ಬೀದರ್: ಏರ್ಬೇಸ್ನಿಂದ ಹುಮ್ನಾಬಾದ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸ್ವಾಗತಿಸಿದರು. ಹುಮ್ನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿಯ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಿಗಳು ಜನರನ್ನು ಉದ್ದೇಶಿಸಿ ಮಾತನಾಡಿದರು. ಜಗದ್ಗುರು ಬಸವಣ್ಣ ಅವರಿಗೆ ನಮನ ಸಲ್ಲಿಸುವ ಮೂಲಕ ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಧರ್ಮ ಒಡೆಯುವ ಕೆಲಸ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಅಸ್ಥಿರ ಮತ್ತು ಮೈತ್ರಿ ಸರ್ಕಾರದಿಂದ ಕರ್ನಾಟಕ ಸಾಕಷ್ಟು ಕಷ್ಟ ಅನುಭವಿಸಿದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರದ ನಡುವೆ ಎಲ್ಲವೂ ಸರಿಯಾಗಿರದ ಕಾರಣ ಅಭಿವೃದ್ಧಿ ಕುಂಠಿತವಾಗಿತ್ತು. ಮಾನವೀಯತೆ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡೋರನ್ನು ಕಾಂಗ್ರೆಸ್ ದ್ವೇಷ ಮಾಡುತ್ತೆ ಎಂದು ಹೇಳಿದರು.
91 ಬಾರಿ ಬೇರೆ ಬೇರೆ ಪದಗಳಿಂದ ಬೈದ್ರು
ಇದೀಗ ಕಾಂಗ್ರೆಸ್ ನನಗೆ ಬೈಯಲು ಲಿಸ್ಟ್ ಸಿದ್ಧ ಮಾಡಿಕೊಂಡಿದೆ. 91 ಬಾರಿ ಬೇರೆ ಬೇರೆ ರೀತಿಯನ್ನು ನನ್ನನ್ನು ಬೈದಿದೆ. ನನಗೆ ಬೈಯಲು ಡಿಕ್ಷನರಿ ಹುಡುಕಿ ಪದಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಹುಡುಕುವ ಈ ಕೆಲಸವನ್ನು ಅಧಿಕಾರವಿದ್ದಾಗ ಮಾಡಿದ್ರೆ ಇಂದಿನ ಸ್ಥಿತಿ ಬರುತ್ತಿರಲಿಲ್ಲ.
ಅಂಬೇಡ್ಕರ್ ಅವರನ್ನು ಸಹ ಕಾಂಗ್ರೆಸ್ ಟೀಕಿಸಿದೆ
ಈ ಹಿಂದಿನ ಚುನಾವಣೆಯಲ್ಲಿ ಚೋಕಿದಾರ್ ಚೋರ್ ಎಂದರು. ಈಗ ಲಿಂಗಾಯತ ಸೋದರರನ್ನು ಭ್ರಷ್ಟರನ್ನು ಎಂದು ಕರೆಯುವ ಧೈರ್ಯ ಮಾಡಿದೆ. ನನಗೆ ಬೈಯ್ದಾಗೆಲ್ಲಾ ಜನರೇ ಉತ್ತರ ನೀಡಿದೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಟೀಕಿಸಿದೆ. ಅಂಬೇಡ್ಕರ್ ಅವರನ್ನು ರಾಕ್ಷಸ, ಮೋಸಗಾರ, ವಂಚಕ ಎಂದು ಹೇಳಿ ಅವಮಾನಿಸಿದೆ ಎಂದರು.
ಬೈದಷ್ಟು ಕರ್ನಾಟಕದಲ್ಲಿ ಕಮಲ ಅರಳಲಿದೆ
ಸ್ವಾತಂತ್ರ್ಯ ಹೋರಾಟ ವೀರ್ ಸಾವರ್ಕರ್ ಅವರನ್ನು ಸಹ ಕಾಂಗ್ರೆಸ್ ನಿಂದಿಸಿದೆ. ಅಂಬೇಡ್ಕರ್, ವೀರ ಸಾವರ್ಕರ್ ರೀತಿ ನನ್ನನ್ನು ಕಾಂಗ್ರೆಸ್ ನಿಂದಿಸುತ್ತಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಕಾಂಗ್ರೆಸ್ ನಿಂದನೆ ಮಣ್ಣಿನಲ್ಲಿ ಸೇರಿದೆ. ನೀವು ಬೈದಷ್ಟು ಕರ್ನಾಟಕದಲ್ಲಿ ಕಮಲ ಅರಳಲಿದೆ.
ಈ ಬಾರಿ ಪೂರ್ಣ ಬಹುಮತದ ಸರ್ಕಾರ ಬಿಜೆಪಿಗೆ ಬೇಕು. ಕಾಂಗ್ರೆಸ್ ಎಷ್ಟೇ ಟೀಕಿಸಿದ್ರೂ ನನ್ನ ಸೇವೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.
ಈ ವಿಧಾನಸಭಾ ಚುನಾವಣೆಯಲ್ಲಿ ನನ್ನ ಯಾತ್ರೆ ಬೀದರ್ನಿಂದ ಆರಂಭವಾಗಿರೋದು ನನ್ನ ಸೌಭಾಗ್ಯ. ಬಸವಣ್ಣ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಕೆಲಸ ಮಾಡಲು ಸ್ಪೂರ್ತಿ ಸಿಗ್ತಿದೆ. 2018ರಲ್ಲಿ ಬೀದರ್ಗೆ ಆಗಮಿಸಿದ ದಿನಗಳನ್ನು ನೆನಪು ಮಾಡಿಕೊಂಡರು.
ಕರ್ನಾಟಕ ನಂಬರ್ ಒನ್ ಆಗಲಿದೆ
ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡಲು ಇಲ್ಲಿ ಡಬಲ್ ಇಂಜಿನ್ ಸರ್ಕಾರ ಬೇಕಿದೆ. ಡಬಲ್ ಇಂಜಿನ್ ಸರ್ಕಾರದಿಂದ ಏನೆಲ್ಲಾ ಲಾಭ ಆಗಲಿದೆ ಅನ್ನೋದಕ್ಕೆ ವಿದೇಶಿ ಬಂಡವಾಳ ಹೂಡಿಕೆ ಉದಾಹರಣೆ ಆಗಿದೆ. ಕರ್ನಾಟಕದಲ್ಲಿ ವಿದೇಶಿ ಹೂಡಿಕೆ ದಾಖಲೆ ಬರೆದಿದೆ. ಕಾಂಗ್ರೆಸ್ ಸರ್ಕಾರಕ್ಕಿಂತ ಮೂರುಪಟ್ಟು ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ.
ಮೈತ್ರಿ ಸರ್ಕಾರದ ವಿರುದ್ಧ ಮೋದಿ ಆರೋಪ
ಪಿಎಂ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಎಷ್ಟು ಲಾಭ ಸಿಕ್ಕಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಈ ಯೋಜನೆ ತಂದಾಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನೇ ನೀಡಲಿಲ್ಲ. ತಮ್ಮ ಕೈಗೆ ಏನು ಸಿಗ್ತಿಲ್ಲ ಅಂತ ಪಟ್ಟಿಯೇ ಕಳುಹಿಸಲು ಹಿಂದೇಟು ಹಾಕಿತ್ತು ಎಂದು ಮೋದಿ ಆರೋಪಿಸಿದರು.
ಕೇಂದ್ರ ಸರ್ಕಾರ 6 ಸಾವಿರ ಮತ್ತು ಇಲ್ಲಿಯ ಬಿಜೆಪಿ ಸರ್ಕಾರ 4 ಸಾವಿರ ರೂಪಾಯಿ ಸೇರಿಸಿ 10 ಸಾವಿರ ರೂಪಾಯಿ ನೀಡುತ್ತಿರೋದು ಸಂತಸದ ವಿಚಾರ. ಚುನಾವಣೆ ಬರುತ್ತಿದ್ದಂತೆ ಸಾಲಮನ್ನಾದ ನಾಟಕವನ್ನು ಕಾಂಗ್ರೆಸ್ ಮಾಡುತ್ತದೆ. ರಾಜಸ್ಥಾನ, ಛತ್ತೀಸ್ಗಢದಲ್ಲಿ ನೀಡಿದ ಮಾತನ್ನು ಕಾಂಗ್ರೆಸ್ ಪೂರೈಸಿಲ್ಲ. ಅದು ಕಾಂಗ್ರೆಸ್ ಬೆಂಬಲಿತರ ಖಾತೆಗಳಿಗೆ ಮಾತ್ರ ಹೋಗುತ್ತೆ ಎಂದು ವಾಗ್ದಾಳಿ ನಡೆಸಿದರು.
ಈಥೈನಾಲ್ ಉತ್ಪಾದನೆಯೂ ಹೆಚ್ಚಳವಾಗಿದೆ. ಇದರ ಜೊತೆಯಲ್ಲಿ ಸಿರಿಧಾನ್ಯ, ಅನ್ನ ಶ್ರೀ ಯೋಜನೆಗಳ ಬಗ್ಗೆ ಮಾತನಾಡಿದರು. ಕಾಂಗ್ರೆಸ್ಗೆ ಬಡವರಿಗೆ ನೋವು ಅರ್ಥವಾಗಲ್ಲ. ಅಭಿವೃದ್ಧಿಯಲ್ಲಿಯೂ ಕಾಂಗ್ರೆಸ್ ಲಾಭ ನೋಡುತ್ತದೆ.
ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ವೇಗ
ಬಡವರಿಗೆ ನೀಡುವ ಮನೆ ನಿರ್ಮಾಣದ ವೇಗವನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸುತ್ತಿದೆ. ಡಬಲ್ ಇಂಜಿನ್ ಸರ್ಕಾರ ಇದರ ವೇಗವನ್ನು ಹೆಚ್ಚು ಮಾಡಿದೆ. ಬೀದರ್ ಜಿಲ್ಲೆಯಲ್ಲಿ 30 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೀಡಲಾಗುತ್ತಿದೆ. ಇಂದು 30 ಸಾವಿರ ಸೋದರಿಯರು ಲಕ್ಷಾಧಿಪತಿಗಳಾಗಿ ಎಂದು ಹೇಳಿದರು.
ಇದನ್ನೂ ಓದಿ: Election Campaign: ಬಿಜೆಪಿ ಶಾಸಕರಿಗೆ ಗ್ರಾಮ ಪ್ರವೇಶಿಸಲು ಬಿಡದ ಜನರು; ಗ್ರಾಮಸ್ಥರಿಂದ ಕ್ಲಾಸ್!
ಇಂದು ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ, ವಿದ್ಯುತ್ ಪೂರೈಕೆಯನ್ನು ಡಬಲ್ ಇಂಜಿನ್ ಸರ್ಕಾರ ನೀಡುತ್ತಿದೆ. ಕೋಟಿ ಕೋಟಿ ಜನರು ಬ್ಯಾಂಕ್ ಖಾತೆಯನ್ನ ತೆರೆಯುವಂತೆ ಬಿಜೆಪಿ ಸರ್ಕಾರ ಮಾಡಿದೆ. ಈ ಖಾತೆಗಳಿಗೆ ಸರ್ಕಾರದ ಯೋಜನೆಗಳ ಹಣ ನೇರವಾಗಿ ಬಂದು ಸೇರುತ್ತದೆ. ನಿಮ್ಮ ಮನೆ ಮಗ ದೆಹಲಿಯಲ್ಲಿ ಕುಳಿತು ನಿಮಗಾಗಿ ಕೆಲಸ ಮಾಡುತ್ತಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ