• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Waterfalls: ಮಹಾಮಳೆಗೆ ಜಲಪಾತದಂತೆ ಹರಿಯುತ್ತಿರುವ ಕೆರೆ, ಫಾಲ್ಸ್ ನೋಡಲು ಮುಗಿಬೀಳುತ್ತಿರುವ ಜನ!

Waterfalls: ಮಹಾಮಳೆಗೆ ಜಲಪಾತದಂತೆ ಹರಿಯುತ್ತಿರುವ ಕೆರೆ, ಫಾಲ್ಸ್ ನೋಡಲು ಮುಗಿಬೀಳುತ್ತಿರುವ ಜನ!

ಜಲಪಾತದಂತೆ ಹರಿಯುತ್ತಿರುವ ಕೆರೆ

ಜಲಪಾತದಂತೆ ಹರಿಯುತ್ತಿರುವ ಕೆರೆ

ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳು ದಿಂದ ನಿರಂತರ ಮಳೆಯಿಂದಾಗಿ ಕೆರೆ ಕುಂಟೆಗಳು ತುಂಬಿ ತುಳುಕುತ್ತಿವೆ. ತೆರೆದ ಬಾವಿಗಳು ತುಂಬಿ ಭರ್ತಿಯಾಗಿವೆ. ಹಲವು ಕೆರೆಗಳು ಭೋರ್ಗರೆಯುತ್ತಿವೆ.

  • Share this:

    ಔರಾದ್, ಬೀದರ್: ಸುತ್ತಲೂ ಹಚ್ಚ ಹಸಿರಿನ ತಾಣಗಳ ಮಧ್ಯೆ ಹಾಲಿನ ನೊರೆಯಂತೆ ಭೋರ್ಗರೆಯುವ ಜಲಪಾತದ (Waterfalls) ರಮಣೀಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಮಿನಿ ಜೋಗ್ ಫಾಲ್ಸ್ (Mini Jogfalls) ಎನ್ನುವಂತೆ ಕಾಣುವ ಜಲಪಾತ, ಸುಂದರ ನಿಸರ್ಗದ (Nature) ಮಡಿಲಿನಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಫಾಲ್ಸ್ ನೋಡಲು ಜನರ ದಂಡೇ ಇಲ್ಲಿಗೆ ಬರುತ್ತಿದೆ. ಹೌದು, ರಾಜ್ಯದ ಗಡಿಭಾಗದಲ್ಲಿ (Border) ಮಿನಿ ಜೋಗಪಾಲ್ಸ್ ಸೃಷ್ಟಿಯಾಗಿದೆ. ಜೋಗ ಜಲಪಾತದಂತೆ ಹರಿಯುತ್ತಿರುವ ಕೆರೆಯು ಹಾಲಿನ ನೊರೆಯಂತೆ ಭೋರ್ಗರೆಯುವ ಮಿನಿ ಫಾಲ್ಸ್ ಅನ್ನೇ ನಿರ್ಮಿಸಿದೆ. ನಿರಂತರ ಮಳೆಯಿಂದ (Rain) ಜುಳು ಜುಳು ಹರೆಯುವ ನೀರು, ಕೆರೆ ತುಂಬಿ ಹರಿದು ಮಿನಿ ಪಾಲ್ಸ್ ಸೃಷ್ಟಿ ಮಾಡಿದ ಕೆರೆ, ಗಡಿಭಾಗದಲ್ಲಿ ನಿರಂತರ ಮಳೆಯಿಂದ ಮಿನಿ ಜೋಗಪಾಲ್ಸ್ ಕಂಡು ಫಿದಾ ಆದ ಪ್ರವಾಸಿಗರು.. ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಬೀದರ್ (Bidar) ಜಿಲ್ಲೆಯ ಔರಾದ (Aurad) ತಾಲೂಕಿನ ತೇಗಂಪುರ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ.


    ಔರಾದ್‌ನ ಹೊರವಲಯದಲ್ಲಿ ಜಲಪಾತ ಸೃಷ್ಟಿ


    ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳು ದಿಂದ ನಿರಂತರ ಮಳೆಯಿಂದಾಗಿ ಕೆರೆ ಕುಂಟೆಗಳು ತುಂಬಿ ತುಳುಕುತ್ತಿವೆ. ತೆರೆದ ಬಾವಿಗಳು ತುಂಬಿ ಭರ್ತಿಯಾಗಿವೆ. ಹಲವು ಕೆರೆಗಳು ಭೋರ್ಗರೆಯುತ್ತಿವೆ. ಹಲವಾರು ಕಡೆಗಳಲ್ಲಿ ವರುರ್ಣಾಭಟ ಕಂಡು, ಜನ ತತ್ತರಿಸಿಯೂ ಹೋಗಿದ್ದಾರೆ. ಆದ್ರೆ ಬೀದರ್ ಜಿಲ್ಲೆಯ ಔರಾದ ತಾಲೂಕಿನ ತೇಗಂಪುರ ಗ್ರಾಮದ ಹೊರವಲಯದಲ್ಲಿರುವ ಕೆರೆ ಭೋರ್ಗರೆದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮಿನಿ ಜಲಪಾತ ನೋಡಲು ದಂಡು  ಹರಿದು ಬರುತ್ತಿದೆ.


    ಸಂಭ್ರಮಿಸುತ್ತಿರುವ ಜನರು


    ಹಲವು ವರ್ಷಗಳ ಬಳಿಕ ತುಂಬಿಕೊಂಡ ಕೆರೆ


    ಕೆಲವು ವರ್ಷಗಳ ಹಿಂದೆ ತೇಗಂಪುರ ಕೆರೆಯಲ್ಲಿ ಹನಿ ನೀರು ಇರಲಿಲ್ಲ. ಆದ್ರೆ ಈಗ ಕೆರೆಯು ವರುರ್ಣಾಭಟದಿಂದ ಕೆರೆ ತನ್ನ ಒಡಲನ್ನು ತುಂಬಿಕೊಂಡು ನಳನಳಿಸುತ್ತಿದೆ. ತುಂಬಿ ಹರಿಯುವ ಕೆರೆ ನೀರಿನಿಂದ ಜಲಪಾತ ಸೃಷ್ಟಿಯಾಗಿದೆ. ಮಿನಿ ಜೋಗ್ ಫಾಲ್ಸ್ ಎನ್ನುವ ಹಾಗೆ  ಸುಂದರ ರಮಣೀಯ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಫಾಲ್ಸ್ ನೋಡಲು ಜನರ ದಂಡೇ ಇಲ್ಲಿಗೆ ಬರುತ್ತಿದೆ. ಬಂದು ನೀರಿನಲ್ಲಿ ಇಳಿದು ಸ್ನಾನ ಮಾಡಿ ಎಂಜಾಯ ಮಾಡುತ್ತಿದ್ದಾರೆ.


    ಇದನ್ನೂ ಓದಿ: Miracle: ಅನಂತಶಯನನ ಪಾದದಡಿ ಉದ್ಭವಿಸುತ್ತಾಳೆ ಗಂಗೆ! ಲಕ್ಷ್ಮೀವೆಂಕಟೇಶ್ವರನ ಪವಾಡಕ್ಕೆ ಕೈಮುಗಿದ ಭಕ್ತರು


    ಜಲಪಾತ ನೋಡಲು ಬರುತ್ತಿರುವ ಪ್ರವಾಸಿಗರು


    ಜಿಲ್ಲೆಯಲ್ಲಿ ಸುತ್ತಮುತ್ತಲಿನ ಯಾವುದೇ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆರೆಯು ಇಲ್ಲ. ಹೀಗಾಗಿ ನಮಗೆ ಇದು ಸುಂದರವಾಗಿ ಕಾಣುತ್ತಿದೆ ಅಂತಾರೆ ಇಲ್ಲಿನ ಯುವಕರು. ನಮಗೆ ಈ ರೀತಿಯಲ್ಲಿ ಇಷ್ಟೊಂದು ಸುಂದರವಾಗಿ ಕಾಣುತ್ತದೆಂದು ಗೊತ್ತಿರಲಿಲ್ಲ ನಮ್ಮ ಸ್ನೇಹಿತರು ಹೇಳಿದ್ರು ನಾವು ಕುಟುಂಬ ಸಮೇತರಾಗಿ ಬಂದಿದ್ದೆವೆ. ನಮಗೆ ಬಹಳಷ್ಟು ಸಂತೋಷವಾಗುತ್ತದೆ. ನಮ್ಮ ಕುಟುಂದವರು ಎಂಜಾಯಮಾಡಿದ್ರು ಎಂದು ಪ್ರವಾಸಿಗರು ಹೇಳುತ್ತಾರೆ.


    ಜಲಪಾತದಲ್ಲಿ ಮಿಂದೆದ್ದ ಜನ


    ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿರುವ ಜನ


    ಇನ್ನು 8-10 ಅಡಿ ಎತ್ತರದಿಂದ ಹಾಲಿನ ನೊರೆಯಂತೆ ಕಣ್ಣು ಕುಕ್ಕುವ ಹಾಗೆ ಭೋರ್ಗರೆಯುವ ಸುಂದರ ರಮಣೀಯ ದೃಶ್ಯ ಕಂಡು ಯುವಕರು ಇಲ್ಲಿಗೆ ಬಂದು ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು  ಸಖತ್ ಎಂಜಾಯ್ ಮಾಡುತ್ತಾರೆ. ಕೆಲವು ವರ್ಷಗಳ ಹಿಂದೆ  ಬರಗಾಲದಿಂದ ಕೆರೆ ಸಂಪೂರ್ಣ ಬತ್ತಿ ಬರಿದಾಗಿ ಹೋಗಿತ್ತು. ಹೀಗಾಗಿ ಇದೀಗ ಕೆರೆಯ ನೀರು ಹರಿದು  ಹೋಗುವಲ್ಲಿ ಬೀಳುವ ಜಲಪಾತವನ್ನು ನೋಡಲು ಜನರ ದಂಡೇ ಇಲ್ಲಿಗೆ ಆಗಮಿಸ್ತಿದೆ. ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಬೀಳ್ತಿರೋ ಜಲಪಾತವನ್ನು ನೋಡಿವುದೇ ಕಣ್ಣಿಗೆ ಹಬ್ಬ ಎಂಬಂತಿದೆ.


    ಇದನ್ನೂ ಓದಿ: Social Service: ಹಸಿದವರ ಪಾಲಿಗೆ ಇವರೇ ಅನ್ನದಾತೆ! ಬೀದರ್‌ನ ವೈದ್ಯೆಯಿಂದ ಹೀಗೊಂದು ಸಮಾಜಸೇವೆ


    ಕೆರೆ ತುಂಬಿ  ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯ  ನೋಡಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕರಿ ಬಂಡೆಗಳ ಕಲ್ಲುಗಳ ಮಧ್ಯೆ ಜಲಧಾರೆ ನೋಡುವುದೇ ಒಂದು ಸುಂದರ ಅನುಭವವಾಗಿದೆ.


    (ವರದಿ: ಚಮನ್ ಹೊಸಮನಿ, ನ್ಯೂಸ್ 18 ಕನ್ನಡ, ಬೀದರ್)

    Published by:Annappa Achari
    First published: