• Home
 • »
 • News
 • »
 • state
 • »
 • Kempegowda Statue: ಒಂದೇ ಕುಟುಂಬದ ಮೂರು ತಲೆಮಾರುಗಳು, 200 ಶಿಲ್ಪಿಗಳ 9 ತಿಂಗಳ ಪರಿಶ್ರಮ: 108ಅಡಿ ಎತ್ತರದ ನಾಡಪ್ರಭುವಿನ ಪ್ರತಿಮೆ ನಿರ್ಮಾಣವಾಗಿದ್ದು ಹೀಗೆ!

Kempegowda Statue: ಒಂದೇ ಕುಟುಂಬದ ಮೂರು ತಲೆಮಾರುಗಳು, 200 ಶಿಲ್ಪಿಗಳ 9 ತಿಂಗಳ ಪರಿಶ್ರಮ: 108ಅಡಿ ಎತ್ತರದ ನಾಡಪ್ರಭುವಿನ ಪ್ರತಿಮೆ ನಿರ್ಮಾಣವಾಗಿದ್ದು ಹೀಗೆ!

ಸಮೃದ್ಧತೆಯ ಪ್ರತೀಕ ಎನ್ನಲಾಗುವ ಸ್ಟ್ಯಾಚ್ಯೂ ಆಫ್ ಪ್ರಾಸ್ಪೆರಿಟಿ: vನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ

ಸಮೃದ್ಧತೆಯ ಪ್ರತೀಕ ಎನ್ನಲಾಗುವ ಸ್ಟ್ಯಾಚ್ಯೂ ಆಫ್ ಪ್ರಾಸ್ಪೆರಿಟಿ: vನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ

ಈ ಒಟ್ಟಾರೆ ಪ್ರತಿಮೆಯ ವಿನ್ಯಾಸ, ಅದರ ಕೆತ್ತನೆ ಹಾಗೂ ಇದರ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಮಾತುಕತೆಗಳನ್ನಾಡುವಂತಹ ಪ್ರಾರಂಭದಿಂದ ಅಂತ್ಯದವರೆಗಿನ ಪ್ರಕ್ರಿಯೆಯಲ್ಲಿ ಒಂದೇ ಕುಟುಂಬದ ಮೂರು ತಲೆಮಾರುಗಳು ಭಾಗಿಯಾಗಿರುವುದು ಬಲು ವಿಶೇಷ ಎನಿಸಿದೆ.

 • Trending Desk
 • Last Updated :
 • Bangalore [Bangalore], India
 • Share this:

  ಇಂದು ಅಂದರೆ ಶುಕ್ರವಾರದಂದು ಬೆಂಗಳೂರು ನಗರವು ಪ್ರಧಾನಿ (Prime Minister Narendra Modi) ಅವರನ್ನು ಸ್ವಾಗತಿಸಲು ಸಜ್ಜಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda Interntional Airport) ಸಮೃದ್ಧತೆಯ ಪ್ರತೀಕ ಎನ್ನಲಾಗುವ ಸ್ಟ್ಯಾಚ್ಯೂ ಆಫ್ ಪ್ರಾಸ್ಪೆರಿಟಿಯನ್ನು (Statue of Prosperity) ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ಇನ್ನು, ಈ ಪ್ರತಿಮೆಯ ಬಗ್ಗೆ ಹೇಳುವುದಾದರೆ ಒಂದೇ ಕುಟುಂಬದ ಮೂರು ತಲೆಮಾರಿನ ಶಿಲ್ಪಿಗಳು ಹಾಗೂ ಇತರೆ 200 ಶಿಲ್ಪಿಗಳು ಸತತ ಒಂಭತ್ತು ತಿಂಗಳ ಕಾಲ ಇದರ ಕೆತ್ತನೆಯಲ್ಲಿ ತೊಡಗಿದ್ದು ವಿಶೇಷ.


  ಈ ಒಟ್ಟಾರೆ ಪ್ರತಿಮೆಯ ವಿನ್ಯಾಸ, ಅದರ ಕೆತ್ತನೆ ಹಾಗೂ ಇದರ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಮಾತುಕತೆಗಳನ್ನಾಡುವಂತಹ ಪ್ರಾರಂಭದಿಂದ ಅಂತ್ಯದವರೆಗಿನ ಪ್ರಕ್ರಿಯೆಯಲ್ಲಿ ಒಂದೇ ಕುಟುಂಬದ ಮೂರು ತಲೆಮಾರುಗಳು ಭಾಗಿಯಾಗಿರುವುದು ಬಲು ವಿಶೇಷ ಎನಿಸಿದೆ.


  ಇದನ್ನೂ ಓದಿ: Bengaluru: ಬೆಂಗಳೂರು ಉದ್ಯಾನ ನಗರಿ ಎಂದು ಮತ್ತೆ ಸಾಬೀತಾಯ್ತು ನೋಡಿ!


  ಹೌದು, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ರಾಮ್ ವಿ ಸುತಾರ್ ಅವರು ಪ್ರತಿಮೆ ಕಾಣುವ ಬಗೆ, ಪರಿಕಲ್ಪನೆಯನ್ನು ಅಂತಿಮಗೊಳಿಸಿದರೆ ಅವರ ಸತತ ಮೇಲ್ವಿಚಾರಣೆಯಲ್ಲಿ ಪ್ರತಿಮೆಯ ಕೆತ್ತನೆ ಅಥವಾ ನಿರ್ಮಾಣದ ಕೆಲಸದ ಜವಾಬ್ದಾರಿಯನ್ನು ಅವರ ಸುಪುತ್ರರಾದ ಅನೀಲ್ ಸುತಾರ್ ಅವರು ನಿರ್ವಹಿಸಿದ್ದಾರೆ. ಇನ್ನು, ಇದರ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಸಹಯೋಗ ನಡೆಸಿಕೊಂಡು ಹಾಗೂ ಅಂತಿಮವಾಗಿ ಅದರ ಪ್ರತಿಷ್ಠಾಪನೆಯನ್ನು ಮೊಮ್ಮಗನಾದ ಸಮೀರ್ ಸುತಾರ್ ನಿರ್ವಹಿಸುವುದರ ಮೂಲಕ ಒಂದೇ ಕುಟುಂಬದ ಮೂರು ತಲೆಮಾರುಗಳು ಇದರಲ್ಲಿ ಭಾಗಿಯಾದಂತಾಗಿದೆ.


  ಸುತಾರ್ ಕುಟುಂಬ


  ಸುತಾರ್ ಕುಟುಂಬವು ಕೇವಲ ಈಗ ಅನಾವರಣಗೊಳ್ಳಲಿರುವ ಪ್ರತಿಮೆ ಮಾತ್ರವಲ್ಲದೆ ಗುಜರಾತಿನ ನರ್ಮದಾ ನದಿ ತಟದಲ್ಲಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಏಕತಾ ಪ್ರತಿಮೆಯ ನಿರ್ಮಾಣ ಹಾಗೂ ಬೆಂಗಳೂರಿನ ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯದಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ ನಿರ್ಮಾಣದಲ್ಲೂ ಭಾಗಿಯಾಗಿ ತಮ್ಮ ಕೌಶಲ್ಯ ಹಾಗೂ ಪ್ರತಿಭೆಯನ್ನು ಮೆರೆದಿದ್ದಾರೆ.


  ಈ ಸಂದರ್ಭದಲ್ಲಿ ಸಮೀರ್ ಸುತಾರ್ ಅವರು ಸಮೃದ್ಧಿಯ ಪ್ರತೀಕವಾದ ಕೆಂಪೇಗೌಡ ಅವರ ಪ್ರತಿಮೆಯ ತಯಾರಿ, ಪೂರ್ವಸಿದ್ಧತೆ ಸೇರಿದಂತೆ ಅದರ ಸಮಗ್ರ ವಿವರಗಳನ್ನು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.


  ಹೇಗಿತ್ತು ಕೆಂಪೇಗೌಡ ಅವರ ಪ್ರತಿಮೆ ತಯಾರಿ?


  ಪ್ರಸ್ತುತ ಅನಾವರಣಗೊಳ್ಳಲಿರುವ ಕೆಂಪೇಗೌಡರ ಪ್ರತಿಮೆಯ ತಯಾರಿಗಾಗಿ ಹಲವು ಘಟ್ಟಗಳಲ್ಲಿ ಸತತ ಒಂಭತ್ತು ತಿಂಗಳುಗಳ ಕಾಲ ಶ್ರಮವಹಿಸಿ ದುಡಿಯಲಾಗಿದೆ. ನವೆಂಬರ್ 2021 ರಲ್ಲಿ ಪ್ರಾರಂಭವಾದ ಈ ಪ್ರತಿಮೆಯ ಕೆಲಸ ಅಂತ್ಯವಾಗಿದ್ದು 2022ರ ಜುಲೈ ತಿಂಗಳಿನಲ್ಲಿ. ಸುತಾರ್ ಹೇಳುವಂತೆ ಮೊದಲಿಗೆ ಬೆಂಗಳೂರು ದೊರೆ ಕೆಂಪೇಗೌಡರ ಬಗ್ಗೆ ವಿಸ್ತೃತವಾಗಿ ಸಂಶೋಧನೆ ನಡೆಸಿ ಅವರ ಸಮರ್ಪಕವಾದ ರೇಖಾಚಿತ್ರವನ್ನು ತಯಾರಿಸಲಾಯಿತು. ತದನಂತರ ನೋಯ್ಡಾದಲ್ಲಿರುವ ಸ್ಟುಡಿಯೋದಲ್ಲಿ ಮೊದಲಿಗೆ ಮೂರು ಅಡಿಗಳ ಮಾದರಿ ಪ್ರತಿಮೆಯನ್ನು ರಚಿಸಲಾಯಿತು.


  ಮತ್ತೆ ಹತ್ತು ಅಡಿಗಳ ಮಾದರಿಯನ್ನು ರಚಿಸಿ ಅಂತಿಮ


  ಆನಂತರ ಮತ್ತೆ ಹತ್ತು ಅಡಿಗಳ ಮಾದರಿಯನ್ನು ರಚಿಸಿ ಅಂತಿಮಗೊಳಿಸಲಾಯಿತು. ಒಂದೊಮ್ಮೆ ಪ್ರತಿಮೆಯ ರೂಪ ಅಂತಿಮವಾದ ಮೇಲೆ ಅದಕ್ಕಾಗಿ ಬೇಕಾದಂತಹ ಕಂಚು ಹಾಗೂ ಉಕ್ಕಿನ ಭಾಗಗಳ ಮೌಲ್ಡಿಂಗ್ ಗಳನ್ನ್ನು ಘಾಜಿಯಾಬಾದಿನ ಹತ್ತು ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಯಿತು. ಹೀಗೆ ತಯಾರುಗೊಂಡ ವಿವಿಧ ಬಿಡಿ ಭಾಗಗಳನ್ನು ಟ್ರಕ್ಕಿನಲ್ಲಿ ಶೇಖರಿಸಿ ಸುರಕ್ಷಿತವಾಗಿ ಬೆಂಗಳೂರಿಗೆ ತಂದು ಇಲ್ಲಿ ಅಂತಿಮವಾಗಿ ಜೋಡಿಸಲಾಯಿತು. ಈ ರೀತಿಯಾಗಿ ಕೆಂಪೇಗೌಡರ ಸ್ಟ್ಯಾಚ್ಯೂ ಆಫ್ ಪ್ರಾಸ್ಪೆರಿಟಿ ಸಿದ್ಧಗೊಂಡಿತು.


  ಪ್ರತಿಮೆಯ ತಯಾರಿಯಲ್ಲಿ ಏನಾದರೂ ಅಡೆ-ತಡೆಗಳು ಉಂಟಾಗಿದ್ದವೆ?


  ಈ ಬಗ್ಗೆ ಸುತಾರ್ ಕುಟುಂಬ ಹೇಳುವಂತೆ, ಕೆಂಪೇಗೌಡರ ಬಗ್ಗೆ ತಿಳಿದುಕೊಳ್ಳುವುದು ಬಲು ಅವಶ್ಯಕವಾಗಿತ್ತು, ಏಕೆಂದರೆ ಅವರೊಬ್ಬ ದೊರೆಯಾಗಿದ್ದರು. ಅವರ ಉಡುಗೆ-ತೊಡುಗೆಗಳು, ಬಳಸುತ್ತಿದ್ದ ಶಸ್ತ್ರಾಸ್ತ್ರಗಳು, ಅವರ ವ್ಯಕ್ತಿತ್ವ, ಅವರ ಛಾಪು, ಅವರು ಕಾಣುತ್ತಿದ್ದ ಪರಿ, ಅವರ ಗಂಭೀರತೆ ಇತ್ಯಾದಿ ವಿಷಯಗಳ ಬಗ್ಗೆ ಅರಿತುಕೊಳ್ಳುವುದು ಬಲು ಮುಖ್ಯವಾಗಿದ್ದರಿಂದ ಅದಕ್ಕಾಗಿ ಸಾಕಷ್ಟು ಸಂಶೋಧನೆ ನಡೆಸಲಾಯಿತು. ಹಾಗಾಗಿ ಈ ಸಂಬಂಧ ಹಲವು ಬಾರಿ ಬೆಂಗಳೂರಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಲಾಯಿತು.


  ಪ್ರತಿಮೆ ತಯಾರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಾಗಿಲ್ಲವಾದರೂ ಅದರ ಪ್ರತಿಷ್ಠಾಪನೆ ಸಾಕಷ್ಟು ಸವಾಲುಭರಿತವಾಗಿತ್ತೆಂದು ಹೇಳುತ್ತಾರೆ ಸುತಾರ್. ಏಕೆಂದರೆ ರಾತ್ರಿಯ ಸಮಯದಲ್ಲಿ ನಿಲ್ದಾಣದಲ್ಲಿರುತ್ತಿದ್ದ ಏರ್ ಟ್ರಾಫಿಕ್, ಮಂಜು ಮುಸುಕಿದ ವಾತಾವರಣ ಹಾಗೂ ಹಲವು ಬಾರಿ ಬಿದ್ದ ಮಳೆಗಳು ಪ್ರತಿಷ್ಠಾಪಿಸುವ ಕಾರ್ಯದಲ್ಲಿ ಸ್ವಲ್ಪ ಅಡೆ-ತಡೆಗಳನ್ನುಂಟು ಮಾಡಿತು ಎನ್ನುತ್ತಾರೆ ಸುತಾರ್ ಕುಟುಂಬ.


  ಪ್ರತಿಮೆಗೆ ತಗುಲಿದ ಲೋಹಗಳ ಭಾರತದಿಂದಲೇ ಪಡೆಯಲಾಗಿದೆ


  ಇನ್ನು, ಈ ಪ್ರತಿಮೆಯಲ್ಲಿ ಬಳಸಲಾಗಿರುವ ಅತ್ಯುತ್ತಮ ಗುಣಮಟ್ಟದ ಕಂಚು (85% ತಾಮ್ರ, 5% ಜಿಂಕ್, 5% ಸತು ಹಾಗೂ 5% ಟಿನ್) ಹಾಗೂ ಉಕ್ಕನ್ನು ಭಾರತದಿಂದಲೇ ಪಡೆಯಲಾಗಿರುವುದು ವಿಶೇಷ. ಈ ಗುಣಮಟ್ಟದ ಲೋಹ ಬಳಸಿ ಕೆಂಪೇಗೌಡರ ಮುಖದಲ್ಲಿ ನೈಜತೆಯನ್ನು ತರಲು ಪ್ರಯತ್ನಿಸಲಾಗಿದೆ.


  ಇದನ್ನೂ ಓದಿ: Bengaluru Traffic: ಬೆಂಗಳೂರಿಗೆ ಮೋದಿ, ಈ ರಸ್ತೆಗಳು ಬಂದ್, ಪರ್ಯಾಯ ಮಾರ್ಗ ಹೀಗಿದೆ


  108 ಅಡಿಗಳಷ್ಟು ಎತ್ತರದ ಕೆಂಪೇಗೌಡರ ಭವ್ಯ ಪ್ರತಿಮೆಯ ಮುಂದೆ ನಿಂತಾಗ ನಿಮಗೆ ಹೇಗನಿಸುತ್ತದೆ?


  ಈ ಬಗ್ಗೆ ಸುತಾರ್ ಕುಟುಂಬ ಹೇಳುತ್ತದೆ, "ನಮಗೆ ಕೆಂಪೇಗೌಡರ ಪ್ರತಿಮೆ ಹಾಗೂ ಅವರೊಬ್ಬ ದೊರೆಯಾಗಿ ಬೆಂಗಳೂರಿಗೆ ನೀಡಿರುವ ಕೊಡುಗೆಗಳ ಬಗ್ಗೆ ಸಾಕಷ್ಟು ಹೆಮ್ಮೆ ಎನಿಸುತ್ತದೆ. ನಮಗೆ ಈ ಮುಂಚೆ ಕೆಂಪೇಗೌಡರ ಕುಇರ್ತು ತಿಳಿದೇ ಇರಲಿಲ್ಲ, ಆದರೆ ಪ್ರತಿಮೆ ತಯಾರಿಗೆ ಸಂಬಂಧಿಸಿದಂತೆ ಅವರ ಬಗ್ಗೆ ಸಂಶೋಧನೆ ಮಾಡಿದಾಗ ಅವರ ಅದ್ಭುತ ವ್ಯಕ್ತಿತ್ವದ ಪರಿಚಯ ನಮಗಾಯಿತು, ಅವರ ವ್ಯಕ್ತಿತ್ವ, ಜೀವನಶೈಲಿ ಹಾಗೂ ಅವರು ನೀಡಿರುವ ಕೊಡುಗೆಗಳಿಂದ ನಾವು ಪ್ರಭಾವಿತರಾಗಿದ್ದೇವೆ. ಇದು ನಮಗೆ ಹಾಗೂ ಬೆಂಗಳೂರು ಮತ್ತು ಕರ್ನಾಟಕದ ಜನತೆ ಹೆಮ್ಮೆಪಡುವ ವಿಷಯವಾಗಿದೆ.

  Published by:Precilla Olivia Dias
  First published: