• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BJP Candidates List: ಇಂದು ರಿಲೀಸ್ ಆಗುತ್ತಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ? ವಿಜಯೇಂದ್ರಗೆ ಗ್ರೀನ್‌ಸಿಗ್ನಲ್, ಅರುಣ್ ಸೋಮಣ್ಣಗೆ ಸಿಗುತ್ತಾ ಟಿಕೆಟ್?

BJP Candidates List: ಇಂದು ರಿಲೀಸ್ ಆಗುತ್ತಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ? ವಿಜಯೇಂದ್ರಗೆ ಗ್ರೀನ್‌ಸಿಗ್ನಲ್, ಅರುಣ್ ಸೋಮಣ್ಣಗೆ ಸಿಗುತ್ತಾ ಟಿಕೆಟ್?

ಇಂದು ಬಿಜೆಪಿ ಪಟ್ಟಿ ಬಿಡುಗಡೆ

ಇಂದು ಬಿಜೆಪಿ ಪಟ್ಟಿ ಬಿಡುಗಡೆ

ಬಿವೈ ವಿಜಯೇಂದ್ರಗೆ ಸಿಕ್ಕಿದ್ಯಾ ಹೈಕಮಾಂಡ್ ಅಭಯ? ಅರುಣ್ ಸೋಮಣ್ಣಗೆ ಸಿಗುತ್ತಾ ಟಿಕೆಟ್? ಸಿದ್ದರಾಮಯ್ಯ ಎದುರು ವರುಣಾದಿಂದ ಸ್ಪರ್ಧಿಸುತ್ತಾರಾ ವಿ. ಸೋಮಣ್ಣ? ಶಿವಮೊಗ್ಗ ನಗರದಲ್ಲಿ ಟಿಕೆಟ್ ಪಡೆಯಲು ಯಶಸ್ವಿಯಾಗ್ತಾರಾ ಈಶ್ವರಪ್ಪ?

  • News18 Kannada
  • 4-MIN READ
  • Last Updated :
  • Karnataka, India
  • Share this:

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka assembly elections) ಬಿಜೆಪಿ (BJP) ಹುರಿಯಾಳುಗಳಾಗಿ ಕಣಕ್ಕೆ ಇಳಿಯುವವರು ಯಾರು? ಬಿವೈ ವಿಜಯೇಂದ್ರಗೆ (BY Vijayendra) ಸಿಕ್ಕಿದ್ಯಾ ಹೈಕಮಾಂಡ್ ಅಭಯ? ಅರುಣ್ ಸೋಮಣ್ಣಗೆ (Arun Somanna) ಸಿಗುತ್ತಾ ಟಿಕೆಟ್? ಸಿದ್ದರಾಮಯ್ಯ (Siddaramaiah) ಎದುರು ವರುಣಾದಿಂದ (Varuna) ಸ್ಪರ್ಧಿಸುತ್ತಾರಾ ವಿ. ಸೋಮಣ್ಣ? ಶಿವಮೊಗ್ಗ ನಗರದಲ್ಲಿ ಟಿಕೆಟ್ ಪಡೆಯಲು ಯಶಸ್ವಿಯಾಗ್ತಾರಾ ಈಶ್ವರಪ್ಪ? ಅವರ ಪುತ್ರನಿಗೆ ಸಿಗುತ್ತಾ ಟಿಕೆಟ್? ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಯಾಕೆಂದರೆ ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಇದೆ. ನಿನ್ನೆ ನವದೆಹಲಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಪಟ್ಟಿ ಫೈನಲ್ ಆಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತಿತರ ಪ್ರಮುಖರ ಸಭೆಯಲ್ಲಿ ಪಟ್ಟಿ ಫೈನಲ್ ಆಗಲಿದು, ಇಂದೇ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಇದೆ.


ಇಂದು ರಿಲೀಸ್ ಆಗಲಿದೆ ಬಿಜೆಪಿ ಪಟ್ಟಿ


ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.


120 ರಿಂದ 150 ಅಭ್ಯರ್ಥಿಗಳ ಪಟ್ಟಿ ಅಂತಿಮ


ಮೂಲಗಳ ಪ್ರಕಾರ ಬಿಜೆಪಿ ಸುಮಾರು 120ರಿಂದ 150 ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿದೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಪ್ರಮುಖರಿಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ವರ್ಚಸ್ಸು ಹಾಗೂ ಬಿಜೆಪಿ ಆಂತರಿಕ ಸರ್ವೆ ಆಧಾರಿಸಿ ಟಿಕೆಟ್ ಫೈನಲ್ ಮಾಡಲಾಗಿದೆ.


ಇದನ್ನೂ ಓದಿ: Siddaramaiah: ಹಲವು 'ಭಾಗ್ಯ'ಗಳ ಸರದಾರ ಸಿದ್ದರಾಮಯ್ಯ! ಮಾಸ್ ಲೀಡರ್ ಹೆಜ್ಜೆ ಗುರುತು ಇಲ್ಲಿದೆ


ಸಿದ್ದರಾಮಯ್ಯ ವಿರುದ್ಧ ಕಣಕ್ಕೆ ಇಳಿಯುತ್ತಾರಾ ಸೋಮಣ್ಮ?


ಮೂಲಗಳ ಪ್ರಕಾರ ಕೊನೆಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಮುಂದಾದ ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದೆ. ವರುಣಾದಿಂದ ಮಾಜಿ ಸಚಿವ ವಿ. ಸೋಮಣ್ಣ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ವಿ ಸೋಮಣ್ಣಗೆ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗುತ್ತದೆ. ಹಾಲಿ ಅವರು ಪ್ರತಿನಿಧಿಸುತ್ತಿರುವ ಗೋವಿಂದರಾಜನಗರ ಕ್ಷೇತ್ರ ಹಾಗೂ ಸಿದ್ದರಾಮಯ್ಯ ಸ್ಪರ್ಧಿಸಲಿರುವ ವರುಣಾ ಕ್ಷೇತ್ರದಿಂದ ಸೋಮಣ್ಣಗೆ ಟಿಕೆಟ್ ನೀಡಲಾಗುತ್ತೆ ಎನ್ನಲಾಗಿದೆ.


ಸೋಮಣ್ಣ ಮಗನಿಗಿಲ್ವಾ ಟಿಕೆಟ್?


ಮೂಲಗಳ ಪ್ರಕಾರ ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಟಿಕೆಟ್ ನಿರಾಕರಿಸಲಾಗಿದೆ ಅಂತ ಹೇಳಲಾಗುತ್ತಿದೆ. ತುಮಕೂರಿನ ಗುಬ್ಬಿ ಕ್ಷೇತ್ರದಿಂದ ವಿ ಸೋಮಣ್ಣ ತಮ್ಮ ಪುತ್ರ ಅರುಣ್‌ಗೆ ಟಿಕೆಟ್ ಕೇಳಿದ್ದರು. ಆದರೀಗ ಅರುಣ್ ಬದಲು ಪ್ರಬಲ ನಾಯಕನನ್ನು ಅಲ್ಲಿಂದ ಕಣಕ್ಕಿಳಿಸುವ ಸಾಧ್ಯತೆ ಇದೆಯಂತೆ.


ಇದನ್ನೂ ಓದಿ: DK Shivakumar: ಬೆದರದ ಬೆಚ್ಚದ ಕನಕಪುರ 'ಬಂಡೆ'! ಡಿಕೆ ಶಿವಕುಮಾರ್ ರಾಜಕೀಯ ಹಾದಿ ಹೇಗಿತ್ತು?


ಡಿಕೆಶಿ, ಎಚ್‌ಡಿಕೆ ವಿರುದ್ಧ ಪ್ರಬಲ ಅಭ್ಯರ್ಥಿ

top videos


    ಕಾಂಗ್ರೆಸ್ ಹಾಗೂ ಜೆಡಿಎಸ್‌ ಪ್ರಬಲ ನಾಯಕರನ್ನು ಟಾರ್ಗೆಟ್ ಮಾಡಿದ ಬಿಜೆಪಿ ಹೈಕಮಾಂಡ್, ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಎಚ್‌ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ.

    First published: