತ್ತಿಲ್ಲ, ಮದುವೆ ಮಂಟಪದಲ್ಲೇ ಡ್ರಾಮಾ ಮಾಡಿದ್ದಾಳೆ. ಹೀಗಾಗಿ ನನಗೆ ಈ ಮದುವೆ ಇಷ್ಟ ಇಲ್ಲ, ನಾನು ಆತನನ್ನೇ ಮದ್ವೆಯಾಗ್ತೇನೆ ಎಂದಿದ್ದಾಳೆ.

ವಧುವಿನ ಕುಟುಂಬಸ್ಥರ ವಿರುದ್ಧ ವರನ ಮನೆಯವರ ಆಕ್ರೋಶ

ವಧುವಿನ ವರ್ತನೆಗೆ ವರನ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದೇವೆ,  ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದೇವೆ ಅಂತ ಹೇಳಿದ್ದಾರೆ. ಹೀಗಾಗಿ ವಧುವನ್ನು, ಆಕೆಯ ಕುಟುಂಬಸ್ಥರನ್ನು ಕೆ.ಆರ್. ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Couple Suicide: ಕಾರ್​ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಯುವಜೋಡಿ

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿದ ಪೊಲೀಸರು

ಠಾಣೆಯಲ್ಲಿ ಪೊಲೀಸರು ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿದ್ದಾರೆ. ವರನ ಕಡೆಯವರು ವಧುಗೆ ನೀಡಿದ್ದ ಆಭರಣವನ್ನು ವಾಪಸ್ ಮಾಡಿದ್ದಾರೆ. ಆಕೆಯ ಪೋಷಕರು ಠಾಣೆಯಲ್ಲೇ ನಷ್ಟ ಭರಿಸಿಕೊಟ್ಟಿದ್ದಾರೆ. ಹೀಗಾಗಿ ಖರ್ಚು ಮಾಡಿದ ಹಣ ವಾಪಸ್ ಪಡೆದು ಹೆಚ್.ಡಿ ಕೋಟೆಗೆ ವರನ ಸಮೇತ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ತೆರಳಿದ್ದಾರೆ. ಇತ್ತ ಹುಡುಗಿಯ ಸಹ ಪೋಷಕರ ಜೊತೆ ಆಟೋದಲ್ಲಿ ಮನೆಗೆ ವಾಪಸ್ ಆಗಿದ್ದಾಳೆ. ಇನ್ನು ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
Published by:Annappa Achari
First published: