Shocking News: ತನ್ನ 'ಆ ಅಂಗ'ವನ್ನೇ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವೃದ್ಧ! ಕಾರಣ ಕೇಳಿದ್ರೆ ಶಾಕ್

ಆತ್ಮಹತ್ಯೆಗೆ ನೂರಾರು ಕಾರಣ ಇರುತ್ತೆ. ಆತ್ಮಹತ್ಯೆ ಮಾಡಿಕೊಳ್ಳುವವರೂ ನೂರಾರು ದಾರಿ ಹುಡುಕಿಕೊಳ್ತಾರೆ. ಆದರೆ ಈ ವೃದ್ಧ ಹುಡುಕಿದ್ದು ಮಾತ್ರ ಭಯಾನಕ ದಾರಿ! ಅಷ್ಟಕ್ಕೂ ಆತ ಹೀಗೆ ನರಳುತ್ತಾ ಆತ್ಮಹತ್ಯೆ ಮಾಡಿಕೊಳ್ಳೋಕೆ ಏನು ಕಾರಣ ಅಂತ ತಿಳಿದ್ರೆ ನೀವೇ ಶಾಕ್ ಆಗ್ತೀರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು: ಬದುಕಿದ್ದಾಗಂತೂ ನರಳಾಡಿದ್ವಿ, ಕೊನೆ ಪಕ್ಷ ಸಾಯೋವಾಗಲೂದರೂ ನೆಮ್ಮದಿಯಾಗಿ ಸಾಯಬೇಕು ಅನ್ನೋದು ಎಲ್ಲರ ಮಾತು. ಆದ್ರೆ ಕೆಲವರು ಸಾಯುವಾಗಲೂ ನರಳಾಡುತ್ತಾ ಸಾಯೋ ಪರಿಸ್ಥಿತಿ ತಂದುಕೊಳ್ಳುತ್ತಾರೆ. ಇಲ್ಲಿ ಆಗಿದ್ದೂ ಅದೆೇ. ಈ ವೃದ್ಧ (Old Men) ಆತ್ಮಹತ್ಯೆ (Suicide) ಮಾಡಿಕೊಳ್ಳಬೇಕು ಅಂತ ನಿರ್ಧಾರ ಮಾಡಿದ್ದಾನೆ. ಆದರೆ ಆತ ಸಾಯೋದಕ್ಕೆ ಅಂತ ಆಯ್ಕೆ ಮಾಡಿಕೊಂಡ ದಾರಿ ಮಾತ್ರ ಭಯಾನಕವಾಗಿತ್ತು (Horrible). ಈತ ಆತ್ಮಹತ್ಯೆ ಮಾಡಿಕೊಂಡ ರೀತಿ, ಆತ್ಮಹತ್ಯೆಗೆ ಕಾರಣ (Reason) ಇವನ್ನೆಲ್ಲ ತಿಳಿದು, ಬರೀ ರಾಯಚೂರಿನ (Raichuru) ಜನರಷ್ಟೇ ಅಲ್ಲ, ಇಡೀ ರಾಜ್ಯದ ಜನರೇ ಬೆಚ್ಟಿ ಬಿದ್ದಿದ್ದಾರೆ.

ರಾಯಚೂರಿನ ಮಸ್ಕಿಯಲ್ಲಿ ನಡೆಯಿತು ಭಯಾನಕ ಘಟನೆ

ಹೌದು, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಇಳಕಲ್ ಗ್ರಾಮದಲ್ಲಿ ಇಂಥದ್ದೊಂದು ಭಯಾನಕ ಘಟನೆ ನಡೆದಿದೆ. ಅಲ್ಲಿ ಸುಮಾರು 54 ವರ್ಷದ ಗ್ಯಾನಪ್ಪ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಇದು ಅಷ್ಟೊಂದು ದೊಡ್ಡ ಸುದ್ದಿ ಮಾಡುತ್ತಿರಲಿಲ್ಲ. ಆದರೆ ಈ ಗ್ಯಾನಪ್ಪ ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡು, ನರಳಿ ನರಳಿ ಸತ್ತಿದ್ದಾರೆ.

 ತನ್ನ ವೃಷಣವನ್ನೇ ಕುಯ್ದುಕೊಂಡು ಆತ್ಮಹತ್ಯೆ

 ಇದು ನಿಜಕ್ಕೂ ಆಘಾತಕಾರಿ ವಿಚಾರ. ಈ ಗ್ಯಾನಪ್ಪ, ಆತ್ಮಹತ್ಯೆ ಮಾಡಿಕೊಳ್ಳಲೇ ಬೇಕು ಅಂತ ನಿರ್ಧಾರ ಮಾಡಿದ್ದಾನೆ. ಸಾಯುವುದು ಹೇಗೆ ಅಂತ ಯೋಚಿಸಿದ್ದಾನೆ. ಬಳಿಕ ಒಂದು ಭಯಾನಕ ನಿರ್ಧಾರ ತೆಗೆದುಕೊಂಡಿದ್ದಾನೆ. ಕತ್ತರಿಯಿಂದ ತನ್ನ ವೃಷಣವನ್ನೇ ಕತ್ತರಿಸಿ ಕೊಂಡಿದ್ದಾನೆ. ನೋವಿನಲ್ಲೇ ನರಳುತ್ತಾ ನರಳುತ್ತಾ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: Kalaburagi: ಪಲ್ಲಂಗದಾಸೆಗಾಗಿ ಪ್ರಾಣ ಕಳೆದುಕೊಂಡ ಮಹಿಳೆ: ವಿದೇಶದಲ್ಲಿ ಪತಿ, ಇಲ್ಲಿ ಮತ್ತೊಬ್ಬನ ಜೊತೆ ಸಂಬಂಧ

 ನರಳಾಡುತ್ತಿದ್ದ ಗ್ಯಾನಪ್ಪ ಆಸ್ಪತ್ರೆಗೆ ಸೇರುವ ಮುನ್ನವೇ ಸಾವು

 ಗ್ಯಾನಪ್ಪ ತನ್ನ ವೃಷಣಗಳನ್ನು ಕತ್ತರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಆತನ ಕೂಗಾಟ, ನರಳಾಟ ಕೇಳಿ ಅವರ ಸೋದರಳಿಯ ಮಾಣಿಕಪ್ಪ ಎಂಬುವರು ಸ್ಥಳಕ್ಕೆ ಬಂದಿದ್ದಾರೆ. ಆಗ ಅಲ್ಲಿ ನಡೆದಿದ್ದು ನೋಡಿ ಆಘಾತಗೊಂಡಿದ್ದಾರೆ. ಕೂಡಲೇ ಅಕ್ಕಪಕ್ಕದವರನ್ನು ಕರೆದಿದ್ದಾರೆ. ಎಲ್ಲರೂ ಸೇರಿ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗ್ಯಾನಪ್ಪ ಕೊನೆಯುಸಿರೆಳೆದಿದ್ದರು.

 ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಗ್ಯಾನಪ್ಪ

ಈ ಗ್ಯಾನಪ್ಪನಿಗೆ ಮದುವೆಯಾಗಿ, ಹೆಂಡತಿ ಜೊತೆ ಇದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಬ್ಬರನ್ನೂ ಮದುವೆ ಮಾಡಿ ಕೊಡಲಾಗಿತ್ತು. ಈ ಗ್ಯಾನಪ್ಪ ಹನುಮಪ್ಪ ಗ್ಯಾಂಗ್ರಿನ್ ನಿಂದ ಬಳಲುತ್ತಾ ಇದ್ದರು. ಕಳೆದ ಒಂದೆರಡು ವರ್ಷಗಳಿಂದ ಅವರ ಕಾಲುಗಳು ಸೋಂಕಿಗೆ ಒಳಗಾಗಿದ್ದವು. ಹೀಗಾಗಿ ಹೆಜ್ಜೆ ಎತ್ತಿಡಲೂ ಆಗದೇ ನರಳಾಡುತ್ತಿದ್ದರು.

 ಗ್ಯಾಂಗ್ರಿನ್‌ನಿಂದಾಗಿಯೇ ಜೀವನದಲ್ಲಿ ಜಿಗುಪ್ಸೆ

 ಕಳೆದ 2 ವರ್ಷಗಳಿಂದ ಗ್ಯಾನಪ್ಪ ಕಾಲಿಗೆ ಗಾಯವಾಗಿತ್ತು. ಅದು ಗ್ಯಾಂಗ್ರೀನ್‌ಗೆ ತಿರುಗಿ, ಎದ್ದು ಓಡಾಡಲೂ ಆಗದಂತ ಪರಿಸ್ಥಿತಿ ಉಂಟಾಗಿತ್ತು. ಇದೇ ಕಾರಣಕ್ಕೆ ಗ್ಯಾನಪ್ಪನಿಗೆ ಜೀವನದಲ್ಲಿ ಜಿಗುಪ್ಸೆ ಬಂದಿತ್ತು. ಹೇಗಾದರೂ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಪ್ರಯತ್ನ ಮಾಡುತ್ತಲೇ ಇದ್ದರು. ಆದರೆ ನಿನ್ನೆ ಕತ್ತರಿಯಿಂದ ತನ್ನ ವೃಷಣವನ್ನೇ ಕತ್ತರಿಸಿಕೊಂಡು, ಭಯಾನಕವಾಗಿ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: Sanjjanaa Galraniಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ: ಆ್ಯಡಂ ಬಿದ್ದಪ್ಪ ಪೊಲೀಸರ ವಶಕ್ಕೆ

 ಕವಿತಾಳ ಠಾಣೆ ಪೊಲೀಸರಿಂದ ಮುಂದುವರೆದ ತನಿಖೆ

ಇನ್ನು ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗ್ರಾಮಕ್ಕೆ ಬಂದು, ಪರಿಶೀಲನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ.

ಇನ್ನು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಮೃತನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬಗ್ಗೆ ತಿಳಿದ ಸುತ್ತಮುತ್ತಲ ಜನರು ಆಘಾತಕ್ಕೆ ಒಳಗಾಗಿದ್ದಾರೆ.
Published by:Annappa Achari
First published: