ಸಿಎಂ ಇರಲಿ, ಸಚಿವರೇ ಇರಲಿ ಕಾನೂನು‌ ಎಲ್ಲರಿಗೂ ಒಂದೇ ; ಸಚಿವ ಸಿಟಿ ರವಿ

ಶಾಂತವೇರಿ‌ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂತಹ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರು ಆದರ್ಶ ಆಗಬೇಕು ಎಂಬುದನ್ನು ತೀರ್ಮಾನ ಮಾಡಿಕೊಳ್ಳಲಿ ಎಂದು ಸಚಿವ ಸಿ.ಟಿ ರವಿ ಪ್ರತಿಭಟನಾಕಾರರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದರು.

G Hareeshkumar | news18
Updated:September 11, 2019, 1:30 PM IST
ಸಿಎಂ ಇರಲಿ, ಸಚಿವರೇ ಇರಲಿ ಕಾನೂನು‌ ಎಲ್ಲರಿಗೂ ಒಂದೇ ; ಸಚಿವ ಸಿಟಿ ರವಿ
ಸಿ ಟಿ ರವಿ
G Hareeshkumar | news18
Updated: September 11, 2019, 1:30 PM IST
ಮೈಸೂರು (ಸೆ.11) :  ಮುಖ್ಯಮಂತ್ರಿಗಳೇ ಇರಲಿ, ಸಚಿವರೇ ಇರಲಿ ಕಾನೂನು ಎಲ್ಲಿರೂ ಒಂದೇ ಹಾಗಾಗಿ ಎಲ್ಲರಿಗೂ ದಂಡವನ್ನು ಹಾಕಬೇಕು. ದಂಡದ ಹಣದಲ್ಲಿ ರಸ್ತೆ ರಿಪೇರಿ ಮಾಡಬೇಕೆಂಬ ಕೂಗು ಎದ್ದಿದೆ. ಈಗ ಕೂಗು ಎತ್ತಿರುವವರು ಮೊದಲು ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ ಎಂದು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ದ ಪರೋಕ್ಷವಾಗಿ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಸತ್ಯವಂತರಿಗೆ ಇದು ಕಾಲವಲ್ಲ. ಒಕ್ಕಲಿಗ ಸಮುದಾಯಕ್ಕೆ ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಶಾಂತವೇರಿ‌ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂತಹ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರು ಆದರ್ಶ ಆಗಬೇಕು ಎಂಬುದನ್ನು ತೀರ್ಮಾನ ಮಾಡಿಕೊಳ್ಳಲಿ ಎಂದು ಸಚಿವ ಸಿ.ಟಿ ರವಿ ಪ್ರತಿಭಟನಾಕಾರರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದರು.

ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ. ಇ.ಡಿ.ಗೆ ಯಾವ ಜಾತಿ ಇದೆ, ಯಾವ ಪಕ್ಷ ಇದೆ. ಇಡಿ ಹುಟ್ಟುಹಾಕದವರು ಯಾರು..?ಇಡಿ ಹುಟ್ಟುಹಾಕಿದ್ದು ಭಾರತೀಯ ಜನತಾ ಪಾರ್ಟಿ ಅಲ್ಲ. ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಬಂಧ ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡೋದೇ ತಪ್ಪು ಎಂದರೆ ಹೇಗೆ..? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಪ್ರವಾಹ ಸಂತ್ರಸ್ತ ಗ್ರಾಮಗಳು ಸ್ಥಳಾಂತರಕ್ಕೆ ಒಪ್ಪಿದರೆ ಸರ್ಕಾರದಿಂದ ನವಗ್ರಾಮ ನಿರ್ಮಾಣ; ಬಿಎಸ್​ ಯಡಿಯೂರಪ್ಪ

ನಾನು ಒಕ್ಕಲಿಗ ಸಮುದಾಯದವನು. ಭ್ರಷ್ಟಾಚಾರ ಯಾರು ಮಾಡಿದ್ದಾರೋ ಅವರಿಗೆ ಭಯವಾಗುತ್ತದೆ. ವೈಟ್‌ ಟ್ಯಾಪ್‌, ಶುದ್ಧ ಗಂಗಾ ಯೋಜನೆಯಲ್ಲೂ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ. ತನಿಖೆಯಾಗದೆ ಇದ್ದರೆ ತಿಳಿಯುವುದು ಹೇಗೆ? ನನ್ನ ಸಮುದಾಯಕ್ಕೆ ಹೇಳುವುದಿಷ್ಟೇ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದರು.

ಸಂಚಾರಿ ನಿಯಮವನ್ನು ಪಾಲನೆ ಮಾಡುವವರಿಗೆ ದಂಡದ ಪ್ರಶ್ನೆ ಬರೋದಿಲ್ಲ. ತಪ್ಪು ಮಾಡುವವರಿಗೆ ಟ್ರಾಫಿಕ್ ದಂಡ ಬೀಳುತ್ತೆ‌. ನಾನೂ ಮೊದಲು ಸೀಟ್ ಬೆಲ್ಟ್ ಹಾಕುತ್ತಿರಲಿಲ್ಲ. ಟ್ರಾಫಿಕ್ ಫೈನ್ ಜಾಸ್ತಿಯಾದ ಮೇಲೆ ಕಡ್ಡಾಯವಾಗಿ ಹಾಕುತ್ತಿದ್ದೇನೆ. ನಾನು ತಪ್ಪು ಮಾಡಿದರೆ ಮೊದಲು ನನ್ನಂಥವರಿಗೆ ದಂಡ ಹಾಕಬೇಕು ಎಂದು ಹೇಳಿದರು.

ಅಮೆರಿಕಾದಲ್ಲಿ ಶೇ. 97ರಷ್ಟು ಜನ ತೆರಿಗೆ ಕಟ್ಟುತ್ತಾರೆ. ನಮ್ಮಲ್ಲಿ ತೆರಿಗೆ ಕದಿಯುವುದು ಹೇಗೆ ಅಂತ ನೂರು ಮಾರ್ಗ ಹುಡುಕುತ್ತಾರೆ. ಆದರೂ ಅಮೆರಿಕಾದಂತಹ ರಸ್ತೆಗಳನ್ನು ಬಯಸುತ್ತಾರೆ. ಮನಸ್ಥಿತಿ ಬದಲಾಗದ ಹೊರತು ಪರಿಸ್ಥಿತಿ ಬದಲಾಗಲ್ಲ. ಕೇಂದ್ರ ಸರ್ಕಾರದ ದಂಡ ಪರಿಷ್ಕರಣೆಯನ್ನು ಸಚಿವ ಸಿ.ಟಿ.ರವಿ ಸಮರ್ಥಿಸಿಕೊಂಡರು.
Loading...

ಇದನ್ನೂ ಓದಿ : ಡಿಕೆಶಿ ಮಗಳು ಐಶ್ವರ್ಯಾಗೂ ಕಾಡಿದ ಇ.ಡಿ. ಸಂಕಷ್ಟ; ವಿಚಾರಣೆಗೆ ಬರುವಂತೆ ಸಮನ್ಸ್​ ನೀಡಿದ ಅಧಿಕಾರಿಗಳು

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...