The Kashmir Files: ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ! ಪುತ್ತೂರಿನ ಕಾಲೇಜಿನ ಭರ್ಜರಿ ಘೋಷಣೆ

Ambika Mahavidyalaya Puttur: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಆರನೇ ತರಗತಿಯಿಂದ ಹಿಡಿದು ಪದವಿಯವರೆಗೆ ಉಚಿತ ಶಿಕ್ಷಣವನ್ನು ಒದಗಿಸುವ ಯೋಜನೆಯನ್ನು ನಟ್ಟೋಜ್ ಅವರು ರೂಪಿಸಿದ್ದಾರೆ. ಅವರು ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉಚಿತ ಹಾಸ್ಟೆಲ್ ಸೌಲಭ್ಯವನ್ನು ಸಹ ಘೋಷಿಸಿದ್ದಾರೆ.

ದಿ ಕಾಶ್ಮೀರ್​ ಫೈಲ್ಸ್​ ಪೋಸ್ಟರ್​

ದಿ ಕಾಶ್ಮೀರ್​ ಫೈಲ್ಸ್​ ಪೋಸ್ಟರ್​

  • Share this:
ಕೆಲವು ತಿಂಗಳುಗಳ ಹಿಂದೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಗಿದ್ದು, ಬಹುತೇಕರು ಈ ಸಿನಿಮಾವನ್ನು ನೋಡಿರುತ್ತಾರೆ. ಈಗ ಈ ಚಿತ್ರದ ಎಫೆಕ್ಟ್ ಎಂಬಂತೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಶಿಕ್ಷಣ ಸಂಸ್ಥೆಯೊಂದು ತಮ್ಮ ತಾಯ್ನಾಡಿನಿಂದ ಸ್ಥಳಾಂತರಗೊಂಡು ದೇಶದ ಬೇರೆಡೆ ನೆಲೆಸಿದ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು (Free Education) ನೀಡುವುದಾಗಿ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ಅಂಬಿಕಾ ಮಹಾವಿದ್ಯಾಲಯವು (Ambika Mahavidyalaya Puttur) ಈ ವಿನೂತನ ಕೊಡುಗೆಯೊಂದನ್ನು ಘೋಷಿಸಿದ ಶಿಕ್ಷಣ ಸಂಸ್ಥೆಯಾಗಿದೆ ಎಂದು ಹೇಳಬಹುದು.

ಪುತ್ತೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಸಂಚಾಲಕ ಸುಬ್ರಮಣ್ಯ ನಟ್ಟೋಜ್ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ವೀಕ್ಷಿಸಿದ ನಂತರ ಕಾಶ್ಮೀರಿ ಪಂಡಿತರ ದುಃಸ್ಥಿತಿಯಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದರು.

ಕಾಶ್ಮೀರಿ ಪಂಡಿತರ ಮಕ್ಕಳ ಪರಿಸ್ಥಿತಿ ಅಧ್ಯಯನ
ನಟ್ಟೋಜ್ ಅವರು ಜಮ್ಮುವಿಗೆ ಭೇಟಿ ನೀಡಿದರು. ಅವರ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ನಂತರ, ಸ್ಥಳಾಂತರಗೊಂಡ ಎಲ್ಲಾ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ನಿರ್ಧಾರವನ್ನು ಇವರು ತೆಗೆದುಕೊಂಡರು.

ಕಾಶ್ಮೀರಿ ವಿದ್ಯಾರ್ಥಿಗಳಿಗೆ ಆರನೇ ತರಗತಿಯಿಂದ ಹಿಡಿದು ಪದವಿಯವರೆಗೆ ಉಚಿತ ಶಿಕ್ಷಣವನ್ನು ಒದಗಿಸುವ ಯೋಜನೆಯನ್ನು ನಟ್ಟೋಜ್ ಅವರು ರೂಪಿಸಿದ್ದಾರೆ. ಅವರು ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉಚಿತ ಹಾಸ್ಟೆಲ್ ಸೌಲಭ್ಯವನ್ನು ಸಹ ಘೋಷಿಸಿದ್ದಾರೆ.

50,000 ರೂಪಾಯಿ ವೆಚ್ಚ
ಸಂಸ್ಥೆಯಲ್ಲಿ ಒಬ್ಬ ವಿದ್ಯಾರ್ಥಿಯ ಶಿಕ್ಷಣದ ವೆಚ್ಚವು ಸುಮಾರು 80,000 ರೂಪಾಯಿಗಳಾಗಿದ್ದು, ಒದಗಿಸಬೇಕಾದ ಸೌಲಭ್ಯಗಳಿಗೆ ಒಂದು ವರ್ಷದಲ್ಲಿ 50,000 ರೂಪಾಯಿ ವೆಚ್ಚ ಆಗಬಹುದು. ಕಾಶ್ಮೀರಿ ಪಂಡಿತರ ಮಕ್ಕಳಿಗೆ ಇವೆಲ್ಲವನ್ನೂ ಉಚಿತವಾಗಿ ಒದಗಿಸಲಾಗುವುದು ಎಂದು ಅವರು ಹೇಳಿದರು. ಕಾಶ್ಮೀರಿ ಪಂಡಿತರ ನಾಲ್ಕು ಮಕ್ಕಳನ್ನು ಈಗಾಗಲೇ ಈ ಶಿಕ್ಷಣ ಸಂಸ್ಥೆಗೆ ಸೇರಿಸಿಕೊಳ್ಳಲಾಗಿದೆ ಎಂದು ನಟ್ಟೋಜ್ ಅವರು ಹೇಳಿದರು.

ಇದೇ ಮೊದಲ ಕಾಲೇಜಲ್ಲ!
ಕಾಶ್ಮೀರಿ ಪಂಡಿತರಿಗೆ ಶಿಕ್ಷಣ ಕೋಟಾ ನೀಡುತ್ತಿರುವ ಕರ್ನಾಟಕದ ಮೊದಲ ಕಾಲೇಜು ಇದಲ್ಲ. ಈ ಹಿಂದೆ, ರಾಜ್ಯದ ಕೆಲವು ಕಾಲೇಜುಗಳು ಸಹ ಕಾಶ್ಮೀರಿ ಪಂಡಿತರಿಗೆ ಕೋಟಾ ನೀಡಲು ಮುಂದೆ ಬಂದಿವೆ. ಕೇಂದ್ರ ಮಟ್ಟದಲ್ಲಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICET) ಕಾಶ್ಮೀರಿ ವಲಸಿಗರ ಮಕ್ಕಳಿಗೆ ಮತ್ತು ಕಣಿವೆಯಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ಅಥವಾ ಹಿಂದೂ ಕುಟುಂಬಗಳಿಗೆ ಕಾಲೇಜು ಪ್ರವೇಶದಲ್ಲಿ ರಿಯಾಯಿತಿಗಳನ್ನು ನೀಡುತ್ತಿದೆ.

ಇದನ್ನೂ ಓದಿ: KGF 2: ರಾಜಕೀಯಕ್ಕೆ ಬರ್ತಾರಂತೆ ರಾಕಿ ಭಾಯ್​! ಜೊತೆಗೆ 'ಆ' ನಟನನ್ನು ಮೀರಿಸ್ತಾರಂತೆ ಯಶ್​

2020 ರಲ್ಲಿ ಹೊರಡಿಸಲಾದ ನೋಟಿಸ್‌ನಲ್ಲಿ ಈ ವಿದ್ಯಾರ್ಥಿಗಳಿಗೆ ಶೇಕಡಾ 10 ರವರೆಗೆ ಕಟ್-ಆಫ್ ನಲ್ಲಿ ವಿನಾಯಿತಿ ನೀಡಲಾಗುವುದು. ಪ್ರತಿ ಕೋರ್ಸ್‌ನಲ್ಲಿ ಸೀಟುಗಳ ಸಂಖ್ಯೆಯನ್ನು ಶೇಕಡಾ 5 ರವರೆಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ.

ವೈದ್ಯಕೀಯ ಪ್ರವೇಶಗಳಲ್ಲಿಯೂ ಇದೇ ರೀತಿಯ ಕೋಟಾ
ಈ ವಿದ್ಯಾರ್ಥಿಗಳಿಗೆ ತಾಂತ್ರಿಕ ಅಥವಾ ವೃತ್ತಿಪರ ಸಂಸ್ಥೆಗಳಲ್ಲಿ ಮೆರಿಟ್ ಕೋಟಾದಲ್ಲಿ ಕನಿಷ್ಠ ಒಂದು ಸ್ಥಾನವನ್ನು ಕಾಯ್ದಿರಿಸುವುದು ಸಹ ಕಡ್ಡಾಯವಾಗಿದೆ. ಇದಕ್ಕಾಗಿ 2020-21ನೇ ಶೈಕ್ಷಣಿಕ ವರ್ಷದಿಂದ ಈ ನೀತಿಯನ್ನು ಜಾರಿಗೆ ತರಲಾಗಿದೆ. ವೈದ್ಯಕೀಯ ಪ್ರವೇಶಗಳಲ್ಲಿಯೂ ಇದೇ ರೀತಿಯ ಕೋಟಾವನ್ನು ನೀಡಲಾಗುತ್ತದೆ ಎಂದು ಅದರಲ್ಲಿ ತಿಳಿಸಲಾಗಿದೆ.

ದಿ ಕಾಶ್ಮೀರ್ ಫೈಲ್ಸ್​ನಲ್ಲಿ ಏನಿದೆ?
ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್' ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಮತ್ತು ದುಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ನಟಿಸಿರುವ ಈ ಚಿತ್ರವು 370ನೇ ವಿಧಿಯನ್ನು ತೆಗೆದು ಹಾಕುವಂತಹ ಕೆಲವು ರಾಜಕೀಯ ಕೋನಗಳೊಂದಿಗೆ ಕಾಶ್ಮೀರಿ ಹಿಂದೂಗಳ ಮೇಲಿನ ಅನಾಗರಿಕ ದಾಳಿಯನ್ನು ಸೂಕ್ಷ್ಮವಾಗಿ ಚಿತ್ರಿಸಿದೆ ಎಂದು ಹೇಳಬಹುದು.

ಇದನ್ನೂ ಓದಿ: The Kashmir Files: ಮನೆಯಲ್ಲೇ ಕುಳಿತು ಕನ್ನಡದಲ್ಲೇ ನೋಡಿ 'ದಿ ಕಾಶ್ಮೀರ್ ಫೈಲ್ಸ್‌'! ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಇಲ್ಲಿದೆ

ಈ ಚಿತ್ರವು ಕಳೆದ ಶುಕ್ರವಾರ ಎಂದರೆ ಏಪ್ರಿಲ್ 29ಕ್ಕೆ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿತು. ವಿಶ್ವದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ಇದುವರೆಗೂ 331 ಕೋಟಿ ರೂಪಾಯಿಯ ದೊಡ್ಡ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
Published by:guruganesh bhat
First published: