• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Congress List: ನಾಳೆಯೇ ರಿಲೀಸ್ ಆಗುತ್ತಾ ಕಾಂಗ್ರೆಸ್ ಫಸ್ಟ್ ಲಿಸ್ಟ್? ಈ ಬಾರಿ ಯಾರ 'ಕೈ'ಗೆ ಸಿಗುತ್ತೆ ಟಿಕೆಟ್?

Congress List: ನಾಳೆಯೇ ರಿಲೀಸ್ ಆಗುತ್ತಾ ಕಾಂಗ್ರೆಸ್ ಫಸ್ಟ್ ಲಿಸ್ಟ್? ಈ ಬಾರಿ ಯಾರ 'ಕೈ'ಗೆ ಸಿಗುತ್ತೆ ಟಿಕೆಟ್?

ನಾಳೆ ರಿಲೀಸ್ ಆಗುತ್ತಾ ಕಾಂಗ್ರೆಸ್ ಲಿಸ್ಟ್?

ನಾಳೆ ರಿಲೀಸ್ ಆಗುತ್ತಾ ಕಾಂಗ್ರೆಸ್ ಲಿಸ್ಟ್?

ನಾಳೆ ದೆಹಲಿಯಲ್ಲಿ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಸೇರಿದಂತೆ ಪ್ರಮುಖರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸ್ಕ್ರೀನಿಂಗ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳು ಅಲ್ಲಿ ಚರ್ಚೆಯಾಗಲಿವೆ. ಬಳಿಕ ವರಿಷ್ಠರು ಅಳೆದು ತೂಗಿ, ಪಟ್ಟಿ ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Karnataka, India
 • Share this:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka assembly election) ಕಾಂಗ್ರೆಸ್ (Congress) ಸಜ್ಜಾಗುತ್ತಿದೆ. ನಾಳೆ ಅಥವಾ ನಾಡಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ (Congress candidates List) ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಾಳೆ ದೆಹಲಿಯಲ್ಲಿ (New Delhi) ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ (Sonia Gandhi) ಸೇರಿದಂತೆ ಪ್ರಮುಖರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸ್ಕ್ರೀನಿಂಗ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳು ಅಲ್ಲಿ ಚರ್ಚೆಯಾಗಲಿವೆ. ಬಳಿಕ ವರಿಷ್ಠರು ಅಳೆದು ತೂಗಿ, ಪಟ್ಟಿ ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.


ನಾಳೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ


ನಾಳೆ ನವದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಸ್ಕ್ರೀನಿಂಗ್ ಕಮಿಟಿಯಲ್ಲಿ ಹಲವು ಸುತ್ತಿನ ಪರಿಶೀಲನೆ ಬಳಿಕ 120 ಕ್ಷೇತ್ರಗಳಿಗೆ ಸಿಂಗಲ್ ಹೆಸರುಗಳನ್ನು ಫೈನಲ್ ಮಾಡಲಾಗಿದೆ. ಉಳಿದಂತೆ 80 ಕ್ಷೇತ್ರಗಳಿಗೆ ಇಬ್ಬರು ಅಥವಾ ಮೂವರು ಆಕಾಂಕ್ಷಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿ ಕಳಿಸಲಾಗಿದೆ ಎನ್ನಲಾಗಿದೆ ಅಂತ ವಿಜಯ ಕರ್ನಾಟಕ ವರದಿ ಮಾಡಿದೆ.


ಯಾವ್ಯಾವ ಕ್ಷೇತ್ರಕ್ಕೆ ಸಿಂಗಲ್ ಹೆಸರು ಶಿಫಾರಸು?


ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್‌ ಫಿಕ್ಸ್ ಆಗುವ ಸಾಧ್ಯತೆ ಇದೆ. ಸೊರಬ – ಮಧು ಬಂಗಾರಪ್ಪ, ಚಿತ್ರದುರ್ಗ – ವೀರೇಂದ್ರ ಪಪ್ಪಿ, ಹಿರಿಯೂರು - ಸುಧಾಕರ್, ಹಿರೇಕೆರೂರು – ಯು.ಬಿ. ಬಣಕಾರ್, ವಿರಾಜಪೇಟೆ – ಪೊನ್ನಣ್ಣ, ಬಸವನಗುಡಿ – ಯು.ಬಿ. ವೆಂಕಟೇಶ್, ರಾಜಾಜಿನಗರ - ಪುಟ್ಟಣ್ಣ, ರಾಮನಗರ – ಇಕ್ಬಾಲ್ ಹುಸೇನ್, ಮಾಗಡಿ – ಬಾಲಕೃಷ್ಣ, ಹೊಸಕೋಟೆ - ಶರತ್ ಬಚ್ಚೇಗೌಡ, ನಿಪ್ಪಾಣಿ – ಕಾಕಾ ಸಾಹೇಬ್ ಪಾಟೀಲ್, ಹುಕ್ಕೇರಿ – ಎ.ಬಿ. ಪಾಟೀಲ್, ಗೋಕಾಕ್ – ಅಶೋಕ್ ಪೂಜಾರಿ, ಹುನಗುಂದ – ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ – ಸಿ.ಎಸ್. ನಾಡಗೌಡ, ರಾಯಚೂರು – ಎನ್.ಎಸ್ ಬೋಸರಾಜ್, ಕನಕಗಿರಿ – ಶಿವರಾಜ್ ತಂಗಡಗಿ, ಯಲಬುರ್ಗಾ – ಬಸವರಾಜ್ ರಾಯರೆಡ್ಡಿ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ.


ಇದನ್ನೂ ಓದಿ: CT Ravi: ಸಿಟಿ ರವಿ ವಿರುದ್ಧ ವೀರಶೈವ ಲಿಂಗಾಯತರ ಆಕ್ರೋಶ, ಪತ್ರಿಕಾ ಪ್ರಕಟಣೆ ಮೂಲಕ ಖಡಕ್ ಎಚ್ಚರಿಕೆ


ಇವರಿಗೆಲ್ಲ ಟಿಕೆಟ್ ಸಿಗುತ್ತಾ?


ಇನ್ನು ಚಿಂತಾಮಣಿ – ಎಂ.ಸಿ. ಸುಧಾಕರ್, ಚಿಕ್ಕಬಳ್ಳಾಪುರ – ಕೊತ್ತೂರ್ ಮಂಜುನಾಥ್, ಬೈಂದೂರು – ಗೋಪಾಲ್ ಪೂಜಾರಿ, ಕಾಪು – ವಿನಯ್ ಕುಮಾರ್ ಸೊರಕೆ, ಕಡೂರು – ವೈಎಸ್‌ವಿ ದತ್ತಾ, ಟಿ. ನರಸಿಪುರ – ಸುನಿಲ್ ಬೋಸ್, ಕಾರವಾರ – ಸತೀಶ್ ಸೈಲ್, ಭಟ್ಕಳ – ಮಂಕಾಳ ವೈದ್ಯ, ಹಾನಗಲ್ – ಶ್ರೀನಿವಾಸ್ ಮಾನೆ ಅವರಿಗೆ ಟಿಕೆಟ್ ಫಿಕ್ಸ್ ಆಗೋ ಸಾಧ್ಯತೆ ಇದೆ.
ಈ ಕ್ಷೇತ್ರಗಳಲ್ಲಿ ಟಿಕೆಟ್ ಅವರಿಗಾ? ಇವರಿಗಾ?


ಇನ್ನು ಈ ಕ್ಷೇತ್ರದಲ್ಲಿ ಇಬ್ಬಬ್ಬರು ಆಕಾಂಕ್ಷಿಗಳ ಹೆಸರನ್ನು ಕಳಿಸಲಾಗಿದೆ ಅಂತ ಹೇಳಲಾಗ್ತಿದೆ. ಬೆಳಗಾವಿ ಉತ್ತರ ಫೀರೋಜ್ ಸೇಠ್ ಅಥವಾ ಆಸೀಫ್ ಸೇಠ್, ಕುಡಚಿ - ಶ್ಯಾಮ್ ಭೀಮ್ ಘಾಟ್ಗೆ ಅಥವಾ ಮಹೇಂದ್ರ ತಮ್ಮಣ್ಣ, ಕಾಗವಾಡ – ರಾಜೂ ಕಾಗೆ ಅಥವಾ ದಿಗ್ವಿಜಯ್ ದೇಸಾಯಿ, ಅಥಣಿ – ಗಜಾನನ್ ಮಂಗಸೂಳಿ ಅಥವಾ ಶ್ರೀಕಾಂತ್ ಪೂಜಾರಿ, ನಂಜನಗೂಡು – ಮಹದೇವಪ್ಪ ಅಥವಾ ದರ್ಶನ್ ಧ್ರುವನಾರಾಯಣ, ‌ಹೊಳಲ್ಕೆರೆ – ಸವಿತಾ ರಘು ಅಥವಾ ಆಂಜನೇಯ, ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ್ ಅಥವಾ ಮಂಜುನಾಥ್ ಗೌಡ, ಬಳ್ಳಾರಿ ಸಿಟಿ – ಅಲ್ಲಂ ಪ್ರಶಾಂತ್ ಅಥವಾ ಅನಿಲ್ ಲಾಡ್, ಶಿಗ್ಗಾಂವಿ – ಅಜಂಪೀರ್ ಖಾದ್ರಿ ಅಥವಾ ಸೋಮಣ್ಣ ಬೇವಿನಮರದ, ಗಂಗಾವತಿ – ಇಕ್ಬಾಲ್ ಅನ್ಸಾರಿ ಅಥವಾ ಎಚ್.ಆರ್. ಶ್ರೀನಾಥ್, ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ ಅಥವಾ ವಿಜಯಕುಮಾರ್, ತೇರದಾಳ್ – ಉಮಾಶ್ರೀ ಅಥವಾ ಮಲ್ಲೇಶಪ್ಪರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಈ ಕ್ಷೇತ್ರದಲ್ಲೂ ಎರಡೆರಡು ಹೆಸರು


ಇನ್ನು ಬಾಗಲಕೋಟೆ – ಎಚ್ ವೈ ಮೇಟಿ ಅಥವಾ ದೇವರಾಜ್ ಪಾಟೀಲ್, ಚಾಮುಂಡೇಶ್ವರಿ – ಮರಿಗೌಡ ಅಥವಾ ಚಂದ್ರಶೇಖರ್, ಮಂಗಳೂರು ದಕ್ಷಿಣ – ಐವಾನ್ ಡಿಸೋಜಾ ಅಥವಾ ಜೆ.ಆರ್. ಲೋಬೋ, ಬೆಳ್ತಂಗಡಿ - ರಕ್ಷಿತ್ ಅಥವಾ ಶಿವರಾಂ, ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ್ ಅಥವಾ ಸುಷ್ಮಾ ರಾಜಗೋಪಾಲ್, ದಾಸರಹಳ್ಳಿ- ಕೃಷ್ಣಮೂರ್ತಿ ಅಥವಾ ಸಿ.ಎಂ ಧನಂಜಯ, ಕಲಘಟಗಿ – ಸಂತೋಷ್ ಲಾಡ್ ಅಥವಾ ನಾಗರಾಜ್ ಚಬ್ಬಿ, ಕುಂದಗೋಳ – ಕುಸುಮಾ ಶಿವಳ್ಳಿ ಅಥವಾ ಚಂದ್ರಶೇಖರ್ ಜತ್ತಲ್, ದೊಡ್ಡಬಳ್ಳಾಪುರ – ವೆಂಕಟರಮಣಯ್ಯ ಅಥವಾ ಬಿಸಿ ಆನಂದ್, ಪಾವಗಡ – ವೆಂಕಟರಮಣಪ್ಪ ಅಥವಾ ಎಚ್.ವಿ ವೆಂಕಟೇಶ್, ಲಿಂಗಸುಗೂರು – ಡಿ‌ಎಸ್ ಹೂಲಗೇರಿ ಅಥವಾ ರುದ್ರಯ್ಯ ಹೆಸರು ಕಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Published by:Annappa Achari
First published: