ದೋಸ್ತಿಗಳ ಹಗ್ಗಜಗ್ಗಾಟ; ಬಿಎಸ್​ವೈಗೆ ಪ್ರಾಣ ಸಂಕಟ; ಇಂದಾದರೂ ಮುಗಿಯುತ್ತಾ ಬಹುಮತದ ಆಟ?; ‘ನೀ ಕೊಡೆ ನಾ ಬಿಡೆ’!

ಒಂದೆಡೆ ಬಹುಮತದ ವಿಚಾರದಲ್ಲಿ ಮೈತ್ರಿ ನಾಯಕರ ನಡುವೆ ಹಗ್ಗಜಗ್ಗಾಟ ನಿರಂತರವಾಗಿ ನಡೆಯುತ್ತಲೇ ಇದೆ. ಮತ್ತೊಂದೆಡೆ ಮೈತ್ರಿ ನಾಯಕರ ಈ ಹೊಸ ಆಟಕ್ಕೆ ಬಿಜೆಪಿ ಪಾಳಯ ಹಾಗೂ ಬಿ.ಎಸ್. ಯಡಿಯೂರಪ್ಪ ಸ್ವತಃ ಕಂಗಾಲಾಗಿ ಕುಳಿತಿದ್ದಾರೆ ಎನ್ನುತ್ತಿವೆ ಮೂಲಗಳು.

MAshok Kumar | news18
Updated:July 23, 2019, 10:46 AM IST
ದೋಸ್ತಿಗಳ ಹಗ್ಗಜಗ್ಗಾಟ; ಬಿಎಸ್​ವೈಗೆ ಪ್ರಾಣ ಸಂಕಟ; ಇಂದಾದರೂ ಮುಗಿಯುತ್ತಾ ಬಹುಮತದ ಆಟ?; ‘ನೀ ಕೊಡೆ ನಾ ಬಿಡೆ’!
ಕುಮಾರಸ್ವಾಮಿ- ಯಡಿಯೂರಪ್ಪ- ರಮೇಶ್ ಕುಮಾರ್
  • News18
  • Last Updated: July 23, 2019, 10:46 AM IST
  • Share this:
ಬೆಂಗಳೂರು (ಜುಲೈ.23); ಕಳೆದ ಒಂದು ವಾರದಿಂದ ಅಧೀವೇಶನ ನಡೆಯುತ್ತಿದೆ. ಮೈತ್ರಿ ಸರ್ಕಾರ ಇವತ್ತು ಬಿಳುತ್ತೆ, ನಾಳೆ ಬೀಳುತ್ತೆ ಅಂತ ಬಿಜೆಪಿ ನಾಯಕರು ಬರೀ ಕಾದಿದ್ದೆ ಬಂತು. ಆದರೆ, ಬಹುಮತ ಯಾಚಿಸೋಕೆ ಸಿಎಂ ಕುಮಾರಸ್ವಾಮಿ ಈವರೆಗೆ ಮುಂದಾಗಿಲ್ಲ. ಒಂದೆಡೆ ಬಹುಮತದ ವಿಚಾರದಲ್ಲಿ ಮೈತ್ರಿ ನಾಯಕರ ನಡುವೆ ಹಗ್ಗಜಗ್ಗಾಟ ನಿರಂತರವಾಗಿ ನಡೆಯುತ್ತಲೇ ಇದೆ. ಮತ್ತೊಂದೆಡೆ ಮೈತ್ರಿ ನಾಯಕರ ಈ ಹೊಸ ಆಟಕ್ಕೆ ಬಿಜೆಪಿ ಪಾಳಯ ಹಾಗೂ ಬಿ.ಎಸ್. ಯಡಿಯೂರಪ್ಪ ಸ್ವತಃ ಕಂಗಾಲಾಗಿ ಕುಳಿತಿದ್ದಾರೆ ಎನ್ನುತ್ತಿವೆ ಮೂಲಗಳು.

ಕಳೆದ ಶುಕ್ರವಾರದ ಮಾತು ನೀಡಿದ್ದ ಕುಮಾರಸ್ವಾಮಿ ಶತಾಯಗತಾಯ ಸೋಮವಾರ ಸಂಜೆ ವಿಶ್ವಾಸಮತ ಯಾಚಿಸುವ ವಿಶ್ವಾಸ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರೂ ಸೇರಿ ಎಲ್ಲರೂ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಆದರೆ, ನಿನ್ನೆಯೂ ಸಿಎಂ ಕುಮಾರಸ್ವಾಮಿ ಬಹುಮತ ಯಾಚನೆ ಮಾಡಲು ಮುಂದಾಗಲಿಲ್ಲ. ರಾತ್ರಿ 11 ಗಂಟೆಯಾದರೂ ಸಹ ಬಹುಮತ ಸಾಬೀತುಪಡಿಸುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದು ವಿಧಾನಸೌಧದಲ್ಲೇ ಕುಳಿತಿದ್ದರು.

ಯಾವುದೇ ಕ್ಷಣದಲ್ಲಿ ಸರ್ಕಾರ ಬೀಳಬಹುದು ಎಂದು ಕಮಲ ಪಾಳಯ ಕಾದು ಕುಳಿತಿತ್ತು. ಆದರೆ, ಕೊನೆಗೂ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ. ಹೀಗೆ ದಿನೇ ದಿನೇ ಬಹುಮತ ಯಾಚನೆಯನ್ನು ಮುಂದೂಡುತ್ತಿರುವುದು ಬಿ.ಎಸ್. ಯಡಿಯೂರಪ್ಪ ಅವರ ಟೆನ್ಷನ್​ಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ.

ಇದನ್ನೂ ಓದಿ : ಸಂಜೆ 4ರೊಳಗೆ ವಿಶ್ವಾಸಮತ ಯಾಚನೆಗೆ ಸ್ಪೀಕರ್ ಅಂತಿಮ ಗಡುವು; 22 ದಿನಗಳ ಹೈಡ್ರಾಮಾ ಇಂದಾದರೂ ಅಂತ್ಯವಾಗುತ್ತಾ?

ಮೈತ್ರಿಗಳ ಹಗ್ಗಜಗ್ಗಾಟ ಬಿಎಸ್​ವೈಗೆ ಪ್ರಾಣ ಸಂಕಟ;

ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿರುವ ಮೈತ್ರಿ ಸರ್ಕಾರ ಈ ತೀರ್ಪು ತಮ್ಮ ಪರ ಬರಬಹುದೆ ಎಂಬ ಆಶಾವಾದದಿಂದಾಗಿಯೇ ವಿನಃಕಾರಣ ಬಹುಮತ ಯಾಚನೆಯನ್ನು ಮುಂದೂಡುತ್ತಿದೆ ಎಂಬುದು ಬಹಿರಂಗ ಸತ್ಯ.

ಕೊನೆಗೂ ಇಂದು ವಿಪ್ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತು ವಿವರಣೆ ಕೇಳಿ ಮೈತ್ರಿ ನಾಯಕರು ಸಲ್ಲಿಸಿರುವ ಅರ್ಜಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಾದ ಹೆಚ್. ನಾಗೇಶ್ ಹಾಗೂ ಆರ್. ಶಂಕರ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಇಂದು ವಿಚಾರಣೆ ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಕಸ್ಮಾತ್ ತೀರ್ಪು ಮೈತ್ರಿ ಪರ ಬಂದರೆ ರಾಜ್ಯ ಅಧಿಕಾರ ಹಿಡಿಯುವ ತಮ್ಮ ಕನಸು ಭಗ್ನವಾಗುತ್ತದೆ ಎಂಬ ಟೆನ್ಷನ್ ಒಂದೆಡೆಯಾದರೆ ಶಾಸಕರನ್ನು ಕಾಯುವ ಕಸರತ್ತು ಮತ್ತೊಂದೆಡೆ.ಏಕೆಂದರೆ ಸದನದಲ್ಲಿ ದಿನ ದೂಡುತ್ತಾ ದೂಡುತ್ತಾ ಅಕಸ್ಮಾತ್ ಮೈತ್ರಿ ನಾಯಕರು ಆಪರೇಷನ್ ಮೈತ್ರಿಗೆ ಮುಂದಾದರೆ, ತಮ್ಮ ಪಕ್ಷದ ಶಾಸಕರನ್ನು ಮಂತ್ರಿಗಿರಿಯ ಆಮಿಷ ಒಡ್ಡಿ ತಮ್ಮ ಕಡೆ ಸೆಳೆದರೆ ಎಂಬ ಆತಂಕವೂ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಡುತ್ತಿರುವುದು ಸುಳ್ಳಲ್ಲ. ಹೀಗಾಗಿ ತಮ್ಮ ಎಲ್ಲಾ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸಹ ಅವರಿಗೆ ಸವಾಲಿನ ಕೆಲಸವಾಗಿದೆ. ಇದೇ ಕಾರಣಕ್ಕೆ ಸೋಮವಾರ ಕಲಾಪ 11 ಗಂಟೆಗೆ ಮುಗಿದರೂ ಸಹ ಬಿಎಸ್​ವೈ ಖುದ್ದು ಎಲ್ಲರನ್ನೂ ಬಸ್ ಹತ್ತಿಸಿ ರೆಸಾರ್ಟ್​ಗೆ ಕಳುಹಿಸುವ ವರೆಗೂ ಜೊತೆಗೆ ಇದ್ದಾರೆ.

ಒಟ್ಟಾರೆ ಇಂದೂ ಸಹ ಸರ್ಕಾರ ಬೀಳದೆ ಇದ್ದರೆ, ಅಥವಾ ಸುಪ್ರೀಂ ಮೈತ್ರಿ ಪರ ತೀರ್ಪು ನೀಡಿದರೆ ಅಧಿಕಾರ ಹಿಡಿಯುವ ಆಸೆಯಲ್ಬಿಲಿರುವ ಬಿಜೆಪಿ ಹಾಗೂ ಯಡಿಯೂರಪ್ಪ ಅವರಿಗೆ ಆಶಾಭಂಗವಾಗುವುದಂತೂ ಸುಳ್ಳಲ್ಲ.

ಇದನ್ನೂ ಓದಿ : ಸುಪ್ರೀಂಕೋರ್ಟ್​​ನಲ್ಲಿ ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ; ವಿಶ್ವಾಸಮತ ಯಾಚನೆಗೆ ಸಿಗಲಿದೆ ಗಡುವು?

First published:July 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading